Site icon Vistara News

VISTARA TOP 10 NEWS : ಒಂದು ದೇಶ ಒಂದು ಚುನಾವಣೆಗೆ ಮುಹೂರ್ತ?; ತ್ರೈಮಾಸಿಕ ಜಿಡಿಪಿ 7.8%ಗೆ ಜಿಗಿತ

vistara top ten

1.ಒಂದು ದೇಶ, ಒಂದು ಚುನಾವಣೆಗೆ ಫಿಕ್ಸ್‌ ಆಯ್ತಾ ಮುಹೂರ್ತ? ದಿಢೀರ್ ಸಂಸತ್‌ ಅಧಿವೇಶನ ಕರೆದ ಕೇಂದ್ರ
ಕೇಂದ್ರ ಸರ್ಕಾರವು ಸೆಪ್ಟೆಂಬರ್ 18ರಿಂದ 22ರವರೆಗೆ ಐದು ದಿನಗಳ ಕಾಲ ವಿಶೇಷ ಸಂಸತ್ ಅಧಿವೇಶನ ಕರೆದಿದೆ. ಇದರ ಅಜೆಂಡಾದ ಬಗ್ಗೆ ನಾನಾ ಚರ್ಚೆಗಳು ನಡೆದಿದ್ದು ಒಂದು ರಾಷ್ಟ್ರ-ಒಂದು ಚುನಾವಣೆ(One Nation One Election), ಏಕರೂಪ ನಾಗರಿಕ ಸಂಹಿತೆ, ಮಹಿಳಾ ಮೀಸಲು ವಿಧೇಯಕಗಳನ್ನು ಕೇಂದ್ರವು ಮಂಡಿಸಲಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. INDIA Bloc Meeting: ಮುಂಬೈನಲ್ಲಿ ‘ಇಂಡಿಯಾ’ ಕೂಟದ ಬಲ ಪ್ರದರ್ಶನ! ಖರ್ಗೆ ಕೂಟದ ಮುಖ್ಯಸ್ಥ?
26 ಪ್ರತಿ ಪಕ್ಷಗಳ ಕೂಟ ಇಂಡಿಯಾ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದೆ. ಈ ಹಿಂದೆ, ಬಿಹಾರದ ಪಾಟ್ನಾ ಮತ್ತು ಕರ್ನಾಟಕದ ಬೆಂಗಳೂರಲ್ಲಿ ಸಭೆ ನಡೆಸಿದ್ದ ಪ್ರತಿಪಕ್ಷಗಳ ನಾಯಕರು ಇದೀಗ ಮೂರನೇ ಸಭೆಗಾಗಿ ಮುಂಬೈನಲ್ಲಿ ಬೀಡುಬಿಟ್ಟಿದ್ದಾರೆ. ಈ ಸಭೆಯಲ್ಲಿ ಕೂಟದ ಮುಖ್ಯಸ್ಥನ ಆಯ್ಕೆ ನಡೆಯಲಿದೆಯಾ? ಎನ್ನುವ ಕುತೂಹಲವಿದೆ. ಮಲ್ಲಿಕಾರ್ಜುನ ಖರ್ಗೆ ನಾಯಕನಾಗುತ್ತಾರಾ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

3.ಕಾಂಗ್ರೆಸ್‌ನ 40-50 ಜನ ನನ್ನ ಸಂಪರ್ಕದಲ್ಲಿದ್ದಾರೆ, ಆಪರೇಷನ್‌ಗೆ 1 ದಿನ ಸಾಕು ಎಂದ ಬಿಎಲ್‌ ಸಂತೋಷ್‌
ಕರ್ನಾಟಕದ ಸುಮಾರು 40-45 ಶಾಸಕರು ನನ್ನ ಜತೆಗೇ ಸಂಪರ್ಕದಲ್ಲಿದ್ದಾರೆ. ದೆಹಲಿಯ ನಾಯಕರು ಒಪ್ಪಿಗೆ ಕೊಟ್ಟರೆ ನನಗೆ ಒಂದು ದಿನ ಕೆಲಸ: ಹೀಗೆಂದು ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿಯ ಸಂಘಟನಾ ಸಭೆಯಲ್ಲಿ (Organizational meeting) ಸಮಾರೋಪ ಭಾಷಣ ಮಾಡಿದ ಅವರು ಬಿಜೆಪಿಯಿಂದ ಕೆಲವರು ಕಾಂಗ್ರೆಸ್‌ನ ಆಪರೇಷನ್‌ಗೆ ಒಳಗಾಗುವ ಸಾಧ್ಯತೆಗಳ ಬಗ್ಗೆಯೂ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಬಿ ಎಲ್‌ ಸಂತೋಷ್‌ ಸಭೆಯಿಂದಲೂ ದೂರ ಉಳಿದ ಎಸ್‌ಟಿಎಸ್‌, ಹೆಬ್ಬಾರ್‌; ಅಚ್ಚರಿ ಮೂಡಿಸಿದ ವಿ ಸೋಮಣ್ಣ

