Site icon Vistara News

ವಿಸ್ತಾರ TOP 10 NEWS | ʻವಿಶ್ವಮುಖಿ ಕನ್ನಡʼ ಸಾಹಿತ್ಯ ಸಮ್ಮೇಳನದಿಂದ, ಶಕ್ತಿ ಸೌಧದಡಿ ಮುಚ್ಚಿಹೋಗಲಿರುವ ಹಣದವರೆಗಿನ ಪ್ರಮುಖ ಸುದ್ದಿಗಳಿವು

Top 10 News 06-01-2023

ಬೆಂಗಳೂರು: ಕನ್ನಡ ನಾಡು ನುಡಿಯ ಮಹಾ ಉತ್ಸವವಾಗಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯಲ್ಲಿ ಅದ್ಧೂರಿ ಚಾಲನೆ ದೊರೆಯಿತು. ವಿಧಾನ ಸೌಧದಲ್ಲಿ ಪತ್ತೆಯಾದ ಹಣದ ಮೂಲ ಮುಚ್ಚಿಹೋಗುವ ಎಲ್ಲ ಲಕ್ಷಣಗಳು ಕಾಣಿಸಿಕೊಂಡರೆ, ಎನ್‌ಐಎ ತನಿಖೆ ರಾಜ್ಯದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳ ಇನ್ನಷ್ಟು ಮುಖಗಳನ್ನು ಬಯಲಿಗೆಳೆಯುತ್ತಿದೆ. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಸಾವಿನ ಪ್ರಕರಣ ಮತ್ತೆ ಜೀವ ಪಡೆದು ಈಶ್ವರಪ್ಪ ಅವರಿಗೆ ಸಂಕಟ ತಂದರೆ, ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಕಾಂಗ್ರೆಸ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೇ ಟಾರ್ಗೆಟ್‌ ಮಾಡಿದೆ. ಭಾರತದಲ್ಲಿ ವಿದೇಶಿ ವಿವಿಗಳ ಸ್ಥಾಪನೆ ಸಾಧ್ಯತೆ, ಇನ್ನು ಮನೆಯಲ್ಲೇ ಕೆವೈಸಿ ಮಾಡಬಹುದು ಎಂಬ ಶುಭ ಸುದ್ದಿಗಳು ಸೇರಿ ದಿನದ ಬೆಳವಣಿಗೆಗಳ ಗುಚ್ಛ ವಿಸ್ತಾರ TOP 10 NEWS.

1. ಕನ್ನಡ ಸಾಹಿತ್ಯ ಸಮ್ಮೇಳನ | “ಕನ್ನಡ ಈಗ ವಿಶ್ವಮುಖಿʼ: ಕನ್ನಡಕ್ಕೆ ಹೊಸ ಘೋಷಣೆ ನೀಡಿದ ಡಾ. ದೊಡ್ಡರಂಗೇ ಗೌಡ
ಹಾವೇರಿ:
ಕನ್ನಡಕ್ಕೆ ಅನೇಕ ಆಪತ್ತುಗಳ ಜತೆಗೆ ಅವಕಾಶಗಳೂ ಇದ್ದು, ಸರ್ಕಾರ, ಜನರು ಒಟ್ಟಾಗಿ ಅದರ ದಾರಿಗಳನ್ನು ಕಂಡುಕೊಳ್ಳೋಣ ಎಂಬ ಸಂದೇಶವನ್ನು ನೀಡಿದ ಡಾ. ದೊಡ್ಡರಂಗೇಗೌಡ, ʼಕನ್ನಡ ಈಗ ವಿಶ್ವಮುಖಿʼ ಎಂಬ ಹೊಸ ಘೋಷಣೆಯನ್ನು ನೀಡಿದರು. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಡಾ. ದೊಡ್ಡರಂಗೇಗೌಡರು ಭಾಷಣ ಮಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಭಾಷಣದ ಪೂರ್ಣ ಪಾಠ | ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡರ ಪೂರ್ಣ ಲಿಖಿತ ಭಾಷಣ ಇಲ್ಲಿದೆ

