ಬೆಂಗಳೂರು: ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಖಾಲಿ ಇರುವ ೧೦ ಲಕ್ಷ ಹುದ್ದೆಗಳನ್ನು ತುಂಬುವ ಮೂಲಕ ಯುವಜನರಿಗೆ ಉದ್ಯೋಗ ನೀಡುವ ಮಹತ್ವಾಕಾಂಕ್ಷಿ ರೋಜ್‌ಗಾರ್ ಮೇಳಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಮೊದಲ ಕಂತಿನಲ್ಲಿ ದೇಶಾದ್ಯಂತ ೭೫ ಸಾವಿರ ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಈ ನಡುವೆ, ಸರಕಾರಿ ಶಾಲೆಗಳ ಅಭಿವೃದ್ಧಿಯನ್ನು ಪೋಷಕರ ಕೈಗೆ ದಾಟಿಸಲು ಮುಂದಾಗಿದ್ದ ರಾಜ್ಯ ಶಿಕ್ಷಣ ಇಲಾಖೆ ತನ್ನ ಸುತ್ತೋಲೆ ವಾಪಸ್ ಪಡೆದಿದೆ. ಟಿ೨೦ ವಿಶ್ವಕಪ್ ಕದನದಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯ ರೋಚಕತೆ, ನಾಳೆ ನಭಕ್ಕೇರಲಿರುವ ೩೬ ಉಪಗ್ರಹಗಳ ಕುತುಹೂಲಕಾರಿ ಮಾಹಿತಿಗಳೂ ಸೇರಿದಂತೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. Rojgar Mela | 10 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಯೋಜನೆಗೆ ಚಾಲನೆ, ಮೊದಲ ಮೇಳದಲ್ಲೇ 75 ಮಂದಿಗೆ ನೇಮಕಾತಿ ಪತ್ರ
ಕೇಂದ್ರ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ 10 ಲಕ್ಷ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವ ರೋಜ್‌ಗಾರ್ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು. ಮೊದಲ ರೋಜ್‌ಗಾರ್ ಮೇಳದಲ್ಲೇ ದೇಶಾದ್ಯಂತ ೭೫ ಸಾವಿರ ಮಂದಿಗೆ ಉದ್ಯೋಗ ನೇಮಕಾತಿ ಪತ್ರ ವಿತರಿಸಲಾಯಿತು. ದೇಶದ ೫೦ ಕಡೆಗಳಲ್ಲಿ ನಡೆದ ಈ ರೋಜ್‌ಗಾರ್ ಮೇಳಗಳನ್ನು ಉದ್ದೇಶಿಸಿ ಆನ್‌ಲೈನ್‌ನಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ಈಗ ಯಾರಿಗೆ ನೇಮಕಾತಿ ಪತ್ರ ದೊರೆತಿದೆಯೋ ಅವರೆಲ್ಲರೂ ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ಸಂಗತಿಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು. ಕರ್ನಾಟಕದಲ್ಲೂ ಒಂದು ಸಾವಿರ ಮಂದಿಗೆ ನೇಮಕಾತಿ ಪತ್ರ ನೀಡಲಾಯಿತು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
2. Rozgar Melaದಡಿ ಕೇಂದ್ರ ಸರ್ಕಾರಿ ಹುದ್ದೆ ಪಡೆಯುವುದು ಹೇಗೆ?; ಇಲ್ಲಿದೆ ಸಂಪೂರ್ಣ ಮಾಹಿತಿ
ಕೇಂದ್ರ ಸರ್ಕಾರ ರೋಜ್‌ಗಾರ್ ಮೇಳಗಳ ಮೂಲಕ ೧೦ ಲಕ್ಷ ಉದ್ಯೋಗ ನೀಡಲಿದೆ. ಸುಮಾರು 39 ಇಲಾಖೆ, ಸೇನೆ, ಅರೆಸೇನಾಪಡೆ, ನಿಗಮ, ಸಂಸ್ಥೆ, ನಿಯಮಿತ ಹಾಗೂ ಇನ್ನಿತರ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳಿಗೆ ಸದ್ಯವೇ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಖಾಲಿ ಹುದ್ದೆಗಳನ್ನು ಈಗಾಗಲೇ ಪಟ್ಟಿ ಮಾಡಲಾಗುತ್ತಿದ್ದು, ಇವುಗಳಿಗೆ ಮುಂದಿನ ಒಂದು ವರ್ಷದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಾಗಿದ್ದರೆ, ಈ ಉದ್ಯೋಗಗಳನ್ನು ನಮ್ಮ ಯುವಜನರು ಪಡೆದುಕೊಳ್ಳಲು ಏನು ಮಾಡಬೇಕು? ವಿವರ ಇಲ್ಲಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
