Site icon Vistara News

ವಿಸ್ತಾರ TOP 10 NEWS | ವರುಣಾರ್ಭಟಕ್ಕೆ ರಾಜ್ಯ ತತ್ತರ, ಅಮೆರಿಕ ದಾಳಿಗೆ ಜವಾಹಿರಿ ನಿರುತ್ತರ, ಭಾರತ-ಪಾಕ್‌ ಕ್ರಿಕೆಟ್‌ ಕದನಕ್ಕೆ ಕಾತರ

vistara top10

ಬೆಂಗಳೂರು: ಹಿಂದೆಂದೂ ಕಂಡರಿಯದ ಮಹಾಮಳೆಗೆ ರಾಜ್ಯ ತತ್ತರಿಸಿದೆ. ಕುಸಿದ ಗುಡ್ಡಗಳು, ಅದರೊಳಗೆ ಸಮಾಧಿಯಾದ ಜೀವಗಳು, ಕೊಚ್ಚಿ ಹೋದ ಜೀವಗಳು, ಅಪಾಯದಲ್ಲಿ ಸಿಲುಕಿದ ಜನರು.. ನಾಶವಾದ ಕೃಷಿ… ಹೀಗೆ ಇಡೀ ರಾಜ್ಯವೇ ಕಣ್ಣೀರ ಕಡಲಾಗಿ ಪರಿವರ್ತನೆಗೊಂಡಿದೆ. ಅತ್ತ ಅಫಘಾನಿಸ್ತಾನದ ಕಾಬೂಲಿನ ಸುರಕ್ಷಿತ ಮನೆಯಲ್ಲಿ ತಣ್ಣಗೆ ಕುಳಿತಿದ್ದ ಅಲ್‌ ಖೈದಾ ಪ್ರಧಾನ ನಾಯಕ ಅಲ್‌-ಜವಾಹಿರಿ ಅಮೆರಿಕದ ಕ್ಷಿಪಣಿ ದಾಳಿಗೆ ನಿರುತ್ತರನಾಗಿದ್ದಾನೆ. ಇನ್ನೊಂದು ಕಡೆ ಆಗಸ್ಟ್‌ ೨೭ರಂದು ಆರಂಭವಾಗಲಿರುವ ಏಷ್ಯಾ ಕಪ್‌ ಕ್ರಿಕೆಟ್‌ ಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನಕ್ಕೆ ಆಗಸ್ಟ್‌ ೨೮ರ ಮುಹೂರ್ತ ಫಿಕ್ಸ್‌ ಆಗಿದೆ. ದಿನ ಟಾಪ್‌ ೧೦ ಸುದ್ದಿಗಳು ಇಲ್ಲಿವೆ.

೧.‌ ರಾಜ್ಯದಲ್ಲಿ ರಣಭೀಕರ ಮಳೆ: ಕುಸಿದ ಬೆಟ್ಟಗಳು, ಉಕ್ಕಿದ ನದಿಗಳು, ಒಂದೇ ದಿನ 11 ಸಾವು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸುರಿದ ಭಾರಿ ಮಳೆ ರಾಜ್ಯದಲ್ಲಿ ಭಾರಿ ಅನಾಹುತಗಳನ್ನು ಸೃಷ್ಟಿಸಿದೆ. ಗುಡ್ಡ ಬೆಟ್ಟಗಳು ಕುಸಿದಿವೆ, ಮನೆಗಳು ನಾಶವಾಗಿದೆ, ನದಿಗಳು ಉಕ್ಕಿ ಹರಿಯುತ್ತಿವೆ. ೧೧ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ಬೆಳಗಾವಿ, ಹಾಸನ, ಶಿವಮೊಗ್ಗ, ತುಮಕೂರು, ದಾವಣಗೆರೆ, ಮೈಸೂರು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

