1. ಕೋಲಾರ, ವರುಣ ಬಿಟ್ಟು ಮತ್ತೆ ಬಾದಾಮಿಗೆ ಹೋಗ್ತಾರಾ ಸಿದ್ದು? ಮನಸು ಅರಿಯಲು ಮಾ. 24ಕ್ಕೆ ಟೂರ್‌ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಬಾದಾಮಿ ಜನರ ಮನಸು ಹೇಗಿದೆ ಎಂದು ಅರಿಯಲು ಹೊರಟಿದ್ದಾರೆ. ಕೋಲಾರದ ಸ್ಪರ್ಧೆಗೆ ಆತಂಕ ಎದುರಾಗಿದೆ, ವರುಣ ಕ್ಷೇತ್ರವನ್ನು ಬಿಟ್ಟುಕೊಡಲು ಮಗ ಯತೀಂದ್ರ ಅವರು ಒಪ್ಪಿದರೂ ಪತ್ನಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂಬ ಸುದ್ದಿ ಹರಡಿದೆ. ಹೀಗಾಗಿ ಬಾದಾಮಿ ಜನರ ಮನಸು ಅರಿಯಲು ಮಾರ್ಚ್ 24ರಂದು ಬಾದಾಮಿ ಟೂರ್ ಮಾಡಲಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ಸುದ್ದಿ : ಸಿದ್ದರಾಮಯ್ಯರನ್ನು ಸೋಲಿಸಲು ಕಾಂಗ್ರೆಸ್‌ನಲ್ಲಿ ಟೀಂ ರೆಡಿ ಇದೆ: ಎಚ್.ಡಿ. ಕುಮಾರಸ್ವಾಮಿ
2. ಯುಗಾದಿಗೆ ಬಿಡುಗಡೆ ಆಗದ ಕಾಂಗ್ರೆಸ್ ಪಟ್ಟಿ, ಇನ್ನೂ 2-3 ದಿನದಲ್ಲಿ ರಿಲೀಸ್ ಅಂದ್ರು ಡಿಕೆಶಿ
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಎಲ್ಲರೂ ಕಾತರದಿಂದ ಕಾಯುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಯುಗಾದಿಗೆ ಬಿಡುಗಡೆಯಾಗಲೇ ಇಲ್ಲ. ಮಾರ್ಚ್ 22ರಂದು ಪಟ್ಟಿ ಬಿಡುಗಡೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದರು. ಆದರೆ, ನಿರೀಕ್ಷಿತ ಪಟ್ಟಿ ಬಿಡುಗಡೆಯಾಗಿಲ್ಲ. ಮಾತ್ರವಲ್ಲ, ಇನ್ನೂ ಎರಡು ಮೂರು ದಿನ ಬಿಡುಗಡೆ ಆಗುವುದು ಸಂಶಯ ಎಂದು ಹೇಳಲಾಗುತ್ತಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಎಲ್ಲೆಡೆ ಝಣಝಣ ಕಾಂಚಾಣ, ಸೀರೆಗಳ ದರ್ಬಾರ್; ಚುನಾವಣೆಗೆ ಮುನ್ನವೇ ಹಣದ ಹರಿವು
ವಿಧಾನಸಭೆ ಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದರೆ, ಆಗಲೇ ರಾಜಕಾರಣಿಗಳು ಮತದಾರರನ್ನು ಒಲಿಸಿಕೊಳ್ಳಲು ಇನ್ನಿಲ್ಲದ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಸೀರೆ, ಕುಕ್ಕರ್, ಪಡಿತರಗಳನ್ನು ವಿತರಿಸಿ ಮನ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆ ಕೋಟಿ ಕೋಟಿ ಮೊತ್ತದಲ್ಲಿ ಹಣದ ಸಾಗಾಟ ಮತ್ತು ಶೇಖರಣೆ ಕೂಡಾ ನಡೆಯುತ್ತಿದೆ. ಚುನಾವಣಾ ಆಯೋಗ ಈಗಾಗಲೇ ಹಣ ಮತ್ತು ಇತರ ವಸ್ತುಗಳ ಸಾಗಾಟದ ಮೇಲೆ ಕಣ್ಣಿಡುವಂತೆ ಸೂಚನೆ ನೀಡಿದ್ದರಿಂದ ಪೊಲೀಸರು ಕಟ್ಟೆಚ್ಚರ ವಹಿಸಲು ಶುರು ಮಾಡಿದ್ದಾರೆ. ಹೀಗಾಗಿ ಕೇವಲ ಒಂದು ವಾರದಲ್ಲೇ 10 ಕೋಟಿ ಮೌಲ್ಯದ ವಸ್ತುಗಳು ಮತ್ತು ಕೋಟ್ಯಂತರ ರೂ. ವಶವಾಗಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ವಿಸ್ತಾರ ನ್ಯೂಸ್ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್ 25 ಕಥೆಗಾರರ ಪಟ್ಟಿ ಇಲ್ಲಿದೆ!
