Site icon Vistara News

ವಿಸ್ತಾರ TOP 10 NEWS | ಮೊಟ್ಟೆ ಎಸೆದವನ ಪಾರ್ಟಿ ವಾರ್‌ನಿಂದ ಅನಿರುದ್ಧ್ ಬ್ಯಾನ್‌ವರೆಗಿನ ಸುದ್ದಿಗಳಿವು

Vistara Top 10 News

ಬೆಂಗಳೂರು: ಶನಿವಾರ ದಿನವಿಡೀ ರಾಜ್ಯದೆಲ್ಲೆಡೆ ಬರೀ ರಾಜಕೀಯದ್ದೇ ಮೇಲಾಟ. ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಎಸೆದವ ಯಾವ ಪಾರ್ಟಿ ಎಂಬ ವಿಚಾರದಲ್ಲಿ ಕ್ಷಣಕ್ಕೊಂದು ತಿರುವು. ಅವನು ತಾನೇ ಸ್ವತಃ ʻನಾನು ಕಾಂಗ್ರೆಸ್‌ ಕಾರ್ಯಕರ್ತʼ ಎಂದರೂ ಬಿಡದ ಕಾಂಗ್ರೆಸ್‌ ಪಾರ್ಟಿಯವರು ಅವನ ಹಿನ್ನೆಲೆ ಜಾಲಾಡಿ ʻಇವನು ಬಿಜೆಪಿ ನೋಡಿʼ ಎಂದು ದಾಖಲೆ ನೀಡಿದರು. ಲಿಂಗಾಯತ ಧರ್ಮ ವಿವಾದಕ್ಕೆ ಸಂಬಂಧಿಸಿದ ʻಪಶ್ಚಾತ್ತಾಪʼಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟರು. ಈ ನಡುವೆ ಕಿರುತೆರೆಯಲ್ಲಿ ಹುಟ್ಟಿಕೊಂಡ ರಾಜಕೀಯದಲ್ಲಿ ʻಜೊತೆಜೊತೆಯಲಿʼ ಇದ್ದ ನಾಯಕ ನಟ ಅನಿರುದ್ಧ್ ಅವರಿಗೆ ಎರಡು ವರ್ಷ ಅಮಾನತು ಶಿಕ್ಷೆ ವಿಧಿಸಲಾಗಿದೆ. ಉಳಿದಂತೆ ಕೃಷ್ಣ ಜನ್ಮಾಷ್ಟಮಿ-ವಿಟ್ಲ ಪಿಂಡಿ ಸಂಭ್ರಮ, ಗಣೇಶೋತ್ಸವ ಗಲಾಟೆಗಳು ದಿನವಿಡೀ ಸುದ್ದಿಗಳಾಗಿ ಓಡಾಡಿದವು. ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರ ಹೊಸ ಅಂಕಣ ʻಸವಿಸ್ತಾರʼ ಎಲ್ಲೆಡೆ ಸದ್ದು ಮಾಡಿತು.

೧. ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಹೊಡೆದವನು ಕಾಂಗ್ರೆಸ್ಸಾ? ಬಿಜೆಪಿನಾ?
ಕಾಂಗ್ರೆಸ್‌ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಕೊಡಗಿಗೆ ಭೇಟಿ ನೀಡಿದ್ದಾಗ ಅವರ ಕಾರಿಗೆ ಮೊಟ್ಟೆ ಎಸೆದ ಸೋಮವಾರಪೇಟೆಯ ಸಂಪತ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ʻನಾನು ಕಾಂಗ್ರೆಸ್‌ ಕಾರ್ಯಕರ್ತ. ಸಿದ್ದರಾಮಯ್ಯ ಮೇಲಿನ ಸಿಟ್ಟಿಂದ ಮೊಟ್ಟೆ ಎಸೆದೆʼ ಎಂದಿದ್ದಾನೆ. ಆದರೆ, ಕಾಂಗ್ರೆಸ್‌ ಹಳೆಯ ಕಡತಗಳನ್ನೆಲ್ಲ ಜಾಲಾಡಿ ಅವನಿಗಿರುವ ಆರೆಸ್ಸೆಸ್‌, ಸಂಘ ಪರಿವಾರದ ಸಂಬಂಧಕ್ಕೆ ಫೋಟೊ ದಾಖಲೆ ನೀಡಿ ಅವನು ಬಿಜೆಪಿಯವನೇ ಎಂದಿದೆ. ಅವನು ಕಾಂಗ್ರೆಸ್ಸಾ? ಬಿಜೆಪಿನಾ ಎಂಬ ಫೈಟ್‌ ಜೋರಾಗಿಯೇ ನಡೆದಿದೆ.
ವಿವರ ವರದಿಗೆ ಈ ಎರಡು ಲಿಂಕ್‌ ಕ್ಲಿಕ್‌ ಮಾಡಿ ೧. ಸಂಪತ್‌ ಕಾಂಗ್ರೆಸಿಗ ಮತ್ತು ೨. ಸಂಪತ್‌ ಬಿಜೆಪಿಯವನು

