Site icon Vistara News

ವಿಸ್ತಾರ TOP 10 NEWS | ʻಕಟುಕʼ ಬಿಲಾವಲ್‌ ವಿರುದ್ಧ ಆಕ್ರೋಶ, ರಾಹುಲ್‌ ಹೇಳಿಕೆಗೆ ರೋಷದಿಂದ ಬೊಮ್ಮಾಯಿ ಕಣ್ಣೀರಿನವರೆಗೆ ಪ್ರಮುಖ ಸುದ್ದಿಗಳು

TOP 10 news 17-12-2022

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯನ್ನು ʻಕಟುಕʼ ಎಂದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ವಿರುದ್ಧ ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದರು. ಇತ್ತ ಬಿಜೆಪಿ ನಾಯಕರು ಗಡಿ ಸಂಘರ್ಷಕ್ಕೆ ಸಂಬಂಧಿಸಿ ರಾಹುಲ್‌ ನೀಡಿದ ಹೇಳಿಕೆಗೆ ರೊಚ್ಚಿಗೆದ್ದಿದ್ದರು. ಪಠಾಣ್‌ ಸಿನಿಮಾ ಬೇಷರಮ್‌ ರಂಗ್‌ ಬೇರೆ ಬೇರೆ ಬಣ್ಣಗಳನ್ನು ಪಡೆದುಕೊಂಡು ಖದರ್‌ ಉಳಿಸಿಕೊಂಡಿದೆ. ಗುಟ್ಕಾ, ತಂಬಾಕಿನ ಜಿಎಸ್‌ಟಿ ಏರಿಕೆ ಇಲ್ಲ ಎನ್ನುವುದು ಕೆಲವರಿಗೆ ಖುಷಿ ಕೊಟ್ಟಿದೆ, ಅಂಧರ ವಿಶ್ವಕಪ್‌ನಲ್ಲಿ ಭಾರತದ ಗೆಲುವು ಎಲ್ಲರಿಗೂ ಆನಂದಾಶ್ರು ತಂದಿದೆ. ಇದರ ನಡುವೆ ಸಿಎಂ ಬೊಮ್ಮಾಯಿ ಅವರು ಭಾವುಕರಾಗಿ ಕಣ್ಣೀರು ಹಾಕಿದ್ದಾರೆ…. ಹೀಗೆ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.

1. ಮೋದಿಯನ್ನು ಕಟುಕ ಎಂದ ಬಿಲಾವಲ್‌ ಭುಟ್ಟೋ ವಿರುದ್ಧ ದೇಶಾದ್ಯಂತ ಆಕ್ರೋಶ, ಕ್ಷಮೆ ಯಾಚನೆಗೆ ಆಗ್ರಹ
ಪ್ರಧಾನಿ ನರೇಂದ್ರ ಮೋದಿ ಅವರನ್ನು ʻಗುಜರಾತ್‌ನ ಕಟುಕʼ ಎಂದು ಹೀಗಳೆದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಬಿಲಾವಲ್‌ ಭುಟ್ಟೋ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ದಿಲ್ಲಿಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಬಿಲಾವಲ್‌ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ದೇಶಾದ್ಯಂತದಂತೆ ರಾಜ್ಯದಲ್ಲೂ ಎಲ್ಲ ಕಡೆ ಪ್ರತಿಭಟನೆಗಳು ನಡೆದವು.
ಈ ಸುದ್ದಿ ನೋಡಿ | ದೆಹಲಿಯ ಪಾಕ್​ ರಾಯಭಾರ ಕಚೇರಿಯತ್ತ ನುಗ್ಗಿದ ಬಿಜೆಪಿ ಕಾರ್ಯಕರ್ತರು
ರಾಜ್ಯದಲ್ಲೂ ಆಕ್ರೋಶ | ಭುಟ್ಟೋ ʻಕಟುಕʼ ಹೇಳಿಕೆಗೆ ಬಿಜೆಪಿ ಕೆಂಡ; ರಾಜ್ಯಾದ್ಯಂತ ತೀವ್ರ ಪ್ರತಿಭಟನೆ

