1.ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠೆ; ನನಸಾಯ್ತು 5 ಶತಮಾನಗಳ ಕನಸು
ಸುಮಾರು 496 ವರ್ಷಗಳಿಂದ ಭಾರತದ ಕೋಟ್ಯಂತರ ನಾಗರಿಕರು ಕಾಣುತ್ತಿದ್ದ ರಾಮಮಂದಿರದ (Ram Mandir) ಕನಸು ನನಸಾಗಿದೆ. ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಗಿದೆ. ಇದರೊಂದಿಗೆ ರಾಮ ಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಇದು ರಾಮ ಮಂದಿರ ಅಷ್ಟೇ ಅಲ್ಲ, ರಾಷ್ಟ್ರ ಮಂದಿರ: ಮೋದಿ ಭಾವುಕ ನುಡಿ
ಈ ಸುದ್ದಿಯನ್ನೂ ಓದಿ: ಮಂದಿರ ಉದ್ಘಾಟಿಸಿ ಪ್ರಧಾನಿ ಮೋದಿ ಹೇಳಿದ ಮರೆಯಲಾಗದ ಮಾತುಗಳಿವು
ರಾಮ ಮಂದಿರ ಉದ್ಘಾಟನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
2.ತಪಸ್ವಿ ಮೋದಿಯಿಂದಾಗಿ ರಾಮ ಮರಳಿ ಬಂದಿದ್ದಾನೆ: ಮೋಹನ್ ಭಾಗವತ್ ಶ್ಲಾಘನೆ
ಅಯೋಧ್ಯೆಯ ಶ್ರೀರಾಮ ದೇವಸ್ಥಾನದಲ್ಲಿ ನಡೆದ ‘ಪ್ರಾಣ ಪ್ರತಿಷ್ಠಾಪನೆʼ ಸಮಾರಂಭದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಜನರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು ಪ್ರಧಾನಿ ಮೋದಿಯನ್ನು ತಪಸ್ವಿ ಎಂದು ಹೊಗಳುವ ಜತೆಗೆ ನವಭಾರತದ ಉದಯವಾಗಿದೆ ಎಂದು ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮಂದಿರವಲ್ಲೇ ಕಟ್ಟಿದೆವು ಎಂದು ಹೆಮ್ಮೆಯಿಂದ ಹೇಳಿದ ಯೋಗಿ ಆದಿತ್ಯನಾಥ್
3.ಪ್ರಾಣ ಪ್ರತಿಷ್ಠಾಪನೆ ಪ್ರಕ್ರಿಯೆಯಲ್ಲಿ ಮೋದಿಗೆ ಮಾರ್ಗದರ್ಶನ ಮಾಡಿದವರು ಪೇಜಾವರ ಶ್ರೀಗಳು ಪ್ರಧಾನಮಂತ್ರಿ ನರೇಂದ್ರ ಅವರು ರಾಮ ಮಂದಿರದ (Ram Mandir) ಶ್ರೀ ರಾಮಲಲ್ಲಾನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಬೆಳ್ಳಿಯ ಛತ್ರದೊಂದಿಗೆ ಮಂದಿರ ಪ್ರವೇಶಿಸಿದ ಅವರು ಪೂಜೆಗಳಲ್ಲಿ ಪಾಲ್ಗೊಂಡು ಪ್ರಾಣ ಪ್ರತಿಷ್ಠೆ ಮಾಡಿದರು. ಈ ಎಲ್ಲ ಪೂಜೆ ಹಾಗೂ ಪ್ರಾಣ ಪ್ರತಿಷ್ಠೆಗೆ ಪ್ರಧಾನಿ ಮೋದಿಗೆ ಮಾರ್ಗದರ್ಶನ ಮಾಡಿದವರು ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. ರಾಮ ಮಂದಿರ ಉದ್ಘಾಟನೆ ಬಳಿಕ ಮೋದಿ ಘೋಷಿಸಿದ ಯೋಜನೆಯಿಂದ 1 ಕೋಟಿ ಮನೆಗಳಿಗೆ ಲಾಭ! ಅಯೋಧ್ಯೆ ರಾಮ ಮಂದಿರ(Ayodhya Ram Mandir) ಉದ್ಘಾಟನೆಯ ಬಳಿಕ ಪ್ರಮುಖ ಯೋಜನೆಯೊಂದನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಘೋಷಣೆ ಮಾಡಿದ್ದಾರೆ. ಸೌರಶಕ್ತಿಯನ್ನು ಮನೆ ಮನೆಗೆ ತಲುಪಿಸುವ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು (Pradhanmantri Suryodaya Yojana) ಅವರು ಪ್ರಕಟಿಸಿದ್ದಾರೆ. ಅಯೋಧ್ಯೆಯಿಂದ ಹಿಂದಿರುಗಿದ ಬಳಿಕ ನಾನು ಘೋಷಿಸುತ್ತಿರುವ ಮೊದಲ ಯೋಜನೆ ಇದು ಎಂದು ಪ್ರಧಾನಿ ಮೋದಿ ಅವರು ಎಕ್ಸ್ ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
5. ನಾನು ನಾಸ್ತಿಕನಲ್ಲ-ಆಸ್ತಿಕ; ಜೈ ಶ್ರೀರಾಮ್ ಘೋಷಣೆ ಕೂಗಿದ ಸಿಎಂ!