೨. ಅಮೆರಿಕ ಡ್ರೋನ್‌ ದಾಳಿಗೆ ಅಲ್‌ ಖೈದಾ ನಾಯಕ ಜವಾಹಿರಿ ಬಲಿ
೨೦೦೧ರ ಸೆಪ್ಟೆಂಬರ್‌ ೧೧ರಂದು ಅಮೆರಿಕದ ಅವಳಿ ಗೋಪುರಗಳನ್ನು ಸ್ಪೋಟಿಸುವಲ್ಲಿ ಮಾಸ್ಟರ್‌ ಮೈಂಡ್‌ ಆಗಿ ಕಾರ್ಯ ನಿರ್ವಹಿಸಿದ್ದ ಎಂದು ಹೇಳಲಾಗುತ್ತಿರುವ ಅಲ್‌ ಖೈದಾದ ಹಾಲಿ ಮುಖ್ಯಸ್ಥ ಅಲ್‌ ಜವಾಹಿರಿಯನ್ನು ಅಮೆರಿಕ ಕೊಂದು ಹಾಕಿದೆ. ಕಾಬೂಲ್‌ನ ಸುರಕ್ಷಿತ ಮನೆಯಲ್ಲಿದ್ದ ಆತ ಬಾಲ್ಕನಿಗೆ ಬರುತ್ತಿದ್ದಂತೆಯೇ ಡ್ರೋನ್‌ ಮೂಲಕ ಕ್ಷಿಪಣಿ ದಾಳಿ ನಡೆಸಿ ಹತ್ಯೆ ಮಾಡಿದೆ. ಪೂರ್ಣ ಸುದ್ದಿಗೆ ಈ ಲಿಂಕ್‌ ಒತ್ತಿ

೩. ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್‌ ಕ್ಷಿಪಣಿಯ ಪವರ್‌ ಎಷ್ಟು?
ಅಲ್‌ ಜವಾಹಿರಿಯನ್ನು ಬೇರೆ ಯಾವ ಜೀವಹಾನಿಯೂ ಇಲ್ಲದಂತೆ ಆಕಾಶದಿಂದಲೇ ಕೊಂದು ಮುಗಿಸಲು ಬಳಸಿದ ಫ್ಲೈಯಿಂಗ್ ಗಿನ್ಸು (flying Ginsu) ಎಂದೂ ಕರೆಯಲಾಗುವ ಹೆಲ್‌ಫೈರ್ R9X ಬಗ್ಗೆ ಎಲ್ಲೆಡೆ ಕುತೂಹಲ ಮೂಡಿದೆ. ವಿಸ್ತಾರ Explainer ಓದಲು ಇಲ್ಲಿ ಕ್ಲಿಕ್‌ ಮಾಡಿ

4. ಬಣ ತಲ್ಲಣಗಳ ಮಧ್ಯೆ ಅದ್ಧೂರಿತನ; ರಾಜ್ಯದಲ್ಲಿ ಸಿದ್ದರಾಮೋತ್ಸವ ಧ್ಯಾನ!
ದಾವಣಗೆರೆ:
ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿರುವ, ಕಾಂಗ್ರೆಸ್‌ ಪಾಳೆಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಸಿದ್ದರಾಮೋತ್ಸವಕ್ಕೆ (Siddaramotsava) ಇನ್ನು ಗಂಟೆಗಳ ಲೆಕ್ಕಾಚಾರವಷ್ಟೇ ಬಾಕಿ ಇದೆ. ಸಿದ್ದರಾಮಯ್ಯ ಅವರ ಬಲ ಪ್ರದರ್ಶನದ ವೇದಿಕೆ ಎಂದೇ ಹೇಳಲಾಗುತ್ತಿರುವ ಸಿದ್ದರಾಮೋತ್ಸವ ಈಗ ಎಲ್ಲರ ಕುತೂಹಲದ ಕೇಂದ್ರ ಬಿಂದು. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

