1. Pulse of Karnataka: ಕರ್ನಾಟಕದಲ್ಲಿ ಈ ಬಾರಿಯೂ ಅತಂತ್ರ ಫಲಿತಾಂಶ: ವಿಸ್ತಾರ ನ್ಯೂಸ್ ಮೆಗಾ ಸರ್ವೆ
ವಿಸ್ತಾರ ನ್ಯೂಸ್ ನಡೆಸಿದ ಅತಿದೊಡ್ಡ ಚುನಾವಣಾ ಪೂರ್ವ ಸಮೀಕ್ಷೆ ʻಪಲ್ಸ್ ಆಫ್ ಕರ್ನಾಟಕʼ ಅಂತಿಮ ಫಲಿತಾಂಶ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಈ ಬಾರಿ ಅತಂತ್ರ ಫಲಿತಾಂಶ ಬರಲಿದೆ. ಆಡಳಿತಾರೂಢ ಬಿಜೆಪಿಗೆ 88-93, ಕಾಂಗ್ರೆಸ್ಗೆ 84-90. ಜೆಡಿಎಸ್‌ಗೆ 23-26 ಸ್ಥಾನ ನಿರೀಕ್ಷೆ. ಇಲ್ಲಿದೆ ಮೆಗಾ ಸರ್ವೆಯ ಕಂಪ್ಲೀಟ್ ರಿಪೋರ್ಟ್.
2. ಏಪ್ರಿಲ್ 9ರಂದು ರಾಜ್ಯದಲ್ಲಿ ಮೋದಿ-ರಾಹುಲ್ ಭರ್ಜರಿ ಶೋ: ಹುಲಿ ಪ್ರಾಜೆಕ್ಟ್ ವರ್ಸಸ್ ಸತ್ಯಮೇವ ಜಯತೆ
ಏಪ್ರಿಲ್ 9ರಂದು ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಬ್ಬರದ ಶೋ ಇರಲಿದೆ. ಪ್ರಧಾನಿ ಮೋದಿ ಅವರು ಹುಲಿ ಪ್ರಾಜೆಕ್ಟ್ ಸ್ವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರೆ, ರಾಹುಲ್ ಗಾಂಧಿ ಅವರು ತಮ್ಮನ್ನು ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲು ಕಾರಣವಾದ ಮಾನನಷ್ಟ ಮೊಕದ್ದಮೆ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
1.Modi in Karnataka : ಹುಲಿ ಪ್ರಾಜೆಕ್ಟ್ ಕಾರ್ಯಕ್ರಮಕ್ಕೆ ಬರುವ ಮೋದಿ ಬಂಡೀಪುರದಲ್ಲಿ ಸಫಾರಿ ಮಾಡ್ತಾರಾ?
2. Satyameva Jayate : ಏ.9ರಂದು ಸತ್ಯಮೇವ ಜಯತೇ ಹೋರಾಟಕ್ಕೆ ಕೋಲಾರದಲ್ಲಿ ರಾಹುಲ್ ಚಾಲನೆ
3. ಕಾಂಗ್ರೆಸ್ 2ನೇ ಪಟ್ಟಿಗೆ ಸಿದ್ದು, ಡಿಕೆಶಿ ನಡುವೆ ಮೂಡದ ಒಮ್ಮತ, 30 ಕ್ಷೇತ್ರಗಳಿಗೆ ಸಿಂಗಲ್ ಹೆಸರು
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳನ್ನು ಫೈನಲ್ ಮಾಡುವಲ್ಲಿ ಕಾಂಗ್ರೆಸ್ ಉಳಿದೆರಡು ಪಕ್ಷಗಳಿಗಿಂತ ಮುಂದಿದೆ. 124 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿ ಬೀಗಿದ್ದ ಪಕ್ಷಕ್ಕೀಗ ಉಳಿದ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಕಷ್ಟವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎರಡನೇ ಪಟ್ಟಿ ಅಂತಿಮ ಮಾಡುವಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಒಮ್ಮತ ಮೂಡುತ್ತಿಲ್ಲ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
