Site icon Vistara News

VISTARA TOP 10 NEWS : ಗೃಹಿಣಿಯರಿಗೆ 2000 ರೂ. ಕೊಟ್ಟಿದ್ದಕ್ಕೆ ಸಂತೋಷ, ತ.ನಾಡಿಗೆ 5000 ಕ್ಯೂಸೆಕ್‌ ನೀರು ಬಿಟ್ಟಿದ್ದಕ್ಕೆ ಆಕ್ರೋಶ

vistara Top ten

1.ಗೃಹ ಲಕ್ಷ್ಮಿ ಯೋಜನೆ ಸಾಕಾರ; 1.28 ಕೋಟಿ ಗೃಹಿಣಿಯರ ಖಾತೆಗೆ ಇನ್ನು ಪ್ರತಿ ತಿಂಗಳು 2,000 ರೂ. ಪಕ್ಕಾ
ರಾಜ್ಯದ 1.28 ಕೋಟಿ ಮನೆ ಯಜಮಾನಿಯರಿಗೆ ಪ್ರತಿ ತಿಂಗಳು 2000 ರೂ. ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಸಾಕಾರಗೊಂಡಿದೆ. ಇದರೊಂದಿಗೆ ಕಾಂಗ್ರೆಸ್‌ ಚುನಾವಣಾ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿಗಳಲ್ಲಿ ನಾಲ್ಕನೆಯದನ್ನು ಈಡೇರಿಸಿದಂತಾಗಿದೆ. ಈಗಾಗಲೇ ಶಕ್ತಿ, ಅನ್ನ ಭಾಗ್ಯ ಮತ್ತು ಗೃಹ ಜ್ಯೋತಿ ಯೋಜನೆಗಳು ಜಾರಿಯಾಗಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಮೋದಿಯವರೇ ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿಲ್ಲ, ಆಗಲ್ಲ: ಸಿದ್ದರಾಮಯ್ಯ ಸವಾಲ್

2. ಹೆಣ್ಣೆಂದರೆ ಸಮಾಜದ ಬೇರು, ಅದನ್ನು ಗಟ್ಟಿಗೊಳಿಸುವುದೇ ಕಾಂಗ್ರೆಸ್‌ ಧ್ಯೇಯ; ರಾಹುಲ್‌ ವ್ಯಾಖ್ಯಾನ
ಹೆಣ್ಣೆಂದರೆ ಮರವೊಂದರ ಬೇರು (Women is like root of a tree), ಹೆಣ್ಣೆಂದರೆ ಕಟ್ಟಡವೊಂದರ ಪಂಚಾಂಗ. ಬೇರು ಗಟ್ಟಿಯಾಗಿದ್ದರೆ ಮರ ಎಂಥ ಬಿರುಗಾಳಿಯನ್ನಾದರೂ ಎದುರಿಸುವ ಶಕ್ತಿಯನ್ನು ಪಡೆಯುತ್ತದೆ. ಪಂಚಾಂಗ ಗಟ್ಟಿಯಿದ್ದರೆ ಕಟ್ಟಡ ಬಲಿಷ್ಠವಾಗಿ ನಿಲ್ಲುತ್ತದೆ. ಹೀಗಾಗಿ ನಾವು ನಮ್ಮ ಸಮಾಜದ ಬೇರುಗಳಾಗಿರುವ ಮಹಿಳೆಯರ ಸಬಲೀಕರಣದ ದೊಡ್ಡ ಚಿಂತನೆಯನ್ನು ಮಾಡಿದ್ದೇವೆ. ಅದರ ಫಲವೇ ಗೃಹಲಕ್ಷ್ಮಿ ಎಂದಿದ್ದಾರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಗೃಹ ಲಕ್ಷ್ಮಿ ಕಾರ್ಯಕ್ರಮ ಪ್ರಧಾನಿ ಮೋದಿಯೂ ಒಪ್ಪಬಹುದಾದ ಗ್ಯಾರಂಟಿ ಎಂದ ಖರ್ಗೆ

