Site icon Vistara News

ವಿಸ್ತಾರ TOP 10 NEWS : ಬಿಜೆಪಿ ಚುನಾವಣೆ ಉಸ್ತುವಾರಿ ನೇಮಕದಿಂದ, ವಾಣಿ ಜಯರಾಂ ಹಾಡು ನಿಲ್ಲಿಸಿದವರೆಗಿನ ಪ್ರಮುಖ ಸುದ್ದಿಗಳು

TOP 10 News

#image_title

1. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಧರ್ಮೇಂದ್ರ ಪ್ರಧಾನ್‌, ಸಹಪ್ರಭಾರಿಗಳಾಗಿ ಅಣ್ಣಾಮಲೈ, ಮನಸುಖ್‌ ಮಂಡಾವಿಯಾ
ಬೆಂಗಳೂರು:
ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಬಿಜೆಪಿ ಚುನಾವಣಾ (Karnataka Election) ಉಸ್ತುವಾರಿಯಾಗಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರನ್ನು ನೇಮಕ ಮಾಡಲಾಗಿದೆ. ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮತ್ತು ಕೇಂದ್ರ ಆರೋಗ್ಯ ಸಚಿವ ಮನಸುಖ್‌ ಮಂಡಾವಿಯಾ ಅವರನ್ನು ಸಹ ಉಸ್ತುವಾರಿಗಳಾಗಿ ನೇಮಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೨. ಜೆಡಿಎಸ್‌ನಿಂದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಜೆಡಿಎಸ್‌ನಿಂದ ಔಟ್‌; ಎ.ಮಂಜು ಇನ್
ಹಾಸನ ಜಿಲ್ಲೆಯ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಅರಕಲಗೂಡಿನ ಶಾಸಕ ಎ.ಟಿ ರಾಮಸ್ವಾಮಿ ಜೆಡಿಎಸ್‌ನಿಂದ (JDS Politics) ವಸ್ತುಶಃ ಹೊರಬಿದ್ದಿದ್ದಾರೆ. ಇತ್ತ ಎ. ಮಂಜು ಅವರು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದಿದ್ದಾರೆ. ಅರಕಲಗೂಡಿನಿಂದ ಎ.ಮಂಜು ಅವರಿಗೆ ಟಿಕೆಟ್‌ ಘೋಷಣೆಯಾಗಿದೆ, ಅರಸೀಕರೆಯಲ್ಲೂ ಸೂಕ್ತ ಅಭ್ಯರ್ಥಿ ಇದ್ದಾರೆ ಎಂದಿದ್ದಾರೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

3. ‌೧ರಿಂದ ೫ನೇ ತರಗತಿಯಲ್ಲಿ ಕಲಿಯುವ ಪರಿಶಿಷ್ಟ ಮಕ್ಕಳ ಕುಟುಂಬಕ್ಕೆ ಹಣ: ಕಾಂಗ್ರೆಸ್‌ ಮತ್ತೊಂದು ಘೋಷಣೆ
1ನೇ ತರಗತಿಯಿಂದ 5ನೇ ತರಗತಿಯವರೆಗೆ ಸರ್ಕಾರಿ ಶಾಲೆಗೆ ತೆರಳುವ ಮಕ್ಕಳಿರುವ ಎಸ್‌ಸಿ, ಎಸ್‌ಟಿ ಕುಟುಂಬಗಳಿಗೆ ಹಣ ಬಿಡುಗಡೆ ಮಾಡುತ್ತೇವೆ ಎಂದು ಕಾಂಗ್ರೆಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಘೋಷಿಸಿದ್ದಾರೆ. ಇದನ್ನು ಒಳಗೊಂಡ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

4. ದೆಹಲಿಯಿಂದ ಮುಂಬೈನತ್ತ ಹಾರಿದ ರಮೇಶ್‌ ಜಾರಕಿಹೊಳಿ; ಸಿಐಡಿ ತನಿಖೆಗೆ ಸಿಡಿ ಕೇಸ್‌ ವಹಿಸಲು ಒತ್ತಡ ತಂತ್ರ
ತಮ್ಮ ವಿರುದ್ಧದ ಸಿಡಿ ಬಿಡುಗಡೆ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೈವಾಡವಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದು ಕುಳಿತಿರುವ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರು ಅಮಿತ್‌ ಶಾ ಭೇಟಿ ಬಳಿಕ ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವಿಸ್‌ ಬೆನ್ನು ಬಿದ್ದಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

