Site icon Vistara News

ವಿಸ್ತಾರ TOP 10 NEWS: ಸೇವ್‌ ನಂದಿನಿ ಅಭಿಯಾನದಿಂದ, ಖರ್ಗೆಗೆ ಸಿಎಂ ಆಫರ್‌ವರೆಗಿನ ಪ್ರಮುಖ ಸುದ್ದಿಗಳಿವು

vistara top10

#image_title

1.Nandini vs Amul: ಶುರುವಾಗಿದೆ ಸೇವ್‌ ನಂದಿನಿ, ಬಾಯ್‌ಕಾಟ್‌ ಅಮುಲ್‌ ಅಭಿಯಾನ
ಬೆಂಗಳೂರು: ಗುಜರಾತ್‌ ಮೂಲದ ಸಹಕಾರಿ ಸಂಸ್ಥೆ ಅಮುಲ್‌ ಈಗಾಗಲೇ ವಿವಿಧ ಉತ್ಪನ್ನಗಳನ್ನು ಕರ್ನಾಟಕದ ಮಾರುಕಟ್ಟೆಯಲ್ಲಿ ಹೊಂದಿದ್ದು, ಇದೀಗ ಹಾಲು ಮತ್ತು ಮೊಸರು ಮಾರಾಟಕ್ಕೆ ಮುಂದಾಗಿರುವುದಕ್ಕೆ ರಾಜ್ಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ನಂದಿನಿ ಬ್ರ್ಯಾಂಡ್‌ಗೆ ಈಗಾಗಲೇ ಅನೇಕ ಖಾಸಗಿ ಬ್ರ್ಯಾಂಡ್‌ಗಳು ಸ್ಪರ್ಧೆ ಒಡ್ಡುತ್ತಿದ್ದು, ಇದೀಗ ಅಮುಲ್‌ ಸಹ ಸೇರ್ಪಡೆಯಾಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಿಗರಿಂದ ಸೇವ್‌ ನಂದಿನಿ (ನಂದಿನಿ ಉಳಿಸಿ), ಬಾಯ್‌ಕಾಟ್‌ ಅಮುಲ್‌ ಅಭಿಯಾನ ಪ್ರಾರಂಭವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : Nandini Vs Amul : ಅಮುಲ್ ವಿಚಾರದಲ್ಲಿ ರಾಜಕಾರಣ ಸಲ್ಲದು ಎಂದ ಸಿಎಂ ಬೊಮ್ಮಾಯಿ

2. ಸಿಎಂ ಸ್ಥಾನದ ಅವಕಾಶ ಖರ್ಗೆಗೆ ಬಿಟ್ಟು ಕೊಡಲು ರೆಡಿ ಎಂದ ಡಿಕೆಶಿ; ಏನಿದು ಹೊಸ ವರಸೆ?
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಸ್ಥಾನದ ಅವಕಾಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಿಟ್ಟುಕೊಡಲು ಸಿದ್ಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಘೋಷಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖರ್ಗೆ ಅವರು ಈ ಹುದ್ದೆಯನ್ನು ಬಯಸುವುದಾದರೆ ನಾನು ರೇಸ್‌ನಿಂದ ಹಿಂದೆ ಸರಿಯುತ್ತೇನೆ ಎಂದಿದ್ದಾರೆ. ಈ ಹೇಳಿಕೆಗೆ ಹಲವು ಅರ್ಥಗಳನ್ನು ಕಲ್ಪಿಸಲಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

3. ಮೈಸೂರಲ್ಲಿ ಮೋದಿ ಸಂಚಲನ; ನಾಳೆ ಹುಲಿಗಣತಿ ವರದಿ ಬಿಡುಗಡೆ; ಬಂಡೀಪುರದಲ್ಲಿ ಹುಲಿ ಸಫಾರಿ
ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮೇನಿಯಾ ಶುರುವಾಗಿದೆ. ಈಗಾಗಲೇ ಮೈಸೂರು ತಲುಪಿರುವ ಮೋದಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅಲ್ಲದೆ, ಪ್ರಾಜೆಕ್ಟ್‌ ಟೈಗರ್‌ನ 50ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿರುವ ಹುಲಿ ಸಂರಕ್ಷಣೆ ಸಂಬಂಧಿತ ಕಾರ್ಯಕ್ರಮ ಮತ್ತು ಹುಲಿಗಣತಿ ಬಿಡುಗಡೆ ಮಾಡುವ ಅವರು, ಬಂಡೀಪುರದಲ್ಲಿ ಹುಲಿ ಸಫಾರಿಯನ್ನೂ ಕೈಗೊಳ್ಳಲಿದ್ದಾರೆ. ಪೂರ್ವ ವರದಿಗೆ ಕ್ಲಿಕ್‌ ಮಾಡಿ
ಪೂರಕ ವರದಿಗಳು
1. ಮೈಸೂರಿನ ರ‍್ಯಾಡಿಸನ್‌ ಹೋಟೆಲ್‌ ದರ್ಬಾರ್‌ ಸೂಟ್‌ ಮೋದಿಮಯ; ಟವೆಲ್‌, ಹೊದಿಕೆಯಲ್ಲೂ ಮೋದಿ ಚಿತ್ರ
2.ಏಪ್ರಿಲ್​ 9ರಂದು ಹುಲಿ ಗಣತಿ ಬಿಡುಗಡೆ ಮಾಡಲಿದ್ದಾರೆ ಪಿಎಂ ಮೋದಿ, ಕರ್ನಾಟಕವೇ ನಂಬರ್​ ಒನ್​?
3. Project Tiger : ಹುಲಿಗಳಿಗೆ ಏಕೆ ಗಣತಿ? ನಮ್ಮ ದೇಶದ ಹುಲಿ ಸಂತತಿ ಕುರಿತು ಇಲ್ಲಿದೆ ವಿಶೇಷ ಮಾಹಿತಿ
4.Tiger Census : ವಿಶ್ವದ ಹುಲಿಗಳ ಸಂಖ್ಯೆಯಲ್ಲಿ ಭಾರತದ್ದೇ ಸಿಂಹಪಾಲು!

4. ನನ್ನ ಹತ್ರ ಬ್ಲ್ಯಾಕ್‌ಮೇಲ್‌ ನಡೆಯಲ್ಲ; ಟಿಕೆಟ್‌ ಕೊಡದಿದ್ರೆ ಪಕ್ಷೇತರ ಎಂಬ ವರಸೆಗೆ ಕುಮಾರಸ್ವಾಮಿ ತಿರುಗೇಟು
ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಟಿಕೆಟ್‌ (Hasana Politics) ನೀಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆ ನಡೆಸಲಾಗುತ್ತಿದೆ ಎಂಬ ವರಸೆ ಪ್ರದರ್ಶಿಸಿದ ಎಚ್‌.ಡಿ ರೇವಣ್ಣ ಕುಟುಂಬಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನಿಮ್ಮ ಬ್ಲ್ಯಾಕ್‌ಮೇಲ್‌ ಕುಮಾರಸ್ವಾಮಿ ಮುಂದೆ ನಡೆಯಲ್ಲ ಎಂದು ನೇರವಾಗಿ ಹೇಳಿದ್ದಾರೆ.‌ ಪೂರ್ಣ ವರದಿಗೆ ಕ್ಲಿಕ್‌ ಮಾಡಿ

5. ವಿಸ್ತಾರ ಅಂಕಣ: ಸಿಟಿ ಜನರೇಕೆ ಹೆಚ್ಚು ವೋಟ್ ಹಾಕ್ತಿಲ್ಲ? ಆನ್‌ಲೈನ್ ವೋಟಿಂಗ್ ಬಗ್ಗೆ ಚಿಂತನೆಗಿದು ಸಕಾಲ!
ನಗರದಲ್ಲಿ ಮತದಾನ ಪ್ರಮಾಣ ಕಡಿಮೆಯಾಗಲು ಮತದಾರರ ಆಲಸ್ಯ ಮಾತ್ರ ಕಾರಣವಲ್ಲ. ಆಯೋಗದ ಪಾತ್ರವೂ ಇದೆ. ಆಯೋಗ ಎಂಥ ಸವಾಲನ್ನೂ ಎದುರಿಸಲು ಶಕ್ತ ಎಂದು ಟಿಎನ್ ಶೇಷನ್ ಒಮ್ಮೆ ತೋರಿಸಿಕೊಟ್ಟಿದ್ದಾರೆ. ಮತ್ತೊಮ್ಮೆ ಸೀಮೋಲ್ಲಂಘನ ಮಾಡಲು ಚುನಾವಣಾ ಆಯೋಗ ಸಿದ್ಧವಾಗಬೇಕಿದೆ. ಇದರ ಜತೆಗೆ ಈ ಡಿಜಿಟಲ್‌ ಯುಗದಲ್ಲಿ ಆನ್‌ಲೈನ್‌ ವೋಟಿಂಗ್‌ ಬಗ್ಗೆ ಚಿಂತಿಸುವ ಅಗತ್ಯವೂ ಇದೆ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ.‌ ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ವಿನೋದ್ ರಾಜ್‌ಗೆ ಮದುವೆಯಾಗಿದ್ಯಾ? ಪತ್ನಿ, ಮಗನ ಫೋಟೊ ವೈರಲ್‌,‌ ನಿರ್ದೇಶಕನ ಸ್ಫೋಟಕ ಮಾಹಿತಿ!
ಖ್ಯಾತ ನಟ, ಲೀಲಾವತಿ ಅವರ ಪುತ್ರ ವಿನೋದ್‌ ರಾಜ್‌ ಅವರಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಎದೆಯೆತ್ತರಕ್ಕೆ ಬೆಳೆದಿರುವ ಒಬ್ಬ ಮಗನೂ ಇದ್ದಾನೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಹೇಳುತ್ತಿದೆ. ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು ತಮ್ಮ ಫೇಸ್‌ಬುಕ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಏನಿದು ಹೊಸ ವೈರಲ್‌ ಸುದ್ದಿ? ಪೂರ್ಣ ಮಾಹಿತಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ : ಡಾ. ರಾಜಕುಮಾರ್‌ ಮೇಲೆ ಇರುವ ಆಪಾದನೆ ಸುಳ್ಳು; ನಿರ್ದೇಶಕ ಪ್ರಕಾಶ್‌ ರಾಜ್‌ ಮೆಹು

7. ಅಯೋಧ್ಯೆ ರಾಮಲಲ್ಲಾಗೆ ಏ.23ರಂದು ಜಲಾಭಿಷೇಕ, 155 ದೇಶಗಳ ನದಿ ನೀರು ಸಮರ್ಪಣೆ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ರಾಮಮಂದಿರದ ಗರ್ಭಗುಡಿಯ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಏಪ್ರಿಲ್‌ 23ರಂದು ರಾಮಲಲ್ಲಾಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಜಲಾಭಿಷೇಕ ನೆರವೇರಿಸಲಿದ್ದಾರೆ. ಅದರಲ್ಲೂ, 155 ದೇಶಗಳ ನದಿಗಳಿಂದ ಸಂಗ್ರಹಿಸಿದ ನೀರಿನಿಂದ ಜಲಾಭಿಷೇಕ ಮಾಡುವುದು ವಿಶೇಷವಾಗಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

8. ಮುಂದಿನ 24 ಗಂಟೆಯಲ್ಲಿ ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ; ರಾಜ್ಯದ 9 ಜಿಲ್ಲೆಗಳಿಗೆ ಅಲರ್ಟ್‌
ರಾಜ್ಯದಲ್ಲಿ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಹಾವೇರಿ, ಗದಗ, ಬಾಗಲಕೋಟೆ, ಕಲಬುರಗಿ, ಬೀದರ್‌ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಗುಡುಗು, ಮಿಂಚಿನ (Latest Rain Alert) ಮಳೆಯಾಗಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಪಿಯುಗೆ ವರ್ಷಕ್ಕೆ ಇನ್ಮುಂದೆ ಒಂದಲ್ಲ 2 ಬಾರಿ ಪರೀಕ್ಷೆ; ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ವರದಿಯಲ್ಲಿ ಏನಿದೆ?
ಬೆಂಗಳೂರು: ಕೇಂದ್ರ ಶಿಕ್ಷಣ ಸಚಿವಾಲಯವು 9 ಮತ್ತು 10ನೇ ತರಗತಿ ಸೇರಿ ಪಿಯು ಶಿಕ್ಷಣ ವ್ಯವಸ್ಥೆಯಲ್ಲಿ (NCF 2023 Draft) ಬದಲಾವಣೆ ತರಲು ಮುಂದಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯವು ಏಪ್ರಿಲ್ 6ರಂದು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಪೂರ್ವ ಕರಡು ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಶಿಕ್ಷಣ ಸಂಸ್ಥೆಗಳು, ಶಿಕ್ಷಣ ತಜ್ಞರು, ಪೋಷಕರು, ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಕೋರಿದೆ. ಪೂರ್ಣ ವರದಿಗೆ ಲಿಂಕ್‌ ಕ್ಲಿಕ್‌ ಮಾಡಿ

