ಬೆಂಗಳೂರು: ರಾಜ್ಯದ ಶಕ್ತಿಕೇಂದ್ರವಾಗಿರುವ ವಿಧಾನ ಸೌಧದಲ್ಲೇ ಪತ್ತೆಯಾಗಿರುವ ೧೦.೫ ಲಕ್ಷ ರೂ. ಹಣ ಅಕ್ರಮ ವ್ಯವಹಾರದ ವಾಸನೆ ಅಡರುವಂತೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಠ ಯಾತ್ರೆ ಬಿಜೆಪಿಯ ಮತಯಾತ್ರೆಯ ಸುಳಿವನ್ನು ನೀಡಿದೆ. ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಇಳಿದ ಗಡ್ಕರಿ, ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗಿ ಕುಳಿತ ಹಾವೇರಿ, ಮತ್ತೆ ಎದ್ದುಬಂದ ಪಂಚಮಸಾಲಿ ಮೀಸಲು ಹೋರಾಟದ ಕೆಚ್ಚಿನ ನುಡಿ ದಿನದ ಬೆಳವಣಿಗೆಗಳಾಗಿ ಗಮನ ಸೆಳೆದವು. ಬೆಳಗಾವಿ ಸಮೀಪ ಸಂಭವಿಸಿದ ಅಪಘಾತ ಆರು ಯಾತ್ರಾರ್ಥಿಗಳ ಪ್ರಾಣವನ್ನೇ ಕಸಿದ ನೋವಿನ ಸಂಗತಿ ಸಹಿತ ಬಂದಿದೆ ವಿಸ್ತಾರ TOP 10 NEWS.
1. ವಿಧಾನಸೌಧದಲ್ಲಿ 10. 5 ಲಕ್ಷ ಹಣ ಪತ್ತೆ: ಸಿಕ್ಕಿಬಿದ್ದ ಪಿಡಬ್ಲ್ಯುಡಿ ಎಂಜಿನಿಯರ್, ೪೦% ಕಮಿಷನ್ ಎಂದ ಕಾಂಗ್ರೆಸ್
ರಾಜ್ಯದ ಶಕ್ತಿಸೌಧವಾಗಿರುವ ವಿಧಾನಸೌಧದಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ೧೦.೫ ಲಕ್ಷ ರೂಪಾಯಿಯನ್ನು ವಿಧಾನಸೌಧ ಪೊಲೀಸರು ಜಪ್ತಿ ಮಾಡಿದ್ದಾರೆ. ಪಿಡಬ್ಲ್ಯುಡಿ ಎಂಜಿನಿಯರ್ ಜಗದೀಶ್ ದಾಖಲೆ ಇಲ್ಲದೆ ಹಣ ಸಾಗಿಸುತ್ತಿದ್ದರು. ಇದು ರಾಜಕೀಯ ತಿರುವು ಪಡೆದಿದ್ದು, ಶೇಕಡಾ ೪೦ ಕಮಿಷನ್‌ನ ಹಣ ಇದೆಂದು ಕಾಂಗ್ರೆಸ್ ಆರೋಪಿಸಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಕಾಂಗ್ರೆಸ್ ಗಂಭೀರ ಆರೋಪ: 40% ಕಮಿಷನ್‌ಗೆ ಇನ್ನೇನು ಸಾಕ್ಷಿ ಬೇಕು: ಡಿಕೆಶಿ ಪ್ರಶ್ನೆ
೨. ಜೆ.ಪಿ. ನಡ್ಡಾ ಮಠ ಯಾತ್ರೆ; ರಾಜ್ಯ ಚುನಾವಣೆಗೆ ಜಾತಿ ಲೆಕ್ಕಾಚಾರದ ಸೂತ್ರ
ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಅಖಾಡ ಸಜ್ಜಾಗಿದೆ. ಬಿಜೆಪಿಯೂ ಸಹ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಹಿಂದುತ್ವದ ಜಪ ಮಾಡುತ್ತಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ರಾಜ್ಯದಲ್ಲಿ ೨ ದಿನಗಳ ಕಾಲ ಕೈಗೊಂಡಿರುವ ಪ್ರವಾಸದಲ್ಲಿ ಗುರುವಾರ (ಜ.