5. ಫೆ.7ರೊಳಗೆ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಘೋಷಿಸಿ; ಕಾಗಿನೆಲೆ ಶ್ರೀ ಒತ್ತಾಯ
ಕುರುಬ ಸಮಾಜದಿಂದ ಎಸ್‌ಟಿ ಮೀಸಲಾತಿ ಹೋರಾಟ ಪಾದಯಾತ್ರೆ ನಡೆಸಿ ಎರಡು ವರ್ಷಗಳಾಗಿದೆ. ಕುಲಶಾಸ್ತ್ರ ಅಧ್ಯಯನ ವರದಿ ಸರ್ಕಾರದ ಬಳಿಯಿದೆ. ಎಸ್‌ಟಿ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಫೆಬ್ರವರಿ 7ರ ಒಳಗಾಗಿ ಈ ಬಗ್ಗೆ (ST Status to Kurubas) ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಒತ್ತಾಯಿಸಿದ್ದಾರೆ. ಪೂರ್ಣ ಲೇಖನಕ್ಕೆ ಇಲ್ಲಿ ಕ್ಲಿಕ್​ ಮಾಡಿ

6. ವಿಸ್ತಾರ ಅಂಕಣ: ʻಸಬ್ ಕಾ ಸಾಥ್-ಸಬ್ ಕಾ ವಿಕಾಸ್ʼ ಎಂದು ಹೇಳುವ ಅನಿವಾರ್ಯತೆ ತಂದಿಟ್ಟಿದ್ದು ಯಾರು?
2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಬ್ ಕಾ ಸಾಥ್-ಸಬ್ ಕಾ ವಿಕಾಸ್ ಎಂದು ಹೇಳಿದಾಗ, ಇತಿಹಾಸ ತಿಳಿದ ಅನೇಕರಿಗೆ ಕೇಳಿಸಿದ್ದು, “ಹಿಂದು-ಮುಸ್ಲಿಮರ ಜತೆಗೆ, ಹಿಂದು-ಮುಸ್ಲಿಮರ ವಿಕಾಸ” ಎಂದೇ. ನಿಜಕ್ಕೂ ಈ ಸಬ್‌ ಕಾ ಸಾಥ್‌ -ಸಬ್‌ ಕಾ ವಿಕಾಸ್‌ನ ಒಳಾರ್ಥ ಏನು? ಎಲ್ಲರ ಅಭಿವೃದ್ಧಿ ಎಂಬ ಈ ಪರಿಕಲ್ಪನೆ ಹುಟ್ಟಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು ಯಾಕೆ ಎನ್ನುವ ಬಗ್ಗೆ ವಿಶ್ಲೇಷಿಸಿದ್ದಾರೆ ವಿಸ್ತಾರನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು. ಪೂರ್ಣ ಲೇಖನಕ್ಕೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಪದ್ಮಭೂಷಣ ಪುರಸ್ಕೃತ ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ​ ಇನ್ನಿಲ್ಲ
ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್​ ಇಂದು ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಚೆನ್ನೈನ ನುಂಗಂಬಾಕ್ಕಂನ ಹಡೋಸ್ ರಸ್ತೆಯಲ್ಲಿರುವ ಅವರ ಮನೆಯಲ್ಲೇ ನಿಧನರಾಗಿದ್ದಾರೆ. ವಾಣಿ ಜಯರಾಂ​ ಹಣೆಗೆ ಗಾಯವಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಕನ್ನಡ, ತಮಿಳು, ತೆಲುಗು, ಭೋಜಪುರಿ, ಮಲಯಾಳಂ, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ೧೦೦೦೦ಕ್ಕೂ ಹೆಚ್ಚು ಹಾಡು ಹಾಡಿದ ಹೆಗ್ಗಳಿಕೆ ಇವರದ್ದು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ವಾಣಿ ಜಯರಾಂ ಅವರ ಮಹಾಸಾಧನೆಗೆ ಸಂಬಂಧಿಸಿದ ಇನ್ನಷ್ಟು ವರದಿಗಳು ವಿಸ್ತಾರ ನ್ಯೂಸ್‌ನಲ್ಲಿವೆ.
ವಾಣಿ ಜಯರಾಮ್ ಹಾಡಿರುವ ಜನಪ್ರಿಯ 25 ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ
ಸಂಗೀತಕ್ಕಾಗಿ ಬ್ಯಾಂಕ್​ ಉದ್ಯೋಗವನ್ನೇ ಬಿಟ್ಟವರು ವಾಣಿ ಜಯರಾಂ; ಸಾಧನೆಗೆ ಬೆಂಬಲವಾಗಿ ನಿಂತಿದ್ದರು ಪತಿ
ಗಾನ ಕೋಗಿಲೆ ವಾಣಿ ಜಯರಾಂ ನಡೆದು ಬಂದ ದಾರಿ
ಕನ್ನಡದಲ್ಲಿ 600 ಸೇರಿ 10 ಸಾವಿರಕ್ಕೂ ಅಧಿಕ ಹಾಡು ಹಾಡಿದ್ದ ವಾಣಿ ಜಯರಾಮ್‌

