ಬೆಂಗಳೂರು: ರಾಜ್ಯದ ಮಾಧ್ಯಮ ಇತಿಹಾಸದಲ್ಲೇ ಅತ್ಯಂತ ವಿಶೇಷವಾದ ಅಭಿಯಾನವೊಂದನ್ನು ವಿಸ್ತಾರ ನ್ಯೂಸ್ ಅರಂಭಿಸಿದೆ. ಸಾರ್ವಜನಿಕರು ಮತ್ತು ದಾನಿಗಳ ನೆರವಿನಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಮತ್ತು ಮೂಲ ಸೌಕರ್ಯವನ್ನು ಎತ್ತರಕ್ಕೇರಿಸುವ ʻನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನಕ್ಕೆ ಶನಿವಾರ ರಾಜ್ಯದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಚಾಲನೆ ನೀಡಿದರು. ಮತದಾರರ ಮಾಹಿತಿ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಸಂಘರ್ಷ ಶನಿವಾರ ಮತ್ತಷ್ಟು ತೀವ್ರಗೊಂಡಿತು. ದಕ್ಷಿಣ ಮತ್ತು ಉತ್ತರ ಭಾರತವನ್ನು ಬೆಸೆಯುವ ಕಾಶಿ ತಮಿಳು ಸಂಗಮಂಗೆ ಮೋದಿ ಚಾಲನೆ ನೀಡಿದರೆ, ನಾಳೆಯಿಂದ ಆರಂಭವಾಗಲಿರುವ ಜಾಗತಿಕ ಫುಟ್ಬಾಲ್ ಕದನವನ್ನು ತುಂಬಿಕೊಳ್ಳಲು ಜಗತ್ತು ಅಣಿಯಾಗಿದೆ. ಇಂಥ ಹಲವು ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ TOP ೧೦ NEWS.
೧. ನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆ ಅಭಿಯಾನ ಸಕಾರಾತ್ಮಕ ಭಾಗೀದಾರಿಕೆಯ ಮಾದರಿ ಎಂದ ಶಿಕ್ಷಣ ಸಚಿವರು
ಸಮಾಜ ಬೆಳೆಯಬೇಕಾದರೆ ಶಿಕ್ಷಣ ಕ್ಷೇತ್ರ ಬೆಳೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳಿಗೆ ನೆರವಾಗುವ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನ ಆರಂಭಿಸುತ್ತಿರುವುದು ಸಕಾರಾತ್ಮಕ ಕಾರ್ಯಕ್ರಮ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಅವರು ವಿಸ್ತಾರ ನ್ಯೂಸ್ ವಾಹಿನಿ ಆರಂಭಿಸುತ್ತಿರುವ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ, ನಮ್ಮೆಲ್ಲರ ಶಾಲೆʼ ಅಭಿಯಾನದ ಉದ್ದೇಶವೇನು? ಹೇಗೆ ನಡೆಯುತ್ತದೆ?
೨. Voter data | ಸಿಎಂ ಬೊಮ್ಮಾಯಿ ಹಗರಣದ ರಿಯಲ್ ಕಿಂಗ್ ಪಿನ್ ಎಂದ ಕಾಂಗ್ರೆಸ್, ರಾಜೀನಾಮೆಗೆ ಒತ್ತಾಯ
ಬೆಂಗಳೂರು: ಮತದಾರರ ಮಾಹಿತಿ ಕಳವು ಮತ್ತು ಮತದಾರರ ಪಟ್ಟಿಯಿಂದ ಹೆಸರುಗಳನ್ನು ಡಿಲೀಟ್ ಮಾಡಿರುವ ಪ್ರಕರಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕಿಂಗ್ ಪಿನ್ ಎಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ. ಇಷ್ಟೆಲ್ಲ ದಾಖಲೆಗಳಿದ್ದರೂ ಮುಖ್ಯಮಂತ್ರಿಗಳ ವಿರುದ್ಧ ಕೇಸು ದಾಖಲಾಗಿಲ್ಲ, ಬಿಬಿಎಂಪಿ ಕಮೀಷನರ್ ಮೇಲೆ ಕೇಸು ದಾಖಲಾಗಿಲ್ಲ. ಈ ಪ್ರಕರಣದ ಮೊದಲ ಮತ್ತು ಎರಡನೇ ಆರೋಪಿಗಳಾಗಿರುವ ಇವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಕೆಂಡ ಕಾರಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