4. ಕರ್ನಾಟಕದ ಪರ ಕಾವೇರಿ ಪ್ರಾಧಿಕಾರ ಅಫಿಡವಿಟ್‌, ಸಿಟ್ಟಿಗೆದ್ದ ತ.ನಾಡು; ನಾಳೆ ಸುಪ್ರೀಂ ವಿಚಾರಣೆ ಡೌಟ್
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ನಾಟಕದ ಪರವಾದ ಅಂಶಗಳನ್ನು ಉಲ್ಲೇಖಿಸಿದೆ. ಇದರ ಬೆನ್ನಿಗೇ ತಮಿಳುನಾಡು ಇದನ್ನು ಆಕ್ಷೇಪಿಸಿದೆ. ಇದರ ನಡುವೆ ಸುಪ್ರೀಂಕೋರ್ಟ್‌ನ ಕಾವೇರಿ ಪೀಠದಲ್ಲಿ ಸೆಪ್ಟೆಂಬರ್‌ 1ರಂದು ನಡೆಯಬೇಕಾಗಿರುವ ವಿಚಾರಣೆ (Cauvery Dispute) ನಡೆಯುವುದು ಅನುಮಾನ ಎಂಬ ಮಾತು ಕೇಳಿಬರುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಡುಗಡೆ; 100 ಅಡಿಗೆ ಕುಸಿದ krs ಮಟ್ಟ

