1.ಎಲ್ಲ ಸರ್ಕಾರಿ ಶಾಲೆಗಳಿಗೆ ಉಚಿತ ನೀರು, ವಿದ್ಯುತ್: ಸಿದ್ದರಾಮಯ್ಯ ಘೋಷಣೆ
ಇಂದಿನಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ (Karnataka Government School) ಉಚಿತ ನೀರು ಮತ್ತು ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಘೋಷಣೆ ಮಾಡಿದರು. ಕನ್ನಡ ರಾಜ್ಯೋತ್ಸವದ (Karnataka Rajyotsava) ಪ್ರಯುಕ್ತ ಸಿಎಂ ಸಿದ್ದರಾಮಯ್ಯ ಅವರು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಕರಾಳ ದಿನ ಆಚರಿಸಿ ಉದ್ಧಟತನ ಮೆರೆದ ಎಂಇಎಸ್; ಕೈಕಟ್ಟಿ ಕುಳಿತ ಜಿಲ್ಲಾಡಳಿತ
2.ಪಕ್ಷಹಾನಿ ಹೇಳಿಕೆ ಕೊಟ್ಟರೆ ಶಿಸ್ತು ಕ್ರಮ; ಸಚಿವ, ಶಾಸಕರಿಗೆ ಸುರ್ಜೇವಾಲಾ ವಾರ್ನಿಂಗ್
ಪಕ್ಷದ ಸಂಘಟನೆ, ಅಧಿಕಾರ ಹಾಗೂ ಸರ್ಕಾರದ ವಿಚಾರವಾಗಿ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಪಕ್ಷದ ಶಿಸ್ತು ಮೀರಿ ಮಾತನಾಡಿದರೆ ಯಾರೇ ಆದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಸಚಿವರು ಹಾಗೂ ಪಕ್ಷದ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಸಿಎಂ-ಡಿಸಿಎಂ ಒಳ ಜಗಳಕ್ಕೆ ಮುಲಾಮು ಹಚ್ಚಲು ಬಂದ ಕೈ ಕಮಾಂಡ್; ಸುರ್ಜೇವಾಲ, ವೇಣುಗೋಪಾಲ್ ದಾಳವೇನು?
3. ನಿಗಮ-ಮಂಡಳಿ ಶಾಸಕರಿಗೆಂದ ಸಿಎಂ, ಕಾರ್ಯಕರ್ತರಿಗೂ ಬೇಕೆಂದ ಡಿಕೆಶಿ; ನೇಮಕ ಮುಂದೂಡಿಕೆ
ನಿಗಮ ಮಂಡಳಿಗಳಲ್ಲಿ ಶಾಸಕರಿಗೆ ಮಾತ್ರವಲ್ಲ, ಪಕ್ಷದ ಕಾರ್ಯಕರ್ತರಿಗೂ ಸ್ಥಾನಮಾನಗಳನ್ನು ಕಲ್ಪಿಸಬೇಕು ಎಂಬ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಬೆಂಬಲಿವಿದೆ. ಇದೇ ಕಾರಣಕ್ಕಾಗಿ ಈ ಪ್ರಕ್ರಿಯೆಯನ್ನು ಇನ್ನೂ ಮೂರು ವಾರಗಳ ಕಾಲ ಆಯ್ಕೆ ಪ್ರಕ್ರಿಯೆ ಮುಂದೂಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಬೆಂಗಳೂರಿನಲ್ಲಿ ಆತಂಕ ಮೂಡಿಸಿದ್ದ ಚಿರತೆ ಗುಂಡೇಟಿಗೆ ಬಲಿ
ಬೆಂಗಳೂರಿನ ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಇರುವ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿ ಕೊನೆಗೂ ಸೆರೆ ಸಿಕ್ಕಿದ ಚಿರತೆ ಅಂತಿಮವಾಗಿ ಕಾರ್ಯಾಚರಣೆಯ (Operation Leopard) ವೇಳೆ ಗುಂಡೇಟಿಗೆ ಬಲಿಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಹುಲಿ ಹಾವಳಿ; ರೊಚ್ಚಿಗೆದ್ದು ಅರಣ್ಯ ಸಿಬ್ಬಂದಿಗೆ ಥಳಿಸಿದ ಗ್ರಾಮಸ್ಥರು!
