Site icon Vistara News

ವಿಸ್ತಾರ TOP 10 NEWS | ಚಿರತೆ ಸೃಷ್ಟಿಸಿದ ಪ್ರಾಣ ಭಯದಿಂದ, ರೌಡಿ ಪಾಲಿಟಿಕ್ಸ್‌ ತಾರಕಕ್ಕೇರಿದವರೆಗೆ ದಿನದ ಪ್ರಮುಖ ಸುದ್ದಿಗಳು

ವಿಸ್ತಾರ TOP 10 NEWS

ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಸಿಲಿಕಾನ್‌ ಸಿಟಿಯಲ್ಲಿ ಚಿರತೆಯಿಂದ ಪ್ರಾಣ ಭಯವೇ ಸೃಷ್ಟಿಯಾಗಿದೆ. ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ೧೫ ಲಕ್ಷ ರೂ. ಪರಿಹಾರವನ್ನೂ ಘೋಷಿಸಲಾಗಿದೆ. ಈ ನಡುವೆ, ರೌಡಿ ರಾಜಕೀಯವೂ ತೀವ್ರ ಸ್ವರೂಪ ಪಡೆದುಕೊಂಡಿದ್ದು ಬಿಜೆಪಿ-ಕಾಂಗ್ರೆಸ್‌ ಪಕ್ಷಗಳು ಜಾಲತಾಣದಲ್ಲಿ ಬೀದಿ ಕಾಳಗಕ್ಕಿಳಿದಿವೆ! ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ-ಹನುಮ ಮಂದಿರ ವಿವಾದವೂ ಬಿಸಿಯೇರಿದೆ. ಅಗ್ನಿವೀರರ ಮೊದಲ ಬ್ಯಾಚ್‌ನಲ್ಲಿ ೩೪೧ ಹೆಣ್ಮಕ್ಕಳಿಗೆ ಅವಕಾಶ ಸಿಕ್ಕಿದ್ದು, ಕಾಂತಾರ ಚಿತ್ರಕ್ಕೆ ದಕ್ಕಿರುವ ʻವರಾಹ ರೂಪಂʼ ಗೆಲುವು ದಿನದ ಪಾಸಿಟೀವ್ ಬೆಳವಣಿಗೆಗಳು. ಇವೆಲ್ಲವೂ ಸೇರಿದ ಗುಚ್ಛವೇ ವಿಸ್ತಾರ TOP 10 NEWS.

1. ಬೆಂಗಳೂರಲ್ಲಿ ಇನ್ನೂ ಸೆರೆಸಿಗದ ಚಿರತೆ: ಸಿಲಿಕಾನ್‌ ಸಿಟಿಯ ಜನರಿಗೆ ಪ್ರಾಣಭಯ
ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳನ್ನು ಕಳೆದ ೨ ವಾರದಲ್ಲಿ ಕಾಡುತ್ತಿರುವ ಚಿರತೆ ಭೀತಿ ಈಗ ಪ್ರಾಣಭಯವಾಗಿ ಮಾರ್ಪಟ್ಟಿದೆ. ಕೆಂಗೇರಿ ಮತ್ತು ಕನಕಪುರ ರಸ್ತೆ ನಡುವಿನ ಪ್ರದೇಶ ಚಿರತೆಗಳ ಹಾಟ್‌ ಸ್ಪಾಟ್‌ ಆಗಿದ್ದು, ಇಲ್ಲಿ ಅಲ್ಲಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ಬೋನ್‌ಗಳನ್ನು ಇಟ್ಟು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಚಿರತೆ ಸೆರೆಯಾಗಿಲ್ಲ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸಲು, ಕಚೇರಿಗೆ ಹೋಗಲು, ವಾಕಿಂಗ್‌ ಹೋಗಲು ಕೂಡಾ ಹಿಂದೆ ಮುಂದೆ ನೋಡುವಂತಾಗಿದೆ. ಬೆಂಗಳೂರು, ದೊಡ್ಡಬಳ್ಳಾಪುರ, ಹೊನ್ನಾವರ, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಮತ್ತೆ ಮತ್ತೆ ಚಿರತೆ ದಾಳಿಯ ಕಥೆಗಳೇ ಕೇಳಿಬರುತ್ತಿದ್ದು, ಮನುಷ್ಯ-ಪ್ರಾಣಿ ಸಂಘರ್ಷ ಆತಂಕ ಮೂಡಿಸಿದೆ. ಪೂರ್ಣ ವರದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

2. ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ
ಚಿರತೆ ದಾಳಿಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ರೂ.ಗಳ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ. ರಾಜ್ಯಾದ್ಯಂತ ಮತ್ತು ಅದರಲ್ಲೂ ಮುಖ್ಯವಾಗಿ ರಾಜಧಾನಿಯಲ್ಲೇ ಚಿರತೆ ದಾಳಿ ವಿಪರೀತವಾಗಿರುವ ಹಿನ್ನೆಲೆಯಲ್ಲಿ ವಿದ್ಯಮಾನವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ.