೨. ಕನ್ನಡ ಸಾಹಿತ್ಯ ಸಮ್ಮೇಳನ | ಹಾವೇರಿಯನ್ನು ರಂಗೇರಿಸಿದ ಸಮ್ಮೇಳನಾಧ್ಯಕ್ಷರ ಮೆರವಣಿಗೆ
ಎಂಭತ್ತಾರನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹಾವೇರಿಯಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಸಮ್ಮೇಳನಾಧ್ಯಕ್ಷ ಡಾ. ದೊಡ್ಡರಂಗೇಗೌಡನ್ನು ಹೊತ್ತ ಭವ್ಯ ರಥವು ಹಾವೇರಿ ನಗರದಾದ್ಯಂತ ಸಂಚರಿಸಿ ಸಂಚಲನ ಮೂಡಿಸಿತು. ರಾಷ್ಟ್ರಧ್ವಜವನ್ನು ಜಿಲ್ಲಾ ಉಸ್ತುವಾರಿ ಸಚಿವ ಅರಬೈಲ್‌ ಶಿವರಾಮ್‌ ಹೆಬ್ಬಾರ್‌, ನಾಡಧ್ವಜವನ್ನು ಹಾವೇರಿ ಕಸಾಪ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಹಾಗೂ ಪರಿಷತ್ತಿನ ಧ್ವಜವನ್ನು ಕಸಾಪ ಅಧ್ಯಕ್ಷ ಡಾ. ಮಹೇಶ್‌ ಜೋಶಿ ಆರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಸಮ್ಮೇಳನದ ಇತರ ಪ್ರಮುಖ ವರದಿಗಳು
ಆನ್‌ಲೈನ್ ಪೇಮೆಂಟ್‌ ಸ್ಥಗಿತವಾಗಿ ಲಕ್ಷಾಂತರ ರೂ. ನಷ್ಟ ಅನುಭವಿಸುತ್ತಿರುವ ಪುಸ್ತಕ ಮಳಿಗೆಗಳು
ಶೀಘ್ರದಲ್ಲೇ ಕನ್ನಡ ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

3. ವಿಧಾನ ಸೌಧದಲ್ಲಿ ಹಣ ಪತ್ತೆ ಪ್ರಕರಣ: ಎಂಜಿನಿಯರ್‌ಗೆ ರಿಲೀಫ್‌, ಹಣ ನನ್ನದಲ್ಲ ಎಂದ ಸಿ.ಸಿ. ಪಾಟೀಲ್‌
ರಾಜಧಾನಿಯ ಶಕ್ತಿ ಸೌಧವಾದ ವಿಧಾನ ಸೌಧದಲ್ಲಿ ೧೦.೫ ಲಕ್ಷ ರೂ. ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ದಿನವಿಡೀ ಹಲವು ಬೆಳವಣಿಗೆಗಳು, ಆರೋಪ-ಪ್ರತ್ಯಾರೋಪಗಳು ನಡೆದರೂ ಅಂತಿಮವಾಗಿ ಇದು ಯಾವ ತಾತ್ವಿಕ ಅಂತ್ಯವನ್ನು ಕಾಣದೆಯೇ ಮುಚ್ಚಿಹೋಗುವ ಲಕ್ಷಣಗಳು ಕಾಣಿಸುತ್ತಿವೆ. ಹಣವನ್ನು ಹಿಡಿದುಕೊಂಡ ಬಂದಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗೆ ಕೋರ್ಟ್‌ ಜಾಮೀನು ನೀಡಿದೆ. ಸಚಿವ ಸಿ.ಸಿ. ಪಾಟೀಲ್‌ ಹಣ ನನ್ನದಲ್ಲ ಎನ್ನುವುದರ ಜತೆಗೆ ಈ ರೀತಿ ನಡೆಯುವುದು ಮೊದಲಲ್ಲ ಎನ್ನುವ ಮೂಲಕ ವಿಧಾನಸೌಧದ ಭ್ರಷ್ಟಾಚಾರವನ್ನು ಅಧಿಕೃತಗೊಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೪. ಗುತ್ತಿಗೆದಾರನ ಸಾವಿನ ಪ್ರಕರಣಕ್ಕೆ ಮರುಜೀವ: ಮಾಜಿ ಸಚಿವ ಈಶ್ವರಪ್ಪಗೆ ಮತ್ತೆ ಸಂಕಷ್ಟ?
