ದೇಶದಲ್ಲಿ ೫ಜಿ ಜಮಾನಾ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾತು ಕೊಟ್ಟಂತೆಯೇ ಅಕ್ಟೋಬರ್ ೧ರಂದು ವೇಗದ ಇಂಟರ್ನೆಟ್ ಯುಗದ ಬಟನ್ ಪ್ರೆಸ್ ಮಾಡಿದರು. ಇನ್ನೊಂದು ಕಡೆ ಕಾಂಗ್ರೆಸ್‌ಗೆ ಮಲ್ಲಿಕಾರ್ಜುನ ಖರ್ಗೆ ಅವರು ಯಜಮಾನರಾಗುವ ಸಾಧ್ಯತೆ ಕಂಡುಬಂದಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಹೆಚ್ಚಿನ ಅಬ್ಬರವಿಲ್ಲದೆ ಮುನ್ನಡೆಯುತ್ತಿದೆ. ಇತ್ತ ಎಚ್.ಡಿ ಕುಮಾರಸ್ವಾಮಿ ಮತ್ತು ಸಿ.ಪಿ. ಯೋಗೇಶ್ವರ್ ಅವರ ಅಬ್ಬರಕ್ಕೆ ರಾಮನಗರ ಉದ್ರಿಕ್ತಗೊಂಡಿದೆ. ಇನ್ನು ಏಷ್ಯಾ ಕಪ್ ಕ್ರಿಕೆಟ್ ಮೊದಲ ಪಂದ್ಯದಲ್ಲಿ ಭಾರತದ ವನಿತೆಯರ ಗೆಲುವು, ಕೇರಳದಲ್ಲಿ ಆರೆಸ್ಸೆಸ್ ನಾಯಕರಿಗೆ ಭದ್ರತೆ ಹೆಚ್ಚಳವೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
1. ದೇಶದಲ್ಲಿ ಶುರುವಾಯಿತು ೫ಜಿ ಜಮಾನಾ: ವೇಗದ ಇಂಟರ್ನೆಟ್‌ಗೆ ಪ್ರಧಾನಿ ಮೋದಿ ಚಾಲನೆ
ಈಗ ದೇಶದಲ್ಲಿ ಬಳಕೆಯಲ್ಲಿರುವ ೪ಜಿ ಇಂಟರ್ನೆಟ್‌ಗಿಂತ ೧೦ ಪಟ್ಟು ವೇಗದ ೫ಜಿ ತಂತ್ರಜ್ಞಾನ (5G technology) ಜಮಾನಾಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ನರೇಂದ್ರ ಮೋದಿ 5 ಜಿ ಸೇವೆ ಪ್ರಸ್ತಾಪ ಮಾಡಿದ್ದರು. ಅಕ್ಟೋಬರ್ ವೇಳೆಗೆ ಭಾರತದಲ್ಲಿ 5ಜಿ ಇಂಟರ್ನೆಟ್ ಲಭ್ಯವಾಗಲಿದೆ ಎಂದಿದ್ದರು. ಆ ಮಾತನ್ನು ಉಳಿಸಿಕೊಂಡಿದ್ದಾರೆ. ಪೂರ್ಣ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
2. ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ತಂತ್ರಜ್ಞಾನ ಸಿಗುತ್ತದಾ?
೫ಜಿ ತಂತ್ರಜ್ಞಾನ ಮೊದಲ ಹಂತದಲ್ಲಿ ದೇಶದ ೧೩ ನಗರಗಳಲ್ಲಿ ಮಾತ್ರ ಸಿಗಲಿದೆ. ಬಳಿಕ ಎಲ್ಲ ಕಡೆಗೆ ವಿಸ್ತರಿಸಲಿದೆ. ಹಾಗಿದ್ದರೆ ಮೊದಲ ಹಂತದಲ್ಲಿ ೫ಜಿ ಲಭ್ಯವಾಗುವ ನಗರಗಳಲ್ಲಿ ಬೆಂಗಳೂರು ಇದೆಯಾ ಎನ್ನುವ ಪ್ರಶ್ನೆಗೆ ಉತ್ತರ: ಹೌದು, ಬೆಂಗಳೂರಿನಲ್ಲೂ ಮೊದಲ ಹಂತದಲ್ಲೇ ೫ಜಿ ಇಂಟರ್ನೆಟ್ ಸಿಗಲಿದೆ. ಹಾಗಿದ್ದರೆ ಉಳಿದ ನಗರಗಳು ಯಾವುವು? ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. 5G ತಂತ್ರಜ್ಞಾನ: ಏನಿದು ಇಂಟರ್‌ನೆಟ್ ಕ್ರಾಂತಿ? ಏನಿದರ ಅನುಕೂಲ? ೪ಜಿಗಿಂತ ಹೇಗೆ ಭಿನ್ನ?