5. ವಿಸ್ತಾರ Explainer: 17 ಲಕ್ಷ ಆಫ್ಘನ್ನರನ್ನು ಪಾಕಿಸ್ತಾನ ಕ್ರೂರವಾಗಿ ಓಡಿಸುತ್ತಿರುವುದೇಕೆ?
ಪಾಕಿಸ್ತಾನವು ಏಕಾಏಕಿ ಅಫಘಾನಿಸ್ತಾನ ನಿರಾಶ್ರಿತರನ್ನು ಗಡಿಪಾರು ಮಾಡುತ್ತಿದೆ. ಇದರಿಂದ, ಲಕ್ಷಾಂತರ ಆಫ್ಘನ್ನರು ಪಾಕ್ ತೊರೆಯುವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಷ್ಟಕ್ಕೂ, ಪಾಕಿಸ್ತಾನವು ದಿಢೀರನೆ ಇಂತಹ ನಿರ್ಧಾರ ತೆಗೆದುಕೊಂಡಿದ್ದು ಏಕೆ? ಓದಿ ವಿಸ್ತಾರ Explainer. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಗುರುವಾರ ವಿಶ್ವ ಕಪ್‌ನಲ್ಲಿ ಇಂಡೋ-ಲಂಕಾ ಕದನ: ಪಿಚ್ ರಿಪೋರ್ಟ್, ಸಂಭಾವ್ಯ ತಂಡ ಡಿಟೇಲ್ಸ್ ಇಲ್ಲಿದೆ
ಅಜೇಯ ಗೆಲುವಿನ ನಾಗಲೋಟ ಕಾಯ್ದುಕೊಂಡಿರುವ ಭಾರತ ತಂಡ ಗುರುವಾರದ ವಿಶ್ವಕಪ್ನ 33ನೇ(India vs Sri Lanka, 33rd Match) ಪಂದ್ಯದಲ್ಲಿ ಶ್ರೀಲಂಕಾದ(IND vs SL) ಸವಾಲು ಎದುರಿಸಲಿದೆ. ಈ ಪಂದ್ಯವನ್ನೂ ಗೆದ್ದು ಸಮಿಫೈನಲ್ ಸ್ಥಾನವನ್ನು ಅಧಿಕೃತ ಪಡಿಸಿಕೊಳ್ಳುವುದು ರೋಹಿತ್ ಪಡೆಯ ಯೋಜನೆಯಾಗಿದೆ. ಪಿಚ್, ಹವಾಮಾನ ವರದಿ ಮತ್ತು ಸಂಭಾವ್ಯ ತಂಡದ(Playing XI) ಮಾಹಿತಿ ಇಂತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಭಾರತ-ಲಂಕಾ ನಡುವಣ ವಿಶ್ವಕಪ್ ದಾಖಲೆಯೇ ಅತ್ಯಂತ ರೋಚಕ
7. ಸರ್ಕಾರವೂ ಮರಾಠ ಮೀಸಲಾತಿ ಪರ ಎಂದ ಸಿಎಂ ಶಿಂಧೆ; ಶಾಂತಿ ಕಾಪಾಡಲು ಮನವಿ
ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಒಬಿಸಿ (ಇತರೆ ಹಿಂದುಳಿದ ವರ್ಗ) ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟವು ಹಿಂಸಾತ್ಮಕವಾಗುತ್ತಿದೆ. ಇದರ ಬೆನ್ನಲ್ಲೇ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮರಾಠ ಮೀಸಲಾತಿ ಕುರಿತಂತೆ ಸರ್ವಪಕ್ಷಗಳ ಸಭೆ ನಡೆಸಿದ್ದಾರೆ. ಅಲ್ಲದೆ, ಸರ್ಕಾರವೂ ಮೀಸಲಾತಿ ಪರವಾಗಿದೆ ಎಂಬ ಸಂದೇಶ ರವಾನಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಹಮಾಸ್ ಲೀಡರ್‌ನನ್ನು ಕೊಂದು ನಿರಾಶ್ರಿತರ ಶಿಬಿರ ಧ್ವಂಸಗೊಳಿಸಿದ ಇಸ್ರೇಲ್