ಅಧರ್ಮದ-ಅಮಾನವೀಯ ಕೆಲಸ ಮಾಡಿ ನಾಟಕೀಯವಾಗಿ ಪೂಜೆ ಮಾಡಿದರೆ ಆ ಪೂಜೆಯನ್ನು ದೇವರು ಒಪ್ಪಿಕೊಳ್ಳಲ್ಲ. ಸಕಲ ಜೀವಗಳೂ ಸಮಾನತೆ, ಪ್ರೀತಿಯಿಂದ ಬಾಳಬೇಕು ಎನ್ನುವುದು ಆದರ್ಶ ಶ್ರೀರಾಮನ ಆಶಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹಿರಂಡಹಳ್ಳಿಯಲ್ಲಿ ರಾಮ ಮಂದಿರ ಟಿಸಿ ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ram mandir: ಧೈರ್ಯವಾಗಿ ಶುಭಾಶಯ ಕೋರಿದ ಡಿಕೆಶಿ, ಹೆಬ್ಬಾಳ್ಕರ್
6.ನಾಳೆಯಿಂದ ಸಾರ್ವಜನಿಕರಿಗೆ ರಾಮ ಮಂದಿರ ಮುಕ್ತ; ಆರತಿ, ದರ್ಶನಕ್ಕೆ ಸಮಯ ನಿಗದಿ
ಅಯೋಧ್ಯೆಯ ರಾಮ ಮಂದಿರ (Ayodhya Ram Mandir) ಉದ್ಘಾಟನೆಯ ಸೋಮವಾರ ನಡೆದಿದ್ದು, ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಿದೆ. ಜ.22, ಸೋಮವಾರ ಉದ್ಘಾಟನೆಯಾಗಿರುವ ರಾಮ ಮಂದಿರವು ಜ.23, ಮಂಗಳವಾರದಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
7.ರಾಮಲಲ್ಲಾ ಪ್ರತಿಷ್ಠಾಪನೆ ದಿನವೇ ಹೆರಿಗೆ; ಬೆಂಗಳೂರಲ್ಲಿ 60ಕ್ಕೂ ಹೆಚ್ಚು ಮಕ್ಕಳ ಜನನ
ರಾಮಲಲ್ಲಾ ಪ್ರತಿಷ್ಠಾಪನೆ ದಿನದಂದು ಹೆರಿಗೆಗೆ ಸಿಲಿಕಾನ್ ಸಿಟಿಯ ಆಸ್ಪತ್ರೆಗಳಲ್ಲಿ ಭಾರಿ ಬೇಡಿಕೆ ಉಂಟಾಗಿತ್ತು. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾದ ಐತಿಹಾಸಿಕ ದಿನದಂದು (ಜ.22) ಮಕ್ಕಳನ್ನು ಪಡೆಯಲು ಅನೇಕ ಪೋಷಕರು ಬಯಸಿದ್ದರು. ಇದೀಗ ರಾಜಧಾನಿಯಲ್ಲಿ ಸೋಮವಾರ ಸಂಜೆವರೆಗೆ 60ಕ್ಕೂ ಹೆಚ್ಚು ಮಕ್ಕಳು ಜನ್ಮ ಪಡೆದಿರುವುದು ಕಂಡುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ವಿಜಯಪುರ ಆಸ್ಪತ್ರೆಯಲ್ಲಿ ಉಚಿತ ಹೆರಿಗೆ; 5 ದಿನದಲ್ಲಿ 61 ಮಕ್ಕಳ ಜನನ, ಅಲ್ಲೇ ನಾಮಕರಣ
ಈ ಸುದ್ದಿಯನ್ನೂ ಓದಿ: ಆ ಜೋಡಿಯ ಮದುವೆಗೆ ರಾಮನೇ ಸಾಕ್ಷಿ, ಕೈಯಲ್ಲೇ ಎರಡು ಕಿ.ಮೀ ನಡೆದ ಯುವಕ!
