Site icon Vistara News

VISTARA TOP 10 NEWS: ಕರ್ನಾಟಕ ಬಂದ್‌ ಸಕ್ಸಸ್‌; ಸಲಾರ್‌ ರಿಲೀಸ್‌ ಡೇಟ್‌ ಅನೌನ್ಸ್!

Vistara top 10 News 2909

1.ಕಾವೇರಿ ಬಂದ್‌ ಕರೆಗೆ ಕರುನಾಡು ಸ್ತಬ್ಧ: ಮುಂದಿನ ಹೆಜ್ಜೆ ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಚಲೋ
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರುದ್ಧ ಕನ್ನಡ ಪರ ಸಂಘಟನೆಗಳು ನೀಡಿದ್ದ ಸೆ. 29ರ ಕರ್ನಾಟಕ ಬಂದ್‌ (Karnataka Bandh) ಕರೆಗೆ ರಾಜ್ಯಾದ್ಯಂತ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ರಾಜ್ಯದ ಬಹುತೇಕ ಭಾಗದ ಚಟುವಟಿಕೆಗಳು ಶುಕ್ರವಾರ ಸ್ತಬ್ಧವಾಗಿದ್ದವು. ಈ ನಡುವೆ ಶುಕ್ರವಾರದ ಬಂದ್‌ ಯಶಸ್ಸಿನಿಂದ ಉತ್ತೇಜಿತರಾಗಿರುವ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಅಕ್ಟೋಬರ್‌ 5ರಂದು ಕೆಆರ್‌ಎಸ್‌ ಅಣೆಕಟ್ಟಿಗೆ ಮುತ್ತಿಗೆ (KRS Chalo on October 5) ಹಾಕುವುದಾಗಿ ಘೋಷಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ1: ರಾಜ್ಯಾದ್ಯಂತ ಕಾವೇರಿ ಕಿಚ್ಚು ಹೇಗಿತ್ತು? ಇಲ್ಲಿದೆ ಫೋಟೊ ಝಲಕ್‌
ಪೂರಕ ಸುದ್ದಿ2: ವಾಟಾಳ್‌ ನಾಗರಾಜ್‌ ಬುರ್ಕಾದಲ್ಲಿ ಪ್ರತ್ಯಕ್ಷ; ಸಿದ್ದರಾಮೇಶ್ವರ ವಿರುದ್ಧ ಕೆಂಡಾಮಂಡಲ
ಪೂರಕ ಸುದ್ದಿ3:
ಚಿತ್ರರಂಗವನ್ನು ದೂರಬೇಡಿ, ನಾವಿಲ್ಲಿ ನಿಂತರೆ ಸಮಸ್ಯೆ ಬಗೆಹರಿಯುತ್ತಾ? ಶಿವರಾಜಕುಮಾರ್
ಪೂರಕ ಸುದ್ದಿ4: 44 ವಿಮಾನ ಹಾರಾಟ ರದ್ದು, ಪ್ರಯಾಣಿಕರಂತೆ ಬಂದು ಪ್ರತಿಭಟಿಸಲು ಯತ್ನಿಸಿದವರ ಬಂಧನ
ಪೂರಕ ಸುದ್ದಿ5: ಯಾರ‍್ರೀ ಈ ವಾಟಾಳ್‌ ನಾಗರಾಜ್?‌ ಅವರು ಹೇಳಿದ್ರೂಂತ ನಾವ್ಯಾಕೆ ಬಂದ್‌ ಮಾಡ್ಬೇಕು?

2. ಪ್ರಾಧಿಕಾರದಲ್ಲೂ ರಾಜ್ಯಕ್ಕೆ ಹೊಡೆತ; 3000 ಕ್ಯುಸೆಕ್‌ ನೀರು ಬಿಡುಗಡೆಗೆ ಆದೇಶ
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಶುಕ್ರವಾರ ನಡೆಸಿದ ಸಭೆಯಲ್ಲೂ ರಾಜ್ಯಕ್ಕೆ ಹಿನ್ನಡೆಯಾಗಿದೆ. ಸೆ. 28ರಿಂದ ಅಕ್ಟೋಬರ್‌ 15ರವರೆಗೆ ತಮಿಳುನಾಡಿಗೆ ಪ್ರತಿ ದಿನವೂ 3000 ಕ್ಯೂಸೆಕ್‌ ನೀರು ಬಿಡುಗಡೆ ಮಾಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶವನ್ನೇ ಎತ್ತಿ ಹಿಡಿದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಸುಪ್ರೀಂ ಕೋರ್ಟ್, ಕಾವೇರಿ ಪ್ರಾಧಿಕಾರದ ಮುಂದೆ ರಿವಿಶನ್ ಪಿಟಿಷನ್ ಎಂದ ಸಿಎಂ