3. ಜಗತ್ತಿನ ಮೇಲೆ ಭಾರತದ ಪ್ರಭಾವ, ಮೋದಿ ಪ್ರಭಾವಿ ಎನ್ನುತ್ತಾರೆ ಬಹುತೇಕ ಭಾರತೀಯರು; ಸಮೀಕ್ಷಾ ವರದಿ
ವಿಶ್ವದಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ ಎಂದು ಭಾರತದ ಶೇ.68 ಜನರು ಅಭಿಪ್ರಾಯಪಟ್ಟರೆ, ಸಮೀಕ್ಷೆಯೊಂದರ ಪ್ರಕಾರ 19 ರಾಷ್ಟ್ರಗಳ ಪೈಕಿ ಶೇ.28 ವಯಸ್ಕರು ಮಾತ್ರ ಹೌದು ಹೆಚ್ಚಿದೆ. ಇದೇ ವೇಳೆ, ಪಿಎಂ ನರೇಂದ್ರ ಮೋದಿ (PM Narendra Modi) ಅವರು ಸರಿಯಾದ ಕೆಲಸಗಳನ್ನು ಮಾಡುತ್ತಾರೆಂದು ಶೇ.79 ಭಾರತೀಯರ ವಿಶ್ವಾಸ ಹೊಂದಿದ್ದರೆ, 12 ದೇಶಗಳಲ್ಲಿ ಶೇ.37 ಮಾತ್ರ ಆ ವಿಶ್ವಾಸ ಹೊಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಶಾಲೆ ಮಕ್ಕಳ ಜತೆ ರಕ್ಷಾ ಬಂಧನ ಆಚರಿಸಿದ ಮೋದಿ; ರಾಖಿ ಕಟ್ಟಿದ ಚಿಣ್ಣರ ಖುಷಿ ನೋಡಿ

4. ರೈತಾಕ್ರೋಶದ ನಡುವೆಯೇ ತಮಿಳ್ನಾಡಿಗೆ 5 ಸಾವಿರ ಕ್ಯೂಸೆಕ್‌ ನೀರು ಬಿಟ್ಟ ಸರ್ಕಾರ- ಸಿಡಿದೆದ್ದ ಪ್ರತಿಭಟನೆ
ಕಾವೇರಿ ನದಿ ಪ್ರಾಧಿಕಾರದ ಆದೇಶದಂತೆ ಕರ್ನಾಟಕವು ತಮಿಳುನಾಡಿಗೆ 5000 ಕ್ಯುಸೆಕ್‌ ನೀರು ಬಿಡುಗಡೆ ಮಾಡಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಮಂಡ್ಯದಲ್ಲಿ ರೈತರು ದೊಡ್ಡ ಮಟ್ಟದ ಪ್ರತಿಭಟನೆಗೆ ಮುಂದಾಗಿದ್ದು, ಕಾವೇರಿ ಕಿಚ್ಚು ಜೋರಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸೂರ್ಯಯಾನಕ್ಕೆ ಆದಿತ್ಯ ಎಲ್‌ 1 ರೆಡಿ; ತಾಲೀಮು ಅಂತ್ಯ, ಉಡಾವಣೆಯೊಂದೇ ಬಾಕಿ
ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕೈಗೊಳ್ಳುತ್ತಿರುವ ಆದಿತ್ಯ ಎಲ್‌ 1 ಮಿಷನ್‌ (Aditya L1 Mission) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್‌ 2ರಂದು ಉಡಾವಣೆ ಮಾಡಲು ಇಸ್ರೋ ತೀರ್ಮಾನಿಸಿದ್ದು, ಇದಕ್ಕಾಗಿ ಉಡಾವಣೆ ಪೂರ್ವ ಸಿದ್ಧತೆ, ಅಭ್ಯಾಸ ಹಾಗೂ ಆಂತರಿಕ ತಪಾಸಣೆ ಕೈಗೊಂಡಿದೆ. ಇದರ ಫೋಟೊಗಳನ್ನೂ ಇಸ್ರೋ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿಸ್ತಾರ Explainer: G 20 Summit 2023: ಏನು, ಯಾಕೆ, ಎಲ್ಲಿ? ಸುಲಭವಾಗಿ ಅರ್ಥವಾಗುವ ವಿವರ ಇಲ್ಲಿದೆ
ದಿಲ್ಲಿಯಲ್ಲಿ ಸೆಪ್ಟೆಂಬರ್‌ 9 ಮತ್ತು 10ರಂದು G20 ದೇಶಗಳ ಮಹಾ ಶೃಂಗಸಭೆ ನಡೆಯತ್ತದೆ. ಏನಿದು G20 ಅಂದರೆ? ಇದರಲ್ಲಿ ಯಾರ್ಯಾರೆಲ್ಲಾ ಇದ್ದಾರೆ? ಇದು ಸಭೆ ಸೇರುವ ಉದ್ದೇಶವೇನು? ವಿವರವಾದ ಒಂದು ನೋಟ ಇಲ್ಲಿದೆ. ಇದನ್ನು ನೀವು ಮಕ್ಕಳಿಗೂ ಸುಲಭವಾಗಿ ವಿವರಿಸಲು ಉಪಯೋಗಿಸಬಹುದು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಭಾರತ-ಪಾಕ್‌ ಹೈವೋಲ್ಟೇಜ್‌ ಪಂದ್ಯ ನಡೆಯುವುದೇ ಅನುಮಾನ!
ಏಷ್ಯಾಕಪ್​ನ (Asia Cup 2023) ಭಾರತ ಹಾಗೂ ಪಾಕಿಸ್ತಾನ(ind vs pak) ನಡುವೆ ಸೆಪ್ಟೆಂಬರ್​ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯುವ ಪಂದ್ಯಕ್ಕೆ ಭಾರತ ಹಾಗೂ ಪಾಕಿಸ್ತಾನ ಮಾತ್ರವಲ್ಲ, ಜಗತ್ತೇ ಕಾಯುತ್ತಿದೆ. ಆದರೆ ಈ ಪಂದ್ಯ ನಡೆಯುವುದು 99 ಪ್ರತಿಶತ ಅನುಮಾನ ಎಂದು ತಿಳಿದುಬಂದಿದೆ. ಈ ದಿನ ಕ್ಯಾಂಡಿಯಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ತವರಿನಲ್ಲೇ ಪಾಕ್‌ಗೆ ಭಾರಿ ಮುಖಭಂಗ; ಸ್ಟೇಡಿಯಂ ಖಾಲಿ ಖಾಲಿ

8. ಮಕ್ಕಳ ಆಧಾರ್‌ ಕಾರ್ಡ್‌ ಅರ್ಜಿ ಬದಲಾಗಿದೆ! ಕಿಡ್ಸ್‌ ಆಧಾರ್‌ ನೋಂದಣಿ ಹೇಗೆ?
ಆಧಾರ್ ನೋಂದಣಿ (Aadhaar Registration) ಮತ್ತು ಅಪ್‌ಗ್ರೇಡ್ (Aadhaar Upgrade) ಮಾಡುವುದಕ್ಕೆ 18 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ಹಾಗೂ 0-5 ವರ್ಷದ ಮಕ್ಕಳಿಗೆ ಪ್ರತ್ಯೇಕ ಫಾರ್ಮ್‌ಗಳನ್ನು ಬಳಸಲಾಗುತ್ತದೆ (Aadhaar for kids) ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ(UIDAI)ವು ಹೇಳಿದೆ. ಈ ಕುರಿತು ಯುಐಡಿಎಐ ಕಳೆದ ಫಬ್ರವರಿ ತಿಂಗಳಲ್ಲೇ ಘೋಷಣೆ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ರೈಡ್‌ ಕ್ಯಾನ್ಸಲ್‌ ಮಾಡುವ ಕ್ಯಾಬ್‌ಗಳ ಚಾಲಕರಿಗೆ ಬೀಳುತ್ತೆ ದಂಡ; ಆ ಮೊತ್ತ ಗ್ರಾಹಕರಿಗೆ ಪಾವತಿ
ಓಲಾ, ಉಬರ್ ಸೇರಿ ಯಾವುದೇ ಕ್ಯಾಬ್‌ಗಳ ಚಾಲಕರು ರೈಡ್‌ ಕ್ಯಾನ್ಸಲ್‌ ಮಾಡಿದರೆ, ಆ ಚಾಲಕರಿಗೆ ದಂಡ ವಿಧಿಸಬೇಕು ಹಾಗೂ ಆ ಮೊತ್ತವನ್ನು ಬುಕ್‌ ಮಾಡಿದ ಗ್ರಾಹಕರಿಗೆ ನೀಡಬೇಕು (Ola Uber Rebate) ಎಂಬ ನಿಯಮ ಜಾರಿಗೆ ತರಲು ಸಮಿತಿಯು ಶಿಫಾರಸು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ದರ್ಶನ್‌ಗೆ ರಾಖಿ ಕಟ್ಟಿದಳು ʼರಾಬರ್ಟ್‌ʼ ಚಿತ್ರದ ನಾಯಕಿ! ಆಕೆ ನೀಡಿದ ಸಂದೇಶವೂ ಮಾರ್ಮಿಕ!
ರಾಖಿ ಹಬ್ಬದಂದು ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್ ದರ್ಶನ್ (Darshan Thoogudeepa) ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಕರ್ನಾಟಕದ ತಮ್ಮ ಅಭಿಮಾನಿಗಳಿಗೆ ಅಕ್ಕ ತಂಗಿಯಂದಿರಿಗೆ ದರ್ಶನ್ ರಕ್ಷಾ ಬಂಧನದ (raksha bandhan 2023) ಶುಭಾಶಯಗಳನ್ನು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ದರ್ಶನ್ ಅವರಿಗೆ ನಟಿ ಸೋನಲ್ ಮೊಂಥೆರೋ ರಾಖಿ ಕಟ್ಟುವ ಮೂಲಕ ರಕ್ಷಾ ಬಂಧನ ಹಬ್ಬ ಆಚರಿಸಿದ್ದಾರೆ. ʼರಾಬರ್ಟ್‌ʼ ಚಿತ್ರದಲ್ಲಿ ದರ್ಶನ್‌ ಹಾಗೂ ಸೋನಲ್ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version