Site icon Vistara News

VISTARA TOP 10 NEWS : ಡಿಕೆಶಿಗೆ ವಿರುದ್ಧ ಸಿಬಿಐ ತನಿಖೆಗೆ ಗ್ರೀನ್‌ ಸಿಗ್ನಲ್‌, ಬಾಂಗ್ಲಾ ವಿರುದ್ಧ ಭಾರತ ಕಮಾಲ್

VIstara top 10 News 1910

1.ಡಿಕೆಶಿಗೆ ಬಿಗ್‌ ಶಾಕ್‌; ಅಕ್ರಮ ಆಸ್ತಿ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್‌ ಅಸ್ತು
ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆಗೆ ಹೈಕೋರ್ಟ್‌ ಹಸಿರುನಿಶಾನೆ ತೋರಿಸಿದೆ. ಇದರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಅತಿ ದೊಡ್ಡ ಸಂಕಷ್ಟ ಎದುರಾದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಸಿಬಿಐ ತನಿಖೆ ಆರಂಭಕ್ಕೆ ಮುನ್ನ ಡಿಕೆಶಿ ರಾಜೀನಾಮೆಗೆ ಬಿಜೆಪಿ ಆಗ್ರಹ
ಈ ಸುದ್ದಿಯನ್ನೂ ಓದಿ: ಬಿಜೆಪಿ ಷಡ್ಯಂತ್ರಕ್ಕೆ ಕೋರ್ಟ್‌, ಆಸ್ತಿ ಪಟ್ಟಿ ಉತ್ತರ ಕೊಡುತ್ತದೆ ಎಂದ ಡಿಕೆಶಿ

2. ಜೆಡಿಎಸ್‌ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿಎಂ ಇಬ್ರಾಹಿಂ ಔಟ್‌, ಎಚ್‌ ಡಿ ಕುಮಾರಸ್ವಾಮಿ ಇನ್‌
ಬಿಜೆಪಿ-ಜೆಡಿಎಸ್‌ ಮೈತ್ರಿಯನ್ನು (BJP-JDS Alliance) ಖಂಡತುಂಡವಾಗಿ ವಿರೋಧಿಸಿದ್ದ ಮತ್ತು ತಮ್ಮದೇ ನಿಜವಾದ ಜಾತ್ಯತೀತ ಜನತಾದಳ ಎಂದು ಘೋಷಿಸಿಕೊಂಡಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ (CM Ibrahim) ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಹಂಗಾಮಿ ಅಧ್ಯಕ್ಷತೆ ನೀಡಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ದೇವೇಗೌಡರೇ ನನ್ನನ್ನು ಕೆಣಕಿದ್ದೀರಿ, ಪರಿಣಾಮ wait and watch; ಇಬ್ರಾಹಿಂ ಎಚ್ಚರಿಕೆ

3. ಭಾರತ ತಂಡಕ್ಕೆ ಬಾಂಗ್ಲಾ ವಿರುದ್ಧ 7 ವಿಕೆಟ್​ ಸುಲಭ ಜಯ
ಪುಣೆ: ಬೌಲರ್​ಗಳ ಸಾಹಸ ಹಾಗೂ ವಿರಾಟ್​ ಕೊಹ್ಲಿಯ (ಅಜೇಯ 103 ರನ್​) ಅಮೋಘ ಶತಕದ ನೆರವಿನಿಂದ ಮಿಂಚಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ (ind vs ban) ವಿಶ್ವ ಕಪ್​ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿದೆ. ಇದು ಭಾರತ ತಂಡಕ್ಕೆ ಹಾಲಿ ವಿಶ್ವ ಕಪ್​ನಲ್ಲಿ ಸತತ ನಾಲ್ಕನೇ ಗೆಲುವಾಗಿದೆ. ಚಈ ಮೂಲಕ ಭಾರತ ತಂಡ ವಿಶ್ವ ಕಪ್​ನಲ್ಲಿ (ICC World Cup 2023) ಅಜೇಯ ಓಟವನ್ನು ಮುಂದುವರಿಸಿದ್ದು, ಪ್ರಶಸ್ತಿ ಕಡೆಗೆ ದಾಪುಗಾಲು ಇಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.

4. ಸಚಿವ ಶರಣಪ್ರಕಾಶ್‌‌‌‌‌ ಹೆಸರೇಳಿ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ: ಸರ್ಕಾರಕ್ಕೆ ಮತ್ತೊಂದು ಆಘಾತ
ಕಲಬುರಗಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರೊಬ್ಬರು ಆತ್ಮಹತ್ಯೆ (BJP Activist Suicide) ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಆಡಿಯೊವೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸಚಿವ ಶರಣಪ್ರಕಾಶ್‌ ಪಾಟೀಲ್‌ ಅವರೇ ಸಾವಿಗೆ ಕಾರಣ ಎಂದು ಹೇಳಿರುವುದು ಭಾರಿ ಸದ್ದು ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. Satish Jarakiholi : ಡಿಕೆಶಿ ಹಸ್ತಕ್ಷೇಪ ನಿಜ, ಆದರೂ ಕಾಂಪ್ರೊಮೈಸ್‌ ಆಗಿದ್ದೇನೆ ಎಂದ ಸತೀಶ್‌ ಜಾರಕಿಹೊಳಿ
ಬೆಳಗಾವಿ ಜಿಲ್ಲೆ ವಿಚಾರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಹಸ್ತಕ್ಷೇಪ ಇರುವುದು ನಿಜ (Interference is true) ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarakiholi) ನೇರವಾಗಿ ಹೇಳಿದ್ದಾರೆ. ಆದರೆ, ಈ ವಿಚಾರದಲ್ಲಿ ತಾನು ಪಕ್ಷಕ್ಕಾಗಿ ಕಾಂಪ್ರೊಮೈಸ್ (Compromised for the sake of party) ಆಗಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ: ಸತೀಶಣ್ಣನ ಜತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದ ಲಕ್ಷ್ಮೀ ಹೆಬ್ಬಾಳ್ಕರ್