೨. ಪಶ್ಚಾತ್ತಾಪ ಆಗಿದೆ ಎಂದು ಹೇಳಿಲ್ಲ, ಧರ್ಮ ಒಡೆಯುವ ಉದ್ದೇಶ ಇಲ್ಲ ಎಂದಿದ್ದೇನೆ ಅಷ್ಟೆ: ಸಿದ್ದರಾಮಯ್ಯ
ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಶ್ರೀಗಳು ಹೇಳಿದ ʻಪಶ್ಚಾತ್ತಾಪʼದ ಕಥೆಗೆ ಸಿದ್ದರಾಮಯ್ಯ ಅವರೇ ತಿರುವು ನೀಡಿದ್ದಾರೆ. ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಪಶ್ಚಾತ್ತಾಪವಾಗಿದೆ ಎಂದು ನಾನು ಹೇಳಿಲ್ಲ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಸಮಗ್ರ ವಿದ್ಯಮಾನದ ಬಗ್ಗೆ ಸ್ವಾಮೀಜಿಗೆ ವಿವರಣೆ ಕೊಟ್ಟೆ. ಧರ್ಮ ಒಡೆಯುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೊಂದು ಯು-ಟರ್ನ್‌ ನಿರೀಕ್ಷಿತ ಎಂದು ಬಿಜೆಪಿ ಟಕ್ಕರ್‌ ಕೊಟ್ಟಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೩. ಚಾಮರಾಜಪೇಟೆ ಮೈದಾನಕ್ಕಾಗಿ ಹೋರಾಡಿದ ಒಕ್ಕೂಟದಲ್ಲೇ ಈಗ ಬಿರುಕು
ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಚಾಮರಾಜಪೇಟೆ ಆಟದ ಮೈದಾನವಾಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಿ ಗೆಲುವು ಸಾಧಿಸಿದ ಚಾಮರಾಜಪೇಟೆ ನಾಗರಿಕರ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ ಶುರುವಾಗಿದೆ. ಬಹುನಿರೀಕ್ಷೆಯ ಗಣೇಶೋತ್ಸವ ವಿಚಾರದಲ್ಲಿ ಬಣ ಜಗಳ ಆರಂಭವಾಗಿದೆ. ಒಂದು ಬಣ ಈಗಾಗಲೇ ೧೧ ದಿನಗಳ ಉತ್ಸವಕ್ಕೆ ಮುಹೂರ್ತ ಫಿಕ್ಸ್‌ ಮಾಡಿದೆ. ಆದರೆ, ಇನ್ನೊಂದು ಬಣ ಮೂರು ದಿನ ಸಾಕು ಅನ್ನುತ್ತಿದೆ. ಇದರ ನಡುವೆ ಸರಕಾರ ಏನು ಮಾಡುತ್ತದೆ ಎನ್ನುವ ಕುತೂಹಲವೂ ಇದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೪. ನಮ್ಮ ನ್ಯಾಷನಲ್‌ ಹೀರೊಗಳನ್ನು ನಾವು ಗೌರವಿಸುವುದು ತಪ್ಪಾ?
ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಕಡೆಯವರು, ಇವರ ಕಡೆಯವರು ಎಂದು ವಿಭಜಿಸುವುದು, ಅದರಿಂದ ಯಾವುದೋ ಕ್ಷಣಿಕ ರಾಜಕೀಯ ಲಾಭಕ್ಕೆ ಎಣಿಸುವುದಕ್ಕಿಂತ ಮಹಾಪರಾಧ ಇನ್ನೊಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರ ಉದ್ದೇಶವೊಂದೇ, ಅದು ಭಾರತ ಮಾತೆಗೆ ಸಂಕೋಲೆಯಿಂದ ಮುಕ್ತಿ. ಬನ್ನಿ, ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸೋಣ. ಎಲ್ಲರಲ್ಲೂ ಇರುವ ಒಳಿತನ್ನು ಮೆರೆಸೋಣ. ಲೋಪಗಳನ್ನು ಚರ್ಚಿಸೋಣ. ದೋಷಗಳನ್ನು ಮರೆಯೋಣ. ಪ್ರಮಾದಗಳನ್ನು ಕ್ಷಮಿಸಿಬಿಡೋಣ. ಇದು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವು ಮಾಡಬಹುದಾದ ಅತ್ಯಂತ ಸಣ್ಣ ದೇಶಸೇವೆ.- ಇದು ವಿಸ್ತಾರ ಮೀಡಿಯಾದ ಪ್ರಧಾನ ಸಂಪಾದಕರು ಮತ್ತು ಸಿಇಒ ಆಗಿರುವ ಹರಿಪ್ರಕಾಶ್‌ ಕೋಣೆಮನೆ ಅವರ ಹೊಸ ಅಂಕಣ ʻಸವಿಸ್ತಾರʼದ ಆಶಯ. ಪೂರ್ಣ ಲೇಖನ ಓದಲು ಈ ಲಿಂಕ್‌ ಕ್ಲಿಕ್‌ ಮಾಡಿ

