1. ಬಜರಂಗ ದಳ ಬ್ಯಾನ್ ಮಾಡ್ತೇವೆ ಎಂದ ಕಾಂಗ್ರೆಸ್ ವಿರುದ್ಧ ಮುಗಿಬಿದ್ದ ಬಿಜೆಪಿ
ಬಜರಂಗ ದಳ ನಿಷೇಧ ಮಾಡುವ ಕಾಂಗ್ರೆಸ್ ಪ್ರಣಾಳಿಕೆಯ ಭರವಸೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಬಿಜೆಪಿ ನಾಯಕರು, ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ತಾಕತ್ತಿದ್ದರೆ ಬಜರಂಗದಳವನ್ನು ನಿಷೇಧಿಸಿ ಎಂಬ ಸವಾಲು ಹಾಕಲಾಗಿದೆ. ಇದರಿಂದ ಆತಂಕಗೊಂಡಿರುವ ಕಾಂಗ್ರೆಸ್ ಈ ಪ್ರಸ್ತಾಪದ ಮರುಪರಿಶೀಲನೆಗೆ ಮುಂದಾಗಿದೆ.
ಸಂಬಂಧಿತ ಸುದ್ದಿಗಳು
1. ದ್ವೇಷ ಬಿತ್ತಿದರೆ ಬಜರಂಗ ದಳ ನಿಷೇಧ; ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಎಚ್ಚರಿಕೆ
2. ಬಿಜೆಪಿ ಕೈಗೆ ಸಿಕ್ತು ಬಜರಂಗದಳ ಅಸ್ತ್ರ; ನಿಷೇಧ ಪ್ರಸ್ತಾಪ ವಿರುದ್ಧ ಕೆಂಡಾಮಂಡಲ
3. ಭುಗಿಲೆದ್ದ ಆಕ್ರೋಶದ ಹಿನ್ನೆಲೆ; ಬಜರಂಗ ದಳ ನಿಷೇಧ ಪ್ರಸ್ತಾಪ ಕೈಬಿಡಲು ಚಿಂತನೆ
2. ಸಪ್ತ ಭಾಗ್ಯ, ಮೀಸಲಾತಿ ಏರಿಕೆ, ಬಜರಂಗದಳ ನಿಷೇಧ; ಕಾಂಗ್ರೆಸ್‌ನ TOP 25 ಭರವಸೆಗಳು
ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಈ ಹಿಂದೆ ಘೋಷಿಸಿದ್ದ ಪಂಚ ಯೋಜನೆಗಳ ಜತೆಗೆ ಇನ್ನೂ ಹಲವು ವಿಚಾರಗಳನ್ನು ಪ್ರಸ್ತಾಪಿಸಿದೆ. ಇದರಲ್ಲಿ ಪ್ರಮುಖವಾಗಿರುವುದು ಮೀಸಲಾತಿಯನ್ನು ಶೇ. 50ರಿಂದ 75ಕ್ಕೇರಿಸುವುದು, ಬಜರಂಗ ದಳ ಸಂಘಟನೆ ನಿಷೇಧ ಪ್ರಸ್ತಾಪ, ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ ಮುಂದುವರಿಕೆ ಸೇರಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
3 ಖರ್ಗೆ ತವರಿನಲ್ಲಿ ಮೋದಿ ಸಂಚಲನ- ಒಂದೇ ದಿನ ಕಲ್ಯಾಣ, ಮಧ್ಯ ಕರ್ನಾಟಕದ 3 ಕಡೆ ನಮೋ ಮತಕಹಳೆ
ಚಿತ್ರದುರ್ಗ/ಹೊಸಪೇಟೆ/ಕಲಬುರಗಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಾಲು ಸಾಲು ರ‍್ಯಾಲಿ, ಸಮಾವೇಶ, ರೋಡ್ ಶೋಗಳನ್ನು ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿಯಾಗಿಯೇ ಮತ ಬೇಟೆಯಲ್ಲಿ ತೊಡಗಿದ್ದಾರೆ. ಅದರಲ್ಲೂ, ಮಂಗಳವಾರ ಒಂದೇ ದಿನ ಮಧ್ಯ ಕರ್ನಾಟಕದ ಚಿತ್ರದುರ್ಗ, ಕಲ್ಯಾಣ ಕರ್ನಾಟಕದ ಹೊಸಪೇಟೆ, ಸಿಂಧನೂರು ಹಾಗೂ ಖರ್ಗೆ ಕೋಟೆಯಾದ ಕಲಬುರಗಿಯಲ್ಲಿ ಮೋದಿ ಅಬ್ಬರದ ಪ್ರಚಾರ ನಡೆಸಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ಸಿದ್ದರಾಮಯ್ಯ ತವರಲ್ಲಿ ಅಮಿತ್ ಶಾ ಮತ ಕಹಳೆ, ಯಡಿಯೂರಪ್ಪ ಕರೆತಂದು ಬಲಪ್ರದರ್ಶನ