೫. ಪ್ರವೀಣ್‌ ನೆಟ್ಟಾರ್‌ ಕೊಲೆ: ಕೇಕ್‌ ಕೊಟ್ಟು ಲಾಕ್‌ ಇಬ್ಬರು ಆರೋಪಿಗಳು
ಬಿಜೆಪಿ ಯುವ ಮೋರ್ಚಾ ನಾಯಕನಾಗಿದ್ದ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಬಂಧಿಸಲಾಗಿದೆ. ಸದ್ದಾಂ ಮತ್ತು ಹಾರಿಸ್‌ ಅವರನ್ನು ಬೆಂಗಳೂರಿನಲ್ಲಿ ಸೆರೆ ಹಿಡಿದ ರೋಚಕ ಕಹಾನಿ ಇಲ್ಲಿದೆ. ಇಲ್ಲಿ ಕ್ಲಿಕ್‌ ಮಾಡಿ

೬. FAZIL MURDER | ಬಂಧಿತರಿಗೆ ಬಜರಂಗ ದಳ ಹಿನ್ನೆಲೆ, ಫಾಝಿಲ್‌ನನ್ನೇ ಟಾರ್ಗೆಟ್‌ ಮಾಡಿದ್ಯಾಕೆ?
ಸುರತ್ಕಲ್‌ನಲ್ಲಿ ನಡೆದಿದ್ದ ಮೊಹಮ್ಮದ್‌ ಫಾಝಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಆರು ಮಂದಿಯಲ್ಲಿ ನಾಲ್ವರು ಬಜರಂಗ ದಳದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಉಳಿದ ಇಬ್ಬರು ಅವರ ಗೆಳೆಯರು. ಬಂಧಿತರನ್ನು ಶ್ರೀನಿವಾಸ ಕಾಟಿಪಳ್ಳ, ಅಭಿಷೇಕ್,‌ ದೀಕ್ಷಿತ್ ಕಾಟಿಪಳ್ಳ, ಸುಹಾಸ್, ಮೋಹನ್ ಸಿಂಗ್‌ ಮತ್ತು ಗಿರೀಶ್ ಎಂದು ಗುರುತಿಸಲಾಗಿದೆ.  ಇದು ಪ್ರವೀಣ್‌ ನೆಟ್ಟಾರು ಹತ್ಯೆಗೆ ನಡೆದ ಪ್ರತಿಕಾರದ ಕೃತ್ಯವಾಗಿದೆ. ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

೭. ನ್ಯಾಷನಲ್‌ ಹೆರಾಲ್ಡ್‌ ಪ್ರಧಾನ ಕಚೇರಿ ಸಹಿತ ೧೧ ಕಡೆ ಇ.ಡಿ ದಾಳಿ, ಪ್ರತಿಭಟನೆಗೆ ಇಳಿದ ಕಾಂಗ್ರೆಸ್‌
ನ್ಯಾಷನಲ್‌ ಹೆರಾಲ್ಡ್‌ ಹಗರಣದ ಸುಳಿಯಲ್ಲಿ ಸಿಕ್ಕಿಬಿದ್ದಿರುವ ಕಾಂಗ್ರೆಸ್‌ಗೆ ಅದರಿಂದ ಸದ್ಯಕ್ಕೆ ಮುಕ್ತಿ ಇಲ್ಲ. ಮೊನ್ನೆಯಷ್ಟೇ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರನ್ನು ವಿಚಾರಣೆ ನಡೆಸಿದ್ದ ನಿರ್ದೇಶನಾಲಯ ಈಗ ಕಚೇರಿಗೇ ಲಗ್ಗೆ ಇಟ್ಟಿದೆ. ಕಾಂಗ್ರೆಸ್‌ ಇದರ ವಿರುದ್ಧ ಮತ್ತೆ ಪ್ರತಿಭಟನೆಗೆ ಇಳಿದಿದೆ. ವಿವರ ವರದಿಗೆ ಕ್ಲಿಕ್‌ ಮಾಡಿ

