1. ಮಾಡಾಳ್ ಲಂಚಾವತಾರ: ಸಿಎಂ ರಾಜೀನಾಮೆಗೆ ಕೈ ಪಟ್ಟು, ಇನ್ನೇನು ಸಾಕ್ಷ್ಯ ಬೇಕೆಂದು ಕೇಳಿದ ಸಿದ್ದರಾಮಯ್ಯ
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಲಂಚ ಹಗರಣ ಬಯಲಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರು ಪ್ರತಿಬಾರಿಯೂ ಸಾಕ್ಷ್ಯ ಸಾಕ್ಷ್ಯ ಕೊಡಿ ಎನ್ನುತ್ತಿದ್ದರು. ಇದಕ್ಕಿಂತ ದೊಡ್ಡ ಸಾಕ್ಷ್ಯ ಇನ್ನೇನು ಬೇಕು ಎಂದು ಕೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಮುಖ್ಯಮಂತ್ರಿಯವರೇ, ನಿಮಗೆ ಇದಕ್ಕಿಂತ ಸಾಕ್ಷಿ ಬೇಕೇ? ಎಂದು ಕೇಳಿದ ಸಿದ್ದರಾಮಯ್ಯ
2. ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಭಾರತವನ್ನು ಹೊಗಳಿದ ಬಿಲ್ ಗೇಟ್ಸ್
ಭಾರತಕ್ಕೆ ಆಗಮಿಸಿರುವ ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದಾರೆ. ಭಾರತದ ಅಭೂತಪೂರ್ವ ಪ್ರಗತಿಯನ್ನು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಭಾರತದ ನೂತನ ಆವಿಷ್ಕಾರಗಳು ಇಡೀ ಜಗತ್ತಿಗೆ ಅನುಕೂಲ ಮಾಡಿಕೊಡುತ್ತಿವೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ಉಲ್ಲೇಖಿಸಿ ಈ ಮಾತುಗಳನ್ನಾಡಿದ್ದಾರೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
3. ಇಂಗ್ಲೆಂಡ್ನಲ್ಲಿ ಚೀನಾ ಹೊಗಳಿದ ರಾಹುಲ್ ; ದೇಣಿಗೆಯ ಋಣ ತೀರಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಬಿಜೆಪಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಇಂಗ್ಲೆಂಡ್ನ ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ನೀಡಿದ ಉಪನ್ಯಾಸದಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ, ಕುತಂತ್ರಿ ರಾಷ್ಟ್ರ ಚೀನಾವನ್ನು ಹೊಗಳಿದ್ದು ಇನ್ನಷ್ಟು ವಿವಾದಕ್ಕೆ ಕಾರಣವಾಗಿದೆ. ರಾಹುಲ್ ಅವರು ತಾವು ಪಡೆದಿರುವ ದೇಣಿಗೆಯ ಋಣ ತೀರಿಸುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯ ಮಾಡಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
4. ವಿಸ್ತಾರ ಅಂಕಣ: ಸರ್ಕಾರಿ ನೌಕರರ ಕುರಿತು ಸಮಾಜದಲ್ಲಿ ಇಷ್ಟೊಂದು ಆಕ್ರೋಶ ಮಡುಗಟ್ಟಿದೆ ಏಕೆ? ಇದಕ್ಕೆ ಪರಿಹಾರವೇನು?
ಭ್ರಷ್ಟಾಚಾರ ಎನ್ನುವುದು ಸರ್ಕಾರಿ ಕಚೇರಿಯಲ್ಲಿ ತುಂಬಿ ತುಳುಕುತ್ತಿದೆ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ಮಾತು. ಹಾಗಿದ್ದರೆ ನಿಜಕ್ಕೂ ಸರ್ಕಾರಿ ನೌಕರರೆಲ್ಲ ಭ್ರಷ್ಟರಾ? ಒಳ್ಳೆಯವರು ಇಲ್ಲವೇ? ಕೆಲವೇ ಶೇಕಡಾ ಜನರ ಭ್ರಷ್ಟತೆಗೆ ಇಡೀ ವ್ಯವಸ್ಥೆಯನ್ನು ದೂಷಿಸಲಾಗುತ್ತಿದೆಯಾ? ಈ ಎಲ್ಲ ಪ್ರಶ್ನೆಗಳನ್ನು ಇಟ್ಟುಕೊಂಡು ಎಲ್ಲ ಆಯಾಮಗಳ ವಿಶ್ಲೇಷಣೆ ನಡೆಸಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಅವರು. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
5. ಬಿಜೆಪಿ ಸೇರಲು ಸುಮಲತಾ ಮೂರು ಕಂಡೀಷನ್; ಕಮಲ ಪಕ್ಷ ಸೇರ್ಪಡೆ ಬಹುತೇಕ ಪಕ್ಕಾ?
ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಷ್ ಬಿಜೆಪಿ ಸೇರುವುದು ಬಹುತೇಕ ಪಕ್ಕಾ ಆಗಿದೆ ಎಂದೇ ಹೇಳಲಾಗುತ್ತಿದೆ. ಇದರ ಭಾಗವಾಗಿ ಪಕ್ಷದ ಹಿರಿಯ ನಾಯಕ, ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆಯನ್ನೂ ನಡೆಸಿದ್ದಾರೆ. ಅವರು ಬಿಜೆಪಿ ಸೇರಲು ಮೂರು ಷರತ್ತುಗಳನ್ನು ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ರಾಜ್ಯದಲ್ಲಿ ಕೇಜ್ರಿವಾಲ್: ಭ್ರಷ್ಟಾಚಾರ ಸಹಿಸಲ್ಲ, ನನ್ನ ಮಗ ಮಾಡಿದರೂ ಜೈಲಿಗೆ ಹಾಕುವೆ ಎಂದ ದೆಹಲಿ ಸಿಎಂ
ಆಮ್ ಆದ್ಮಿ ಪಾರ್ಟಿ ಸರ್ಕಾರದಲ್ಲಿ ಯಾರೇ ಭ್ರಷ್ಟಾಚಾರ ಮಾಡಿದರೂ ನಾವು ಸಹಿಸಲ್ಲ. ಪಂಜಾಬ್‌ನಲ್ಲಿ ಒಬ್ಬ ಮಂತ್ರಿ ಗೋಲ್ ಮಾಲ್ ಮಾಡಿ ಸಿಕ್ಕಿಬಿದ್ದ. ಅವರನ್ನು ಅಲ್ಲಿನ ಸಿಎಂ ಭಗವಂತ್ ಮಾನ್ ಅವರು ಜೈಲಿಗೆ ಕಳುಹಿಸಿದರು, ಎಂಎಲ್‌ಎ ಸಿಕ್ಕಿಬಿದ್ದಾಗ ಅವರೂ ಜೈಲಿಗೆ ಹೋಗಿದ್ದಾರೆ. ನನ್ನ ಮಗ ನಾಳೆ ಭ್ರಷ್ಟಾಚಾರದಲ್ಲಿ ತೊಡಗಿದರೂ ಜೈಲಿಗೆ ಹಾಕುತ್ತೇನೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹೇಳಿದರು. ಅವರು ದಾವಣಗೆರೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರ ಹಾವಳಿ; ಲಕ್ಷ್ಮೀ ನಾರಾಯಣ ದೇಗುಲ ವಿರೂಪ
ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿರುವ ಹಿಂದು ದೇವಸ್ಥಾನವನ್ನು ವಿರೂಪಗೊಳಿಸಲಾಗಿದ್ದು, ಗೋಡೆಗಳ ಮೇಲೆಲ್ಲ ಗೀಚು ಬರಹ ಬರೆಯಲಾಗಿದೆ. ಕಳೆದ ಎರಡು ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ಧ್ವಂಸಗೊಳ್ಳುತ್ತಿರುವ ನಾಲ್ಕನೇ ದೇವಸ್ಥಾನ ಇದಾಗಿದೆ. ಗೋಡೆಯ ಮೇಲೆಲ್ಲ ಹಿಂದೂಸ್ತಾನ್ ಮುರ್ದಾಬಾದ್, ಖಲಿಸ್ತಾನ್ ಜಿಂದಾಬಾದ್ ಎಂದು ಬರೆಯಲಾಗಿದ್ದು, ಇದು ಖಲಿಸ್ತಾನಿ ಉಗ್ರರದ್ದೇ ಕೃತ್ಯ ಎನ್ನಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
8. ವಾರದ ವ್ಯಕ್ತಿಚಿತ್ರ: ಹಿಮಂತ್ ಬಿಸ್ವಾ ಶರ್ಮಾ, ಈಶಾನ್ಯ ಭಾರತದ ಬಿಜೆಪಿ ಕೋಟೆ ಕಾಯುತ್ತಿರುವ ಕೋತ್ವಾಲ್!