೫. ಜೊತೆಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್‌ಗೆ ಗೇಟ್‌ ಪಾಸ್‌, ಎರಡು ವರ್ಷ ಬ್ಯಾನ್‌
ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ “ಜೊತೆ ಜೊತೆಯಲಿʼ ಧಾರಾವಾಹಿಯಿಂದ ನಟ ಅನಿರುದ್ಧ್‌ ಅವರನ್ನು ಕೈಬಿಡುವುದು ಬಹುತೇಕ ನಿಶ್ಚಿತವಾಗಿದೆ. ಜತೆಗೆ ಬೇರೆ ಯಾವುದೇ ಧಾರಾವಾಹಿ ಅಥವಾ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ್‌ ಅವರನ್ನು ಆಯ್ಕೆ ಮಾಡಿಕೊಳ್ಳಬಾರದು ಎಂದು ಕಿರುತೆರೆ ನಿರ್ಮಾಪಕರ ಸಂಘ ನಿರ್ಧಾರ ತೆಗೆದುಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ ಇನ್ನು ಇವರು ಜೊತೆಜೊತೆಯಲಿ ಇರುವುದಿಲ್ಲ!

೬. ‌ ವಿಟ್ಲಪಿಂಡಿಯೊಂದಿಗೆ ಉಡುಪಿ ಕೃಷ್ಣಜನ್ಮಾಷ್ಟಮಿ ಸಂಭ್ರಮ ಸಂಪನ್ನ
ಉಡುಪಿ:
ಗೊಲ್ಲರು ಮೊಸರಿನ ಕುಡಿಕೆಗಳನ್ನು ಒಡೆಯುತ್ತಾ ಸಾಗುವ ಸಾಂಪ್ರದಾಯಿಕ‌ ನಡೆ, ಕಣ್ಮಣಿಯಾದ ಕಡಗೋಲು ಕೃಷ್ಣನು ಅಷ್ಟಮಠಗಳ ರಥ ಬೀದಿಯಲ್ಲಿ ತನ್ನ ಲೀಲೋತ್ಸವಗಳನ್ನು ತೋರಿಸುತ್ತಾ ಸಾಗಿಬಂದಾಗ ಭಕ್ತರಿಗೆ ಖುಷಿಯೋ ಖುಷಿ. ಎರಡು ದಿನಗಳ ಕಾಲ ಉಡುಪಿಯಲ್ಲಿ ನಡೆದ ಕೃಷ್ಣಜನ್ಮಾಷ್ಟಮಿಯ ಸಂಭ್ರಮ ವಿಟ್ಲಪಿಂಡಿ ಮಹೋತ್ಸವ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೭. ದೆಹಲಿ ಡಿಸಿಎಂ ಸಿಸೋಡಿಯಗೆ ʻಮನಿʼಷ್‌ ಎಂದ ಬಿಜೆಪಿ, ಕೇಜ್ರಿವಾಲ್‌ಗೆ ಕಿಂಗ್‌ಪಿನ್‌ ಪಟ್ಟ!
ರಾಷ್ಟ್ರ ರಾಜಧಾನಿಯಲ್ಲಿ ನೂತನ ಅಬಕಾರಿ ನೀತಿ ಜಾರಿ ವೇಳೆ ನಡೆದಿದೆ ಎನ್ನಲಾದ ಹಗರಣದ ವಿಚಾರದಲ್ಲಿ ಬಿಜೆಪಿ ಹಾಗೂ ಆಪ್‌ ಮಧ್ಯೆ ತೀವ್ರ ಆರೋಪ-ಪ್ರತ್ಯಾರೋಪ ನಡೆಯುತ್ತಿದೆ. ಮುಂದಿನ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಮೋದಿ ಅವರಿಗೆ ತೀವ್ರ ಸ್ಪರ್ಧೆಯೊಡ್ಡುತ್ತಾರೆ ಎಂಬ ಭಯಕ್ಕೆ ಬಿಜೆಪಿಯು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಡಿಸಿಎಂ ಮನೀಷ್‌ ಸಿಸೋಡಿಯಾ ಟೀಕಿಸಿದ್ದಾರೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, “ಹಗರಣದಲ್ಲಿ ʻಮನಿʼಷ್‌ ಸೋಡಿಯಾ ಮೊದಲ ಆರೋಪಿಯಾಗಿದ್ದರೆ, ಹಗರಣಕ್ಕೆ ಕೇಜ್ರಿವಾಲ್‌ ಅವರೇ ಕಿಂಗ್‌ಪಿನ್‌” ಎಂದು ಆರೋಪಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೮. Golden opportunity| ಗೋಲ್ಡ್‌ ಬಾಂಡ್‌ ಸ್ಕೀಂನಲ್ಲಿ 5,197 ರೂ.