5. ಕಾಶ್ಮೀರದಲ್ಲಿ ಯಾವಾಗ ಬೇಕಾದರೂ ಚುನಾವಣೆ ಎಂದ ಕೇಂದ್ರ; ರಾಜ್ಯ ಸ್ಥಾನಮಾನದ ಕತೆ ಏನು?
“ಜಮ್ಮು-ಕಾಶ್ಮೀರದಲ್ಲಿ ಯಾವ ಸಮಯದಲ್ಲಿ ಬೇಕಾದರೂ ವಿಧಾನಸಭೆ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ” ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ 370ನೇ ವಿಧಿ ರದ್ದು ತೀರ್ಮಾನ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌-ಜೂನ್‌ನಲ್ಲಿ ಏರಿಕೆಯ ಶೇ.7.8 ಜಿಡಿಪಿ ದಾಖಲಿಸಿದ ಭಾರತ
2023-24 ರ ಆರ್ಥಿಕ ವರ್ಷದ ಆರಂಭಿಕ ತ್ರೈಮಾಸಿಕದಲ್ಲಿ (2023-24 Financial Year) ಭಾರತದ ಒಟ್ಟು ದೇಶೀಯ ಉತ್ಪನ್ನ ಶೇ.7.8ಕ್ಕೆ ಹೆಚ್ಚಳವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಗುರುವಾರ ಬಿಡುಗಡೆ ಮಾಡಿದ ಮಾಹಿತಿಯಲ್ಲಿ ತಿಳಿಸಿದೆ(National Statistical Office – NSO). ಈ ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ, ಈ ದರ ಹೆಚ್ಚಾಗಿದೆ. ಆಗ ಶೇ.6.1ರಷ್ಟು ದಾಖಲಾಗಿತ್ತು. ಆದರೆ, ಇದೇ ಅವಧಿಯನ್ನು ಕಳೆದ ವರ್ಷ ಅಂದರೆ 2022-23ಕ್ಕೆ ಹೋಲಿಸಿದರೆ ಈ ಜಿಡಿಪಿ ಪ್ರಮಾಣವು ಕಡಿಮೆಯೇ ಇದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ
ಡಾ.ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ ದೆಹಲಿಯ ಜಾಮಾ ಮಸೀದಿ (Jama Masjid) ಸೇರಿ ವಕ್ಫ್‌ ಮಂಡಳಿಗೆ (Waqf Board) ನೀಡಿದ್ದ 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. 123 ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ವಕ್ಫ್‌ ಮಂಡಳಿಗೆ ನೋಟಿಸ್‌ ಜಾರಿ ಮಾಡಿದೆ. ಹಾಗಾಗಿ, ಕೆಲವೇ ದಿನಗಳಲ್ಲಿ ವಕ್ಫ್‌ ಆಸ್ತಿಗಳು ಕೇಂದ್ರ ಸರ್ಕಾರದ ಪಾಲಾಗಲಿವೆ ಎನ್ನಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಅಸ್ಸಾಂ ಮೂಲದ ಕ್ಯಾನ್ಸರ್‌ ತಜ್ಞ ಡಾ. ರವಿ ಕಣ್ಣನ್‌ಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ
ಏಷ್ಯಾದ ನೊಬೆಲ್ ಎಂದೇ ಕರೆಯಿಸಿಕೊಳ್ಳುವ, 2023ನೇ ಸಾಲಿನ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಕ್ಯಾನ್ಸರ್ ರೋಗ ತಜ್ಞ, ಡಾ. ರವಿ ಕಣ್ಣನ್ (Oncologist Ravi Kannan) ಅವರು ಪಾತ್ರರಾಗಿದ್ದಾರೆ. ಅಸ್ಸಾಮ್‌ನ ಕ್ಯಾಚಾರ್ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (CCHRC) ನಿರ್ದೇಶಕರಾಗಿರುವ ಕಣ್ಣನ್ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಕೂಡ ದೊರೆತಿದೆ. ಪ್ರಸಕ್ತ ಸಾಲಿನ ಮ್ಯಾಗ್ಸೆಸೆ ಪ್ರಶಸ್ತಿಗೆ ಆಯ್ಕೆಯಾದ ನಾಲ್ವರಲ್ಲಿ ಕಣ್ಣನ್ ಕೂಡ ಒಬ್ಬರಾಗಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9.ಭಾರತ-ಪಾಕ್‌ ಏಷ್ಯಾಕಪ್‌ ಇತಿಹಾಸವೇ ಬಲು ರೋಚಕ: 17 ಪಂದ್ಯಗಳಲ್ಲಿ ಭಾರತ ಗೆದ್ದಿದ್ದೆಷ್ಟು?
ಈ ಬಾರಿಯ ಏಷ್ಯಾ ಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೊದಲ ಪಂದ್ಯ ಸೆ. 2ರಂದು ನಡೆಯಲಿದೆ. ಪಾಕಿಸ್ತಾನ ಮತ್ತು ಭಾರತ ಏಷ್ಯಾಕಪ್​ನಲ್ಲಿ ಇದುವರೆಗೆ ಒಟ್ಟು 17 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಯಾರು ಎಷ್ಟು ಗೆದ್ದರು. ಇಲ್ಲಿದೆ ಪೂರ್ಣ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಟಾಪ್‌ 5ರಲ್ಲಿಲ್ಲ ಶ್ರೀರಸ್ತು ಶುಭಮಸ್ತು; ಸೀತಾರಾಮ ಧಾರಾವಾಹಿಗೆ ಹೆಚ್ಚಾಯ್ತು ಬೇಡಿಕೆ!
ಸೀತಾ ರಾಮ’ ಧಾರಾವಾಹಿ ಇದೀಗ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ದಿನೇದಿನೆ ಹೆಚ್ಚು ಪೈಪೋಟಿ ನೀಡಲು ಶುರು ಮಾಡಿದೆ. ಈ ಪೈಕಿ ‘ಪುಟ್ಟಕ್ಕನ ಮಕ್ಕಳು’ (Puttakkana Makkalu Serial) ಮೊದಲ ಸ್ಥಾನದಲ್ಲಿದೆ. ‘ಸೀತಾ ರಾಮ’ ಧಾರಾವಾಹಿ ಎರಡನೇ ಸ್ಥಾನ ಪಡೆದುಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version