3. ಮಹಿಳಾ ಮೀಸಲಿಗೆ ರಾಷ್ಟ್ರಪತಿ ಅಂಕಿತ! ಗೆಜೆಟ್‌ ಅಧಿಸೂಚನೆ ಹೊರಡಿಸಿದ ಸರ್ಕಾರ
ಲೋಕಸಭೆ, ದಿಲ್ಲಿ ಅಸೆಂಬ್ಲಿ ಮತ್ತು ಎಲ್ಲ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ನಾರಿ ಶಕ್ತಿ ವಂದನ್ ಅಧಿನಿಯಮ (Women’s Reservation Bill) ವಿಧೇಯಕಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ. ಸರ್ಕಾರ ಗೆಜೆಟ್‌ ಅಧಿಸೂಚನೆಯನ್ನೂ ಹೊರಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ಮುಸ್ಲಿಮರೂ ನಮ್ಮವರೇ ಎಂದ ಮೋಹನ್‌ ಭಾಗವತ್‌; ಸೌಹಾರ್ದ ಸಂದೇಶ ರವಾನೆ
“ಭಾರತದಲ್ಲಿರುವ ಮುಸ್ಲಿಮರು ಕೂಡ ಹಿಂದುಗಳ ಡಿಎನ್‌ಎ ಹೊಂದಿದ್ದಾರೆ” ಎಂದು ಹೇಳುತ್ತಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ಈಗ, “ಮುಸ್ಲಿಮರು ಕೂಡ ನಮ್ಮವರೇ” ಎಂದು ಹೇಳಿದ್ದಾರೆ. ಇದು ಚುನಾವಣೆ ಮೊದಲೇ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಕುರಿತು ದೇಶದ ಬಹುತೇಕ ಮುಸ್ಲಿಮರ ಅಭಿಪ್ರಾಯ ಬದಲಿಸುವ ಪ್ರಯತ್ನ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.2027ರ ಹೊತ್ತಿಗೆ ರಾಷ್ಟ್ರೀಯ ಹೆದ್ದಾರಿಗಳಿಂದಲೇ 2 ಲಕ್ಷ ಕೋಟಿ ರೂ. ಆದಾಯ
ಮುಂಬರುವ ವರ್ಷಗಳಲ್ಲಿ ಹೆದ್ದಾರಿಗಳಿಂದ ಹಣಗಳಿಸುವ ಮೂಲಕ ಸರಿಸುಮಾರು 2 ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಲು ಭಾರತ ಸರ್ಕಾರ ಯೋಜಿಸಿದೆ ಎಂದು ರೇಟಿಂಗ್ ಏಜೆನ್ಸಿ ಕೇರ್‌ಎಡ್ಜ್ ಹೇಳಿದೆ. ಅದು ಹೇಗೆ? ಇಲ್ಲಿದೆ ವಿವರ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ: ವರ್ಷಾಂತ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ಗುಂಡಿ ಮುಕ್ತಗೊಳಿಸಲು ಯತ್ನ: ನಿತಿನ್‌ ಗಡ್ಕರಿ