೩. ಮಾವನ ಮನೆಯಲ್ಲಿ ದಾಖಲೆ ಬಚ್ಚಿಟ್ಟು ಪರಾರಿ ಆದ ರವಿಕುಮಾರ್ ನಿಜಕ್ಕೂ ಯಾರು? ಸಮಗ್ರ ವಿವರ
ರಾಜ್ಯಾದ್ಯಂತ ಭಾರಿ ಸುದ್ದಿಯಲ್ಲಿರುವ ಚಿಲುಮೆ ಗ್ರೂಪ್ಸ್‌ನ ಮಾಲೀಕ ರವಿಕುಮಾರ್ ಮತ್ತು ಅವರ ಸಹೋದರ ಕೆಂಪೇಗೌಡ ಅವರ ಇತಿಹಾಸ ಮತ್ತು ಕೆಲವೊಂದು ಅಕ್ರಮಗಳ (Voter data) ಬಗ್ಗೆ ಸಾಕಷ್ಟು ಮಾಹಿತಿಗಳು ಬಯಲಾಗಿವೆ. ಈ ಇಬ್ಬರು ಆರೋಪಿಗಳು ತಮ್ಮ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತಿದ್ದಂತೆಯೇ ದಾಖಲೆಗಳನ್ನೆಲ್ಲ ತಮ್ಮ ಮಾವನ ತೋಟದ ಮನೆಯಲ್ಲಿ ಅಡಗಿಸಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಈಗ ಅಣ್ಣ, ತಮ್ಮಂದಿರ ಪತ್ನಿಯರನ್ನು ಪೊಲೀಸರು ತೀವ್ರ ವಿಚಾರಣೆಗೆ ಗುರಿಪಡಿಸಿದ್ದು ಅವರಿಗೆ ಸಂಕಷ್ಟ ಎದುರಾಗಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
೪. ದಕ್ಷಿಣ ಹಾಗೂ ಉತ್ತರ ಭಾರತ ಬೆಸೆಯುವ ಕಾಶಿ ತಮಿಳು ಸಂಗಮಂಗೆ ಮೋದಿ ಚಾಲನೆ
ಉತ್ತರ ಪ್ರದೇಶದ ವಾರಾಣಸಿಯಲ್ಲಿ ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ನಡುವಿನ ವಿಶೇಷ ನಂಟು, ಕಲೆ, ಆಚಾರ, ವಿಚಾರ, ಸಂಸ್ಕೃತಿಯಲ್ಲಿರುವ ಸಮಾನ ಅಂಶಗಳು, ಪುರಾತನ ಬೆಸುಗೆ ಕುರಿತು ಅರಿಯುವ, ಅಧ್ಯಯನ ನಡೆಸುವ, ಇತಿಹಾಸಕ್ಕೆ ಎಡತಾಕುವ ವಿಶೇಷ “ಕಾಶಿ ತಮಿಳು ಸಂಗಮಂ”ಗೆ (Kashi Tamil Sangamam) ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿಯಲ್ಲಿ ಚಾಲನೆ ನೀಡಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್ ಮಾಡಿ
5. ಬಿಲ್ಲವ, ಈಡಿಗಕ್ಕೆ 2ಎ ಮೀಸಲಾತಿ ಹೆಚ್ಚಳಕ್ಕಾಗಿ ಮಂಗಳೂರು to ಬೆಂಗಳೂರು ಪಾದಯಾತ್ರೆ
ರಾಜ್ಯದಲ್ಲಿ ಮೀಸಲಾತಿ ಕೂಗು ದಿನೇ ದಿನೆ ಹೆಚ್ಚಾಗುತ್ತಿದೆ. ಒಂದು ಸಮುದಾಯಕ್ಕೆ, ವರ್ಗಕ್ಕೆ ಮೀಸಲಾತಿ (Reservation in Karnataka) ಸಿಗುತ್ತಿದ್ದಂತೆ ಇನ್ನೊಂದು, ಮಗದೊಂದು ವರ್ಗಗಳು ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಒತ್ತಡ ಹೇರುತ್ತಿವೆ. ಈಗ ಬಿಲ್ಲವ, ಈಡಿಗ, ನಾಮಧಾರಿ ಸಮಾಜಕ್ಕೆ 2ಎ ಮೀಸಲಾತಿ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜ. ೬ರಿಂದ ಮಂಗಳೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆಯನ್ನು ಹಮ್ಮಿಕೊಳ್ಳುತ್ತಿರುವುದಾಗಿ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೬. ಸವಿಸ್ತಾರ ಅಂಕಣ | ಆರ್‌ಎಸ್‌ಎಸ್ ಚಿಂತನೆಗಳೊಂದಿಗೆ ಬಿಜೆಪಿ ನಾಯಕರ ಆಲೋಚನೆಗಳೇಕೆ ತಾಳೆ ಆಗುತ್ತಿಲ್ಲ?