೫ ಜಿ ತಂತ್ರಜ್ಞಾನ ದೇಶವನ್ನು ಪ್ರವೇಶಿಸಿದೆ. ಇದು ವೇಗದ ಇಂಟರ್ನೆಟ್ ಎಂದು ಎಲ್ಲರೂ ಹೇಳುತ್ತಾರೆ. ಹಾಗಿದ್ದರೆ ಇದರ ವೇಗ ಎಷ್ಟು? ಈ ಹೆಚ್ಚುವರಿ ವೇಗದಿಂದ ನಮಗೆ ಅನುಕೂಲಗಳೇನು? ೫ಜಿ ಸಿಗದಿರುವ ಪ್ರದೇಶಗಳಲ್ಲಿ ಏನಾಗುತ್ತದೆ? ೫ಜಿ ಇಂಟರ್ನೆಟ್ ಸಿಗಬೇಕು ಎಂದರೆ ನಮ್ಮ ಮೊಬೈಲ್ ಚೇಂಜ್ ಮಾಡಬೇಕಾ? ಇರೋ ಮೊಬೈಲ್‌ನಲ್ಲೇ ಸಿಗುತ್ತದೆಯೇ? ಇಂಥ ಹಲವು ಕುತೂಹಲಕಾರಿ ಪ್ರಶ್ನೆಗಳಿಗೆ ನಾವು ಉತ್ತರ ನೀಡಿದ್ದೇವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
೪. ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷರಾಗೋದು ಬಹುತೇಕ ಖಚಿತ
ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದ ಜಾರ್ಖಂಡ್ ಕಾಂಗ್ರೆಸ್ ಹಿರಿಯ ನಾಯಕ ಕೆ.ಎನ್.ತ್ರಿಪಾಠಿ ನಾಮಪತ್ರ ತಿರಸ್ಕೃತಗೊಂಡಿದೆ. ಹಾಗಾಗಿ ಈಗ ಕಣದಲ್ಲಿ ಉಳಿದಿರುವುದು ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ಮಾತ್ರ. ಈ ನಡುವೆ, ಖರ್ಗೆ ಅವರು ರಾಜ್ಯಸಭೆಯ ಕಾಂಗ್ರೆಸ್ ಪಕ್ಷದ ನಾಯಕನ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಹೀಗಾಗಿ ಅವರೇ ಅಧ್ಯಕ್ಷರಾಗುತ್ತಾರೆ ಎನ್ನುವುದು ಬಹುತೇಕ ಫೈನಲ್ ಆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಓದಿ
-ಖರ್ಗೆ ಅಧ್ಯಕ್ಷರಾದರೆ ಕಾಂಗ್ರೆಸ್ ಪಕ್ಷ ಮತ್ತು ರಾಜ್ಯದಲ್ಲಿ ಉಂಟಾಗಬಹುದಾದ ಪರಿಣಾಮಗಳ ಚಿತ್ರಣಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
೫. ಗುದ್ದಲಿ ಪೂಜೆ ಗದ್ದಲ: ಎಚ್‌ಡಿಕೆ-ಸಿ.ಪಿ. ಯೋಗೇಶ್ವರ್ ನಡುವಿನ ಫೈಟ್‌ಗೆ ರಾಮನಗರ ಉದ್ವಿಗ್ನ
ರಾಮನಗರ ಜಿಲ್ಲೆಯ 5 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಕ್ಷೇತ್ರದ ಶಾಸಕರಾಗಿರುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರು ಕೆರಳಿ ಗದ್ದಲವೆಬ್ಬಿಸಿದರು. ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್, ಸಚಿವ ಅಶ್ವತ್ಥ ನಾರಾಯಣ ಅವರನ್ನು ತಡೆಯಲಾದರೆ, ಯೋಗೇಶ್ವರ್ ಕಾರಿನ ಮೇಲೆ ಕಲ್ಲು ತೂರಿ, ಮೊಟ್ಟೆ ಎಸೆಯಲಾಗಿದೆ. ಉದ್ರಿಕ್ತ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲಾಡಳಿತ ಮುಂದೂಡಿದೆ. ಪೂರ್ಣ ವರದಿಗೆ ಈ ಕ್ಲಿಕ್ ಮಾಡಿ.
6. ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸಿಗರ ಹುಮ್ಮಸ್ಸಿನ ಹೆಜ್ಜೆ: ಆರೆಸ್ಸೆಸ್ ಮೇಲೆ ಪ್ರಹಾರ
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯ ರಾಜ್ಯದಲ್ಲಿ ಎರಡನೇ ದಿನವನ್ನು ಪೂರ್ಣಗೊಳಿಸಿದೆ. ಭಾರಿ ಸಂಖ್ಯೆಯ ಕಾರ್ಯಕರ್ತರು, ನಾಯಕರು ಹೆಚ್ಚಿನ ಸದ್ದುಗದ್ದಲವಿಲ್ಲದೆ ಹುಮ್ಮಸ್ಸಿನ ಹೆಜ್ಜೆ ಇಡುತ್ತಿದ್ದಾರೆ. ಯಾತ್ರೆಯ ನಡುವೆ ನಡೆದ ಸಂವಾದದಲ್ಲಿ ಆರೆಸ್ಸೆಸ್ ಮೇಲೆ ಪ್ರಹಾರ ನಡೆಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೭. ಪಿಎಫ್ಐ ಹಿಟ್ಲಿಸ್ಟ್: ಕೇರಳ ಆರ್ಎಸ್ಎಸ್ನ ಐವರು ಪ್ರಮುಖರಿಗೆ ಕೇಂದ್ರದಿಂದ ವೈ ಶ್ರೇಣಿ ಭದ್ರತೆ
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಗ್ರ ಸಂಘಟನೆಯಿಂದ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇರಳದ ಐವರು ಆರ್‌ಎಸ್‌ಎಸ್ ನಾಯಕರಿಗೆ ಕೇಂದ್ರ ಸರ್ಕಾರ ವೈ (Y)ಶ್ರೇಣಿಯ ಭದ್ರತೆಯನ್ನು ನೀಡಿದೆ. ಹೀಗೆ ಹಿಟ್ಲಿಸ್ಟ್ನಲ್ಲಿ ಇರುವವರಲ್ಲಿ ಆರ್ಎಸ್ಎಸ್ನ ಕೇರಳದ ಐವರು ಪ್ರಮುಖ ನಾಯಕರ ಹೆಸರುಗಳೂ ಇವೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ.
೮. ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʻತುಷ್ಟೀಕರಣʼಕ್ಕೆ ಹೊದಿಸಿದ ಕವಚ
ಸೆಕ್ಯುಲರಿಸಂ ಎನ್ನುವುದು ಪಶ್ಚಿಮ ಜಗತ್ತಿಗೆ ಅವಶ್ಯಕವಾಗಿತ್ತು. ಅಲ್ಲಿನ ಚರ್ಚ್ ದಬ್ಬಾಳಿಕೆಯನ್ನು ಹಿಮ್ಮೆಟ್ಟಿಸಬೇಕಿತ್ತು. ಅಲ್ಲಿನ ಸ್ಥಳೀಯ ಸಮಸ್ಯೆಗೆ ಸ್ಥಳೀಯ ಪರಿಹಾರ ಅದಾಗಿತ್ತು. ಆದರೆ ಅದನ್ನು ಕೃತಕವಾಗಿ ಭಾರತಕ್ಕೆ ತಂದಿದ್ದಷ್ಟೆ ಅಲ್ಲದೆ, ಅದನ್ನು ತಪ್ಪು ವ್ಯಾಖ್ಯಾನ ಮಾಡಲಾಯಿತು. ಜಾತ್ಯತೀತತೆ ಎಂದರೆ ಅಲ್ಪಸಂಖ್ಯಾತರಿಗೆ ಸವಲತ್ತುಗಳನ್ನು ನೀಡುವುದು ಎಂದು ಭ್ರಮಿಸಲಾಯಿತು. ಇದೇ ಕಾರಣಕ್ಕೆ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ, ಈ ದೇಶದ ಸಂಪನ್ಮೂಲಗಳನ್ನು ಬಳಸಿಕೊಳ್ಳುವಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ಎಂದು ಹೇಳಿದ್ದರು. ಇದನ್ನು ಜಾತ್ಯತೀತತೆ ಎಂದು ಬಣ್ಣಿಸಲಾಗಿತ್ತು. ಅಸಲಿಗೆ ಭಾರತದಲ್ಲಿ ಜಾತ್ಯತೀತತೆ ಎನ್ನುವುದು ಅಪೀಸ್ಮೆಂಟ್ (ತುಷ್ಟೀಕರಣ) ಎಂಬ ನಕಾರಾತ್ಮಕ ಪದಕ್ಕೆ ಹೊದಿಸಿರುವ ಸಕಾರಾತ್ಮಕ ಹೊದಿಕೆ. ಸೆಕ್ಯುಲರಿಸಂ ಹೆಸರಿನಲ್ಲಿ ನಡೆದಿದ್ದೆಲ್ಲ ತುಷ್ಟೀಕರಣವೇ- ಭಾರತದ ಜಾತ್ಯತೀತತೆಯ ಮುಖವಾಡಗಳನ್ನು ಕಳಚಿದ್ದಾರೆ ವಿಸ್ತಾರ ನ್ಯೂಸ್‌ನ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ʻಸವಿಸ್ತಾರʼ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