ಗೆ ಸಿಗುತ್ತೆ ಒಂದು ಗ್ರಾಂ ಚಿನ್ನ
ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬಗಳ ವೇಳೆ ಚಿನ್ನದ ಮೇಲೆ ಹೂಡಿಕೆ ಮಾಡಲು ನೀವು ಯೋಚಿಸುತ್ತಿದ್ದರೆ, ನಿಮ್ಮ ಯೋಚನೆ ಸರಿಯಾಗಿಯೇ ಇದೆ. ಅದರಲ್ಲೂ, ಕೇಂದ್ರ ಸರಕಾರವು ಸಾವರಿನ್‌ ಗೋಲ್ಡ್‌ ಬಾಂಡ್‌ ಸ್ಕೀಮ್‌ (Sovereign Gold Bond Scheme 2022-23 -Series II) ಹೊಸ ಆವೃತ್ತಿ ಘೋಷಿಸಿದ್ದು, ಪ್ರತಿ ಗ್ರಾಂಗೆ 5,197 ರೂ. ನಿಗದಿಪಡಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

೯. 26/11ರ ಮಾದರಿ ದಾಳಿ ಬೆದರಿಕೆ: ಮುಂಬಯಿ ಫುಲ್‌ ಅಲರ್ಟ್‌, ಒಬ್ಬನ ಸೆರೆ
೨೬/೧೧ ಮಾದರಿಯಲ್ಲಿ ಪಾಕಿಸ್ತಾನ ಮೂಲದ ಹತ್ತು ಉಗ್ರರು ದಾಳಿ ಮಾಡಲಿದ್ದಾರೆ, ಹುಷಾರು ಎಂದು ಮುಂಬಯಿ ಪೊಲೀಸರಿಗೆ ಶನಿವಾರ ಬೆದರಿಕೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಫುಲ್‌ ಅಲರ್ಟ್‌ ಆದ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದರು. ಕೊನೆಗೆ ಸಂದೇಶ ಕಳುಹಿಸಿದವನ್ನು ವಿರಾರ್‌ನಲ್ಲಿ ಬಂಧಿಸಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

೧೦. ೨ನೇ ಏಕದಿನ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ ಐದು ವಿಕೆಟ್‌ ಭರ್ಜರಿ ಜಯ, ಸರಣಿಯೂ ಕೈವಶ
ಜಿಂಬಾಬ್ವೆ ವಿರುದ್ದದ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತ ೫ ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಕ ಮೂರು ಪಂದ್ಯಗಳ ಸರಣಿಯನ್ನು ಭಾರತ ೨-೧ ಅಂತರದಿಂದ ಗೆದ್ದಂತಾಗಿದೆ. ಮುಂದಿನ ಪಂದ್ಯ ಆಗಸ್ಟ್‌ ೨೨ಕ್ಕೆ. ವಿವರ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version