3. ರೌಡಿ ಪಾಲಿಟಿಕ್ಸ್‌ ತೀವ್ರ: ಕಾಂಗ್ರೆಸ್‌ನಿಂದ ಬಿಜೆಪಿ ವೆಬ್‌ಸೈಟ್‌, ಬಿಜೆಪಿಯಿಂದ ಚಾರ್ಜ್‌ಶೀಟ್‌!
ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ರೌಡಿ ಪಾಲಿಟಿಕ್ಸ್‌ ಇನ್ನಷ್ಟು ತೀವ್ರಗೊಂಡಿದೆ. ಬಿಜೆಪಿಯ ರೌಡಿಸಂ ರಾಜಕೀಯವನ್ನು ಬಯಲಿಗೆಳೆಯಲು ಕರ್ನಾಟಕ ಪ್ರದೇಶ ಕಾಂಗ್ರೆಸ್‌ನಿಂದ ‘ಸೋರಿಕೆಯಾದ’ ಅಭ್ಯರ್ಥಿಗಳ ಪಟ್ಟಿಯೊಂದಿಗೆ ವೆಬ್‌ಸೈಟ್ ಸ್ಥಾಪಿಸಲಾಗಿದೆ. ಈ ನಡುವೆ ಬಿಜೆಪಿ ಡಿ.ಕೆ. ಶಿವಕುಮಾರ್‌ ಅವರನ್ನೇ ಪ್ರಧಾನ ಗುರಿಯಾಗಿಟ್ಟುಕೊಂಡು ಹಲವು ನಾಯಕರ ವಿರುದ್ಧ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದೆ. ಎರಡೂ ಪಕ್ಷಗಳು ರೌಡಿ ಪಾಲಿಟಿಕ್ಸ್‌ ಬಡಿದಾಟದಲ್ಲಿ ಮುಳುಗೇಳುತ್ತಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ಕೊತ್ವಾಲನ ಚಹಾ ಲೋಟ ಎತ್ತುತ್ತಿದ್ದ ಪುಡಿ ರೌಡಿ ಈಗ ಕೆಪಿಸಿಸಿ ಅಧ್ಯಕ್ಷ: ಬಿಜೆಪಿ ಚಾರ್ಜ್‌ಶೀಟ್‌

4. ಅಯೋಧ್ಯೆ ರಾಮ ಮಂದಿರದಂತೆ, ಶ್ರೀರಂಗಪಟ್ಟಣದಲ್ಲೂ ಹನುಮ ಮಂದಿರ ನಿರ್ಮಾಣ ಎಂದ ಬಿಜೆಪಿ ನಾಯಕ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಯಲ್ಲಿದ್ದ ವಿವಾದಿತ ಕಟ್ಟಡದ ಜಾಗದಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದಂತೆ ಶ್ರೀರಂಗ ಪಟ್ಟಣದ ಜಾಮಿಯ ಮಸೀದಿ (Temple issue) ಇರುವ ಜಾಗದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಹಿಂದು ಸಂಘಟನೆ ಮುಖಂಡ ಹಾಗೂ ಬಿಜೆಪಿ ನಾಯಕ ಡಾ. ಇಂದ್ರೇಶ್‌ ಹೇಳಿದ್ದಾರೆ. ಶ್ರೀರಂಗಪಟ್ಟಣದಲ್ಲಿ ನಾಳೆ (ಡಿಸೆಂಬರ್​ 4) ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆ ನಡೆಯಲಿದ್ದು, ಇದರ ಉದ್ದೇಶವೇ ಹನುಮ ಮಂದಿರ ನಿರ್ಮಾಣ ಮಾಡುವುದು ಎಂದು ಹೇಳಿದರು. ಡಿಸೆಂಬರ್‌ ನಾಲ್ಕರ ಸಂಕೀರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಭಾರಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಸವಿಸ್ತಾರ ಅಂಕಣ | ನೈತಿಕತೆ ಮೆರೆಯಲು ಅಂದು 6 ಶಾಸಕರನ್ನು ಉಚ್ಚಾಟಿಸಿದ ಪಕ್ಷಕ್ಕೆ ಇಂದು ರೌಡಿಗಳ ಅವಶ್ಯಕತೆ ಏಕೆ ಬಂತು?
ಮುಂದಿನ ದಿನಗಳಲ್ಲಿ ರೌಡಿಗಳು, ದುಷ್ಟರು, ಅತ್ಯಾಚಾರಿಗಳು, ಕೊಲೆಗಡುಗರು ಕಾನೂನಿನ ರಕ್ಷಣೆಗಾಗಿ ಚುನಾವಣೆ ಟಿಕೆಟ್ ಕೇಳಲು ಕದ ತಟ್ಟೇ ತಟ್ಟುತ್ತಾರೆ. ಪಕ್ಷಗಳು ಇಂಥವರನ್ನು ತಿರಸ್ಕರಿಸಬೇಕು. ಇಷ್ಟರ ನಂತರವೂ ಅಂತಹವರು ಪಕ್ಷೇತರರಾಗಿ ಸ್ಪರ್ಧಿಸಿದರೆ ತಕ್ಕ ಪಾಠ ಕಲಿಸುವ ಹೊಣೆಯನ್ನು ಜನರೇ ಹೊರಬೇಕು: ಹೀಗೆ ರೌಡಿಸಂ ಮತ್ತು ರಾಜಕೀಯ ಕುರಿತ ಬಹುದೊಡ್ಡ ಚರ್ಚೆಯ ಬಗ್ಗೆ ಸ್ಪಷ್ಟ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ಸವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

೬. ಅಗ್ನಿವೀರರ ಮೊದಲ ಬ್ಯಾಚ್‌ ರೆಡಿ: ನೌಕಾಪಡೆಗೆ 341 ಸ್ತ್ರೀಯರು ಸೇರಿ 3 ಸಾವಿರ ಮಂದಿ ನೇಮಕ
ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ನೌಕಾಪಡೆಗೆ ಅಗ್ನಿಪಥ ಯೋಜನೆಯಡಿ ನೇಮಕವಾದ ಮೂರು ಸಾವಿರ ಅಗ್ನಿವೀರರನ್ನು (First Batch Of Agniveers) ಸೇರ್ಪಡೆ ಮಾಡಿಕೊಳ್ಳಲಾಗಿದೆ. ಇವರಲ್ಲಿ ೩೪೧ ಹೆಣ್ಣುಮಕ್ಕಳಿದ್ದಾರೆ ಎಂದು ನೌಕಾಪಡೆ ಮುಖ್ಯಸ್ಥ ಆರ್‌.ಹರಿಕುಮಾರ್‌ ಮಾಹಿತಿ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೭. ವಾರದ ವ್ಯಕ್ತಿ ಚಿತ್ರ | ಐಒಎ ಗದ್ದುಗೆ ಏರಲಿದೆ ಗುಡಿಸಲಲ್ಲಿ ಅರಳಿದ ಹೂವು; ಪಿ ಟಿ ಉಷಾ ಮುಡಿಗೆ ಇನ್ನೊಂದು ಗರಿ
ಕ್ರೀಡಾ ಕ್ಷೇತ್ರದ ಅಪ್ರತಿಮ ಸಾಧಕಿ, ವೇಗದ ಓಟಗಾರ್ತಿ ಪಿ ಟಿ ಉಷಾ (P. T. Usha) ದೇಶದ ಅತ್ಯುನ್ನತ ಕ್ರೀಡಾ ಸಂಸ್ಥೆಯಾಗಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ದಾಖಲೆ ಬರೆಯಲಿದ್ದಾರೆ. ಪೂರ್ಣ ಲೇಖನಕ್ಕಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