ವಿಶ್ವದ ಅತ್ಯಂತ ದೊಡ್ಡ ಮಾನವ ಸಂಘಟನೆಯಾದ ಆರ್‌ಎಸ್‌ಎಸ್ ಪ್ರಮುಖರು ಒಂದು ಸಂದೇಶವನ್ನು ಹಲವು ವರ್ಷಗಳಿಂದ ಪುನರುಚ್ಚರಿಸುತ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಅದನ್ನು ಇನ್ನೂ ಅರ್ಥ ಮಾಡಿಕೊಂಡಿಲ್ಲ ಎನ್ನುತ್ತಾರೆ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ʻಸವಿಸ್ತಾರʼ ಅಂಕಣದಲ್ಲಿ. ಪೂರ್ಣ ಲೇಖನ ಓದಲು ಈ ಲಿಂಕ್ ಕ್ಲಿಕ್ ಮಾಡಿ
೭. ಬನ್ನಿ ನಮ್ಜೊತೆ ಕೆಲಸ ಮಾಡಿ, ಟ್ವಿಟರ್‌ನ ಮಾಜಿ ಉದ್ಯೋಗಿಗಳಿಗೆ ಕೂ ಆ್ಯಪ್ ಆಹ್ವಾನ
ಜಗತ್ತಿನ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ (Twitter) ಖರೀದಿಸುತ್ತಿದ್ದಂತೆ, ಅರ್ಧದಷ್ಟು ಉದ್ಯೋಗಿಗಳನ್ನು ಮನೆಗೆ ಕಳುಹಿಸಿದ್ದಾರೆ. ಇದೀಗ, ಭಾರತದಲ್ಲಿ ಟ್ವಿಟರ್ ಎದುರಾಳಿ ಎನಿಸಿಕೊಂಡಿರುವ ಕೂ ಆ್ಯಪ್ (Koo App), ಟ್ವಿಟರ್‌ನಿಂದ ವಜಾಗೊಂಡಿರುವ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
8. ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೂಗು; ಹಿಂದು ಯುವತಿಯ ಫೋಟೊ ಹರಿಬಿಟ್ಟ ಮುಸ್ಲಿಂ ಯುವಕ
ಕಳೆದ 2 ತಿಂಗಳಿಂದ ಮೊಹಮ್ಮದ್ ರೋಫ್ ಎಂಬ ಕೊಪ್ಪ ಮೂಲದ ವ್ಯಕ್ತಿಯೊಬ್ಬ ಹಿಂದು ಯುವತಿಯೊಬ್ಬಳ ಖಾಸಗಿ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ. ಇದರ ಹಿಂದೆ ಲವ್ ಜಿಹಾದ್ (Love Jihad) ಸಂಚು ಇದೆ ಎಂದು ಯುವತಿಯ ಸಹೋದರ ಆರೋಪಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೯. ಶ್ರದ್ಧಾ ಕೊಲೆ: ಮೆಹ್ರೌಲಿ ಕಾಡಿನಲ್ಲಿ ಪತ್ತೆಯಾದ ಮೂರು ಎಲುಬುಗಳು; ವಿಧಿ ವಿಜ್ಞಾನ ಲ್ಯಾಬ್ಗೆ ರವಾನೆ
ದೆಹಲಿ ಶ್ರದ್ಧಾ ವಾಳ್ಕರ್ ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ವಿಷಯ ಬಹಿರಂಗಗೊಳ್ಳುತ್ತಿದೆ. ಅಫ್ತಾಬ್ ಎಂಬ ವಿಕೃತ ಹಂತಕ ಶ್ರದ್ಧಾಳನ್ನು 35 ತುಂಡುಗಳನ್ನಾಗಿ ಕತ್ತರಿಸಿ, ದೆಹಲಿಯ ವಿವಿಧ ಕಡೆ ಎಸೆದಿದ್ದಾನೆ. ಆ ದೇಹದ ಭಾಗಗಳನ್ನು ಪತ್ತೆ ಮಾಡುವುದೇ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೀಗ ಶ್ರದ್ಧಾ ಕೇಸ್ನಲ್ಲಿ ಮತ್ತೊಂದು ಬೆಳವಣಿಗೆಯಾಗಿದ್ದು, ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾಳ ಮೂರು ಮೂಳೆಗಳು ಪತ್ತೆಯಾಗಿವೆ. ಅವು ಶ್ರದ್ಧಾಳದ್ದೇ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
೧೦. ಇನ್ನು 29 ದಿನ ಫುಟ್ಬಾಲ್ ಅಭಿಮಾನಿಗಳು ನಿದ್ದೆ ಮಾಡುವುದಿಲ್ಲ! ಕಣ್ತುಂಬ ದೃಶ್ಯಕಾವ್ಯ!