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸರು ಸಲ್ಲಿಸಿರುವ ಬಿ-ರಿಪೋರ್ಟ್‌ನ್ನು ಮರುಪರಿಶೀಲನೆ ನಡೆಸುವಂತೆ ಜನಪ್ರತಿನಿಧಿ ನ್ಯಾಯಾಲಯ ಆದೇಶ ನೀಡುವುದರೊಂದಿಗೆ ಈ ಪ್ರಕರಣ ಮರು ಜೀವ ಪಡೆದುಕೊಂಡಿದೆ. ಇದು ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ (KS Eshwarappa) ಅವರಿಗೆ ಸಂಕಷ್ಟ ತರುವ ಸಾಧ್ಯತೆ ಕಂಡುಬಂದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಶಿವಮೊಗ್ಗ ಟ್ರಯಲ್‌ ಬ್ಲಾಸ್ಟ್‌; NIAಯಿಂದ ಮತ್ತೊಬ್ಬ ವಶಕ್ಕೆ, ಮೂವರ ವಿಚಾರಣೆ
ಶಿವಮೊಗ್ಗದಲ್ಲಿ ಕಳೆದ ಸೆಪ್ಟೆಂಬರ್‌ ೧೯ರಂದು ಬೆಳಕಿಗೆ ಬಂದಿದ್ದ ಟ್ರಯಲ್‌ ಬ್ಲಾಸ್ಟ್‌ ಸಹಿತ ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಎನ್‌ಐಎ ಪೊಲೀಸರು ಮತ್ತೊಬ್ಬನನ್ನು ವಶಕ್ಕೆ ಪಡೆದುಕೊಂಡಿದ್ದು, ಒಟ್ಟು ಮೂವರನ್ನು ವಶಕ್ಕೆ ಪಡೆದಂತಾಗಿದೆ. ಗುರುವಾರ ಮಂಗಳೂರಿನ ಪಿಎ ಎಂಜಿನಿಯರಿಂಗ್‌ ಕಾಲೇಜಿಗೆ ದಾಳಿ ನಡೆಸಿದ್ದ ಎನ್‌ಐಎ ಉಡುಪಿ ಮೂಲದ ವಿದ್ಯಾರ್ಥಿ ರೇಶಾನ್‌ ತಾಜುದ್ದೀನ್‌ ಶೇಖ್‌ ಹಾಗೂ ಶಿವಮೊಗ್ಗದಲ್ಲಿ ಹುಜೇರ್‌ ಫರಾನ್‌ ಬೇಗ್‌ ಎಂಬಾತನನ್ನು ವಶಕ್ಕೆ ಪಡೆದುಕೊಂಡಿತ್ತು. ಈ ಮಧ್ಯೆ ಹೊನ್ನಾಳಿಯಲ್ಲಿ ನದೀಮ್‌ನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಸ್ಯಾಂಟ್ರೋ ರವಿ ಗೊತ್ತೇ ಇಲ್ಲ ಅಂತೀರಲ್ಲಾ, ನಿಮ್ಮ ಪುತ್ರ ಸ್ವೀಟ್‌ ಬ್ರದರ್‌ ಹೇಗೆ?: ಬೊಮ್ಮಾಯಿಗೆ ಕಾಂಗ್ರೆಸ್‌ ಪ್ರಶ್ನೆ
ಬೆಂಗಳೂರು: ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಮಾಡಿದ ಮತ್ತು ವಂಚಿಸಿದ ಆರೋಪದ ಮೂಲಕ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿರುವ ಮೈಸೂರಿನ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿ ಕೇಸ್‌ ಈಗ ಎಲ್ಲ ರಾಜಕಾರಣಿಗಳ ನಿದ್ದೆಗೆಡಿಸಿದೆ. ಅದರಲ್ಲೂ ಮುಖ್ಯವಾಗಿ ಬಿಜೆಪಿಯ ಹಲವು ನಾಯಕರ ಜತೆಗೆ ಸ್ಯಾಂಟ್ರೋ ರವಿ ಆತ್ಮೀಯವಾಗಿ ಓಡಾಡಿಕೊಂಡಿರುವುದು ಕಾಂಗ್ರೆಸ್‌ಗೆ ದಾಳವಾಗಿ ಲಭಿಸಿದೆ. ಅದು ಈಗ ನೇರವಾಗಿ ಸಿಎಂ ಬೊಮ್ಮಾಯಿ ಅವರನ್ನೇ ಟಾರ್ಗೆಟ್‌ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ವರದಿಯನ್ನೂ ಓದಿ | ಎಚ್‌ಡಿಕೆಯನ್ನು ಸೂಳೆಗೆ ಹೋಲಿಸಿದ್ರಾ ಸಚಿವ ಎಸ್‌ಟಿ ಸೋಮಶೇಖರ್!

೭. ಭಾರತದಲ್ಲಿ ಫಾರಿನ್ ಯುನಿವರ್ಸಿಟಿ? ಯಾಲೆ, ಆಕ್ಸ್‌ಫರ್ಡ್ ವಿವಿಯಿಂದ ಪದವಿ ಪಡೆಯಬಹುದು!
ನವದೆಹಲಿ: ಜಗತ್‌ಪ್ರಸಿದ್ಧ ಯಾಲೆ, ಆಕ್ಸ್‌ಫರ್ಡ್ ಮತ್ತು ಸ್ಟ್ಯಾನ್‌ಫೋರ್ಡ್‌ಗಳಂಥ ವಿದೇಶಿ ವಿಶ್ವವಿದ್ಯಾಲಯಗಳು (Foreign university) ಇನ್ನು ಮುಂದೆ ಭಾರತದಲ್ಲೂ ತಮ್ಮ ಕಾರ್ಯಾಚರಣೆಯನ್ನು ಶುರು ಮಾಡಲಿವೆ. ಭಾರತದಲ್ಲಿ ವಿದೇಶಿ ವಿವಿಗಳನ್ನು ಶುರು ಮಾಡುವುದಕ್ಕೆ ಕೇಂದ್ರ ಸರ್ಕಾರವು ಶೀಘ್ರವೇ ಒಪ್ಪಿಗೆ ನೀಡುವ ಸಾಧ್ಯತೆಗಳಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮. 108 SCAM | ಆರೋಗ್ಯ ಸಚಿವರ ಹೆಸರಲ್ಲಿ ಕೋಟಿ ಕೋಟಿ ವಸೂಲಿ ಮಾಡಿದ 108 ಆಂಬ್ಯುಲೆನ್ಸ್‌ ರಾಜ್ಯಾಧ್ಯಕ್ಷ?
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರಿದ ಆರೋಗ್ಯ ಕವಚ ೧೦೮ ಆಂಬ್ಯುಲೆನ್ಸ್‌ ಸೇವೆ ನೀಡುತ್ತಿರುವ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಹಳ್ಳೂರು ಅವರ ಮೇಲೆ ಕೋಟ್ಯಂತರ ವಸೂಲಿಯ (108 SCAM) ಗಂಭೀರ ಆರೋಪ ಕೇಳಿಬಂದಿದೆ. ಆರೋಗ್ಯ ಸಚಿವರಿಗೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತದೆ ಎಂಬ ಕಾರಣ ನೀಡಿದ್ದು ಚರ್ಚೆಗೆ ಕಾರಣವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮಾರಾಮಾರಿ ನಡುವೆ ದಿಲ್ಲಿ ಪಾಲಿಕೆ ಸಭೆ ಮುಂದೂಡಿಕೆ, ನಡೆಯಲಿಲ್ಲ ಮೇಯರ್ ಎಲೆಕ್ಷನ್!