೨. ʼಇದು ನೆಹರು ಕಾಲದ ಭಾರತವಲ್ಲʼ, ಚೀನಾ, ಸೇನೆ ಬಗ್ಗೆ ರಾಹುಲ್‌ ಹೇಳಿಕೆಗೆ ಬಿಜೆಪಿ ನಾಯಕರ ತಿರುಗೇಟು
ಅರುಣಾಚಲ ಪ್ರದೇಶದ ತವಾಂಗ್‌ ಸೆಕ್ಟರ್‌ನಲ್ಲಿ ಡಿಸೆಂಬರ್‌ 9ರಂದು ಭಾರತ ಹಾಗೂ ಚೀನಾ ಸೈನಿಕರ ಮಧ್ಯೆ ನಡೆದ ಸಂಘರ್ಷ, ಗಡಿ ಬಿಕ್ಕಟ್ಟಿನ ವಿಚಾರದ ಕುರಿತು ಮಾತನಾಡುವಾಗ ಚೀನಾ, ಸೇನೆ ಬಗ್ಗೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೀಡಿದ ಹೇಳಿಕೆಗೆ ಬಿಜೆಪಿಯ ಹಲವು ನಾಯಕರು ತಿರುಗೇಟು ನೀಡಿದ್ದಾರೆ. “ಗಡಿಯಲ್ಲಿ ಹೆದರಲು, ಹಿಂದಡಿ ಇಡಲು ಇದು ನೆಹರು ಕಾಲದ ಭಾರತವಲ್ಲ” ಎಂಬುದು ಸೇರಿ ಹಲವು ರೀತಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ಸಂಘರ್ಷ ಗಡಿಗೆ ಕಿರಣ್‌ ರಿಜಿಜು ಭೇಟಿ, ಸುರಕ್ಷಿತ ಎಂದು ಹೇಳಿಕೆ, ರಾಹುಲ್‌ ವಿರುದ್ಧ ವಾಗ್ದಾಳಿ

೩. ಇನ್ನಷ್ಟು ಹೆಚ್ಚಿದ ಪಠಾಣ್‌ ಸಿನಿಮಾದ ತುಂಡುಡುಗೆ ಕಾವು: ಪರ-ವಿರೋಧ ಸಂಘರ್ಷ
ಪಠಾಣ್‌ ಸಿನಿಮಾದ ಬೇಷರಮ್‌ ರಂಗ್‌ ಹಾಡಿನ ಬಗ್ಗೆ ಎದ್ದಿರುವ ವಿವಾದ ತಣ್ಣಗಾಗುವಂತೆ ಕಾಣುತ್ತಿಲ್ಲ. ಒಂದು ಕಡೆ ಹಿಂದುಗಳು ಬಣ್ಣದ ವಿಚಾರದಲ್ಲಿ, ಅಶ್ಲೀಲತೆ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದರೆ, ಇನ್ನೊಂದು ಕಡೆ ಮುಸ್ಲಿಮರು ಪಠಾಣರನ್ನು ಚಿತ್ರದಲ್ಲಿ ಕೆಟ್ಟದಾಗಿ ಕಾಣಿಸಲಾಗಿದೆ ಎಂದು ತಗಾದೆ ಎತ್ತಿದ್ದಾರೆ. ಈ ನಡುವೆ ಸ್ಯಾಂಡಲ್‌ವುಡ್‌ ಪದ್ಮಾವತಿ ರಮ್ಯಾ ಇದೆಲ್ಲ ಸ್ತ್ರೀದ್ವೇಷಿ ನಿಲುವು ಎನ್ನುವ ಮೂಲಕ ಟ್ವಿಸ್ಟ್‌ ನೀಡಿದ್ದರೆ, ಸ್ಮೃತಿ ಇರಾನಿ ಅವರ ಹಳೆ ಬಿಕಿನಿ ಚಿತ್ರವನ್ನು ಯಾರೋ ಹುಡುಕಿ ತಂದಿದ್ದಾರೆ!
ಮುಸ್ಲಿಮರ ವಿರೋಧ | ಮುಸ್ಲಿಂ ಸಂಘಟನೆಗಳಿಂದಲೂ ʻಪಠಾಣ್‌ʼ ಸಿನಿಮಾ ನಿಷೇಧಿಸುವಂತೆ ಒತ್ತಾಯ!
ರಮ್ಯಾ ಅವರ ವಾದ | ಸ್ತ್ರೀ ದ್ವೇಷಿಗಳ ವಿರುದ್ಧ ಕಿಡಿಕಾರಿದ ಮೋಹಕ ತಾರೆ ರಮ್ಯಾ, ಟ್ವೀಟ್‌ ವೈರಲ್‌!
ಎದ್ದು ಬಂತು ಸ್ಮೃತಿ ಇರಾನಿ ಚಿತ್ರ | ವಿವಾದದ ಬೆನ್ನಲ್ಲೇ ವೈರಲ್​ ಆಯ್ತು ಸ್ಮೃತಿ ಇರಾನಿ ‘ಕೇಸರಿ ತುಂಡುಡುಗೆ’ ವಿಡಿಯೊ