8. ಅಯೋಧ್ಯೆ ರಾಮಮಂದಿರ ಸ್ಫೋಟಿಸುವ ಬೆದರಿಕೆ, ನಿಷೇಧಿತ ಪಿಎಫ್‌ಐನ ಮೂವರು ವಶಕ್ಕೆ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರವನ್ನು ಸ್ಫೋಟಿಸುವ ಕುರಿತು ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಅಧಿಕಾರಿಗಳು ನಿಷೇಧಿತ ಪಿಎಫ್‌ಐನ ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ನಿಷೇಧಿತ ವಸ್ತು ಬಳಕೆ; ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅಮಾನತು
ಭಾರತದ ಖ್ಯಾತ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನಿಷೇಧಿತ ವಸ್ತು ಬಳಸಿರುವುದು ಸಾಬೀತಾದ ಕಾರಣ ಅವರಿಗೆ ಅಂತಾರಾಷ್ಟ್ರೀಯ ಪರೀಕ್ಷಾ ಸಂಸ್ಥೆ 21 ತಿಂಗಳ ಕಾಲ ಯಾವುದೇ ಕ್ರೀಡೆಯಲ್ಲಿ ಪಾಲ್ಗೊಳ್ಳದಂತೆ ಅಮಾನತು ಶಿಕ್ಷೆ ವಿಧಿಸಿದೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

10. World Cancer Day 2023 : ಜೀವನ ಶೈಲಿ ಮೇಲೆ ನಿಗಾ ಇಟ್ಟರೆ ಕ್ಯಾನ್ಸರ್​ ಆತಂಕವೇ ಇರುವುದಿಲ್ಲ!
ರ್ಷಂಪ್ರತಿ ಒಂದು ಕೋಟಿಗೂ ಹೆಚ್ಚಿನ ಜೀವಗಳನ್ನು ಬಲಿ ಪಡೆಯುತ್ತಿದೆ ಕ್ಯಾನ್ಸರ್‌ ಎಂಬ ಮಾರಿ. ಕ್ಯಾನ್ಸರ್‌ ಸಂಬಂಧಿತ ೧೦ ಸಾವುಗಳಲ್ಲಿ ೭ ಮಂದಿ ಕೆಳ ಮತ್ತು ಮಧ್ಯಮ ವರ್ಗದಲ್ಲೇ ಇರುವವರು. ಇದರಲ್ಲಿ ಖೇದವಾಗುವ ಇನ್ನೂ ಒಂದು ವಿಷಯವೆಂದರೆ, ಇದಿಷ್ಟೂ ಸಾವುಗಳಲ್ಲಿ ಶೇ. ೪೦ರಷ್ಟು ತಪ್ಪಿಸಬಹುದಾದಂಥವು. ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು, ಮೊದಲಿಗೇ ರೋಗ ಪತ್ತೆಯಾಗಿ, ಸೂಕ್ತ ಚಿಕಿತ್ಸೆ ದೊರೆತರೆ ಕ್ಯಾನ್ಸರ್‌ ಗುಣಪಡಿಸಬಹುದು. ಫೆಬ್ರವರಿ ೪ರ ಕ್ಯಾನ್ಸರ್‌ ದಿನದ ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ನಲ್ಲಿ ಹಲವು ಪ್ರಮುಖ ವರದಿಗಳಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು
೧. Agniveer Recruitment: ಅಗ್ನಿವೀರ್‌ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಏನಿದು?
‌೨. ಹಣೆಗೆ ತಿಲಕ ಇಡಲು ನಿರಾಕರಿಸಿದ ಸಿರಾಜ್​, ಉಮ್ರಾನ್​ ಮಲಿಕ್, ವಿಕ್ರಮ್‌ ರಾಥೋಡ್‌​; ವಿಡಿಯೊ ವೈರಲ್​
೩. Kantara Movie : ಸಮಸ್ಯೆ ಹೇಳಿಕೊಂಡು ಬಂದ ವಿವಾಹಿತೆಯನ್ನು ತಾನೇ ವರಿಸುವುದಾಗಿ ಹೇಳಿದ ದೈವ ಪಾತ್ರಿ!
೪. ಶಿಕ್ಷಕರು ವಿದ್ಯಾರ್ಥಿಗೆ ಹೊಡೆಯುವುದು ಅಪರಾಧವಲ್ಲ: ಬಾಂಬೆ ಹೈಕೋರ್ಟ್‌
೫. ಪಕ್ಷಗಳು ಒಡೆದರೂ ಒಂದು ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠ ಶ್ರೀ ಭವಿಷ್ಯ
೬. ಪತ್ನಿ ಹರಿಪ್ರಿಯಾಗಾಗಿ ಸ್ಪೆಷಲ್‌ ಅಡುಗೆ ಮಾಡಿ ಉಣಬಡಿಸಿದ ವಸಿಷ್ಠ ಸಿಂಹ
೭. Doctor negligence: ಅನಾರೋಗ್ಯದಿಂದ ಬಾಲ ನಟಿ ಬಲಿ, ವೈದ್ಯರ ನಿರ್ಲಕ್ಷ್ಯ ಆರೋಪ
೮. ತಾತಯ್ಯ ತತ್ವಾಮೃತಂ : ಒಂದಂಶ ಕಡಿಮೆಯಾಗಿದ್ದರೂ ಚಿನ್ನವು ಅಪರಂಜಿಯಾಗುವುದಿಲ್ಲ!

Exit mobile version