ನವದೆಹಲಿ: ದಿಲ್ಲಿ ಮೇಯರ್ ಚುನಾವಣೆಯನ್ನು (Delhi Mayor Polls) ಶುಕ್ರವಾರದಂದು ನಿಗದಿ ಮಾಡಲಾಗಿತ್ತು. ಅದರಂತೆ, ಬೆಳಗ್ಗೆ ಪಾಲಿಕೆ ಸಭೆ ಆರಂಭವಾಗುತ್ತಿದ್ದಂತೆ, ಸ್ಪೀಕರ್ ನೇಮಕ ವಿಷಯದಲ್ಲಿ ಆಮ್ ಆದ್ಮಿ ಪಾರ್ಟಿ(AAP) ಮತ್ತು ಬಿಜೆಪಿ (BJP) ಸದಸ್ಯರು ಘೋಷಣೆ ಕೂಗಿ, ಗಲಾಟೆ ನಡೆಸಿದರು. ಕಲಾಪ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದ್ದರಿಂದ, ಮೇಯರ್ ಆಯ್ಕೆ ಮುಂದಕ್ಕೆ ಹಾಕಲಾಗಿದೆ! ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. KYC Update | ಕೆವೈಸಿ ಅಪ್‌ಡೇಟ್‌ ಮಾಡಲು ಬ್ಯಾಂಕ್‌ಗೆ ಹೋಗಬೇಕಿಲ್ಲ: ಆರ್‌ಬಿಐ
ಮುಂಬಯಿ: ಬ್ಯಾಂಕ್‌ ಖಾತೆದಾರರು ಈಗಾಗಲೇ ಸೂಕ್ತ ಗುರುತಿನ ದಾಖಲೆ ನೀಡಿದ್ದರೆ ಹಾಗೂ ವಿಳಾಸ ಬದಲಾಗಿರದಿದ್ದರೆ, ಕೆವೈಸಿ (Know your customer) ಅಪ್‌ಡೇಟ್‌ ಮಾಡುವ ಸಲುವಾಗಿ ಬ್ಯಾಂಕ್‌ ಶಾಖೆಗೆ ಹೋಗಬೇಕಾದ ಅಗತ್ಯ ಇಲ್ಲ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (KYC Update) ತಿಳಿಸಿದೆ. ಪೂರ್ಣ ವಿವರಗಳಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಇತರ ಪ್ರಮುಖ ಸುದ್ದಿಗಳು
– ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹಿಂದು ಹುಡುಗಿ ಜತೆ ತಿರುಗಾಡುತ್ತಿದ್ದ ಮುಸ್ಲಿಂ ಯುವಕನಿಗೆ ಥಳಿತ
Plane Crash | ತರಬೇತಿ ವಿಮಾನ ಪತನ, ಹಿರಿಯ ಪೈಲಟ್ ಸಾವು, ಮತ್ತೊಬ್ಬರಿಗೆ ತೀವ್ರ ಗಾಯ
ಬಸವೇಶ್ವರ ನಗರದ ಖಾಸಗಿ ಶಾಲೆಗೆ ಬಾಂಬ್‌ ಬೆದರಿಕೆ ಇ-ಮೇಲ್‌; ಬಾಂಬ್‌ ಸ್ಕ್ವಾಡ್‌ನಿಂದ ಪರಿಶೀಲನೆ
20 ಕೋಟಿ ಜನರ ಇ-ಮೇಲ್‌ ಸೋರಿಕೆ! ನಿಮ್ಮ ಇ-ಮೇಲ್‌ ಸುರಕ್ಷಿತವಾಗಿದೆಯೇ ಎಂದು ಹೀಗೆ ತಿಳಿದುಕೊಳ್ಳಿ

Exit mobile version