ತ್ರಿಪುರಾದಲ್ಲಿ ಸ್ವಂತ ಬಲ ಹಾಗೂ ನಾಗಾಲ್ಯಾಂಡ್ ಮತ್ತು ಮೇಘಾಲಯದಲ್ಲಿ ಮೈತ್ರಿ ಪಕ್ಷಗಳೊಂದಿಗೆ ಬಿಜೆಪಿ ಸರ್ಕಾರ ರಚಿಸುತ್ತಿದೆ. ಪಕ್ಷದ ಈ ಸಾಧನೆಯ ಹಿಂದೆ ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರ ಚಾಣಾಕ್ಷತನ, ಸಂಘಟನಾ ಚಾತುರ್ಯ ಕೆಲಸ ಮಾಡಿದೆ. ಅವರ ಕುರಿತ ವ್ಯಕ್ತಿ ಚಿತ್ರ ಓದಲು ಈ ಲಿಂಕ್ ಕ್ಲಿಕ್ ಮಾಡಿ
9. ಜ್ವರ-ಕೆಮ್ಮು ಬಂದಾಕ್ಷಣ ಆ್ಯಂಟಿಬಯೋಟಿಕ್ ಸೇವಿಸಬೇಡಿ ಎಂದ ಐಎಂಎ; ವೈದ್ಯರಿಗೂ ಸೂಚನೆ
ನವ ದೆಹಲಿ: ಹವಾಮಾನ ಬದಲಾವಣೆಯಿಂದ ಜ್ವರ, ಶೀತ, ಕೆಮ್ಮು ಹೆಚ್ಚುತ್ತಿದೆ. ಯಾರಿಗೇ ನೋಡಿದರೂ ಜ್ವರ, ನೆಗಡಿ, ಗಂಟಲು ನೋವು, ಜ್ವರವೆಂದು ವೈದ್ಯರ ಬಳಿ ಹೋಗುತ್ತಿದ್ದಾರೆ. ಇದೇ ಹೊತ್ತಲ್ಲಿ ಭಾರತೀಯ ವೈದ್ಯಕೀಯ ಸಂಘ ವೈದ್ಯರಿಗೆ ಒಂದು ನಿರ್ದೇಶನ ನೀಡಿದೆ. ಜ್ವರ-ಶೀತ-ಕೆಮ್ಮಿಗೆ ಆ್ಯಂಟಿಬಯೋಟಿಕ್ ಮಾತ್ರೆಗಳನ್ನು ತೆಗೆದುಕೊಳ್ಳುವಂತೆ ರೋಗಿಗಳಿಗೆ ಸೂಚಿಸಬೇಡಿ ಎಂದು ಹೇಳಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. Viral News: ರೈಫಲ್ ಬದಿಗಿಟ್ಟು ಬ್ಯಾಟ್ ಹಿಡಿದ ಭಾರತ-ಚೀನಾ ಸೈನಿಕರು; ವಿಡಿಯೊ ವೈರಲ್
ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿನ ತವಾಂಗ್ ವಲಯದ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ವಿಚಾರವಾಗಿ ಚೀನಾ ಭಾರತದ ಜತೆ ಸಂಘರ್ಷ ನಡೆಸಿತ್ತು. ಆದರೆ ಇದೀಗ ಎಲ್ಲ ಸಂರ್ಘರ್ಷವನ್ನು ಮರೆತಂತೆ ಭಾರತ ಮತ್ತು ಚೀನಾ ಸೈನಿಕರು ಪೂರ್ವ ಲಡಾಖ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ಫೋಟೊಗಳನ್ನು ಭಾರತೀಯ ಸೇನೆ ಶುಕ್ರವಾರ (ಮಾರ್ಚ್ 3) ಹಂಚಿಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
1.ಆರ್‌ಆರ್‌ಆರ್ ಸಿನಿಮಾ ಉಲ್ಲೇಖಿಸಿ ಬ್ರಿಟನ್ನರಿಗೆ ತಿವಿದ ವಿದೇಶಾಂಗ ಸಚಿವ ಜೈಶಂಕರ್
2. INDvsAUS : ನಾಲ್ಕನೇ ಪಂದ್ಯಕ್ಕೆ ಮೊಹಮ್ಮದ್ ಶಮಿ ವಾಪಸ್, ಸಿರಾಜ್ಗೆ ರೆಸ್ಟ್ ?
3. 2nd PUC Exam 2023: ಪಿಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಪ್ರಯಾಣ ಉಚಿತ
4. ಶೇನ್ ವಾರ್ನ್ ಮೊದಲ ಪುಣ್ಯಸ್ಮರಣೆಗೆ ಭಾವನಾತ್ಮಕ ಪತ್ರ ಬರೆದ ಸಚಿನ್ ತೆಂಡೂಲ್ಕರ್
5. ಮಕ್ಕಳ ಕಥೆ: ಭೂಮಿಯಲ್ಲಿ ಸಿಕ್ಕಿದ ನಿಧಿ ರಕ್ಷಿಸಿಕೊಂಡ ಬಡವ