6. ಇಸ್ರೇಲ್‌ಗೆ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಭೇಟಿ; ಉಗ್ರರ ನಿರ್ನಾಮಕ್ಕೆ ಬೆಂಬಲ ಘೋಷಣೆ
ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ಇಸ್ರೇಲ್‌ಗೆ ಭೇಟಿ ನೀಡಿದ ಬೆನ್ನಲ್ಲೇ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (Rishi Sunak) ಕೂಡ ಗುರುವಾರ (ಅಕ್ಟೋಬರ್‌ 19) ಇಸ್ರೇಲ್‌ಗೆ ಭೇಟಿ ನೀಡಿದ್ದಾರೆ. ದುಃಖದಲ್ಲಿರುವ ಇಸ್ರೇಲ್‌ ನೆಲದ ಮೇಲೆ ನಿಂತಿದ್ದೇನೆ. ನಾನೂ ನಿಮ್ಮ ದುಃಖದಲ್ಲಿ ಪಾಲುದಾರನಾಗಿದ್ದೇನೆ ಹಾಗೂ ದುಷ್ಟಶಕ್ತಿಯಾದ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬೆಂಬಲ ಘೋಷಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಹಣಕಾಸು ವಂಚನೆ ತಡೆಯಲು ʼಡಿಜಿಕವಚʼ ಆರಂಭಿಸಿದ ಗೂಗಲ್‌
ಹಣಕಾಸು ವಂಚನೆಗಳನ್ನು(Financial Frauds) ತಡೆಯುವುದಕ್ಕಾಗಿ ಇಂಟರ್ನೆಟ್ ದೈತ್ಯ ಕಂಪನಿಯಾಗಿರುವ ಗೂಗಲ್ ಭಾರತದಲ್ಲಿ ಡಿಜಿಕವಚ (Google DigiKavach) ಆರಂಭಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ರೈತರಿಗೆ ಕೇಂದ್ರದ ಸಿಹಿ ಸುದ್ದಿ; 6 ಬೆಳೆಗಳಿಗೆ ಭರ್ಜರಿ ಬೆಂಬಲ ಬೆಲೆ
ದೇಶಾದ್ಯಂತ ಮುಂಗಾರು ಮಳೆ (Monsoon Season) ಕೊರತೆಯುಂಟಾಗಿ, ರೈತರು ಸಂಕಷ್ಟ ಅನುಭವಿಸುತ್ತಿರುವ ಬೆನ್ನಲ್ಲೇ ಅನ್ನದಾತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಗೋಧಿ ಸೇರಿ ಆರು ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು (Rabi Crops MSP) ಕೇಂದ್ರ ನಿರ್ಧರಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಏಳನೇ ಸ್ಥಾನಕ್ಕೆ ಅಮೃತಧಾರೆ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?
ಧಾರಾವಾಹಿಗಳ (Kannada Serials TRP) ಹೊರತಾಗಿ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳು ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದುಕೊಂಡಿದೆ. ಬಿಗ್ ಬಾಸ್ (Bigg Boss) ನಗರ ಭಾಗದಲ್ಲಿ 5.7 ರೇಟಿಂಗ್ ಪಡೆದಿದೆ. ಇನ್ನು ಧಾರಾವಾಹಿಯಲ್ಲಿ ಅಮೃತಧಾರೆ ಏಳನೇ ಸ್ಥಾನಕ್ಕೆ ಕುಸಿದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಶ್ವಾನಕ್ಕೆ ʼನೂರಿʼ ಎಂದು ಹೆಸರಿಟ್ಟ ರಾಹುಲ್‌ ಗಾಂಧಿಗೆ ʼಧರ್ಮ ಸಂಕಟʼ; ಬಿತ್ತು ಕೇಸ್‌!
ರಾಹುಲ್‌ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿ (Sonia Gandhi) ಅವರಿಗೆ ನೀಡಿದ ನಾಯಿ ಮರಿಗೆ “ನೂರಿ” (Pet Dog Noorie) ಎಂದು ಹೆಸರಿಟ್ಟಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಎಐಎಂಐಎಂ ಪಕ್ಷವು ಕೋರ್ಟ್‌ ಮೊರೆ ಹೋಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version