೫) ಪ್ರಮುಖ ಮಠಗಳಿಗೆ ಭೇಟಿ ನೀಡಿದ್ದಾರೆ. ಇನ್ನು ಶುಕ್ರವಾರವೂ (ಜ.೬) ಹಲವು ಮಠಗಳಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ನಡ್ಡಾ ಚುನಾವಣಾ ಕಾರ್ಯತಂತ್ರವನ್ನು ಹೆಣೆದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ | ಕಾಂಗ್ರೆಸ್‌ನಿಂದ ವೋಟ್ ಬ್ಯಾಂಕ್ ರಾಜಕಾರಣ, ಮೋದಿಯದ್ದು ರಿಪೋರ್ಟ್ ಕಾರ್ಡ್ ರಾಜಕಾರಣ: ನಡ್ಡಾ
೩. ಫೆಬ್ರವರಿ ಅಂತ್ಯಕ್ಕೆ Bengaluru-Mysuru Expressway ಲೋಕಾರ್ಪಣೆ, ಟೋಲ್ ಕೊಡಲೇಬೇಕು ಎಂದ ಗಡ್ಕರಿ
ಬೆಂಗಳೂರು: 9000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಫೆಬ್ರವರಿ ಅಂತ್ಯಕ್ಕೆ ಲೋಕಾರ್ಪಣೆ ಮಾಡಲಾಗುವುದು. ಪ್ರಧಾನಿ ಮೋದಿ ಅಥವಾ ರಾಷ್ಟ್ರಪತಿ ಮುರ್ಮು ಅವರು ಈ ಹೆದ್ದಾರಿಗೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದರು. ಈ ಹೆದ್ದಾರಿ ಸಂಚಾರಕ್ಕೆ ಟೋಲ್ ಕಟ್ಟಲೇಬೇಕು ಎಂದರು ಸಚಿವರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ | Bengaluru-Mysuru Expressway ಹೆದ್ದಾರಿ ಮಧ್ಯೆ ಲ್ಯಾಂಡ್ ಆದ ಗಡ್ಕರಿ ಹೆಲಿಕಾಪ್ಟರ್!
೪. 2024ರ ಜನವರಿಯಲ್ಲಿ ಭಕ್ತರಿಗೆ ರಾಮ ಮಂದಿರ ಮುಕ್ತ, ಅಮಿತ್ ಶಾ ಮಹತ್ವದ ಘೋಷಣೆ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಲೋಕಾರ್ಪಣೆಗೆ ಕೋಟ್ಯಂತರ ಭಕ್ತರು ಕಾಯುತ್ತಿರುವ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹತ್ವದ ಘೋಷಣೆ ಮಾಡಿದ್ದಾರೆ. 2024ರ ಜನವರಿಯಲ್ಲಿ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು, ಭಕ್ತರು ಶ್ರೀರಾಮಚಂದ್ರನ ದರ್ಶನ ಮಾಡಬಹುದಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ಕನ್ನಡ ಸಾಹಿತ್ಯ ಸಮ್ಮೇಳನ | 8 ವರ್ಷ ಶಬರಿಯಂತೆ ಕಾದು ಸಮ್ಮೇಳನ ನಡೆಸಲು ಸಜ್ಜಾಗಿದೆ ಏಲಕ್ಕಿ ನಾಡು