೪. ಸವಿಸ್ತಾರ ಅಂಕಣ | ಬಾಲಿವುಡ್‌ನ ಬೌದ್ಧಿಕ ದಾರಿದ್ರ್ಯಕ್ಕೆ ದಾರ್ಷ್ಟ್ಯದ ಕಿರೀಟ
ಬಾಲಿವುಡ್‌ಗೆ ಈಗ ಬೌದ್ಧಿಕ ದಾರಿದ್ರ್ಯ ಆವರಿಸಿಕೊಂಡಿದೆ. ಆದರೆ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅದು ಇಲ್ಲ. ಅದೇ ಅರೆನಗ್ನತೆಯನ್ನು ಮತ್ತಷ್ಟು ಹೆಚ್ಚಿಸಿ ಮುಕ್ಕಾಲು ನಗ್ನತೆಯಲ್ಲೇ ಸಂತೋಷ ಕಾಣುತ್ತಿದೆ. ಬಾಲಿವುಡ್ ಜಗತ್ತನ್ನು ಭಾರತದ ಸಾಂಸ್ಕೃತಿಕ ರಾಯಭಾರಿ ಎಂಬಂತೆ ಮಾಡಿದ ಪ್ರಚಾರ ಸುಳ್ಳಾಗಿದೆ. ʻಪಠಾಣ್‌ʼ ಚಿತ್ರದ ಬೇಷರಮ್‌ ರಂಗ್‌ ಹಾಡನ್ನು ಹಿನ್ನೆಲೆಯಾಗಿಟ್ಟುಕೊಂಡು ಬಾಲಿವುಡ್‌ನ ಹಲವು ಮುಖಗಳನ್ನು ತೆರೆದಿಟ್ಟಿದ್ದಾರೆ ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ತಮ್ಮ ಸವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

೫. ಗುಟ್ಕಾ, ತಂಬಾಕಿನ ಜಿಎಸ್‌ಟಿ ಏರಿಕೆ ಸದ್ಯಕ್ಕಿಲ್ಲ
ಗುಟ್ಕಾ, ತಂಬಾಕು ಸೇರಿ ಯಾವುದೇ ಉತ್ಪನ್ನಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (GST Council Meet) ಏರಿಸದಿರಲು ಜಿಎಸ್‌ಟಿ ಸಮಿತಿ ಸಭೆಯು ತೀರ್ಮಾನಿಸಿದೆ. ಹಾಗಾಗಿ, ಉತ್ಪನ್ನಗಳ ಬೆಲೆ ಏರಿಕೆಯ ಭೀತಿ ಇದ್ದ ಸಾರ್ವಜನಿಕರಿಗೆ ಇದರಿಂದ ತುಸು ನಿರಾಳವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಇನ್ನೊಂದು ವರದಿ | ವೃತ್ತಿಪರ ನೇಕಾರರ ಸಮುದಾಯಗಳಿಗೆ 50% ಸಬ್ಸಿಡಿ, 2 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ

೬. ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು; ಶಿಗ್ಗಾಂವಿಯಲ್ಲಿ ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
ಹಾವೇರಿ: ನಾನು ಸತ್ತ ಮೇಲೆ ನನ್ನ ಹೆಣವನ್ನು ಇದೇ ಮಣ್ಣಲ್ಲಿ ಹೂಳಬೇಕು ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ವೇದಿಕೆಯಲ್ಲಿ ಕಣ್ಣೀರು ಹಾಕಿದ ಪ್ರಸಂಗಕ್ಕೆ ಕಂದಾಯ ಸಚಿವರ ಗ್ರಾಮ ವಾಸ್ತವ್ಯಕಾರ್ಯಕ್ರಮ ಸಾಕ್ಷಿಯಾಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಕುಕ್ಕರ್‌ ಬಾಂಬ್‌ ಸ್ಫೋಟ ಆರೋಪಿ ಶಾರಿಕ್‌ ಬೆಂಗಳೂರಿಗೆ ಶಿಫ್ಟ್‌: ಯಾಕೆ ಈ ದಿಢೀರ್‌ ಸ್ಥಳಾಂತರ?
ನವೆಂಬರ್‌ ೧೯ರಂದು ಸಂಜೆ ೪.೨೯ಕ್ಕೆ ಮಂಗಳೂರಿನ ಕಂಕನಾಡಿ ಗರೋಡಿ ಬಳಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಪ್ರಧಾನ ಆರೋಪಿ, ಈ ಘಟನೆಯಲ್ಲಿ ಗಾಯಗೊಂಡು ಸಿಕ್ಕಿಬಿದ್ದಿರುವ ಶಂಕಿತ ಉಗ್ರ ಶಾರಿಕ್‌ನನ್ನು ಬೆಂಗಳೂರಿಗೆ ಶಿಫ್ಟ್‌ ಮಾಡಲಾಗಿದೆ. ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮. ‌ಅತ್ಯಾಚಾರ ಆರೋಪಿಗಳ ಬಿಡುಗಡೆ ಪ್ರಶ್ನಿಸಿದ ಬಿಲ್ಕಿಸ್ ಬಾನೊ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್‌
ತಮ್ಮ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಗುಜರಾತ್‌ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್‌ ಬಾನೊ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. ಅಂಧರ ವಿಶ್ವ ಕಪ್​ನಲ್ಲಿ ಮೂರನೇ ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸಿ ದಾಖಲೆ ಬರೆದ ಭಾರತ
ಅಂಧರ ಟಿ20 ವಿಶ್ವ ಕಪ್​ ಫೈನಲ್​ನಲ್ಲಿ ಬಾಂಗ್ಲಾದೇಶ ತಂಡವನ್ನು 120 ರನ್​ಗಳಿಂದ ಮಣಿಸಿದ ಭಾರತ ತಂಡ ಚಾಂಪಿಯನ್​ಪಟ್ಟ ಅಲಂಕರಿಸಿದೆ. ಇದು ಭಾರತಕ್ಕೆ ಲಭಿಸುತ್ತಿರುವ ಮೂರನೇ ವಿಶ್ವ ಕಪ್​. ಈ ಹಿಂದೆ 2012, 2017ರಲ್ಲಿ ಭಾರತ ಅಂಧರ ತಂಡ ಟ್ರೋಪಿ ಎತ್ತಿ ಹಿಡಿದಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೧೦. ಪಂಜಾಬ್​ ಪೊಲೀಸ್ ಠಾಣೆ ಮೇಲೆ ಗ್ರೆನೇಡ್​ ದಾಳಿ ಮಾಡಿದ್ದ 6 ಮಂದಿ‌ ಸೆರೆ; ಯೂಟ್ಯೂಬ್​ ನೋಡಿ ಕಲಿತಿದ್ದರು!
ಪಂಜಾಬ್​​ನ ತರಣ್​ ತಾರಣ್​ ಜಿಲ್ಲೆಯ ಅಮೃತ್​ಸರ್​-ಭಟಿಂಡಾ ಹೆದ್ದಾರಿಯಲ್ಲಿರುವ ಪೊಲೀಸ್​ ಠಾಣೆ ಮೇಲೆ ಡಿಸೆಂಬರ್​ 9ರ ತಡರಾತ್ರಿ ನಡೆದ ರಾಕೆಟ್​ ಚಾಲಿತ ಗ್ರೆನೇಡ್​ ದಾಳಿ ಕೇಸ್​​ಗೆ ಸಂಬಂಧಪಟ್ಟಂತೆ ಪಂಜಾಬ್​ ಪೊಲೀಸರು ಶುಕ್ರವಾರ (ಡಿ.16) ಆರು ಮಂದಿಯನ್ನು ಬಂಧಿಸಿದ್ದಾರೆ. ಇವರು ರಾಕೆಟ್​ ಮೂಲಕ ಗ್ರೆನೇಡ್​ ದಾಳಿ ಮಾಡುವುದು ಹೇಗೆಂದು ಯೂಟ್ಯೂಬ್​ ನೋಡಿ ಕಲಿತಿದ್ದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಮತ್ತಷ್ಟು ಪ್ರಮುಖ ಸುದ್ದಿಗಳು

