Site icon Vistara News

ವಿಸ್ತಾರ TOP 10 NEWS | ಬಿಜೆಪಿಯ ಆಡಿಯೊ ಸೌಂಡ್‌ನಿಂದ, ಮುಂದುವರಿದ ಪಂಚಮಸಾಲಿ ಗುಡುಗಿನವರೆಗಿನ ಪ್ರಮುಖ ಸುದ್ದಿಗಳಿವು

Top 10

1. ಬಿಜೆಪಿಗೆ ಬಹುಮತ ಬರಲ್ಲ; ಆದ್ರೆ ಸರ್ಕಾರ ಮಾತ್ರ ನಮ್ದೇ ಸದ್ದು ಮಾಡಿತು ಆಡಿಯೊ, ನಂದಲ್ಲ ಎಂದ ಸಿಪಿವೈ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವುದಿಲ್ಲ. ಜನಾಭಿಪ್ರಾಯದಿಂದ ಸರ್ಕಾರ ಬರಲಾರದು. ಆದರೆ, ಸರ್ಕಾರ ರಚನೆ ಮಾಡೋದು ಮಾತ್ರ ನಾವೇ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಮಾತನಾಡಿರುವ ಆಡಿಯೊ ವೈರಲ್‌ ಆಗಿದೆ. ಅಲ್ಲದೆ, ಆಪರೇಷನ್‌ ಕಮಲವನ್ನು ಈ ಬಾರಿ ಚುನಾವಣೆ ಬಳಿಕ ಮಾಡುವುದಿಲ್ಲ. ಚುನಾವಣೆಗೆ ಮೊದಲೇ ನಡೆಯುತ್ತದೆ ಎಂದೂ ಹೇಳಿಕೊಂಡಿದ್ದಾರೆ. ಆದರೆ, ಸಿಎಂ ಬೊಮ್ಮಾಯಿ ಅವರು ಕರೆದು ಕ್ಲಾಸ್‌ ತೆಗೆದುಕೊಂಡ ಬಳಿಕ ಆ ಮಾತು ನನ್ನದಲ್ಲ ಎಂದಿದ್ದಾರೆ ಸಿ.ಪಿ. ಯೋಗೀಶ್ವರ್‌. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ವರದಿಯನ್ನೂ ಓದಿ | ಸಿಎಂ ಬೊಮ್ಮಾಯಿ ಕ್ಲಾಸ್‌; ಆಡಿಯೊ ನನ್ನದಲ್ಲ, 100% ನಮ್ಮದೇ ಬಹುಮತವೆಂದ ಸಿಪಿವೈ

2. ಪದೇಪದೆ ಗಡುವು ನೀಡುವ ಸ್ವಾಮೀಜಿ, ಯತ್ನಾಳ್‌ ವಿರುದ್ಧ ಸಿ.ಸಿ ಪಾಟೀಲ್‌, ನಿರಾಣಿ ಆಕ್ರೋಶ
ಪಂಚಮಸಾಲಿ ಸಮುದಾಯಕ್ಕೆ ೨ಎ ಪ್ರವರ್ಗದಡಿಯೇ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ತೀವ್ರಗೊಳಿಸಿರುವ ಕೂಡಲಸಂಗಮ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ಪಂಚಮಸಾಲಿ ಸಮುದಾಯದ ಇಬ್ಬರು ಪ್ರಭಾವಿ ಸಚಿವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನಷ್ಟು ಪ್ರಮುಖ ವರದಿಗಳು
ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡಲ್ಲ: ಕಣ್ಣೀರು ಹಾಕುತ್ತಲೇ ಯತ್ನಾಳ್‌ ವಿರುದ್ಧ ಕಿಡಿಕಾರಿದ ನಿರಾಣಿ
ಸಿಎಂ ಬೊಮ್ಮಾಯಿ ಸಿಕ್ಕಾಪಟ್ಟೆ ಸುಳ್ಳು ಹೇಳ್ತಾರೆ, ಇದು ಅಂತಿಮ ಹೋರಾಟ ಎಂದ ಸ್ವಾಮೀಜಿ

3. ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ, ಸೋಮವಾರ ಮತ್ತೆ ಕಸ್ಟಡಿಗೆ ಕೇಳಲಿರುವ ಪೊಲೀಸರು
ಅಂತೂ ಇಂತೂ ಹರಸಾಹಸ ಪಟ್ಟು ಸ್ಯಾಂಟ್ರೋ ರವಿಯನ್ನು ಬಂಧಿಸಿದ ಪೊಲೀಸರಿಗೆ ಹೊಸ ತಲೆ ನೋವು ಶುರುವಾಗಿದೆ. ಒಂದು ಕಡೆ ಆಡಿಯೋ, ವಿಡಿಯೊ, ರಾಜಕಾರಣಿಗಳ ಸಖ್ಯವನ್ನು ಬಾಯಿಬಿಡಿಸುವ ಟಾಸ್ಕ್. ಕೋರ್ಟ್‌ ಆತನನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಬೇಕೆಂಬ ವಿಚಾರಕ್ಕೆ ಸ್ಪಂದಿಸಿದ ಕೋರ್ಟ್‌ ಸೋಮವಾರ ಮತ್ತೆ ಅರ್ಜಿ ಸಲ್ಲಿಸಲು ಸೂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನಷ್ಟು ಪ್ರಮುಖ ವರದಿ
-ಸ್ಯಾಂಟ್ರೋ ರವಿ ಬಂಧನದ ಬೆನ್ನಲ್ಲೇ ನಿಮಿಷಾಂಬಾ ದೇವಿ ಹರಕೆ ತೀರಿಸಿದ ಎಡಿಜಿಪಿ ಅಲೋಕ್‌ ಕುಮಾರ್‌
-ಮಧುಮೇಹದಿಂದ ಬಳಲುತ್ತಿರುವ ಸ್ಯಾಂಟ್ರೋ ರವಿಗೆ ಗಂಟೆಗೊಮ್ಮೆ ಇನ್ಸುಲಿನ್‌ ಕೊಡಬೇಕು!

4. ವೈಎಸ್‌ವಿ ದತ್ತ, ಎಚ್‌. ನಾಗೇಶ್‌ ಕೈ ಸೇರ್ಪಡೆ, ಇನ್ನು ನಿತ್ಯವೂ ಕಾಂಗ್ರೆಸ್‌ ಪರ್ವ ಎಂದ ಡಿಕೆಶಿ
ಕಡೂರಿನ ಮಾಜಿ ಶಾಸಕ, ಜೆಡಿಎಸ್‌ ನಾಯಕ ವೈಎಸ್‌ವಿ ದತ್ತ, ಮುಳಬಾಗಿಲಿನ ಹಾಲಿ ಶಾಸಕ, ಬಿಜೆಪಿ ಮುಖಂಡ ಎಚ್‌. ನಾಗೇಶ್‌ ಅವರು ಶನಿವಾರ ಕಾಂಗ್ರೆಸ್‌ ಸೇರಿದರು. ಇವರಲ್ಲದೆ ಮೈಸೂರಿನ ಮೋಹನ್‌ ಕುಮಾರ್‌, ಕೋಲಾರದ ದಯಾನಂದ್‌ ಅವರು ಕೂಡಾ ಕೈಹಿಡಿದರು. ಈ ಸಂಭ್ರಮದ ಹೊತ್ತಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಇದು ಆರಂಭ ಮಾತ್ರ. ಇನ್ನು ಮುಂದೆ ಪ್ರತಿ ವಾರವೂ ಕಾಂಗ್ರೆಸ್‌ ಪಕ್ಷಕ್ಕೆ ಬೇರೆ ಬೇರೆ ನಾಯಕರ ಸೇರ್ಪಡೆ ನಡೆಯುತ್ತಲೇ ಇರುತ್ತದೆ ಎಂದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೫. ವಿಸ್ತಾರ ಅಂಕಣ | ಬ್ರಿಟಿಷರು ನಮ್ಮನ್ನು ಬರ್ಬಾದ್ ಮಾಡುವವರೆಗೆ ಭಾರತದ ಆರ್ಥಿಕತೆ ವಿಶ್ವದಲ್ಲೇ ನಂ.1 ಆಗಿತ್ತು ಎನ್ನುವುದು ಎಷ್ಟು ಜನರಿಗೆ ಗೊತ್ತು?
1,700ನೇ ಇಸವಿಯಲ್ಲಿ ಅಂದರೆ ಬ್ರಿಟಿಷರು ಆಡಳಿತ ಆರಂಭಿಸುವ ಸಮಯದಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಶೇಕಡಾ 24.4 ಇದ್ದ ಭಾರತದ ಪಾಲು ಬ್ರಿಟಿಷರು ಭಾರತವನ್ನು ಬಿಟ್ಟು ತೆರಳುವ ಆಲೋಚನೆ ಮಾಡುವ ವೇಳೆಗೆ ಅಂದರೆ 1,900ರ ಸಮಯದಲ್ಲಿ ಕೇವಲ ಶೇಕಡಾ 4.2ಕ್ಕೆ ಕುಸಿದಿತ್ತು. ಭಾರತ ಈ ರೀತಿಯ ಪರಮ ವೈಭವದ ಸ್ಥಿತಿಯಲ್ಲಿತ್ತು ಎನ್ನುವುದು ಇಂದಿನ ಹಲವು ಜನರಿಗೆ ಗೊತ್ತಿಲ್ಲ. ಅದನ್ನು ನೆನಪು ಮಾಡಿಕೊಟ್ಟಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾಗಿರುವ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