3. ಸರ್ಕಾರಿ ಶಾಲೆಗೆ ಪೋಷಕರಿಂದ ₹100 ವಂತಿಗೆ ಸುತ್ತೋಲೆ ವಾಪಸ್; ವಿರೋಧಕ್ಕೆ ಮಣಿದ ಸರ್ಕಾರ
ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಪೋಷಕರು ಮಾಸಿಕವಾಗಿ ೧೦೦ ರೂಪಾಯಿ ವಂತಿಗೆ ನೀಡಬೇಕೆಂಬ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯುಕ್ತರು ಹೊರಡಿಸಿರುವ ಸುತ್ತೋಲೆಯನ್ನು ಶನಿವಾರ (ಅ.೨೨) ಸರ್ಕಾರ ವಾಪಸ್ ಪಡೆದುಕೊಂಡಿದೆ. ಶಿಕ್ಷಣ ತಜ್ಞರು ಹಾಗೂ ಪ್ರತಿಪಕ್ಷಗಳಿಂದ ವ್ಯಾಪಕ ಟೀಕೆ, ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಶನಿವಾರ ಬೆಳಗ್ಗೆಯಷ್ಟೇ ಈ ಆದೇಶಕ್ಕೂ ತಮಗೆ ಮತ್ತೆ ಮುಖ್ಯಮಂತ್ರಿಗೆ ಸಂಬಂಧವೇ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸಂಜೆ ವೇಳೆಗೆ ಯೂ ಟರ್ನ್ ಹೊಡೆದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ದ್ವೇಷ ಭಾಷಣ | ಕ್ರಮ ತೆಗೆದುಕೊಳ್ಳಿ, ಇಲ್ಲ ನ್ಯಾಯಾಂಗ ನಿಂದನೆ ಎದುರಿಸಿ ಎಂದ ಸುಪ್ರೀಂ
ದೇಶದಲ್ಲಿ ದಿನೇದಿನೆ ದ್ವೇಷ ಭಾಷಣ ಹೆಚ್ಚುತ್ತಿರುವುದು ಹಾಗೂ ದ್ವೇಷ ಭಾಷಣ ಕುರಿತು ದಾಖಲಾಗುತ್ತಿರುವ ಕುರಿತು ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. “ದ್ವೇಷ ಭಾಷಣ ಕುರಿತು ದಾಖಲಾದ ಕೇಸ್‌ಗಳ ಸಮಗ್ರ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ, ನ್ಯಾಯಾಂಗ ನಿಂದನೆ ಎದುರಿಸಿ” ಎಂದು ದೇಶದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
5. IND vs PAK | ಭಾರತ-ಪಾಕ್ ಕ್ರಿಕೆಟ್ ಜ್ವರ;
ರೋಚಕ ಹಣಾಹಣಿಗೆ ಮೆಲ್ಬೋರ್ನ್ ಅಂಗಣ ರೆಡಿ
ಮೆಲ್ಬೋರ್ನ್: ಟಿ೨೦ ವಿಶ್ವಕಪ್ ೨೦೨೨ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು (IND vs PAK) ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಎದುರಾಗಲಿದ್ದು, ಭಾರಿ ರೋಚಕತೆ ಸೃಷ್ಟಿಯಾಗಿದೆ. ಟಿ ೨೦ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ಆರು ಬಾರಿ ಮುಖಾಮುಖಿಯಾಗಿದ್ದು, ಐದು ಬಾರಿ ಭಾರತ ಗೆದ್ದಿದೆ. ಹೀಗಾಗಿ ಈ ಬಾರಿಯೂ ಗೆಲುವು ನಮ್ಮದೇ ಎನ್ನುವ ಉತ್ಸಾಹದಲ್ಲಿ ಭಾರತ ತಂಡವಿದೆ. ಇದೊಂದು ಹೈವೋಲ್ಟೇಜ್ ಮ್ಯಾಚ್ ಆಗಿರುವುದರಿಂದ ಕೋಟ್ಯಂತರ ಪ್ರೇಕ್ಷಕರು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
6. ಸವಿಸ್ತಾರ ಅಂಕಣ | ಗೊಂದಲದ ಮಾತಿನ ಮೂಲಕ ʼಭಾರತ ಭಂಜನೆʼ ಮಾಡುವಿರೇಕೆ?