6. ಸೂರ್ಯನಿಗಿಂತ 6.5 ಶತಕೋಟಿ ಪಟ್ಟು ದೊಡ್ಡ ʼಕಪ್ಪು ಕುಳಿʼ ಗರಗರನೆ ತಿರುಗುತ್ತಿದೆ! ಹೊಸ ಆವಿಷ್ಕಾರ
ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಮೂಲಕ ಸೆರೆಹಿಡಿಯಲಾದ ಕಪ್ಪು ಕುಳಿ (Black Hole) ತಿರುಗುತ್ತಿದೆ. ಇದೊಂದು ಹೊಸ ಆವಿಷ್ಕಾರವಾಗಿದೆ. ಪ್ರಸಿದ್ಧ ಡೋನಟ್(ವಡೆ) ಆಕಾರದ ಎಂ87 (M87*) ಕಪ್ಪು ಕುಳಿ, ಸೂರ್ಯನಿಗಿಂತ (Sun) 6.5 ಶತಕೋಟಿ ಪಟ್ಟು ಹೆಚ್ಚು ದೊಡ್ಡದಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ವಿಶ್ವಕಪ್‌ ಆಡಲು ಬಂದ ಪಾಕ್‌ ತಂಡದ ಊಟಕ್ಕೆ ಬೀಫ್‌ ಕೊಡಲ್ಲ ಎಂದ ಭಾರತ
ಅ. 5ರಿಂದ ಆರಂಭವಾಗಲಿರುವ ವಿಶ್ವಕಪ್​ನಲ್ಲಿ (World Cup 2023) ಆಡಲು ಪಾಕಿಸ್ತಾನ ಕ್ರಿಕೆಟ್ ತಂಡ ಭಾರತಕ್ಕೆ ಬಂದಿದೆ. 7 ವರ್ಷಗಳ ಬಳಿಕ ಭಾರತಕ್ಕೆ ಬಂದ ಪಾಕ್​ ಬಳಗಕ್ಕೆ ಆತ್ಮೀಯ ಸ್ವಾಗತ ದೊರಕಿದೆ. ಆದರೆ, ಇಲ್ಲಿ ಅವರಿಗೆ ಗೋಮಾಂಸ ಕೊಡಲಾಗುವುದಿಲ್ಲ ಎಂದು ಆಯೋಜಕರು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 1975ರ ಉದ್ಘಾಟನಾ ಆವೃತ್ತಿಯ ವಿಶ್ವಕಪ್‌ ಹೇಗಿತ್ತು? ಟ್ರೋಫಿ ಗೆದ್ದವರು ಯಾರು? ಇಲ್ಲಿದೆ ಎಲ್ಲ ವಿವರ
1975ರ ಜೂನ್ 07ರಂದು ಇಂಗ್ಲೆಂಡ್​​ನಲ್ಲಿ ಉದ್ಘಾಟನಾ ಆವೃತ್ತಿಯ ಏಕದಿನ ಕ್ರಿಕೆಟ್ ವಿಶ್ವಕಪ್ ಆರಂಭಗೊಂಡಿತು. ಇದು ಕ್ರಿಕೆಟ್ ಪ್ರಪಂಚದ ಅತಿದೊಡ್ಡ ಪಂದ್ಯಾವಳಿಗೆ ಅಡಿಗಲ್ಲಾಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಸಿನಿ ರಸಿಕರಿಗೆ ಗುಡ್‌ ನ್ಯೂಸ್‌; ಸಲಾರ್‌ ರಿಲೀಸ್‌ ಡೇಟ್‌ ಅನೌನ್ಸ್‌
ಪ್ರಭಾಸ್ ಅವರ ಬಹುನಿರೀಕ್ಷಿತ ಚಿತ್ರ ʻಸಲಾರ್‌ʼ ಸಿನಿಮಾ (Salaar Movie) ರಿಲೀಸ್‌ ಡೇಟ್‌ ಅನೌನ್ಸ್‌ ಆಗಿದೆ. ಸಲಾರ್ ಡಿಸೆಂಬರ್ 22ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಪ್ಪಳಿಸಲಿದೆ. ಅಂತೂ ಶಾರುಖ್ ಖಾನ್ ಅವರ ಡಂಕಿ ಸಿನಿಮಾದೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಕ್ಲ್ಯಾಶ್‌ ಆಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಮಧ್ಯರಾತ್ರಿಯೇ ಒಟಿಟಿಗೆ ಎಂಟ್ರಿ ಕೊಟ್ಟ ಸಪ್ತ ಸಾಗರದಾಚೆ ಎಲ್ಲೋ; ಸೈಡ್‌ ಬಿ ಯಾವಾಗ?

10. ಬಿಟ್ಹೋಗ್ಬೇಡ ನನ್ನ…ಮಾವುತನ ಬಳಿ ಮಗುವಿನಂತೆ ರಚ್ಚೆ ಹಿಡಿದ ಆನೆ, ನೆಟ್ಟಿಗರು ಫಿದಾ
ಆನೆಯೊಂದು ಮಾವುತನನ್ನು ಬಿಟ್ಟು ಹೋಗದಂತೆ ತಡೆಯುವ ದೃಶ್ಯ ಅನೇಕರ ಗಮನ ಸೆಳೆದಿದೆ. ಮಾವುತ ಹೋಗದಂತೆ ತನ್ನ ಸೊಂಡಿಲು ಬಳಸಿ ತಡೆಯುವ ದೃಶ್ಯ (Viral Video) ನೋಡಿದರೆ ಖಂಡಿತಾ ನಿಮ್ಮ ಹೃದಯ ತುಂಬಿ ಬರಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version