ಬೆಂಗಳೂರು: ದೇಶದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅಯ್ಕೆಯಾಗಿದ್ದಾರೆ. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಸಮಾಜವಾದಿ ಹಿನ್ನೆಲೆಯ ಇವರು ಮುಂದಿನ ಐದು ವರ್ಷ ಕಾಲ ರಾಷ್ಟ್ರವನ್ನು ಉಪರಾಷ್ಟ್ರಪತಿಯಾಗಿ ಮುನ್ನಡೆಸಲಿದ್ದಾರೆ. ಈ ಹರ್ಷದ ಜತೆ ಕಾಮನ್‌ವೆಲ್ತ್‌ನಲ್ಲಿ ಪದಕ ವರ್ಷವೂ ಸಂಭ್ರಮ ತುಂಬಿದೆ. ಇದೇ ವೇಳೆ, ಕಾಂಗ್ರೆಸ್‌ನ ಅಮೃತ ಮಹೋತ್ಸವ ಪಾದಯಾತ್ರೆ, ಬಿಗ್‌ಬಾಸ್ ಒಟಿಟಿ ಸೀಸನ್ ಆರಂಭವೂ ಸೇರಿ ದಿನದ ಪ್ರಮುಖ ಸುದ್ದಿಗಳ ಗುಚ್ಛ ವಿಸ್ತಾರ TOP 10 NEWS.
೧. ಜಗದೀಪ್ ಧನಕರ್ ದೇಶದ ನೂತನ ಉಪರಾಷ್ಟ್ರಪತಿ, ಮಾರ್ಗರೆಟ್ ಆಳ್ವಗೆ ಸೋಲು
ಜುಲೈ ೨೫ರಂದು ದ್ರೌಪದಿ ಮುರ್ಮು ಅವರು ದೇಶದ ನೂತನ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇದೀಗ ಉಪರಾಷ್ಟ್ರಪತಿ ಆಯ್ಕೆಯೂ ನಡೆದಿದೆ. ಜಗದೀಪ್ ಧನಕರ್ ಅವರು ನೂತನ ಉಪರಾಷ್ಟ್ರಪತಿ. ಶನಿವಾರ ನಡೆದ ಮತ ಎಣಿಕೆಯಲ್ಲಿ ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಅವರು ೫೨೮ ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಮಾರ್ಗರೆಟ್ ಆಳ್ವ ಅವರಿಗೆ ೧೨೮ ಮತಗಳು ಸಿಕ್ಕಿವೆ. ಅಚ್ಚರಿ ಎಂದರೆ ಈ ಚುನಾವಣೆಯಲ್ಲಿ ೧೭ ಮತಗಳು ಅಮಾನ್ಯಗೊಂಡಿವೆ!
ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್
೨. ಕಾಮನ್‌ವೆಲ್ತ್‌ನಲ್ಲಿ ಭಾರತಕ್ಕೆ ಮುಂದುವರಿದ ಪದಕ ವರ್ಷ
ಬರ್ಮಿಂಗ್ಹಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ಆರಂಭದಲ್ಲಿ ವೇಟ್‌ಲಿಫ್ಟಿಂಗ್ ಭಾರತವನ್ನು ಲಿಫ್ಟ್ ಮಾಡಿದರೆ, ಬಳಿಕ ಕುಸ್ತಿಯಲ್ಲಿ ಮಸ್ತಿ ಮಾಡಿತು. ಈಗ ವಿಭಿನ್ನ ಕ್ರೀಡೆಗಳಲ್ಲಿ ಗೆಲುವು. ಶನಿವಾರ ರಾತ್ರಿ ೮ ಗಂಟೆವರೆಗೆ ಮೂರು ಬೆಳ್ಳಿ ಪದಕಗಳು ಸಿಕ್ಕಿವೆ. ಇದರೊಂದಿಗೆ ೯ ಚಿನ್ನ, ೧೧ ಬೆಳ್ಳಿ ಮತ್ತು ೯ ಕಂಚಿನ ಪದಕದೊಂದಿಗೆ ಭಾರತ ೨೯ ಪದಕ ಗಳಿಸಿ ಮುನ್ನುಗ್ಗುತ್ತಿದೆ. ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3. ಮಳೆ ಹಾನಿ ಪರಿಹಾರ ಕಾರ್ಯಾಚರಣೆಗೆ 200 ಕೋಟಿ ರೂ. ಬಿಡುಗಡೆ
ವರುಣಾರ್ಭಟದಿಂದ ತತ್ತರಿಸಿರುವ ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಳ್ಳಲು ರಾಜ್ಯ ಸರಕಾರ ೨೦೦ ಕೋಟಿ ರೂ. ಬಿಡುಗಡೆ ಮಾಡಿದೆ. ಅತಿ ಹೆಚ್ಚು ಹಾನಿಗೆ ಒಳಗಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ೧೦ ಕೋಟಿ ರೂ. ನೀಡಲಾಗಿದೆ. ಇದರ ನಡುವೆಯೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ, ಜಲ ಪ್ರವಾಹ ಮತ್ತು ಭೂಕುಸಿತ ಜೋರಾಗಿದೆ.