ಸಿದ್ದರಾಮಯ್ಯ ಅವರೇ ಪ್ರತಿ ಬಾರಿ ಯಾಕೆ ಕ್ಷೇತ್ರ ಬದಲಿಸುತ್ತೀರಿ? ಚಾಮುಂಡೇಶ್ವರಿ, ಬಾದಾಮಿ, ವರುಣ ಅಂತ ಯಾಕೆ ಓಡಾಡುತ್ತೀರಿ? ಅಭಿವೃದ್ಧಿ ಮಾಡದ ಕಾರಣಕ್ಕೆ ಕ್ಷೇತ್ರ ಬದಲಾಯಿಸುತ್ತಿದ್ದೀರಿ. ಮತದಾರರೇ ಚುನಾವಣೆಯಲ್ಲಿ ನಿವೃತ್ತಿ ಪಡೆಯುವ ಅಭ್ಯರ್ಥಿ ಬೇಕಾ ಅಥವಾ ಕೆಲಸ ಮಾಡುವ ಅಭ್ಯರ್ಥಿ ಬೇಕಾ ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗೃಹ ಸಚಿವ ಅಮಿತ್ ಶಾ ಕಿಡಿಕಾರಿದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿ, ಭಾರಿ ಅಪಾಯದಿಂದ ಪಾರಾದ ಡಿ.ಕೆ. ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದು ಡಿಕ್ಕಿಯಾಗಿ ಅಪಘಾತ ಸಂಭವಿಸಿದ್ದು, ಡಿ ಕೆ ಶಿವಕುಮಾರ್ ಅಪಾಯದಿಂದ ಪಾರಾಗಿದ್ದಾರೆ. ಹೆಲಿಕಾಪ್ಟರ್‌ನ ಗಾಜುಗಳು ಸಂಪೂರ್ಣವಾಗಿ ಒಡೆದು ಹೋಗಿವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಪೂರಕ ವರದಿ : ಸಿಂಧನೂರು ಸಮಾವೇಶ; ಕೆಸರಲ್ಲಿ ಸಿಲುಕಿದ ಮೋದಿ ಹೆಲಿಕಾಪ್ಟರ್, ಲ್ಯಾಂಡಿಂಗ್ ವೇಳೆ ಅವಘಡ
6. ಮಂಡ್ಯ, ತೀರ್ಥಹಳ್ಳಿ. ಹೊಸಕೋಟೆಯಲ್ಲಿ ಪ್ರಿಯಾಂಕಾ ಗಾಂಧಿ ಶೋ
ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಇದು ಭ್ರಷ್ಟ ಹಾಗೂ ಸುಳ್ಳಿನ ಸರ್ಕಾರ. ಈ ಹಣದಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್‌ಪ್ರೆಸ್ ವೇ, 186 ಇಎಸ್ಐ ಆಸ್ಪತ್ರೆ, 30 ಸಾವಿರ ಸ್ಮಾರ್ಟ್ ತರಗತಿ ಹಾಗೂ 30 ಲಕ್ಷ ಮನೆಗಳನ್ನು ನಿರ್ಮಾಣ ಮಾಡಬಹುದಿತ್ತು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಅವರು ಮಂಡ್ಯ, ತೀರ್ಥಹಳ್ಳಿ, ಹೊಸಕೋಟೆಯಲ್ಲಿ ಸಂಚಲನ ಸೃಷ್ಟಿಸಿದರು. ಪೂರ್ಣ ವರದಿಗೆ ಕ್ಲಿಕ್ ಮಾಡಿ
ಪೂರಕ ವರದಿ : ನಾನು ಮಂಡ್ಯದ ಗೌಡ್ತಿ, ನೀವೇ ನಂಗೊಬ್ಬ ಒಳ್ಳೆ ಗೌಡ್ರ ಹುಡುಗನ್ನ ಹುಡುಕಿ ಕೊಡಿ ಅಂದ್ರು ರಮ್ಯಾ
7. ಮಹಾರಾಷ್ಟ್ರದಲ್ಲಿ ಮತ್ತೊಂದು ಸಂಚಲನ: ಎನ್ಸಿಪಿ ಮುಖ್ಯಸ್ಥ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ
ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP)ದ ಅಧ್ಯಕ್ಷ ಸ್ಥಾನಕ್ಕೆ ಶರದ್ ಪವಾರ್ ರಾಜೀನಾಮೆ ನೀಡಲು ನಿರ್ಧಾರ ಮಾಡಿದ್ದಾರೆ. ಇದನ್ನು ಶರದ್ ಪವಾರ್ ಅವರೇ ಸ್ವತಃ ಸ್ಪಷ್ಟಪಡಿಸಿದ್ದಾರೆ. ‘ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ’ ಎಂದು ಹೇಳಿದ್ದಾರೆ. ಎನ್ಸಿಪಿಯ ಮುಂದಿನ ಅಧ್ಯಕ್ಷರಾಗಿ ಅವರ ಸಂಬಂಧಿ ಅಜಿತ್ ಪವಾರ್ ನೇಮಕಗೊಳ್ಳುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಮಾನನಷ್ಟ ಪ್ರಕರಣದಲ್ಲಿ ರಾಹುಲ್ಗಿಲ್ಲ ನಿರಾಳತೆ; ಆದರೆ ಜೂನ್ 4ರವರೆಗೆ ಬಂಧನ ಭೀತಿ ಇಲ್ಲ
ಮೋದಿ ಸರ್ನೇಮ್ಗೆ ಅಪಮಾನ ಮಾಡಿದ ಕೇಸ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಸೂರತ್ ಕೆಳ ನ್ಯಾಯಾಲಯ ವಿಧಿಸಿರುವ ಜೈಲು ಶಿಕ್ಷೆಗೆ ತಡೆಕೋರಿ ಅವರು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಮಧ್ಯಂತರ ತಡೆ ನೀಡಲು ನಿರಾಕರಿಸಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
9. IPL 2023: ಮೈದಾನದಲ್ಲಿ ಜಗಳವಾಡಿದ್ದಕ್ಕೆ ಕೊಹ್ಲಿಗೆ 1 ಕೋಟಿ, ಗಂಭೀರ್ಗೆ 25 ಲಕ್ಷ ರೂ. ದಂಡ!
ಸೋಮವಾರ ರಾತ್ರಿ (ಮೇ 1ರಂದು) ನಡೆದ ಐಪಿಎಲ್ 16ನೇ ಆವೃತ್ತಿಯ ಪಂದ್ಯವು ಆಟಕ್ಕಿಂತ ಜಗಳದಿಂದಲೇ ಫುಲ್ ಫೇಮಸ್ ಆಗಿದೆ. ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಗಲಾಟೆ ದೊಡ್ಡ ಮಟ್ಟಿಗೆ ಸುದ್ದಿಗೆ ಗ್ರಾಸವಾಗಿದ್ದರೆ, ಅಫಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಕ್ ಹಾಗೂ ಕೊಹ್ಲಿ ನಡುವಿವ ಜಗಳ ನಿಧಾನವಾಗಿ ಕಿಚ್ಚು ಹಚ್ಚುತ್ತಿದೆ. ಇದೀಗ ಮಾಡಿದ ತಪ್ಪಿಗೆ ಒಬ್ಬೊಬ್ಬರೇ ದಂಡ ಕಟ್ಟಬೇಕು ಎಂದು ಐಪಿಎಲ್ ಆದೇಶ ಹೊರಡಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಗ್ಯಾಂಗ್ಸ್ಟರ್ ಟಿಲ್ಲು ತಾಜ್ಪುರಿಯಾನನ್ನು ತಿಹಾರ್ ಜೈಲಲ್ಲೇ ಹತ್ಯೆಗೈದ ಶತ್ರು ಗ್ಯಾಂಗ್
2021ರ ದೆಹಲಿಯ ರೋಹಿಣಿ ಕೋರ್ಟ್ ಶೂಟೌಟ್ ಕೇಸ್ನಲ್ಲಿ ಆರೋಪಿಯಾಗಿ ತಿಹಾರ್ ಜೈಲು ಸೇರಿದ್ದ ಗ್ಯಾಂಗ್ಸ್ಟರ್ ಟಿಲ್ಲು ತಾಜ್ಪುರಿಯಾನನ್ನು ಅದೇ ಜೈಲಿನಲ್ಲಿಯೇ ಹತ್ಯೆಗೈಯ್ಯಲಾಗಿದೆ. ಇದೇ ಜೈಲಿನಲ್ಲಿದ್ದ ವೈರಿ ಗ್ಯಾಂಗ್ನ ಗ್ಯಾಂಗ್ಸ್ಟರ್ಗಳಾದ ಯೋಗೇಶ್ ಟುಂಡಾ ಮತ್ತು ಇತರರು ಟಿಲ್ಲು ಮೇಲೆ ದಾಳಿ ಮಾಡಿ, ಕೊಲೆ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