೮. ಹಿಂದುಗಳೂ ಲವ್‌ ಜಿಹಾದ್‌ ಮಾಡಲಿ, ಮುಸ್ಲಿಂ ಹೆಣ್ಣುಮಕ್ಕಳ ಹೊತ್ತೊಯ್ಯಲಿ: ಮೌಲಾನಾ ಅಜ್ಮಲ್‌
ಹಿಂದುಗಳು ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮುಸ್ಲಿಮರಂತೆ ಕಡಿಮೆ ವಯಸ್ಸಿಗೇ ಮದುವೆಯಾಗಬೇಕು ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ ಅಸ್ಸಾಂ ಸಂಸದ, ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌ (AIUDF) ಅಧ್ಯಕ್ಷ ಮೌಲಾನಾ ಬದ್ರುದ್ದೀನ್‌ ಅಜ್ಮಲ್ ಈಗ ಲವ್‌ ಜಿಹಾದ್‌ (Love Jihad) ಕುರಿತೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಹಿಂದುಗಳೂ ಲವ್‌ ಜಿಹಾದ್‌ನಲ್ಲಿ ತೊಡಗಬೇಕು” ಎಂದು ಕರೆ ನೀಡಿದ್ದು, ಬಿಜೆಪಿ ನಾಯಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ʻವರಾಹ ರೂಪಂʼ ವಿವಾದದಲ್ಲಿ ಕೊನೆಗೂ ಕಾಂತಾರ ಟೀಮ್‌ಗೆ ಜಯ: ಸಿನಿಮಾಕ್ಕೂ ಬರಲಿದೆ ಒರಿಜಿನಲ್‌ ಹಾಡು
ಕಾಂತಾರ ಸಿನಿಮಾದ (Kantara Movie) ʻವರಾಹ ರೂಪಂʼ ಹಾಡಿನ ವಿವಾದಕ್ಕೆ ಕೊನೆಗೂ ಜಯ ಸಿಕ್ಕಿದೆ. “ವರಾಹ ರೂಪಂ” ಮಲಯಾಳಂ ಮೂಲ ಹಾಡನ್ನು ಕಾಂತಾರ ಚಿತ್ರದಲ್ಲಿ ನಕಲು ಮಾಡಲಾಗಿದೆ ಎಂದು ತೈಕುಡಂ ಬ್ರಿಜ್‌ ಮ್ಯೂಸಿಕ್‌ ತಂಡ ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಕೇರಳದ ಕೋಯಿಕ್ಕೋಡ್ (ಕಲ್ಲಿಕೋಟೆ) ಜಿಲ್ಲಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಇದೀಗ ಅಲ್ಲಿಯೂ ತಡೆಯಾಜ್ಞೆ ತೆರವುಗೊಂಡಿದೆ. ಇದು ದೈವ ದೇವರ ಅನುಗ್ರಹ ಅಂದಿದ್ದಾರೆ ರಿಷಬ್‌ ಶೆಟ್ಟಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಡಿ.೪ರಿಂದ ಭಾರತ-ಬಾಂಗ್ಲಾ ಏಕದಿನ ಸರಣಿ: ಹುಲಿ ಬೇಟೆಗೆ ಸಜ್ಜಾದ ರೋಹಿತ್‌ ಪಡೆ
ಢಾಕಾ: ಟಿ20 ವಿಶ್ವ ಕಪ್ ಸೆಮಿಫೈನಲ್​ ಸೋಲಿನ​ ಬಳಿಕ ವಿಶ್ರಾಂತಿಯಲ್ಲಿದ್ದ ಟೀಮ್ ಇಂಡಿಯಾದ ಹಿರಿಯ ಆಟಗಾರರು ತಂಡಕ್ಕೆ ವಾಪಸಾಗಿದ್ದು ಪೂರ್ಣ ಪ್ರಮಾಣದ ಸಾಮರ್ಥ್ಯದೊಂದಿಗೆ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.(IND VS BANGLA) ಭಾನುವಾರ ಮೊದಲ ಪಂದ್ಯವನ್ನಾಡುವ ಮೂಲಕ ಸರಣಿಗೆ ಚಾಲನೆ ದೊರೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇನ್ನಷ್ಟು ಪ್ರಮುಖ ಸುದ್ದಿಗಳ ಲಿಂಕ್‌ಗಳು ಇಲ್ಲಿವೆ..
೧. ಬಿಜೆಪಿ-ಆರ್​ಎಸ್​ಎಸ್​ ಯಾಕೆ ಜೈ ಸಿಯಾ ರಾಮ್​ ಘೋಷಣೆ ಕೂಗಲ್ಲ; ವ್ಯಂಗ್ಯ ಮಾಡಿ ಕಾರಣ ತಿಳಿಸಿದ ರಾಹುಲ್
೨. ನನ್ನ ಮುಂದೆ ಬೀಫ್‌ ತಿಂದ್ರೆ ಸಿದ್ದರಾಮಯ್ಯರನ್ನು ಒಳಗೆ ಹಾಕಿಸ್ತೀನಿ ಎಂದ ಸಚಿವ ಪ್ರಭು ಚವ್ಹಾಣ್‌
೩. ಸೊಸೆಯ ಮೇಲೇ ಕಣ್ಣು ಹಾಕಿದ್ದ ಧೂರ್ತ ಮಾವನ ಸುಪಾರಿ ಮರ್ಡರ್‌: ಕೊಲ್ಲಿಸಿದ್ದು ಯಾರು?
೪. ಪಾರದರ್ಶಕ ಕೊಲಿಜಿಯಂನ ಹಳಿ ತಪ್ಪಿಸದಿರಿ, ನಿವೃತ್ತ ನ್ಯಾಯಮೂರ್ತಿಗಳಿಗೆ ಸುಪ್ರೀಂ ತರಾಟೆ
೫. ಖುದಿರಾಮ್ ಬೋಸ್ ಸ್ಮರಣೆ | ಸ್ವಾತಂತ್ರ್ಯ ಸಂಗ್ರಾಮದ ಕಿರಿಯ ಬಲಿದಾನಿ

Exit mobile version