ಕನ್ನಡ ಸಾಹಿತ್ಯದ ಇತಿಹಾಸದಲ್ಲೇ ಭಾರಿ ಮೊತ್ತದ ಸಣ್ಣಕಥೆ ಸ್ಪರ್ಧೆಗೆ ಬಂದ ಪ್ರತಿಕ್ರಿಯೆಯೂ ಐತಿಹಾಸಿಕವೇ ಆಗಿತ್ತು. ಆ ಬಗ್ಗೆ ಒಂದು ನೋಟ ಇಲ್ಲಿದೆ. ಜತೆಗೆ ಟಾಪ್ 25 ಪಟ್ಟಿಗೆ ಆಯ್ಕೆಯಾದವರ ಹೆಸರುಗಳೂ ಇಲ್ಲಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಮತ್ತೆ ನಿಧಾನವಾಗಿ ಹೆಚ್ಚುತ್ತಿದೆ ಕೊರೊನಾ; 24 ಗಂಟೆಯಲ್ಲಿ ಸಾವಿರಕ್ಕೂ ಹೆಚ್ಚು ಕೇಸ್ಗಳು ಪತ್ತೆ, 5ಮಂದಿ ಸಾವು
ಭಾರತದಲ್ಲಿ ಕೊವಿಡ್ 19 ಕೇಸ್ಗಳು ಮತ್ತೆ ಏರಿಕೆಯಾಗುತ್ತಿವೆ. ಇಂದು ಒಂದೇ ದಿನ 1,134 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 7026ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕೊವಿಡ್ 19 ಸೋಂಕಿತರ ಒಟ್ಟು ಸಂಖ್ಯೆ 4,46,98,118ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಕೇಸ್ಗಳ ಸಂಖ್ಯೆ, ಒಟ್ಟಾರೆ ಸೋಂಕಿತರ ಸಂಖ್ಯೆಯ ಶೇ. 0.02ರಷ್ಟಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ಪಾಶ್ಚಾತ್ಯ ಶೈಲಿ ಉಡುಪು ಧರಿಸಿ ಅಮೃತ್ಪಾಲ್ ಸಿಂಗ್ ಪರಾರಿ; ಪೊಲೀಸರಿಗೆ ಸಿಕ್ಕಿದ್ದು ಬೈಕ್ ಮಾತ್ರ
ಖಲಿಸ್ತಾನಿ ನಾಯಕ ಅಮೃತ್ಪಾಲ್ ಸಿಂಗ್ ಬಂಧನಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಈಗೆರಡು ದಿನಗಳ ಹಿಂದೆ ಪಂಜಾಬ್ನ ನಾಕೋಡರ್ ಬಳಿ ಅಮೃತ್ಪಾಲ್ ಅರೆಸ್ಟ್ ಆದ ಎಂದು ವರದಿಯಾಗಿತ್ತು. ಆದರೆ, ಅದು ಸುಳ್ಳೆಂದು ಬಳಿಕ ಗೊತ್ತಾಗಿದೆ. ಆತ ಪಾಶ್ಚಾತ್ಯ ಉಡುಪು ಧರಿಸಿ ನೇಪಾಳಕ್ಕೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಸದ್ಯಕ್ಕೆ ಪೊಲೀಸರಿಗೆ ಸಿಕ್ಕಿದ್ದು ಅವನ ಬೈಕ್ ಮಾತ್ರ. ಪೂರ್ಣ ವರದಿಗೆ ಕ್ಲಿಕ್ ಮಾಡಿ
7. ಮೋದಿ ಮನ್ ಕಿ ಬಾತ್‌ಗೆ ಕಿವಿಯಾಗಲಿದೆ ಜಗತ್ತು, 100ನೇ ಆವೃತ್ತಿ ಹಿನ್ನೆಲೆ ಬಿಜೆಪಿ ಬಿಗ್ ಪ್ಲಾನ್ ಏನು?