10. ಗಂಡನನ್ನು ಹೇಡಿ, ನಿರುದ್ಯೋಗಿ ಎನ್ನುವುದು, ಪೋಷಕರ ಬಿಟ್ಟು ಬಾ ಎನ್ನುವುದು ಕೂಡ ಕ್ರೌರ್ಯ: ಹೈಕೋರ್ಟ್
ಕೌಟುಂಬಿಕ ಹಿಂಸೆ ಎಂದರೆ ಪುರುಷ ಮಾತ್ರ ತನ್ನ ಹೆಂಡತಿ ಮೇಲೆ ದೌರ್ಜನ್ಯ, ಹಿಂಸೆ ಮಾಡುವುದಲ್ಲ. ಪುರುಷರು ಕೂಡ ಪತ್ನಿಯರಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಪತ್ನಿಯು ತನ್ನ ಗಂಡನಿಗೆ ಹೇಡಿ ಎನ್ನುವುದು, ಕೆಲಸ ಮಾಡದೆ ಮನೆಯಲ್ಲಿ ಇದ್ದಿದ್ದಕ್ಕೆ ನಿರುದ್ಯೋಗಿ ಎಂದು ಹೀಯಾಳಿಸುವುದು, ನಿನ್ನ ತಂದೆ-ತಾಯಿಯನ್ನು ಬಿಟ್ಟು ಬಾ ಎಂದು ಒತ್ತಾಯಿಸುವುದು ಕೂಡ ಕ್ರೌರ್ಯ ಎಂದು ಕೋಲ್ಕೊತಾ ಹೈಕೋರ್ಟ್‌ ಇತ್ತೀಚೆಗೆ ಹೇಳಿದೆ. ಪೂರ್ಣ ವರದಿಗೆ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿ ಮತ್ತು ಲೇಖನಗಳು

  1. ಮೊದಲ ಭಾರತೀಯ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಮರಿ ಮೊಮ್ಮಗ ಕಾಂಗ್ರೆಸ್​​ಗೆ ರಾಜೀನಾಮೆ
  2. ಚೆಂದನೆ ದೇಹವಿದ್ದರೂ ಕೆಟ್ಟದಾಗಿ ಉಡುಪು ತೊಡುವ ಹೆಣ್ಮಕ್ಕಳು ಶೂರ್ಪನಖಿಯಂತೆ ಕಾಣ್ತಾರೆ ಎಂದ ಬಿಜೆಪಿ ನಾಯಕ
  3. Crime News: ವಿಮಾನದ ಎಮರ್ಜೆನ್ಸಿ ಡೋರ್‌ ತೆರೆಯಲು ಯತ್ನಿಸಿದ ಯುವಕನ ಬಂಧನ
  4. ಮಕ್ಕಳ ಕಥೆ: ಉಪಾಯ ಚತುರರಾದ ನಾಲ್ವರು ಗೆಳೆಯರು
  5. ರಾಜ ಮಾರ್ಗ ಅಂಕಣ : ಹಾಸಿಗೆ ಇದ್ದಷ್ಟೇ ಯಾಕೆ ಕಾಲು ಚಾಚಬೇಕು? ಕಾಲಿದ್ದಷ್ಟು ಉದ್ದದ ಹಾಸಿಗೆ ಯಾಕೆ ಮಾಡಿಸಬಾರದು?
Exit mobile version