ಈ ಸುದ್ದಿಯನ್ನೂ ಓದಿ: ರಾಮನ ವೇಷ ಧರಿಸಿ ಶಾಲೆಗೆ ಬಂದ ಬಾಲಕ; ಸಹಪಾಠಿಗಳಿಂದ ಪಾದ ಪೂಜೆ
8. ಎಂಥ ಸೌಹಾರ್ದ ನೋಡಿ. ದರ್ಗಾದಲ್ಲಿ ಹಿಂದು-ಮುಸ್ಲಿಂ ಯುವಕರಿಂದ ಶ್ರೀರಾಮ ಜಪ!
ಭಗವಾನ್ ಶ್ರೀರಾಮನ ಹೆಸರಿನಲ್ಲಿ ಹಿಂದು-ಮುಸ್ಲಿಂ ಐಕ್ಯತೆಯ (Hindu muslim Harmony) ಮಹಾನ್ ಸಂದೇಶವನ್ನು ಸಾರಿದ ವಿಶೇಷ ವಿದ್ಯಮಾನ ಗದಗ ಜಿಲ್ಲೆಯಲ್ಲಿ (Gadaga News) ನಡೆದಿದೆ. ಇಲ್ಲಿ ಹಿಂದೂ-ಮುಸ್ಲಿಂ ಯುವಕರು ಸೇರಿ ಮಸೀದಿಯಲ್ಲಿ ಶ್ರೀರಾಮನ ಜಪ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ: ಮಂತ್ರಾಲಯದಲ್ಲಿ ಶ್ರೀರಾಮನ ಭವ್ಯ ಮೆರವಣಿಗೆ; ಚಾಲನೆ ನೀಡಿದ್ದು ಮುಸ್ಲಿಂ!
9. ರಾಮ ಮಂದಿರ ಉದ್ಘಾಟನೆ ದಿನವೇ ಶ್ರೀ ರಾಮ್, ಜೈ ಹನುಮಾನ್ ಸಿನಿಮಾ ಅನೌನ್ಸ್
ಭವ್ಯ ರಾಮಮಂದಿರದಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠಾಪನೆ ) ನೆರವೇರಿಸಲಾಗಿದೆ. ಇದರೊಂದಿಗೆ ರಾಮಮಂದಿರವು ಉದ್ಘಾಟನೆಯಾದಂತಾಗಿದ್ದು, ದೇಶಾದ್ಯಂತ ಸಂತಸ ಮನೆ ಮಾಡಿದೆ. ಎಲ್ಲರೂ ರಾಮ ನಾಮ ಸ್ಮರಣೆ ಮಾಡುವ ಶುಭ ಘಳಿಗೆಯಲ್ಲಿ “ಶ್ರೀ ರಾಮ್, ಜೈ ಹನುಮಾನ್” ಎಂಬ ಹೊಚ್ಚ ಹೊಸ ಪ್ಯಾನ್ ಇಂಡಿಯಾ ಸಿನಿಮಾ ಘೋಷಣೆಯಾಗಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
10. ಮೇ 26ರಂದು ನಡೆಯಲಿದೆ ಐಪಿಎಲ್ ಫೈನಲ್ ಪಂದ್ಯ
ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2024) ಕ್ರಿಕೆಟ್ ಟೂರ್ನಿ ಮಾರ್ಚ್ 22 ರಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಕೆಲವು ದಿನಗಳ ಹಿಂದೆ ವರದಿಯಾಗಿತ್ತು. ಇದೀಗ ಟೂರ್ನಿಯ ಫೈನಲ್ ಮೇ 26 ರಂದು ನಡೆಸಲು ಬಿಸಿಸಿಐ ಮುಂದಾಗಿದೆ ಎಂದು ತಿಳಿದುಬಂದಿದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