ಎರಡು ವರ್ಷದ ಕೊರೊನಾ ಕರಿಛಾಯೆಯ ನಂತರ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಹಾವೇರಿ ನಗರ ಸಂಪೂರ್ಣ ಸಜ್ಜಾಗಿದೆ. ಸಂಪೂರ್ಣ ನಗರ ವಿದ್ಯುತ್ ದೀಪಾಲಂಕಾರ, ಕೆಂಪು-ಹಳದಿ ಕನ್ನಡ ಧ್ವಜಗಳಿಂದ ತುಂಬಿಹೋಗಿದೆ. ಪರಿಷತ್ತಿನ ಇತಿಹಾಸದಲ್ಲೇ ಅತ್ಯಧಿಕ ಮತಗಳಿಂದ ಜಯಗಳಿಸಿದ ಡಾ. ಮಹೇಶ್ ಜೋಶಿಯವರಿಗೆ ಮೊದಲ ಸಮ್ಮೇಳನ ಇದಾದರೆ, ಕೊರೊನಾ ನಂತರದ ಮೊದಲ ಸಮ್ಮೇಳನವೂ ಹೌದು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೬. Panchamasali | 2ಡಿ ಮೀಸಲು ಬೇಡ, 2ಎನಲ್ಲೇ ಕೊಡ್ಬೇಕು: ಜ.12ರೊಳಗೆ ಘೋಷಿಸದಿದ್ದರೆ ಮತ್ತೆ ಹೋರಾಟ
ಪಂಚಮಸಾಲಿ ಸಮುದಾಯಕ್ಕೆ ಮೇಲ್ವರ್ಗದ ಬಡವರ ಮೀಸಲನ್ನು (ಇಡಬ್ಲ್ಯೂಎಸ್) ಬಳಸಿಕೊಂಡು, ಹೊಸ ಪ್ರವರ್ಗ ೨ಡಿ ಅಡಿಯಲ್ಲಿ ಮೀಸಲು ಕಲ್ಪಿಸುವ ಸರಕಾರದ ಪ್ರಸ್ತಾವನೆಯನ್ನು ಪಂಚಮಸಾಲಿ ಸಮುದಾಯದ ರಾಜ್ಯ ಕಾರ್ಯಕಾರಿಣಿ ತಿರಸ್ಕರಿಸಿದೆ. ಸಮುದಾಯದ ಬೇಡಿಕೆಯಂತೆ ಪ್ರವರ್ಗ ೨ಎ ಅಡಿಯಲ್ಲೇ ಮೀಸಲು ನೀಡಬೇಕು ಮತ್ತು ಅದನ್ನು ಜನವರಿ ೧೨ರೊಳಗೆ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಮತ್ತೊಂದು ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಇನ್ನೊಂದು ವರದಿ | ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಯತ್ನಾಳ್, ಆಗಲ್ಲಾಂದ್ರೆ ಕ್ಷಮೆನಾದ್ರೂ ಕೇಳಿ
ಇದನ್ನೂ ಓದಿ | EWS ಆರ್ಥಿಕವಾಗಿ ಹಿಂದುಳಿದವರ ಹಕ್ಕು, ಬೇರೆಯವರಿಗೆ ಹಂಚಲಾಗದು ಎಂದ ಹಾರ್ನಹಳ್ಳಿ
7. ಮಂಗಳೂರು ಸ್ಫೋಟ | ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿಗೆ ಎನ್‌ಐಎ ದಾಳಿ: ಒಬ್ಬ ವಿದ್ಯಾರ್ಥಿ ವಶಕ್ಕೆ
ಮಂಗಳೂರು ಕೊಣಾಜೆ ನಡುಪದವಿನ ಪಿಎ ಎಂಜಿನಿಯರಿಂಗ್ ಕಾಲೇಜಿಗೆ ಗುರುವಾರ ಎನ್‌ಐಎ ತಂಡ ದಾಳಿ ನಡೆಸಿದ್ದು, ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಉಡುಪಿ ಮೂಲದ ರಿಹಾನ್ ಶೇಖ್‌ನನ್ನು ವಶಕ್ಕೆ ಪಡೆದುಕೊಂಡಿದೆ. ಎನ್‌ಐಎ ಅಧಿಕಾರಿಗಳು ಆತನನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೮. ಕೇಂದ್ರದ ಸ್ವದೇಶ ದರ್ಶನ ಯೋಜನೆಗೆ ಮೈಸೂರು, ಹಂಪಿ ಆಯ್ಕೆ, ಹೆಮ್ಮೆಯ ಕ್ಷಣ ಎಂದ ಬೊಮ್ಮಾಯಿ ಕೇಂದ್ರ ಸರ್ಕಾರದ ಸ್ವದೇಶ ದರ್ಶನ ಯೋಜನೆಗೆ ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಹಾಗೂ ವಾಸ್ತುಶಿಲ್ಪದ ನೆಲೆವೀಡು ಹಂಪಿ ಆಯ್ಕೆಯಾಗಿವೆ. ಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ 2015ರಲ್ಲಿ ಯೋಜನೆ ಜಾರಿಗೆ ತಂದಿದ್ದು, ಈಗ ಕರ್ನಾಟಕದ ಎರಡು ಪ್ರವಾಸಿ ತಾಣಗಳು ಆಯ್ಕೆಯಾಗಿವೆ. ಇದರಿಂದ ಎರಡೂ ತಾಣಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೯. ಬೆಳಗಾವಿಯ ರಾಮದುರ್ಗ ಬಳಿ ಮರಕ್ಕೆ ಡಿಕ್ಕಿ ಹೊಡೆದ ಬೊಲೆರೊ: ಆರು ಯಾತ್ರಾರ್ಥಿಗಳು ಮೃತ್ಯು
ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಮಹೀಂದ್ರ ಬೊಲೆರೊ ಗೂಡ್ಸ್ ವಾಹನ ಆಲದ ಮರಕ್ಕೆ ಡಿಕ್ಕಿಯಾಗಿ ಸಂಭವಿಸಿದ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಆರು ಮಂದಿಯ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ೫ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ರಾಮದುರ್ಗಕ್ಕೆ ಸಮೀಪದ ಚುಂಚನೂರು ಗ್ರಾಮದಲ್ಲಿ ಸಂಭವಿಸಿದ್ದ ಈ ಅಪಘಾತದಲ್ಲಿ ಸವದತ್ತಿ ಯಲ್ಲಮ್ಮದೇವಿ ಜಾತ್ರೆಗೆ ತೆರಳುತ್ತಿದ್ದ ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ವಿಸ್ತಾರ Explainer | ಭಾರಿ ಆರ್ಥಿಕ ಸಂಕಷ್ಟದಲ್ಲಿ ನೆರೆ ರಾಷ್ಟ್ರ: ಪಾಪ! ಪಾಕಿಸ್ತಾನ ಪಾಪರ್!
ದೇಶ ವಿಭಜನೆಯಾದ ಕಾಲದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿದ್ದ ಪಾಕಿಸ್ತಾನದ ಇಂದಿನ ಪರಿಸ್ಥಿತಿ ಹೇಗೆ ಬರ್ಬಾದ್ ಆಗಿದೆ ನೋಡಿ! ಶ್ರೀಲಂಕಾ, ಅಪಘಾನಿಸ್ತಾನದ ದುಸ್ಥಿತಿಯ ಹಾದಿಯಲ್ಲಿ ಈಗ ಪಾಕಿಸ್ತಾನದ ಸರದಿ ಉಂಟಾಗಿದೆ. ಕಳೆದ ಕೆಲವು ವರ್ಷಗಳಿಂದ ಸಾಲದ ಹೊಡೆತಕ್ಕೆ ತತ್ತರಿಸಿ ಶಾಪಿಂಗ್ ಮಾಲ್, ಮಾರುಕಟ್ಟೆ ಪ್ರದೇಶಗಳನ್ನೇ ರಾತ್ರಿಯಾಗಲೂ ಕಾಯದಂತೆ ಬಲವಂತವಾಗಿ ಮುಚ್ಚಿಸುತ್ತಿದೆ! ಪೂರ್ಣ ವಿವರಕ್ಕೆ ಈ ಲಿಂಕ್ ಕ್ಲಿಕ್ ಮಾಡಿ