ಪೂರ್ಣ ವರದಿಗೆ ಕ್ಲಿಕ್ ಮಾಡಿ
೪. ಕಾಲಿವುಡ್ ನಿರ್ಮಾಪಕರ ಮೇಲೆ ಐಟಿ ರೇಡ್: 200 ಕೋಟಿ ರೂ. ಅಕ್ರಮ ಆದಾಯ ಪತ್ತೆ
ಆದಾಯ ತೆರಿಗೆ ಇಲಾಖೆ ತಮಿಳುನಾಡಿನ ಹಲವು ಚಿತ್ರ ನಿರ್ಮಾಪಕರು, ಚಲನಚಿತ್ರ ವಿತರಕರು, ಹೂಡಿಕೆದಾರರಿಗೆ ಸೇರಿದ ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಈ ರೇಡ್ ವೇಳೆ ಐಟಿ ಇಲಾಖೆ ಸುಮಾರು 200 ಕೋಟಿ ರೂಪಾಯಿ ಅಕ್ರಮ ಆದಾಯ ಪತ್ತೆಯಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
೫. ಬೆಂಗಳೂರಿನಲ್ಲಿ ಈ ಬಾರಿ ಗಣೇಶೋತ್ಸವ ಹೇಗೆ? ನಿಯಮಾವಳಿ ಏನು?
ಬೆಂಗಳೂರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಅವಕಾಶವಿರಲಿಲ್ಲ. ಈ ಬಾರಿ ಹೇಗಿರಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಈ ನಡುವೆ ಬಿಬಿಎಂಪಿ ಆಯುಕ್ತರು ಹೇಳಿದರೆನ್ನಲಾದ ಒಂದು ಮಾತು ಇಡೀದಿನ ಚರ್ಚೆಗೆ ಕಾರಣವಾಯಿತು. ಈ ಬಾರಿ ವಾರ್ಡಿಗೊಂದೇ ಗಣಪ ಎಂದು ಅವರು ಹೇಳಿದ್ದಾರೆನ್ನಲಾದ ಮಾತಿಗೆ ಆಕ್ಷೇಪ ವ್ಯಕ್ತವಾಯಿತು. ಬಳಿಕ ಅವರೇ ಸ್ಪಷ್ಟೀಕರಣ ನೀಡಿ, ನಾನು ಆ ತರ ಹೇಳಿಲ್ಲ. ಈ ಬಾರಿಯ ಗಣೇಶೋತ್ಸವ ಹೇಗಿರಬೇಕು ಎನ್ನುವುದನ್ನು ಸರಕಾರ ಇನ್ನೂ ನಿರ್ಧರಿಸಿಲ್ಲ. ಅದು ಹೇಳಿದಂತೆ ನಡೆಯಲಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ವರದಿಗೆ ಕ್ಲಿಕ್ ಮಾಡಿ
೬. ಹಲವೆಡೆ ಚಿರತೆ ಕಾಟ: ಮನೆ ಕಾಂಪೌಂಡ್ ಹಾರಿ ನಾಯಿ ಹೊತ್ತೊಯ್ದ ಚಿರತೆ
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಚಿರತೆಯೊಂದು ಮನೆ ಕಾಂಪೌಂಡ್ ಹಾರಿ ನಾಯಿಯೊಂದನ್ನು ಹೊತ್ತೊಯ್ದ (Leopard Attack) ಘಟನೆ ನಡೆದಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಕಾಂಪೌಂಡ್ ನೆಗೆದು ಬಂದ ಚಿರತೆ, ಬಾಕ್ಸ್‌ಗೆ ಕಟ್ಟಿದ್ದ ನಾಯಿಯನ್ನು ಸಾಯಿಸಿ ಹೊತ್ತೊಯ್ದಿದೆ. ಈ ಮಧ್ಯೆ ಬೆಳಗಾವಿಯ ಜಾಧವ್ ನಗರಕ್ಕೆ ಬಂದು ಅಡಗಿಕೊಂಡ ಚಿರತೆ ಇನ್ನೂ ಪತ್ತೆಯಾಗದೆ ಜನರ ಆತಂಕ ಮುಂದುವರಿದಿದೆ.
ವರದಿಗೆ ಇಲ್ಲಿ ಕ್ಲಿಕ್ ಮಾಡಿ
೭. ಬಿಬಿಎಂಪಿ ವಾರ್ಡ್ ಮೀಸಲಾತಿ ಬದಲು: ಮಾಜಿ ಕಾರ್ಪೊರೇಟರ್‌ಗಳಿಗೆ ಆತಂಕ
ರಾಜ್ಯ ಸರ್ಕಾರ ಪ್ರಕಟಿಸಿರುವ ಬಿಬಿಎಂಪಿ ವಾರ್ಡ್ ಮೀಸಲು ಅಧಿಸೂಚನೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಆಕಾಂಕ್ಷಿಗಳಾಗಿದ್ದ ಮಾಜಿ ಮೇಯರ್‌ಗಳು, ಉಪಮೇಯರ್‌ಗಳು, ಕೌನ್ಸಿಲ್‌ನಲ್ಲಿರುವ ಆಡಳಿತ ಪಕ್ಷ ಹಾಗೂ ವಿಪಕ್ಷ ನಾಯಕರು ಈಗ ಪ್ರಕಟಗೊಂಡಿರುವ ಮೀಸಲಾತಿಯ ಪ್ರಕಾರ ಚುನಾವಣೆ (BBMP Election) ನಡೆದರೆ ಸ್ಪರ್ಧಿಸಲು ಅಡಚಣೆಯಾಗಿದೆ. ಇದು ಎಲ್ಲರನ್ನೂ ಆತಂಕಕೀಡು ಮಾಡಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
೮. ಚೀನಾದ ಬೇಹುಗಾರಿಕೆ ನೌಕೆ ಲಂಕೆಗೆ ಬರುತ್ತಿರುವುದೇಕೆ?
ʼʼಸದ್ಯ ನಮ್ಮ ಬಂದರಿನತ್ತ ನಿಮ್ಮ ನೌಕೆ ತರಬೇಡಿʼʼ ಎಂದು ಶ್ರೀಲಂಕಾ ವಿದೇಶಾಂಗ ಇಲಾಖೆಯು ಚೀನಾಗೆ ಸೂಚನೆ ನೀಡಿದೆ. ಈ ನೌಕೆ ಅಂತಿಂಥದ್ದಲ್ಲ. ಶ್ರೀಲಂಕೆಯಲ್ಲಿ ಕೋಟ್ಯಂತರ ಡಾಲರ್ ವೆಚ್ಚದಲ್ಲಿ ಚೀನಾವೇ ನಿರ್ಮಿಸಿಕೊಡುತ್ತಿರುವ ಹಂಬನ್‌ಟೋಟ ಬಂದರಿನಲ್ಲಿ ಶಾಶ್ವತ ಲಂಗರು ಹಾಕಲು ಬರುತ್ತಿರುವ ನೌಕೆ ಅದು. ಈ ನೌಕೆಯಲ್ಲಿ ಅಗಾಧ ಆಧುನಿಕ ಬೇಹುಗಾರಿಕೆ ಸಾಮಗ್ರಿಗಳಿವೆ. ಅಲ್ಲಿ ಕುಳಿತ ಚೀನೀಯನಿಗೆ ಭಾರತದ ರಕ್ಷಣೆ ದೃಷ್ಟಿಯಿಂದ ಸೂಕ್ಷ್ಮವೆನಿಸಿದ ಜಾಗಗಳೆಲ್ಲಾ ಅಂಗೈ ಗೆರೆಗಳಷ್ಟೇ ಸೂಕ್ಷ್ಮವಾಗಿ ಗೊತ್ತಾಗಲಿವೆ!