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ತಿಂಗಳ ಕೊನೆಯ ಭಾನುವಾರ ನಡೆಸಿಕೊಡುವ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮವು ಏಪ್ರಿಲ್ 30ರಂದು 100ನೇ ಆವೃತ್ತಿ ಪೂರ್ಣಗೊಳಿಸಲಿದೆ. ಈ ಸಂದರ್ಭದಲ್ಲಿ ಇಡೀ ಜಗತ್ತು ಅದನ್ನು ಕೇಳುವಂತೆ ಬಿಜೆಪಿ ಹಲವು ಯೋಜನೆ ರೂಪಿಸಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
8. World Cup 2023: ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭ; ನವೆಂಬರ್ 19ಕ್ಕೆ ಫೈನಲ್!
ಭಾರತದ ಆತಿಥ್ಯದಲ್ಲಿ ನಡೆಯುವ 2023ರ ಏಕ ದಿನ ವಿಶ್ವಕಪ್ ಟೂರ್ನಿ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ. ಫೈನಲ್ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಪಂಚಮಸಾಲಿಗಳಿಗೆ ಮಾ. 24ಕ್ಕೆ ಸಿಹಿ ಸುದ್ದಿ? ಪಿಎಂ ಕಚೇರಿಯಿಂದ ಕರೆ ಬಂದಿದೆ ಎಂದರು ಶ್ರೀಗಳು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಸಂಬಂಧ ಕೇಂದ್ರ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಸಿಹಿ ಸುದ್ದಿ ಸಿಗುವ ಸ್ಪಷ್ಟ ಭರವಸೆ ಸಿಕ್ಕಿದೆ. ಮಾ. 24ರಂದು ಕರೆದಿರುವ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಸಿಗುವ ಭರವಸೆಯನ್ನು ಇಟ್ಟುಕೊಂಡಿದ್ದೇವೆ. ಪ್ರಧಾನಮಂತ್ರಿ ಅವರಿಗೆ ಶೋಷಿತ ಸಮಾಜದ ಬಗ್ಗೆ ಅರಿವಿದೆ ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಹೆಂಡ್ತಿಗೆ ಸೊಳ್ಳೆ ಕಚ್ತಿದೆ, ಕಾಪಾಡಿ ಎಂದು ಟ್ವೀಟ್ ಮಾಡಿದವನಿಗೆ ಸೊಳ್ಳೆ ಬತ್ತಿ ಕೊಟ್ಟು ಬಂದ ಯುಪಿ ಪೊಲೀಸ್!
ತಾವು ಯಾವುದೇ ಸಂದರ್ಭದಲ್ಲೂ ಪಕ್ಕಾ ‘ರಕ್ಷಕರು’ ಎಂಬುದನ್ನು ಉತ್ತರ ಪ್ರದೇಶ ಪೊಲೀಸರು ಸಾಕ್ಷೀಕರಿಸಿದ್ದಾರೆ. ‘ಅಯ್ಯೋ..ನನ್ನ ಹೆಂಡತಿಗೆ ಸೊಳ್ಳೆ ಕಚ್ಚುತ್ತಿದೆ’ ಎಂದು ಆಸ್ಪತ್ರೆಯಲ್ಲಿ ಕುಳಿತು ಟ್ವೀಟ್ ಮಾಡಿದ ವ್ಯಕ್ತಿಗೆ, ‘ಸೊಳ್ಳೆಬತ್ತಿ’ ತೆಗೆದುಕೊಂಡು ಹೋಗಿ ಕೊಟ್ಟು ಉಪಕಾರ ಮಾಡಿದ್ದಾರೆ. ಕುತೂಹಲಕಾರಿ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ಪ್ರಮುಖ ಸುದ್ದಿಗಳು
- Padma Awards 2023: ಎಸ್.ಎಂ.ಕೃಷ್ಣ, ಸುಧಾಮೂರ್ತಿ ಸೇರಿ ಕರ್ನಾಟಕದ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ
- Kanchipuram Explosion: ತಮಿಳುನಾಡು ಪಟಾಕಿ ಗೋದಾಮಿನಲ್ಲಿ ಸ್ಫೋಟ, ಯುಗಾದಿ ದಿನವೇ 7 ಜನ ಸಾವು
- ಟ್ವಿಟರ್‌ನಲ್ಲಿ 280 ಕ್ಯಾರೆಕ್ಟರ್ಸ್ ಬಿಡಿ, ಶೀಘ್ರವೇ ಪ್ರಬಂಧವನ್ನೇ ಬರೆಯಬಹುದು; ಇಲ್ಲಿದೆ ಹೊಸ ಅಪ್ಡೇಟ್
- Fixed deposit interest rate : ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿಗಳ ಬಡ್ಡಿ ದರ ಏರಿಕೆ ಸಂಭವ: ಆರ್‌ಬಿಐ ಸುಳಿವು
- Voter ID-Aadhaar Link: ಮತದಾರರ ಗುರುತಿನ ಚೀಟಿ ಜತೆ ಆಧಾರ್ ಲಿಂಕ್, ಗಡುವು 2024 ಮಾರ್ಚ್ 31ಕ್ಕೆ ವಿಸ್ತರಣೆ
- ಬೆಂಗಳೂರಿನ ಎಚ್‌ಎಎಲ್‌ನಿಂದ 3.5% ಷೇರುಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧಾರ