1. ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟ; ಸಿದ್ದರಾಮಯ್ಯ ಅವರ ಕೋಲಾರ ಕನಸು ಭಗ್ನ
ರಾಜ್ಯ ವಿಧಾನಸಭೆ ಚುನಾವಣೆಯ (Karnataka Election 2023) ಕಾಂಗ್ರೆಸ್ ಸ್ಪರ್ಧಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕೋಲಾರ ಕ್ಷೇತ್ರಕ್ಕೆ ಅಭ್ಯರ್ಥಿಯ ಹೆಸರನ್ನು ಘೋಷಿಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅವಕಾಶ ನೀಡಲಾಗಿಲ್ಲ. ಇದರೊಂದಿಗೆ ಸಿದ್ದರಾಮಯ್ಯ ಅವರ ಕೋಲಾರ ಕನಸು ಭಗ್ನವಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಚರ್ಚೆ; ಡಿ.ಕೆ ಶಿವಕುಮಾರ್‌ರನ್ನು 2ನೇ ಸಾಲಿಗೆ ತಳ್ಳಿದ ಎಂ.ಬಿ ಪಾಟೀಲ್!
ವಿಧಾನಸಭಾ ಚುನಾವಣೆ ರಂಗೇರುತ್ತಿದ್ದಂತೆಯೇ (Karnataka Elections 2023) ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಹಿರಿಯ ನಾಯಕ ಸಿದ್ದರಾಮಯ್ಯ ಮತ್ತು ತನ್ನ ನಡುವೆ ಇದ್ದ ಸಿಎಂ ಗಾದಿ ಸಮರವನ್ನು ಡಿ.ಕೆ ಶಿವಕುಮಾರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಳೆದು ತಂದು ತ್ರಿಕೋನ ಕಣವಾಗಿಸಿದ್ದರು. ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ. ಪಾಟೀಲ್ ಅವರು ಶಿವಕುಮಾರ್ ಅವರನ್ನು ಎರಡನೇ ಸಾಲಿಗೆ ತಳ್ಳಿದ್ದಾರೆ. ಏನಿದು ಸಿಎಂ ಗಾದಿ ಪಾಲಿಟಿಕ್ಸ್? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಏ.16, 17ರಂದು ರಾಹುಲ್ ಗಾಂಧಿ ರಾಜ್ಯ ಪ್ರವಾಸ; ಕೋಲಾರದ ಜೈ ಭಾರತ್ ಸಮಾವೇಶದಲ್ಲಿ ಭಾಗಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಏಪ್ರಿಲ್ 16 ಮತ್ತು 17ರಂದು ಎರಡು ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಅವರು ಮೊದಲ ಬಾರಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಕೋಲಾರದಲ್ಲಿ ನೀಡಿದ್ದ ಹೇಳಿಕೆಯನ್ನು ಆಧರಿಸಿ ಸಂಸದ ಸ್ಥಾನವನ್ನೇ ಕಳೆದುಕೊಂಡ ರಾಹುಲ್ ಗಾಂಧಿ ಅದೇ ಸ್ಥಳದಲ್ಲಿ ಈ ಬಾರಿ ತಿರುಗೇಟು ನೀಡಲಿದ್ದಾರೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4.ವರುಣದಲ್ಲಿ ಸಿದ್ದು ವಿರುದ್ಧ ದಲಿತಾಸ್ತ್ರ ಪ್ರಯೋಗಿಸಿದ ಜೆಡಿಎಸ್: ಬಿಜೆಪಿಯಿಂದ ಬಂದ ಭಾರತಿಶಂಕರ್ ಅಭ್ಯರ್ಥಿ
ಭಾರಿ ಕುತುಹಲದ ಕೇಂದ್ರಬಿಂದುವಾಗಿರುವ ವರುಣ ಕ್ಷೇತ್ರದಲ್ಲಿ ಜೆಡಿಎಸ್ ದಲಿತಾಸ್ತ್ರ ಪ್ರಯೋಗಿಸಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಬಂದ ಭಾರತಿಶಂಕರ್ ಅವರನ್ನು ಕಣಕ್ಕಿಳಿಸಿದೆ. ಒಂದು ಕಡೆ ದಲಿತಾಸ್ತ್ರ, ಇನ್ನೊಂದು ಕಡೆದ ಬಿಜೆಪಿಯ ವಿ. ಸೋಮಣ್ಣ ಅವರ ಮೂಲಕ ಎದುರಾದ ಲಿಂಗಾಯತ ಅಸ್ತ್ರದ ನಡುವೆ ಸಿದ್ದರಾಮಯ್ಯ ಗೆಲುವನ್ನು ಹುಡುಕಬೇಕಾದ ಚಕ್ರವ್ಯೂಹವನ್ನು ಕಟ್ಟಿದಂತಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. ವರ್ಷಕ್ಕೆ 5 ಉಚಿತ ಸಿಲಿಂಡರ್, ಹಿರಿಯರಿಗೆ 5 ಸಾವಿರ ರೂ. ಮಾಸಾಶನ; ಏನೇನಿದೆ ಜೆಡಿಎಸ್ ಪ್ರಾಮಿಸ್‌ನಲ್ಲಿ?
ವಿಧಾನಸಭಾ ಚುನಾವಣೆಗಾಗಿ ಹಾಸನದ ಟಿಕೆಟ್ ಫೈನಲ್ ಮಾಡಿ ಒಂದು ಹಂತದಲ್ಲಿ ನಿರಾಳವಾಗಿರುವ ಜಾತ್ಯತೀತ ಜನತಾದಳ ಇದೀಗ ದೇವೇಗೌಡರ ಮೂಲಕ ʻಭರವಸೆ ಪತ್ರʼವನ್ನು ಬಿಡುಗಡೆ ಮಾಡಿ ಜನರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಮಹಿಳೆಯರು, ಹಿರಿಯ ನಾಗರಿಕರು, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿಗಳು ರೈತರು, ವಕೀಲರನ್ನು ಪ್ರಧಾನವಾಗಿ ಗುರಿಯಾಗಿಟ್ಟುಕೊಂಡು ಭರವಸೆ ಪತ್ರ ರೂಪಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. ರಾಜಕೀಯದಲ್ಲಿ ಏನೂ ಆಗ್ಬೋದು! ಎಚ್ಡಿಕೆ ಸರ್ಕಾರ ಉರುಳಿಸಿದ ಸೂತ್ರಧಾರ ಸಂತೋಷ್ ಜೆಡಿಎಸ್‌ಗೆ!
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ! 2019ರಲ್ಲಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ಸ್ಥಾಪಿಸುವಲ್ಲಿ ತೆರೆಮರೆಯಲ್ಲಿಯೇ ಮೆಗಾ ಕಾರ್ಯಾಚರಣೆ ನಡೆಸಿದ್ದ ಎನ್.ಅರ್. ಸಂತೋಷ್ ಈಗ ಜೆಡಿಎಸ್ ಸೇರಿದ್ದಾರೆ. ಅವರು ಹಾಸನ ಜಿಲ್ಲೆಯ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7. ಕನ್ನಡದಲ್ಲಿ ಸಿಎಪಿಎಫ್ ಪರೀಕ್ಷೆ ಬರೆಯಲು ಅಸ್ತು; ಕೇಂದ್ರ ಐತಿಹಾಸಿಕ ತೀರ್ಮಾನ
ಕನ್ನಡದಲ್ಲಿಯೂ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಪರೀಕ್ಷೆ ಬರೆಯಲು ಕರ್ನಾಟಕ ಸೇರಿ ದಕ್ಷಿಣ ಭಾರತದಾದ್ಯಂತ ಆಗ್ರಹ ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರವು ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಕನ್ನಡ ಸೇರಿ 15 ಸ್ಥಳೀಯ ಭಾಷೆಗಳಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF Exam In Kannada)ಯ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಚುನಾವಣಾ ಕರ್ತವ್ಯ ತಪ್ಪಿಸಿಕೊಂಡರೆ ಅರೆಸ್ಟ್! ಆಯೋಗದಿಂದ ನೌಕರರಿಗೆ ಎಚ್ಚರಿಕೆ
ಮುಕ್ತ, ಪಾರದರ್ಶಕ ಹಾಗೂ ಶಾಂತಿಯುತ ವಿಧಾನಸಭಾ ಚುನಾವಣೆ ನಡೆಸಲು ಸಕಲ ಕ್ರಮ ತೆಗೆದುಕೊಳ್ಳುತ್ತಿರುವ ಚುನಾವಣಾ ಆಯೋಗವು, ಕುಂಟು ನೆಪ ಹೇಳಿ ಚುನಾವಣಾ ಕರ್ತವ್ಯದಿಂದ ನುಣುಚಿಕೊಳ್ಳುವ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
9. ಹೇಳಿಕೆಗಳಿಂದಲೇ ವಿವಾದ ಸೃಷ್ಟಿಸುವ ಚೇತನ್ ಅಹಿಂಸಾಗೆ ಸಂಕಷ್ಟ; ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ
ಸದಾ ಹಿಂದುಗಳು, ಹಿಂದುತ್ವ, ಬ್ರಾಹ್ಮಣ್ಯವನ್ನು ಟೀಕಿಸುತ್ತಲೇ ಸುದ್ದಿಯಾಗುತ್ತಿರುವ ನಟ ಚೇತನ್ ಅಹಿಂಸಾ (Chetan Ahimsa) ಅವರ ವೀಸಾವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಆಗುತ್ತಿರುವ ಹಿನ್ನೆಲೆಯಲ್ಲಿ ವೀಸಾ ರದ್ದು ಮಾಡಿದ್ದಾಗಿ ಕೇಂದ್ರ ಹೇಳಿದೆ. ಪೂರ್ಣ ವರದಿಗೆ ಲಿಂಕ್ ಕ್ಲಿಕ್ ಮಾಡಿ
10. ಮೇ 27, 28ರಂದು ವಿಸ್ತಾರ ಸಾಹಿತ್ಯ ಸಂಭ್ರಮ: ಸಾಹಿತಿಗಳ ಬೆಂಬಲ
ವಿಸ್ತಾರ ನ್ಯೂಸ್ ವಾಹಿನಿಯು ಮೇ 27 ಹಾಗೂ 28ರಂದು ಬೆಂಗಳೂರಿನಲ್ಲಿ ಆಯೋಜಿಸಿರುವ ʼವಿಸ್ತಾರ ಸಾಹಿತ್ಯ ಸಂಭ್ರಮʼದ ಹಿನ್ನೆಲೆಯಲ್ಲಿ ಸಾಹಿತಿಗಳ ಜತೆ ಸಮಾಲೋಚನಾ ಸಭೆ ಇಂದು ವಿಸ್ತಾರ ನ್ಯೂಸ್ ಕಚೇರಿಯಲ್ಲಿ ನಡೆಯಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿ ಮತ್ತು ಲೇಖನಗಳು
1. ವಿಸ್ತಾರ ಅಂಕಣ: ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಹೊಣೆಯನ್ನು ಆಯೋಗಕ್ಕೆ ಮಾತ್ರ ಹೊರಿಸುವುದು ಹೊಣೆಗೇಡಿತನ
2. ಮೈಮರೆಯದಿರಿ, ಇನ್ನು 10ವರ್ಷಗಳಲ್ಲಿ ಮತ್ತೊಂದು ಮಾರಣಾಂತಿಕ ವೈರಸ್ ಜಗತ್ತನ್ನು ಕಾಡಬಹುದು!
3. ದಕ್ಷಿಣ ಒಳನಾಡಲ್ಲಿ ತಗ್ಗಿದ ಮಳೆ; ಕರಾವಳಿ, ಉತ್ತರ ಒಳನಾಡಿನಲ್ಲಿ ಮುಂದುವರಿಯಲಿದೆ ಅಬ್ಬರ
4. ಅಣ್ಣಾವ್ರ ಮಗ ವಿನೋದ್ ರಾಜ್ ಎಂಬ ಗಾಸಿಪ್ ಹುಟ್ಟಿದ್ದೇ ದ್ವಾರಕೀಶ್‌ರಿಂದ: ಪ್ರಕಾಶ್ ರಾಜ್ ಮೇಹು
5. ಅಬ್ಬಾ… ಚಿಕ್ಕಪೇಟೆ ಪಕ್ಷೇತರ ಅಭ್ಯರ್ಥಿಯ ಗಂಡನ ಆಸ್ತಿಯ ಒಟ್ಟು ಮೌಲ್ಯ ಕೇವಲ 1621 ಕೋಟಿ ರೂ.!
6. ವಾರದ ವ್ಯಕ್ತಿಚಿತ್ರ: ಅಗಣಿತ ಸಾಧನೆಗಳ ಗಣಿತಜ್ಞ, ಸಂಖ್ಯಾಶಾಸ್ತ್ರದಲ್ಲಿ 75 ವರ್ಷ ಪೂರೈಸಿದ ಕನ್ನಡಿಗ ಸಿ.ಆರ್.ರಾವ್