೧. ಕುಕ್ಕರ್‌ ಬ್ಲಾಸ್ಟ್‌: ಡಿಕೆಶಿ ಹೇಳಿಕೆಗೆ ಸಿದ್ದರಾಮಯ್ಯ ಸಮರ್ಥನೆ: ತಪ್ಪೇನಿದೆ ಎಂದು ಕೇಳಿದ ಮಾಜಿ ಸಿಎಂ
ಉಗ್ರರಿಗೆ ಬೆಂಬಲ ನೀಡುವ ಕಾಂಗ್ರೆಸ್‌ ವಿರುದ್ಧ ಡಿ.19, 20, 21ರಂದು ಬಿಜೆಪಿ ಪ್ರತಿಭಟನೆ
೩. ಕೋಮು ಗಲಭೆ ಸೃಷ್ಟಿಸಲು ಸರ್ಕಾರಿ ಕೆಲಸ ಬಳಕೆ! ತಪ್ಪೊಪ್ಪಿಕೊಂಡ ಮೊಳೆ ಚೆಲ್ಲಿದ ಆರೋಪಿಗಳು
೪. ಧವಳ ಧಾರಿಣಿ ಅಂಕಣ | ಆತ್ಮವಿಶ್ವಾಸದ ಕೊರತೆ ಅಧೈರ್ಯದ ಮೂಲ ಎಂಬ ವಿಷಾದ ಯೋಗ
೫. ಕೇವಲ 25 ರನ್‌ಗಳಿಗೆ ಆಲ್​ಔಟ್​​; ರಣಜಿಯಲ್ಲಿ ನೆಗೆಟಿವ್ ದಾಖಲೆ ಬರೆದ ನಾಗಾಲ್ಯಾಂಡ್‌
೬. ವಾರದ ವ್ಯಕ್ತಿಚಿತ್ರ | ಗಾಡ್​ಫಾದರ್​ಗಳಿದ್ದರೂ ಪರಿಶ್ರಮದಿಂದ ಗಮನ ಸೆಳೆಯುತ್ತಿದ್ದಾರೆ ಸಚಿನ್​ ಪುತ್ರ ಅರ್ಜುನ್​
೭. ಮಕ್ಕಳ ಕಥೆ | ಮುಲಾನ್ ಎಂಬ ವೀರ‌ ತರುಣಿ
೮. ರಾಜ ಮಾರ್ಗ ಅಂಕಣ | ಮೆಸ್ಸಿ ಮೆಸ್ಸಿ ಮೆಸ್ಸಿ ಜಗದಗಲ ಮೆಸ್ಸಿ! ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ!
೯. 700ಕ್ಕೂ ಹೆಚ್ಚು ಅಭಿಮಾನಿಗಳಿಗೆ ಫೋಟೊ ಅವಕಾಶ ನೀಡಿದ ಯಶ್: ನಟನ ತಾಳ್ಮೆಗೆ ನೆಟ್ಟಿಗರಿಂದ ಪ್ರಶಂಸೆ
10. Ear buzzing | ಕಿವಿಯಲ್ಲಿ ಏನೇನೊ ಶಬ್ದ ಕೇಳಿಸುತ್ತಿದೆಯಾ? ಇಲ್ಲಿದೆ ಕಾರಣ

Exit mobile version