ಗಾಜಾದ ಅತಿದೊಡ್ಡ ನಿರಾಶ್ರಿತರ ಶಿಬಿರವಾದ ಜಬಾಲಿಯಾ ನಿರಾಶ್ರಿತರ ಶಿಬಿರದ (Jabalia refugee camp) ಮೇಲೆ ಇಸ್ರೇಲ್ ಸೈನ್ಯ ( ಬುಧವಾರ ಭೀಕರ ವಾಯುದಾಳಿ ನಡೆಸಿದೆ. ದಾಳಿಯಲ್ಲಿ ಪ್ರಮುಖ ಹಮಾಸ್ ಕಮಾಂಡರ್ ಇಬ್ರಾಹಿಂ ಬ್ಯಾರಿ ಎಂಬಾತನನ್ನು ಕೊಲ್ಲಲಾಗಿದೆ. ಇಸ್ರೇಲ್ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಈತ ಪ್ರಮುಖವಾಗಿ ಭಾಗಿಯಾಗಿದ್ದ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಇಸ್ರೇಲ್ ದಾಳಿಯಲ್ಲಿ ಅಲ್ ಜಜೀರಾ ಎಂಜಿನಿಯರ್ ಕುಟುಂಬದ 19 ಸದಸ್ಯರ ಸಾವು
9. ನ.4ರಂದು ವಿಸ್ತಾರ ಕನ್ನಡ ಸಂಭ್ರಮ; ಇದು ವಿಸ್ತಾರ ನ್ಯೂಸ್ ವರ್ಷ ವೈಭವ
ಅತ್ಯಲ್ಪ ಅವಧಿಯಲ್ಲೇ ನಾಡಿನ ಜನಮಾನಸದಲ್ಲಿ ಅಚ್ಚಳಿಯದ ಹೆಜ್ಜೆ ಗುರುತುಗಳನ್ನು ಮೂಡಿಸಿದ ರಾಜ್ಯದ ಜನಪ್ರಿಯ ಮಾಧ್ಯಮ ಸಂಸ್ಥೆ ವಿಸ್ತಾರ ನ್ಯೂಸ್ (Vistara News) ನವೆಂಬರ್ 4ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ (Ravindra Kalakshetra) ʻವಿಸ್ತಾರ ಕನ್ನಡ ಸಂಭ್ರಮʼ (Vistara Kannada Sambhrama) ಎಂಬ ಅಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದೆ. ವಿಸ್ತಾರ ನ್ಯೂಸ್‌ಗೆ ಒಂದು ವರ್ಷದ ತುಂಬುತ್ತಿರುವ ಹೊತ್ತಿನಲ್ಲಿ ಕರುನಾಡ ಜನತೆಗೆ ಇದು ಪ್ರೀತಿಯ ಅರ್ಪಣೆಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್‌ಮಾಡಿ
10. ಅಕ್ಟೋಬರ್‌ನಲ್ಲಿ ದಾಖಲೆಯ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ
ದೇಶದಲ್ಲಿ ದಿನೇದಿನೆ ರೂಪಾಯಿ ಮೌಲ್ಯ ಕುಸಿಯುತ್ತಿದ್ದರೂ ಜಿಡಿಪಿ ಬೆಳವಣಿಗೆ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಕಾರಾತ್ಮಕವಾಗಿದೆ. ಇದರ ಬೆನ್ನಲ್ಲೇ, ಅಕ್ಟೋಬರ್‌ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಗ್ರಹವು (GST Collection) ಗರಿಷ್ಠ ಮಟ್ಟಕ್ಕೆ ತಲುಪಿದೆ. ಕಳೆದ ತಿಂಗಲೂ 1.72 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಸರಕು ಮತ್ತು ಸೇವಾ ತೆರಿಗೆ (Goods And Service Tax) ಜಾರಿಯಾದ ಬಳಿಕವೇ ಇದು ಎರಡನೇ ಗರಿಷ್ಠ ಸಂಗ್ರಹ ಎನಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಡಾಲರ್ ಎದುರು ಸಾರ್ವಕಾಲಿಕವಾಗಿ ಕುಸಿದ ರೂಪಾಯಿ; ಶೀಘ್ರವೇ ಬೆಲೆ ಏರಿಕೆ