ಬಿಸಿಲ ದೇಶವಾದ ಕತಾರಿನಲ್ಲಿ ನವೆಂಬರ್ 20ರಂದು ಆರಂಭವಾಗಿ ಮುಂದಿನ 29 ದಿನ ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬ ವೇದಿಕೆ ಏರಲಿದೆ. ಅದು ಫಿಫಾ ವಿಶ್ವಕಪ್ ಫುಟ್ಬಾಲ್! ಕತಾರ್‌ನ 5 ನಗರಗಳ 8 ಕ್ರೀಡಾಂಗಣಗಳಲ್ಲಿ ಲಕ್ಷ ಲಕ್ಷ ಫುಟ್ಬಾಲ್ ಅಭಿಮಾನಿಗಳು ಸೇರಿ ಕುಣಿದು ಕುಪ್ಪಳಿಸುತ್ತಾರೆ. ಈ ವಿಶ್ವಕಪ್ ಫುಟ್ಬಾಲ್ ಒಂದು ಜಾಗತಿಕ ಆಕರ್ಷಣೆಯೇ ಸರಿ! ಒಂದು ಅದ್ಭುತ ಸೆಲೆಬ್ರೇಶನ್! ಒಂದು ಅದ್ಭುತ ವೈಬ್ರೇಶನ್! ಒಂದು ಅದ್ಭುತ ದೃಶ್ಯ ಕಾವ್ಯ!
ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
ನೀವು ಓದಲೇಬೇಕಾದ ಇನ್ನಷ್ಟು ಕುತೂಹಲಕಾರಿ ಸುದ್ದಿಗಳು ಇಲ್ಲಿವೆ
೧. ವಿಶ್ವ ಪುರುಷರ ದಿನದ ಆಚರಣೆ ಏಕೆ? ಭಾರತದಲ್ಲಿ ಇದನ್ನು ಪ್ರಾರಂಭಿಸಿದ ಮಹಿಳೆ ಯಾರು?
2. ವಿಸ್ತಾರ Explainer | ಉಗ್ರರಿಗೆ ಹಣಕಾಸಿನ ನೆರವಿನ ವಿರುದ್ಧ ಭಾರತದ ಸಮರ! ನಿರೀಕ್ಷೆ, ಸವಾಲುಗಳೇನು?
೩. ವಾರದ ವ್ಯಕ್ತಿಚಿತ್ರ ಫೇಸ್‌ಬುಕ್‌ನ ಭಾರತೀಯ ಘಟಕದ ಹೊಸ ಸಾರಥಿ ಸಂಧ್ಯಾ ದೇವನಾಥನ್
೪. Kantara Movie | ನಟ ಕಮಲ್ ಹಾಸನ್‌ಗೆ ಕಮಾಲ್ ಮಾಡಿದ ಕಾಂತಾರ ಸಿನಿಮಾ!
5. ನಿಶ್ಚಿತಾರ್ಥ ಮಾಡಿಕೊಂಡ ಆಮಿರ್ ಖಾನ್ ಪುತ್ರಿ ಇರಾ ಖಾನ್!