ಕುತೂಹಲಕಾರಿ ಮಾಹಿತಿಗಳ Explainer
9. ಕಾಂಗ್ರೆಸ್ ಅಧಿವೇಶನದಲ್ಲೆ ಹೆಡಗೆವಾರ್ ಗೋಹತ್ಯೆ ನಿಷೇಧ ಪ್ರಸ್ತಾಪಿಸಿದ್ದರು: ಭಾಗವತ್
ಭಾರತದಲ್ಲಿ ಗೋ ಹತ್ಯೆ ನಿಷೇಧಿಸುವಂತೆ ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರು ಸ್ವಾತಂತ್ರ್ಯಪೂರ್ವದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿಯೇ ಪ್ರಸ್ತಾಪಿಸಿದ್ದರು ಎಂದು ಆರ್ಎಸ್ಎಸ್ ಸರ ಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ ದ್ವಿತೀಯ ವರ್ಷದ ವಿಶ್ವ ಒಕ್ಕೂಟ ಶಿಕ್ಷಣ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂರ್ಣ ವರದಿಗೆ ಕ್ಲಿಕ್ ಮಾಡಿ
೧೦. ಬಿಗ್ ಬಾಸ್ ಒಟಿಟಿ ಪ್ರೀಮಿಯರ್: ಶುರುವಾಯಿತು ೪೫ ದಿನಗಳ ಕಿರುತೆರೆ ಹಬ್ಬ
ಕಿಚ್ಚ ಸುದೀಪ್ ನಿರೂಪಕರಾಗಿರುವ ಅತಿವಿಶಿಷ್ಟ ಬಿಗ್‌ಬಾಸ್ ಶೋ ಅದ್ಧೂರಿಯಾಗಿ ಆರಂಭಗೊಂಡಿದೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವುದು ಈ ಬಾರಿಯ ವಿಶೇಷ. ಸಂಖ್ಯಾ ಶಾಸ್ತ್ರಜ್ಞ ಆರ್ಯವರ್ಧನ್, ಟಿಕ್‌ಟಾಕ್ ಸ್ಟಾರ್ ಸೋನು ಶ್ರೀನಿವಾಸ ಗೌಡ, ಪುಟ್ಟ ಗೌರಿ ಖ್ಯಾತಿಯ ಸಾನ್ಯ, ಸೀತಾವಲ್ಲಭ ಖ್ಯಾತಿ ಸ್ಪೂರ್ತಿ ಗೌಡ, ಕಾಮಿಡಿ ಕಿಲಾಡಿ ಖ್ಯಾತಿಯ ಲೋಕೇಶ್ ಕುಮಾರ್, ಕೋಸ್ಟಲ್‌ವುಡ್ ಸ್ಟಾರ್ ರೂಪೇಶ್ ಶೆಟ್ಟಿ ಸೇರಿದಂತೆ ೧೮ ಮಂದಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಇನ್ನು ೪೫ ದಿನ ಹಗಲೂ ರಾತ್ರಿ ವೂಟ್‌ನಲ್ಲಿ ದೊಡ್ಮನೆ ಕಥೆ ನೋಡಬಹುದು. ವಿವರ ವರದಿಗೆ ಕ್ಲಿಕ್ ಮಾಡಿ