೯. ಭೂತ, ಪ್ರೇತ ಇತ್ಯಾದಿ ಭಯ ದೂರವಾಗಲು ನವರಾತ್ರಿಯ 7ನೇ ದಿನ ಈ ದೇವಿಯನ್ನು ಪೂಜಿಸಿ
ನವರಾತ್ರಿಯ ಏಳನೇ ದಿನ ದುರ್ಗೆಯನ್ನು ಕಾಲರಾತ್ರೀ ಸ್ವರೂಪದಿಂದ (ಸಪ್ತಮಂ ಕಾಲರಾತ್ರಿಶ್ಚ) ಆರಾಧಿಸಲಾಗುತ್ತದೆ. ಈ ದೇವಿಯ ಶರೀರದ ಬಣ್ಣವು ದಟ್ಟವಾದ ಅಂಧಕಾರದಂತೆ ಪೂರ್ಣವಾಗಿ ಕಪ್ಪಾಗಿದೆ. ರಕ್ತಬೀಜಾಸುರನನ್ನು ಕೊಲ್ಲುವ ಸಲುವಾಗೇ ಮಹಾಕಾಳಿಯ ರೂಪದಲ್ಲಿ ಅವತರಿಸುತ್ತಾಳೆ ದುರ್ಗೆ. ರಕ್ತಬೀಜಾಸುರನ ರಕ್ತ ಕೆಳಗೆ ಬೀಳದಂತೆ ಅದನ್ನು ಕುಡಿಯುತ್ತಿದ್ದ ತಾಯಿ ಮದದಿಂದ ನರ್ತಿಸುತ್ತಿರುತ್ತಾಳೆ. ಶಿವನ ಎದೆಯ ಮೇಲೆ ಕಾಲಿಟ್ಟ ನಂತರವಷ್ಟೇ ಆಕೆ ಸಹಜ ಸ್ಥಿತಿಗೆ ಬಂದಳಂತೆ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ.
೧೦. ಏಷ್ಯಾ ಕಪ್‌ನಲ್ಲಿ ಭಾರತದ ವನಿತೆಯರ ಶುಭಾರಂಭ, ಲಂಕಾ ವಿರುದ್ಧ 41 ರನ್ ಜಯ
ಮಹಿಳೆಯರ ಏಷ್ಯಾ ಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಶ್ರೀಲಂಕಾ ಬಳಗದ ವಿರುದ್ಧ ೪೧ ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಟಿ೨೦ ಮಾದರಿಯಲ್ಲಿ ನಡೆಯುತ್ತಿರುವ ಹಾಲಿ ಆವೃತ್ತಿಯ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೬ ವಿಕೆಟ್ ಕಳೆದುಕೊಂಡು ೧೫೦ ರನ್ ಬಾರಿಸಿದರೆ, ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ೧೮.೨ ಓವರ್‌ಗಳಲ್ಲಿ ೧೦೯ ರನ್‌ಗಳಿಗೆ ಔಟ್ ಆಯಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಮಿಸ್ ಮಾಡಲೇಬಾರದ ಇತರ ಪ್ರಮುಖ ಸುದ್ದಿ ಮತ್ತು ಲೇಖನಗಳು
೧. ರಾಜ ಮಾರ್ಗ ಅಂಕಣ | ಎಷ್ಟು ವೈವಿಧ್ಯಮಯ, ಎನಿತು ವಿಸ್ಮಯವೀ ಜಗತ್ತು! ಇಲ್ಲಿವೆ 40 ಅದ್ಭುತ ಸಂಗತಿಗಳು!
೨. Motivational story | 20000 ರೂ. ಹೆಚ್ಚುವರಿ ಹಣವನ್ನು ಹಿಂದಿರುಗಿಸಿದಾಗ ಸಿಕ್ಕಿದ ಸಂತೋಷಕ್ಕೆ ಕೋಟಿ ಮೌಲ್ಯ!
3. ವಾರದ ವ್ಯಕ್ತಿಚಿತ್ರ | ಮುಸೋಲಿನಿ ಅಭಿಮಾನಿ ಮೆಲೋನಿ ಇಟಲಿಯ ಪ್ರಧಾನಿ
೪. ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಯಂತೆ ನಾಡಗೀತೆ ಕೂಡಾ ಮೊಳಗುವಂತೆ ಮಾಡಿ: ಸಿಎಂಗೆ ಮನವಿ
5. Swachh Survekshan 2022 | ಭಾರತದ ಅತ್ಯಂತ ಸ್ವಚ್ಛ ನಗರ ಇಂದೋರ್; 8ನೇ ಸ್ಥಾನಕ್ಕೆ ಕುಸಿದ ಮೈಸೂರು