Site icon Vistara News

ವಿಸ್ತಾರ TOP 10 NEWS | ರಾಜಕಾರಣಿಗಳಿಗೆ ʼಸ್ಯಾಂಟ್ರೊʼ ನಡುಕದಿಂದ, ಪಂಚಮಸಾಲಿ ಮೀಸಲಾತಿ ಗುಡುಗಿನವರೆಗಿನ ಪ್ರಮುಖ ಸುದ್ದಿಗಳಿವು

vistara-top-10-news-many politicians fearing after santro ravi arrest to panchamasali reservation protest and more news

1. Santro Ravi Case | ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ ಬಂಧನ ಖಚಿತಪಡಿಸಿದ ಪೊಲೀಸರು
ಸ್ಯಾಂಟ್ರೋ ರವಿಯ ಮೇಲೆ ಮಹಿಳೆಯ ಕೇಸು ದಾಖಲಾಗುತ್ತಿದ್ದಂತೆಯೇ ಆತನ ವಿರುದ್ಧ ನೂರಾರು ಕುತೂಹಲಕಾರಿ ಮಾಹಿತಿಗಳು ಹೊರಬಿದ್ದಿದ್ದು ಆತನಿಗೆ ರಾಜಕಾರಣಿಗಳು ಮತ್ತು ಅಧಿಕಾರಿಗಳ ಜತೆಗೆ ಇರುವ ಸಂಬಂಧವೂ ಬಯಲಾಗಿತ್ತು. ಹೀಗಾಗಿ ಆತನ ಬಂಧನ ವಿಳಂಬವಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಬಂಧನವನ್ನು ಪೊಲೀಸರು ಖಚಿತಪಡಿಸಿರುವುದರಿಂದ ರಾಜಕಾರಣಿಗಳಲ್ಲಿ ಆತಂಕ ಮನೆಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

2. Santro Ravi Case | ಸ್ಯಾಂಟ್ರೊ ರವಿ ಕೈಯಲ್ಲಿದೆ ಹಲವು ಸಚಿವರು, ಅಧಿಕಾರಿಗಳು, ರಾಜಕೀಯ ಮುಖಂಡರ ಭವಿಷ್ಯ!
ಕುಖ್ಯಾತ ಕ್ರಿಮಿನಲ್‌ ಸ್ಯಾಂಟ್ರೋ ರವಿ ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೆರೆ ಸಿಕ್ಕಿದ್ದಾನೆ. ಆತ ಸೆರೆ ಸಿಕ್ಕಿರುವುದರಿಂದ ಹಲವರಿಗೆ ನಡುಕ ಶುರುವಾಗಿದೆ. ಯಾಕೆಂದರೆ, ಸ್ಯಾಂಟ್ರೋ ರವಿ ಕೈಯಲ್ಲಿದೆ ಹಲವು ಸಚಿವರು, ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಭವಿಷ್ಯ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

3. Vivekananda Jayanti | ನಿಮ್ಮ ಮೇಲೆ ನಂಬಿಕೆಯಿದ್ದರೆ ಮಾತ್ರವೇ ಬದಲಾವಣೆ ಸಾಧ್ಯ: ವಿದ್ಯಾರ್ಥಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಕರೆ
ನಿಮ್ಮ ಮೇಲೆ ನಿಮಗೆ ನಂಬಿಕೆ, ಆತ್ಮವಿಶ್ವಾಸ ಇದ್ದರೆ ಮಾತ್ರವೇ ಸಮಾಜದಲ್ಲಿ ಯಾವುದಾದರೂ ಬದಲಾವಣೆ ತರಲು ಹಾಗೂ ಸಾಧನೆ ಮಾಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ, ಸಿಎಂ ಬಸವರಾಜ ಬೊಮ್ಮಾಯಿ ಕರೆ ನೀಡಿದರು. ವಿವೇಕಾನಂದ ಜಯಂತಿ (Vivekananda Jayanti) ಪ್ರಯುಕ್ತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ವಿಸ್ತಾರ ಮೀಡಿಯಾ ಪ್ರೈವೇಟ್‌ ಲಿಮಿಟ್‌ ವತಿಯಿಂದ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ʼವಿವೇಕ ವಂದನೆʼ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.
ಹೆಚ್ಚಿನ ಓದಿಗಾಗಿ: Vivekananda Jayanti | ಮುಂದಿನ ವರ್ಷ ಜಿಲ್ಲೆ, ತಾಲೂಕು, ಹೋಬಳಿ ಹಂತದಲ್ಲಿ ʼವಿವೇಕ ವಂದನೆʼ ಕಾರ್ಯಕ್ರಮ: ಹರಿಪ್ರಕಾಶ್‌ ಕೋಣೆಮನೆ ಘೋಷಣೆ

