1. ಲೋಡ್ ಶೆಡ್ಡಿಂಗ್ ಒಪ್ಪಿಕೊಂಡ ಡಿಕೆಶಿ, ಚಲುವರಾಯಸ್ವಾಮಿ; ಪ್ರತಿಭಟನೆಗೆ ಮುಂದಾದ ಬಿಜೆಪಿ
ರಾಜ್ಯದಲ್ಲಿ ಭೀಕರ ಬರಗಾಲದ ನಡುವೆ ಈಗ ರೈತರಿಗೆ ತ್ರೀಫೇಸ್ ವಿದ್ಯುತ್ ನೀಡುತ್ತಿಲ್ಲ. ಅಲ್ಲದೆ, ಪವರ್ ಕಟ್ ಅನ್ನು ಸಹ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈಗ ಲೋಡ್ ಶೆಡ್ಡಿಂಗ್ ಮಾಡುತ್ತಿರುವುದನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಒಪ್ಪಿಕೊಂಡಿದ್ದಾರೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಬರಕ್ಕೆ 39.74 ಲಕ್ಷ ಹೆಕ್ಟೇರ್ ಬೆಳೆ ನಷ್ಟ; ನೆಲಕ್ಕೆ ಬಿದ್ದ ಭತ್ತ, ತೊಗರಿ, ಜೋಳ, ಶೇಂಗಾ
ರಾಜ್ಯದಲ್ಲಿ ತೀವ್ರ ಬರದ ಪರಿಣಾಮವು ಬೆಳೆಗಳ ಮೇಲೆ ಬೀರಿದೆ. ಭತ್ತ, ರಾಗಿ, ಬೇಳೆಕಾಳು, ಕಡಲೆ ಬೀಜ, ಹತ್ತಿ, ಕಬ್ಬು, ಹೊಗೆಸೊಪ್ಪು ಸೇರಿದಂತೆ ವಿವಿಧ ಬೆಳೆಗಳ ನಷ್ಟದ ಅಂದಾಜು ಪಟ್ಟಿಯನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಬಿಡುಗಡೆ ಮಾಡಿದೆ. 39.74 ಲಕ್ಷ ಹೆಕ್ಟೇರ್ ಬೆಳೆಗಳು ನಷ್ಟಕ್ಕೊಳಪಟ್ಟಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಔಷಧ ಬಿಲ್ ಕೊಡಲೂ ಸರ್ಕಾರದ ಬಳಿ ದುಡ್ಡಿಲ್ಲ? ಮಿತಿ ಮೀರಿತೇ ಕಮಿಷನ್ ದಂಧೆ?
ಔಷಧ ಪೂರೈಸಿ ಹಲವು ವರ್ಷ ಕಳೆದರೂ ಬಾಕಿ ಬಿಲ್ ಪಾವತಿಗೆ ವಿಳಂಬ ಮಾಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 600 ಕೋಟಿ ಮೊತ್ತದ 733 ಔಷಧಗಳಿಗೆ ಬೇಡಿಕೆ ಇದೆ. 2012ರಿಂದ ಔಷಧ ಬಿಲ್‌ಗಳ ಜತೆಗೆ ಕೋಟ್ಯಂತರ ರೂ. ಭದ್ರತಾ ಠೇವಣಿ, ಇಎಂಡಿ ಸಹ ಬಾಕಿ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
4. 40 ನಾಯಕರ ಅರ್ಜಿ ನನ್ನ ಮುಂದಿದೆ: ಸ್ಥಳೀಯರ ಜತೆ ಚರ್ಚಿಸಿ ಸೇರ್ಪಡೆ: ಡಿ ಕೆ ಶಿವಕುಮಾರ್
ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್ ಹಸ್ತ (operation Hasta) ಶುರುವಾಗಿದೆ ಎಂಬ ಸುಳಿವನ್ನು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್ ನೀಡಿದ್ದಾರೆ. 40ಕ್ಕೂ ಹೆಚ್ಚು ನಾಯಕರ ಅರ್ಜಿ ನನ್ನ ಮುಂದಿದೆ. ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ಬಿಜೆಪಿಯ ಒಂದು ಟೀಂ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡುತ್ತಿದೆ ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಪ್ರತಿ ಉಗ್ರನ ಹೆಣ ಬೀಳುವುದು ನಿಶ್ಚಿತ ಎಂದ ಇಸ್ರೇಲ್; 3,700 ಸಾವು
ಇಸ್ರೇಲ್ ಮೇಲೆ ಹಮಾಸ್ ಉಗ್ರರು, ಗಾಜಾಪಟ್ಟಿ ಮೇಲೆ ಇಸ್ರೇಲ್ ಸೈನಿಕರು ದಾಳಿ (Israel Palestine War) ಮುಂದುವರಿಸಿದ್ದಾರೆ. ಹೀಗೆ ದಾಳಿ-ಪ್ರತಿದಾಳಿಗೆ ಇದುವರೆಗೆ 3,700 ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ, ಗಾಜಾಪಟ್ಟಿ ಮೇಲೆ ಇಸ್ರೇಲ್ ದಾಳಿ ತೀವ್ರಗೊಳಿಸಿದ್ದು, “ಹಮಾಸ್‌ನ ಪ್ರತಿಯೊಬ್ಬ ಉಗ್ರನ ಹೆಣ ಬೀಳುವುದು ನಿಶ್ಚಿತ” ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಇಸ್ರೇಲ್ ಆರಂಭ ಅಷ್ಟೆ, ಇಡೀ ಭೂಮಿಯೇ ನಮ್ಮ ಗುರಿ: ಎಚ್ಚರಿಕೆ ನೀಡಿದ ಹಮಾಸ್
ಈ ಸುದ್ದಿಯನ್ನೂ ಓದಿ: ಇಸ್ರೇಲ್‌ನಿಂದ ಭಾರತೀಯರ ರಕ್ಷಣೆಗೆ ಆಪರೇಷನ್ ಅಜಯ್; ಏನಿದು? ಪ್ಲ್ಯಾನ್ ಹೇಗಿದೆ?