೮. ಆ. ೪ರಂದು ರಾಜ್ಯಕ್ಕೆ ಬರಲಿದ್ದಾರೆ ಅಮಿತ್‌ ಶಾ, ಕಾರ್ಯಕರ್ತರಿಗೆ ಹೇಳುತ್ತಾರಾ ಸಾಂತ್ವನ?
ಬಿಜೆಪಿ ರಾಷ್ಟ್ರೀಯ ನಾಯಕ, ಗೃಹ ಸಚಿವ ಅಮಿತ್‌ ಶಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ರಾಜ್ಯ ಬಿಜೆಪಿ ವಿರುದ್ಧ ಹೆಚ್ಚುತ್ತಿರುವ ಕಾರ್ಯಕರ್ತರ ಆಕ್ರೋಶದ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

೯. ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಡಬಲ್‌ ಚಿನ್ನ: ಚರಿತ್ರೆ ಸೃಷ್ಟಿಸಿದ ಲಾನ್‌ ಬೌಲ್‌ ತಂಡ, ಟಿಟಿಯಲ್ಲೂ ವಿಕ್ರಮ
ಕಾಮನ್ವೆಲ್ತ್‌ ಗೇಮ್ಸ್‌ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿರುವ ಭಾರತದ ಮಹಿಳೆಯರ ಫೋರ್‌ ಲಾನ್‌ ಬೌಲ್‌ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 17-10 ಅಂಕಗಳಿಂದ ಸೋಲಿರುವ ಭಾರತ ತಂಡದ ಸದಸ್ಯರಾದ ಲವ್ಲಿ ಚೌಬೆ, ಪಿಂಕಿ, ನಯೋನ್ಮಿನಿ ಸೈಕಿಯಾ ಹಾಗೂ ರೂಪಾ ರಾಣಿ ಅಮೋಘ ಸಾಧನೆ ಮಾಡಿದೆ. ಇನ್ನೊಂದು ಚಿನ್ನ ಬಂದಿರುವುದು ಪುರುಷರ ಟೇಬಲ್‌ ಟೆನಿಸ್‌ನಲ್ಲಿ. ವರದಿ ಓದಲು ಇಲ್ಲಿ ಕ್ಲಿಕ್‌ ಮಾಡಿ

೧೦. ಟಿ 20 ವಿಶ್ವಕಪ್‌ಗೂ ಮೊದಲು ಮತ್ತೊಂದು ಹೈವೋಲ್ಟೇಜ್‌ ಪಂದ್ಯ, ಆ.28ಕ್ಕೆ ಭಾರತ vs ಪಾಕ್ ಮ್ಯಾಚ್
ನವ ದೆಹಲಿ: ಏಷ್ಯಾಕಪ್‌-2022 ಪಂದ್ಯಾವಳಿಯ (Asia cup 2022) ವೇಳಾಪಟ್ಟಿ ಮಂಗಳವಾರ ಬಿಡುಗಡೆಯಾಗಿದೆ. ಟಿ20 ವಿಶ್ವಕಪ್‌ಗೂ ಮೊದಲೇ ಮತ್ತೊಂದು ಕುತೂಹಲಕಾರಿ ಪಂದ್ಯ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆಯಲಿದೆ. ಏಷ್ಯಾಕಪ್‌ ಭಾಗವಾಗಿ ಎರಡು ತಂಡಗಳ ನಡುವೆ ದುಬೈ ವೇದಿಕೆಯಾಗಿ ಆ.28ರಂದು ಹೈವೋಲ್ಟೇಜ್‌ ಪಂದ್ಯಕ್ಕೆ ಮುಹೂರ್ತ ನಿಗದಿಯಾಗಿದೆ.ಇಲ್ಲಿ ಕ್ಲಿಕ್‌ ಮಾಡಿ

Exit mobile version