4. Pachamasali Reservation | ಉಗ್ರ ಸ್ವರೂಪ ಪಡೆದ ಪಂಚಮಸಾಲಿ ಮೀಸಲು ಹೋರಾಟ: ನಾಳೆಯಿಂದ ಬೆಂಗಳೂರಿಗೆ ಶಿಫ್ಟ್‌
ಪಂಚಮಸಾಲಿ ಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವಿಯ ಮನೆಗೆ ಮುತ್ತಿಗೆ ಹಾಕಲು ಹೊರಟವರು ಕೊನೆ ಕ್ಷಣದಲ್ಲಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರ ಸರ್ಪಗಾವಲನ್ನು ಭೇದಿಸಿ ಹೆದ್ದಾರಿಗೆ ನುಗ್ಗಿದ ಪ್ರತಿಭಟಕಾರರು ಸಿಎಂ ಪ್ರತಿಕೃತಿಯನ್ನು ಸುಟ್ಟುಹಾಕಿದರು. ರಾಜ್ಯ ಸರಕಾರದ ವಿರುದ್ಧ ಸಿಡಿದೆದ್ದಿರುವ ಪಂಚಮಸಾಲಿ ಮೀಸಲು ಹೋರಾಟಗಾರರು ಪ್ರತಿಭಟನೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲು ನಿರ್ಧರಿಸಿದ್ದು, ಶನಿವಾರದಿಂದ ರಾಜಧಾನಿಯ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ನಡೆಸುವುದಾಗಿ ಘೋಷಿಸಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

5. ವಿಸ್ತಾರ Explainer | ಉಚಿತ ಕೊಡುಗೆಗಳು ಜನರಿಗೆ ಹಿತವೇ? ಅಭಿವೃದ್ಧಿಗೆ ಶಾಪವೇ? ಚುನಾವಣಾ ವರ್ಷದಲ್ಲಿ ಕಾವೇರಿದ ಚರ್ಚೆ
ಮಳೆಗಾಲ ಮುಗಿದಿದೆ. ಆದರೆ ರಾಜಕೀಯ ಪಕ್ಷಗಳು ಮತದಾರರಿಗೆ ಉಚಿತ ಕೊಡುಗೆಗಳ ಸುರಿಮಳೆಗರೆಯುವುದನ್ನು ಮಾತ್ರ ಬಿಟ್ಟಿಲ್ಲ. (ವಿಸ್ತಾರ Explainer) ದೇಶಾದ್ಯಂತ ಪುಕ್ಕಟೆ ಯೋಜನೆಗಳ (Freebies) ಭರಾಟೆ ಮುಗಿಲುಮುಟ್ಟಿದೆ. ಮತ್ತೊಂದು ಕಡೆ ವಿವೇಚನಾರಹಿತವಾಗಿ ಉಚಿತ ಯೋಜನೆಗಳನ್ನು ಜಾರಿಗೊಳಿಸಿದ್ದ ರಾಜ್ಯಗಳಲ್ಲಿ ಆರ್ಥಿಕ ಬಿಕ್ಕಟ್ಟು ಕೂಡ ಸೃಷ್ಟಿಯಾಗಿದ್ದು, ಅವುಗಳು ಮಿನಿ ಲಂಕಾಗಳಾಗುವ ಭೀತಿಯೂ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

6. Drugs Mafia | ಮಂಗಳೂರಿನಲ್ಲಿ ಮತ್ತಷ್ಟು ಡ್ರಗ್ಸ್‌ ವ್ಯವಹಾರ ಬಯಲಿಗೆ: ನಾಲ್ವರು ಅರೆಸ್ಟ್‌, ಕಾರು ವಶ
ಮಂಗಳೂರು ಮತ್ತು ಮಣಿಪಾಲವನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ, ಡಾಕ್ಟರ್‌ ಮತ್ತು ವೈದ್ಯ ವಿದ್ಯಾರ್ಥಿಗಳೇ ಪ್ರಧಾನವಾಗಿರುವ ಗಾಂಜಾ ಜಾಲವನ್ನು ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು ಈಗ ಡ್ರಗ್ಸ್‌ ಮಾಫಿಯಾದ ವಿರುದ್ಧ ಮುಗಿಬಿದ್ದಿದ್ದಾರೆ. ಹೀಗಾಗಿ ಮತ್ತೆರಡು ಪ್ರಕರಣಗಳು ಬಯಲಿಗೆ ಬಂದಿವೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

7. Isha Foundation | ನಂದಿ ಬೆಟ್ಟದ ಬಳಿ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಹೈಕೋರ್ಟ್‌ ಅನುಮತಿ
ಚಿಕ್ಕಬಳ್ಳಾಪುರದ ಅವಲಗುರ್ಕಿ ಬಳಿ ನಿರ್ಮಾಣ ಆಗುತ್ತಿರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ (Isha Foundation) ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್‌ ಆದೇಶ ನೀಡಿದೆಯಾದರೂ ಜನವರಿ ೧೫ರಂದು ಆಯೋಜನೆಯಾಗಿರುವ ಲೋಕಾರ್ಪಣೆ ಕಾರ್ಯಕ್ರಮ ನಡೆಸಬಹುದು ಎಂದು ಹೇಳಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

8. Supreme Court | ನಿಮ್ಮದೇ ಅಧಿಕಾರ ನಡೆಯಬೇಕು ಎಂದಾದ್ರೆ, ಚುನಾಯಿತ ಸರ್ಕಾರ ಏಕೆ ಬೇಕು? ಕೇಂದ್ರಕ್ಕೆ ಸುಪ್ರೀಂ
ಕೇಂದ್ರಾಡಳಿತ ಪ್ರದೇಶವಾಗಿರುವ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಅಧಿಕಾರದ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕಿತ್ತಾಡಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಇದೀಗ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ (Supreme Court) ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಒಂದು ವೇಳೆ ದಿಲ್ಲಿಯಲ್ಲಿ ನಿಮ್ಮದೇ ಅಧಿಕಾರ ಚಲಾವಣೆ ಆಗಬೇಕು ಎಂದಾದರೆ, ಚುನಾಯಿತ ಸರ್ಕಾರವನ್ನು ರಚಿಸುವ ಅಗತ್ಯ ಏನಿದೆ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

9. Temple Attack in Australia | ಆಸ್ಟ್ರೇಲಿಯಾದಲ್ಲಿ ಹಿಂದು ದೇಗುಲ ಮೇಲೆ ಖಲಿಸ್ತಾನ್ ಉಗ್ರರ ದಾಳಿ, ಮೋದಿ ವಿರುದ್ಧ ಬರಹ
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನಿ ಉಗ್ರರು ಹಿಂದು ದೇವಾಲಯವೊಂದರ ಮೇಲೆ ದಾಳಿ (Temple Attack in Australia) ನಡೆಸಿದ್ದು, ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಬರೆಯುವ ಮೂಲಕ ಉದ್ಧಟತನ ಮಾಡಿದ್ದಾರೆ. ದೇವಾಲಯದ ಕೆಲ ಭಾಗಗಳನ್ನು ಉಗ್ರರು ಧ್ವಂಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

10. Viral Video | ಅಫಘಾನಿಸ್ತಾನದ ಈ ಪುಟಾಣಿಯ ನಗುವಿಗೆ ಮನಸೋಲದವರಿಲ್ಲ; ವಿಡಿಯೊ ವೈರಲ್‌
ತಾಲಿಬಾನಿಯರ ಆಕ್ರಮಣವಾದಾಗಿನಿಂದ ಅಫಘಾನಿಸ್ತಾನದ ಜನರ ಜೀವನ ತೀರಾ ಕಷ್ಟದಲ್ಲಿದೆ. ಅದರಲ್ಲೂ ಹೆಣ್ಣು ಮಕ್ಕಳಂತೂ ಶಿಕ್ಷಣ, ವೃತ್ತಿ, ಆರೋಗ್ಯ ಎಲ್ಲದರಿಂದಲೂ ವಂಚಿತರಾಗಿ ಮನೆಯಲ್ಲಿ ಕೂರುವಂತಾಗಿದೆ. ಹೀಗಿರುವಾಗ ಕಾಬೂಲ್‌ನ ಪುಟಾಣಿ ಬಾಲಕಿಯೊಬ್ಬಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು (Viral Video) ಮಾಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್‌ ಮಾಡಿ.

ಮತ್ತಷ್ಟು ಪ್ರಮುಖ ಸುದ್ದಿಗಳಿವು

  1. ಮೆಟ್ರೋ ಪಿಲ್ಲರ್ ದುರಂತ | ಸರ್ಕಾರಕ್ಕೆ ತಿವಿದ ಹೈಕೋರ್ಟ್; ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡ ಪೀಠ
  2. Joshimath Sinking | ಕೇವಲ 12 ದಿನದಲ್ಲಿ 5.4 ಸೆಂ.ಮೀ ಮುಳುಗಿದ ಜೋಶಿಮಠ ಪಟ್ಟಣ, ಆತಂಕ ಹೆಚ್ಚಿಸಿದ ಸ್ಯಾಟಲೈಟ್‌ ಫೋಟೊಗಳು
  3. Budget Session | ಜ.31ರಿಂದ ಏಪ್ರಿಲ್ 6ರವರೆಗೆ ಬಜೆಟ್ ಅಧಿವೇಶನ: ಸಚಿವ ಜೋಶಿ
  4. PM Narendra Modi | ಜಗತ್ತಿನ ಅತಿ ಉದ್ದದ ರಿವರ್ ಕ್ರೂಸ್‌ ಎಂವಿ ಗಂಗಾ ವಿಲಾಸ್‌ಗೆ ವಾರಾಣಸಿಯಲ್ಲಿ ಪ್ರಧಾನಿ ಚಾಲನೆ
  5. Karnataka Election | ಆಮ್ ಆದ್ಮಿ ಪಾರ್ಟಿ ತನ್ನ ಕರ್ನಾಟಕದ ಘಟಕವನ್ನು ವಿಸರ್ಜಿಸಿದ್ದು ಏಕೆ?
  6. ಸುವಿಚಾರ ಅಂಕಣ | ವಾಣಿಯ ವೀಣೆಯ ಸ್ವರಮಾಧುರ್ಯವೋ!
  7. ಗೋ ಸಂಪತ್ತು | ಅಮೃತಂ ಕ್ಷೀರ ಭೋಜನಂ..!!
Exit mobile version