6. ಪಾಕ್ ತಂಡಕ್ಕೆ ನಡುಕ; ಕಮ್‌ಬ್ಯಾಕ್ ಮಾಡಿದ ಟೀಮ್ ಇಂಡಿಯಾ ಡ್ಯಾಶಿಂಗ್ ಓಪನರ್
ಡೆಂಗ್ಯೂ ಜ್ವರದಿಂದ ಬಳಲಿದ ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶುಭಮನ್ ಗಿಲ್ ಅಹಮದಾಬಾದ್ಗೆ ತಲುಪಿದ್ದಾರೆ. ಗಿಲ್ ಚೇತರಿಕೆ ಕಂಡು ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನವೇ ಅಹಮದಾಬಾದ್ ತಲುಪಿದ್ದು ನೆಟ್ಸ್ನಲ್ಲಿ ಅಭ್ಯಾಸ ಕೂಡ ಆರಂಭಿಸಿದ್ದಾರೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಕೊಹ್ಲಿ ಒಳ್ಳೇ ವ್ಯಕ್ತಿ; ದೋಸ್ತಿ ಬಳಿಕ ಕಿಂಗ್ ಬಗ್ಗೆ ನವೀನ್ ಉಲ್ ಹಕ್ ಹೇಳಿದ್ದೇನು?
7. ಮಹಿಷ ದಸರಾಕ್ಕೆ ಷರತ್ತುಬದ್ಧ ಅನುಮತಿ, ಸಭಾ ಕಾರ್ಯಕ್ರಮ ಓಕೆ, ಸೆಕ್ಷನ್ 144 ಜಾರಿ
ಮೈಸೂರಿನಲ್ಲಿ ಮಹಿಷ ದಸರಾ (Mahisha Dasara) ಪ್ರಯುಕ್ತವಾಗಿ ಹಮ್ಮಿಕೊಳ್ಳಲಾಗಿದ್ದ ಹಾರಾರ್ಪಣೆ, ಮೆರವಣಿಗೆ ಮತ್ತಿತರ ಕಾರ್ಯಕ್ರಮಗಳಿಗೆ ಅವಕಾಶ ನಿರಾಕರಿಸಿರುವ ಪೊಲೀಸರು ಸಭಾ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದಾರೆ. ಮೈಸೂರಿನಲ್ಲಿ ಸೆ. 144ರ ಅಡಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮುಗಿಯದ ಮಹಿಷ ದಸರಾ ಗೊಂದಲ; ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತರಿಗೂ ನಿರ್ಬಂಧ
8 50ಕ್ಕೂ ಹೆಚ್ಚು ಕಡೆ ಐಟಿ ದಾಳಿ; ಪಂಚರಾಜ್ಯ ಫಂಡಿಂಗ್‌ಗೆ ಅಡ್ಡೆ ಆಯ್ತಾ ಬೆಂಗಳೂರು?
ವಾರದ ಹಿಂದೆ ಚಿನ್ನದ ಅಂಗಡಿಗಳ ಮಾಲಿಕರ ಮನೆ, ಕಚೇರಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ (Income tax department) ಅಧಿಕಾರಿಗಳು, ಇಂದು ಮುಂಜಾನೆ ಹಲವಾರು ಅಧಿಕಾರಿಗಳು ಸೇರಿದಂತೆ 50ಕ್ಕೂ ಹೆಚ್ಚು ಕಡೆ ದಾಳಿ (IT Raid) ನಡೆಸಿ ಶಾಕ್ ಕೊಟ್ಟಿದ್ದಾರೆ. ಬೆನ್ನು ಬೆನ್ನಿಗೆ ನಡೆದ ಈ ದಾಳಿಗೂ ಪಂಚರಾಜ್ಯ ಚುನಾವಣೆಯ ಫಂಡಿಂಗ್‌ಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಮನಿ ಗೈಡ್: ಇಪಿಎಫ್ ಹಿಂತೆಗೆದುಕೊಂಡರೆ ಟ್ಯಾಕ್ಸ್ ಬೀಳುತ್ತಾ?
ಪ್ರಾವಿಡೆಂಟ್ ಫಂಡ್ ಹಣದ ಹಿಂಪಡೆಯುವಿಕೆಯ (EPF withdrawal) ಮೇಲೆ ಆದಾಯ ತೆರಿಗೆ (income tax) ಅಥವಾ TDS ಯಾವಾಗ ಬೀಳುತ್ತದೆ ಅಂತ ಇಲ್ಲಿ ತಿಳಿಯಿರಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಹಿಮದ ರಾಶಿ ಮಧ್ಯೆ ತಪಸ್ಸಿಗೆ ಕುಳಿತ ನರೇಂದ್ರ ಮೋದಿ; ಧ್ಯಾನ, ಮೌನ, ನಮನ
ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕು ಸ್ಥಾಪನೆ ನೆರವೇರಿಸಲು ಉತ್ತರಾಖಂಡಕ್ಕೆ ತೆರಳಿದ್ದಾರೆ. ಇದೇ ವೇಳೆ ಅವರು ಪಿಥೋರ್‌ಗಢದ ಪಾರ್ವತಿ ಕುಂಡ್ (Parvati Kund) ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