ಒಳಗಿದ್ದು ಟೀಕಿಸಿದವರನ್ನು, ದೋಷ ಸರಿಪಡಿಸುವ ಚಿಕಿತ್ಸಕ ದೃಷ್ಟಿಯಿಂದ ತೆಗಳಿದವರನ್ನೂ ಹಿಂದು ಧರ್ಮ ಗೌರವಿಸಿದೆ. ಆದರೆ, ಭೂತ ಕೋಲ ಹಿಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎನ್ನುವಂಥ ಹೊಣೆಗೇಡಿಗಳನ್ನು ಈ ಧರ್ಮ ಎಂದಿಗೂ ಒಪ್ಪುವುದಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ಸವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
7. ವಿಸ್ತಾರ Explainer | ರಷ್ಯಾದ ನಷ್ಟ ಭಾರತಕ್ಕೆ ಲಾಭ! ನಾಳೆ ವನ್‌ವೆಬ್ ಉಪಗ್ರಹಗಳ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಎಲ್‌ವಿಎಂ3 ಉಡ್ಡಯನ ವಾಹನ ಬ್ರಿಟಿಷ್ ಸಂಸ್ಥೆಯಾದ ವನ್‌ವೆಬ್(One Web)ನ ಉಪಗ್ರಹಗಳನ್ನು ಅಕ್ಟೋಬರ್ 23ರಂದು ಉಡಾವಣೆಗೊಳಿಸಲಿದೆ. ಎಲ್‌ವಿಎಂ3 ರಾಕೆಟ್ ವನ್‌ವೆಬ್ ಸಂಸ್ಥೆಯ 36 ಉಪಗ್ರಹಗಳನ್ನು ಹೊತ್ತು ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಈ ಉಪಗ್ರಹಗಳು ಅತ್ಯಂತ ವೇಗದ, ಕನಿಷ್ಠ ಸುಪ್ತತೆಯ ಜಾಗತಿಕ ಸಂಪರ್ಕ ಸೇವೆಯನ್ನು ಒದಗಿಸಲಿವೆ ಎಂದು ವನ್‌ವೆಬ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಉಡಾವಣೆ ಮತ್ತು ಉಪಗ್ರಹಗಳ ವಿಶೇಷತೆಗಳ ಬಗ್ಗೆ ವಿಸ್ತಾರ Explainer ನಲ್ಲಿ ವಿವರ ನೀಡಿದ್ದಾರೆ ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಗಿರೀಶ್ ಲಿಂಗಣ್ಣ. ವಿವರಕ್ಕೆ ಲಿಂಕ್ ಕ್ಲಿಕ್ ಮಾಡಿ
8. ಉತ್ತರ ಪ್ರದೇಶ: 5 ವರ್ಷದಲ್ಲಿ 166 ಕ್ರಿಮಿನಲ್ಸ್ ಹತ್ಯೆ; ಜೈಲಲ್ಲಿರ್ಬೇಕು, ಇಲ್ಲ ಸಾಯ್ಬೇಕೆಂದ ಯೋಗಿ
ಉತ್ತರ ಪ್ರದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಪೊಲೀಸ್ ಶೂಟೌಟ್ನಿಂದ 166 ಕ್ರಿಮಿನಲ್‌ಗಳು ಮೃತಪಟ್ಟಿದ್ದಾರೆ ಮತ್ತು 4453 ಕ್ರಿಮಿನಲ್‌ಗಳು ಗಾಯಗೊಂಡಿದ್ದಾರೆ. ಯೋಗಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಕ್ರಿಮಿನಲ್ಗಳ ವಿರುದ್ಧ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಕ್ರಿಮಿನಲ್‌ಗಳು ಒಂದೋ ಜೈಲಿನಲ್ಲಿರಬೇಕು, ಇಲ್ಲವೇ ಸಾಯಬೇಕು ಎನ್ನುವುದು ಯೋಗಿ ಪಾಲಿಸಿ. ಪೂರ್ಣ ವರದಿಗೆ ಕ್ಲಿಕ್ ಮಾಡಿ
9. Britain PM | ರಿಷಿ ಸುನಕ್‌ಗೆ 100 ಸಂಸದರ ಬೆಂಬಲ, ಸಮೀಕ್ಷೆಯಲ್ಲೂ ನಂ.1, ಹಾಗಿದ್ರೆ ಗೆಲ್ತಾರಾ?
ಲಿಜ್ ಟ್ರಸ್ ರಾಜೀನಾಮೆಯಿಂದ ತೆರವಾಗಿರುವ ಬ್ರಿಟನ್ ಪ್ರಧಾನಿ ಹುದ್ದೆಗಾಗಿ ಕನ್ಸರ್ವೇಟಿವ್ ಪಕ್ಷದ ನಾಯಕತ್ವಕ್ಕೆ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಭಾರತೀಯ ಮೂಲದ ಮಾಜಿ ವಿತ್ತ ಸಚಿವ ರಿಷಿ ಸುನಕ್ (Rishi Sunak) ಅವರು ಆರಂಭಿಕ ಮೇಲುಗೈ ಸಾಧಿಸಿದ್ದಾರೆ. ಕನ್ಸರ್ವೇಟಿವ್ ಪಕ್ಷದ ಕನಿಷ್ಠ 100 ಸಂಸದರ ಬೆಂಬಲ ಪಡೆದಿರುವ ಅವರು ಮುಂದಿನ ವಾರ ಅಧಿಕೃತವಾಗಿ ಪಿಎಂ ಹುದ್ದೆಗೆ ತಮ್ಮ ಉಮೇದುವಾರಿಕೆಯನ್ನು ಪ್ರಕಟಿಸಲಿದ್ದಾರೆ. ಈ ಹಿಂದೆ ಮೂರನೇ ಸ್ಥಾನಗಳಿಸಿದ್ದ ಪೆನ್ನಿ ಮೋರ್ಡಾಂಟ್ ಅವರು ಅಧಿಕೃತವಾಗಿಯೇ ಟೋರಿ ಪಕ್ಷದ ನಾಯಕತ್ವದ ರೇಸಿನಲ್ಲಿದ್ದಾರೆ. ಜತೆಗೆ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಕೂಡ ಈ ಸ್ಪರ್ಧೆಗೆ ಇಳಿಯುವ ಸಾಧ್ಯತೆ ಇದೆ. ಹಾಗಿದ್ರೆ ಯಾರು ಗೆಲ್ಲಬಹುದು? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಪುನೀತ ಪರ್ವ ವೀಕ್ಷಿಸುತ್ತಲೇ ಅಸುನೀಗಿದ ಅಭಿಮಾನಿ; ಛೆ, ಇಂಥ ಮನುಷ್ಯ ಬೇಗ ಹೋಗಬಾರದಿತ್ತು ಎಂದವನೂ ಬಾರದ ಲೋಕಕ್ಕೆ
ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಹಾಗೂ ಅವರ ಅಭಿನಯದ ಕೊನೇ ಚಿತ್ರ ಗಂಧದ ಗುಡಿ ಸಿನಿಮಾದ ಪ್ರೀ ರಿಲೀಸ್ ಇವೆಂಟ್‌ನ ಭಾಗವಾಗಿ ಏರ್ಪಡಿಸಲಾಗಿದ್ದ ಪುನೀತ ಪರ್ವ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿಯೇ ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಲ್ಲೇಶ್ವರ ನಿವಾಸಿಯಾಗಿರುವ ಗಿರಿರಾಜ್ ಮೃತ ದುರ್ದೈವಿ. ಛೆ.. ಇಂಥ ಮನುಷ್ಯ ನಮ್ಮನ್ನು ಬಿಟ್ಟು ಹೋಗಬಾರದಿತ್ತು ಎಂದು ಹೇಳುತ್ತಲೇ ಇದ್ದ ಗಿರಿರಾಜ್ ಕಾರ್ಯಕ್ರಮ ವೀಕ್ಷಣೆಯ ನಡುವೆ ಬಾತ್‌ರೂಂಗೆ ಹೋದವರು ಅಲ್ಲೇ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮತ್ತಷ್ಟು ಪ್ರಮುಖ ಸುದ್ದಿಗಳು
೧. ವಾರದ ವ್ಯಕ್ತಿಚಿತ್ರ | ಹಲವು ಹಿರಿಮೆಗಳನ್ನು ಮುಡಿಗೇರಿಸಿಕೊಂಡ ಕನ್ನಡಿಗ ರೋಜರ್ ಬಿನ್ನಿ ಹೊಸ ಇನಿಂಗ್ಸ್ ಶುರು
೨. PayCM | ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಸೆಲ್ ಮುಖ್ಯಸ್ಥ, ಮೂವರಿಗೆ ನೋಟಿಸ್; 25ಕ್ಕೆ ಹಾಜರಿ ಕಡ್ಡಾಯ
೩. Salman Khan | ನಟ ಸಲ್ಮಾನ್ ಖಾನ್ಗೆ ಡೆಂಗ್ಯೂ; ಬಿಗ್ಬಾಸ್, ಸಿನಿಮಾ ಚಿತ್ರೀಕರಣದಿಂದ ದೂರ
೪. ಈ ರಾಜ್ಯದಲ್ಲಿ ಏಳು ದಿನ ಟ್ರಾಫಿಕ್ ನಿಯಮ ಉಲ್ಲಂಘನೆಗೆ ಇಲ್ಲ ದಂಡ; ಇದು ಸವಾರರಿಗೆ ದೀಪಾವಳಿ ಗಿಫ್ಟ್ !
೫. Kantara | ಚೇತನ್ ಹೇಳಿಕೆ ಚೀಪ್ ಪಬ್ಲಿಸಿಟಿ ಅಷ್ಟೆ: ಹಿಂದುತ್ವ, ಬ್ರಾಹ್ಮಣತ್ವ ಒಂದೇ ಎಂದ ಪೇಜಾವರ ಶ್ರೀಗಳು
೬. AIIMS UTurn | ಹಾಲಿ ಸಂಸದರಿಗೆ ವಿಶೇಷ ಸೌಲಭ್ಯ, ಚಿಕಿತ್ಸೆ! ಆದೇಶ ವಾಪಸ್ ಪಡೆದ ಏಮ್ಸ್
7. Bus Accident | ಮಧ್ಯಪ್ರದೇಶದಲ್ಲಿ ಬಸ್ ಪಲ್ಟಿ; 14 ಪ್ರಯಾಣಿಕರು ಸಾವು, 40 ಮಂದಿಗೆ ಗಾಯ