೬. ISRO Spying Case | ನಂಬಿ ನಾರಾಯಣನ್‌ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ
1994ರಲ್ಲಿ ನಡೆದ ಇಸ್ರೊ ಬೇಹುಗಾರಿಕೆ (ISRO Spying Case) ಪ್ರಕರಣದಲ್ಲಿ ಇಸ್ರೊ ಮಾಜಿ ವಿಜ್ಞಾನಿ ನಂಬಿ ನಾರಾಯಣನ್‌ ವಿರುದ್ಧದ ಆರೋಪಗಳು ಸುಳ್ಳು ಎಂದು ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯು ಕೇರಳ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಹಾಗೆಯೇ, “ನಂಬಿ ನಾರಾಯಣನ್‌ ಅವರನ್ನು ಪ್ರಕರಣದಲ್ಲಿ ಸಿಲುಕಿಸಲು ಜಾಗತಿಕವಾಗಿ ಪಿತೂರಿ ನಡೆದಿದೆ” ಎಂದು ಮಾಹಿತಿ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. Threat To Nitin Gadkari | ಕೇಂದ್ರ ಸಚಿವ ನಿತಿನ್‌ ಗಡ್ಕರಿಗೆ ಜೀವ ಬೆದರಿಕೆ, ಕಚೇರಿ, ನಿವಾಸಕ್ಕೆ ಹೆಚ್ಚಿನ ಭದ್ರತೆ
ನಾಗ್ಪುರ: ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ (Threat To Nitin Gadkari) ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ನಾಗ್ಪುರದಲ್ಲಿರುವ ನಿತಿನ್‌ ಗಡ್ಕರಿ ಅವರ ಕಚೇರಿಗೆ ಶನಿವಾರ ಬೆಳಗ್ಗೆ 11.30 ಹಾಗೂ 11.40ರ ಸುಮಾರಿಗೆ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಮಹಿಳೆ ಯಾರದೇ ಆಸ್ತಿಯಲ್ಲ: ಸುಪ್ರೀಂ ಕೋರ್ಟ್‌
ಮಹಿಳೆ ಯಾರದೇ ಅಸ್ತಿಯಲ್ಲ. ಆಕೆಗೆ ಅವಳದೇ ಆದ ಅಸ್ತಿತ್ವವಿದೆ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಒತ್ತಿಹೇಳಿದೆ. ರಾಜ್ಯದಾಚೆಯ ವ್ಯಕ್ತಿಗಳನ್ನು ಮದುವೆಯಾದ ಸಿಕ್ಕಿಂ ಮಹಿಳೆಯರನ್ನು ತೆರಿಗೆ ವಿನಾಯಿತಿಯಿಂದ ಹೊರಗಿಡುವ ಆದಾಯ ತೆರಿಗೆ ಕಾಯಿದೆ-1961ರ ತಾರತಮ್ಯಪೂರಿತ ಸೆಕ್ಷನ್‌ ಅನ್ನು ಅದು ತಳ್ಳಿಹಾಕಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಹಾಶಿಮ್​ ಆಮ್ಲಾ ಹಿಂದೂ ಕುಟುಂಬಗಳನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರೆ ಎಂದ ಸಯೀದ್​ ಅನ್ವರ್​!
ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ ಸಯೀದ್​ ಅನ್ವರ್(Saeed Anwar)​ ನೀಡಿದ ವಿವಾದಾತ್ಮಕ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಶಿಮ್​ ಆಮ್ಲಾ ಅನೇಕ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಗೆ ಅನೇಕ ಕ್ರಿಕೆಟ್​ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೧೦. ವಾರದ ವ್ಯಕ್ತಿಚಿತ್ರ | ರಾಜಮೌಳಿ ಎಂಬ ಭಾರತ ಸಿನಿಮಾ ಕ್ಷೇತ್ರದ ಮಾಂತ್ರಿಕ
ಭಾರತೀಯ ಸಿನಿಮಾ ಕ್ಷೇತ್ರವನ್ನು ಕೆ.ಬಾಲಚಂದರ್‌, ಗುರು ದತ್‌, ಸತ್ಯಜಿತ್‌ ರೇ, ಶ್ಯಾಮ್‌ ಬೆನಗಲ್‌ ಸೇರಿ ಹಲವರು ಸೇರಿ ಉನ್ನತ ಹಂತಕ್ಕೆ ಕೊಂಡೊಯ್ದಿದ್ದಾರೆ. ಆದರೆ, ಅದನ್ನು ಮಹೋನ್ನತ ಹಂತಕ್ಕೆ ತೆಗೆದುಕೊಂಡು ಹೋದ ಕೀರ್ತಿ ಎಸ್‌.ಎಸ್.ರಾಜಮೌಳಿ ಅವರಿಗೆ ಸಲ್ಲುತ್ತದೆ.

Exit mobile version