4. Bangalore- Mysore Expressway: ಜನಾಕ್ರೋಶಕ್ಕೆ ಮಣಿದು ಹೆದ್ದಾರಿ ಟೋಲ್ ಹೆಚ್ಚಳ ಕೈಬಿಟ್ಟ ಪ್ರಾಧಿಕಾರ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (Bangalore- Mysore Expressway) ಏಪ್ರಿಲ್ ಒಂದರಿಂದ ಜಾರಿಗೆ ಬರಬೇಕಾಗಿದ್ದ ಟೋಲ್ ದರ ಹೆಚ್ಚಳವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸದ್ಯಕ್ಕೆ ಕೈಬಿಟ್ಟಿದೆ. ಹೆದ್ದಾರಿ ಸಂಚಾರ ಆರಂಭವಾದ 17ನೇ ದಿನಕ್ಕೇ ಟೋಲ್ ದರವನ್ನು ಹೆಚ್ಚಿಸಿರುವುದರ ವಿರುದ್ಧ ಜನಾಕ್ರೋಶ ಹೆಚ್ಚಿದ ಹಿನ್ನೆಲೆಯಲ್ಲಿ ಪ್ರಾಧಿಕಾರ ಟೋಲ್ ದರ ಹೆಚ್ಚಳವನ್ನು ಮುಂದೂಡಿದೆ. ಸದ್ಯಕ್ಕೆ ಹಳೆ ದರವನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಪ್ರಕಟಿಸಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
5. IPL2023: ಮುಂಬೈ ಇಂಡಿಯನ್ಸ್ಗೆ ಚಾಲೆಂಜ್ ಮಾಡಲು ಸಜ್ಜಾದ ಆರ್‌ಸಿಬಿ: ಬೆಂಗಳೂರಲ್ಲಿ ನಡೆಯಲಿದೆ ಹಬ್ಬ
ಐಪಿಎಲ್ನ(IPL 2023) ಭಾನುವಾರದ ಮುಖಾಮುಖಿಯಲ್ಲಿ ಕನ್ನಡಿಗರ ನೆಚ್ಚಿನ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಮುಂಬೈ ಇಂಡಿಯನ್ಸ್(Mumbai Indians) ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಉಭಯ ತಂಡಗಳಿಗೂ ಗಾಯದ್ದೇ ಪ್ರಮುಖ ಚಿಂತೆಯಾಗಿದೆ. ಕೊರೊನಾದ ಮೂರು ವರ್ಷಗಳ ಬಳಿಕ ಆರ್‌ಸಿಬಿ ಸಂಪೂರ್ಣ ಸಾಮರ್ಥ್ಯದ ಪ್ರೇಕ್ಷಕರ ಮುಂದೆ ತವರಿನಲ್ಲಿ ಪಂದ್ಯವನ್ನಾಡುತ್ತಿದೆ. ಹೀಗಾಗಿ ಈ ಪಂದ್ಯ ರೋಚಕತೆಯಿಂದ ಸಾಗುವ ನಿರೀಕ್ಷೆ ಇದೆ. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
6. Ram Navami Violence: ಹೌರಾ ಗಲಭೆಯ ತನಿಖೆ ಎನ್‌ಐಎಗೆ ವಹಿಸಲು ಪ್ರಧಾನಿ ಮೋದಿಗೆ ಮನವಿ
ಪಶ್ಚಿಮ ಬಂಗಾಳ, ಬಿಹಾರ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ರಾಜ್ಯಗಳ ಹಲವು ಭಾಗಗಳಲ್ಲಿ ಶ್ರೀರಾಮನವಮಿ ಹಬ್ಬದ ದಿನ ನಡೆದ ಹಿಂಸಾಚಾರದ (Ram Navami Violence)ಉದ್ವಿಗ್ನತೆ ಶುರುವಾದ ಹಿಂಸಾಚಾರದ ಉದ್ವಿಗ್ನತೆ ಶುಕ್ರವಾರವೂ ಮುಂದುವರಿದ ಪರಿಣಾಮ ಇಂದು ಕೂಡ ಬಿಗಿ ಭದ್ರತೆ ವಹಿಸಲಾಗಿದೆ. ಹೌರಾ ಗಲಭೆಯ ತನಿಖೆಯನ್ನು ಎನ್‌ಐಎಗೆ ವಹಿಸಲು ಪ್ರಧಾನಿ ಮೋದಿಗೆ ಮನವಿ ಮಾಡಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
7. Defence Exports: ದೇಶದ ಶಸ್ತ್ರಾಸ್ತ್ರ ರಫ್ತು ಸಾರ್ವಕಾಲಿಕ ದಾಖಲೆ, 15 ಸಾವಿರ ಕೋಟಿ ದಾಟಿ ಮೈಲುಗಲ್ಲು
ಭಾರತವು ರಕ್ಷಣಾ ಶಸ್ತ್ರಾಸ್ತ್ರಗಳ ಉತ್ಪಾದನೆಯಲ್ಲಿ ದಿನೇದಿನೆ ಸ್ವಾವಲಂಬನೆ ಸಾಧಿಸುತ್ತಿದೆ. ಶಸ್ತ್ರಾಸ್ತ್ರಗಳಿಂದ ಹಿಡಿದು ಯುದ್ಧನೌಕೆಗಳನ್ನು ಕೂಡ ಭಾರತದಲ್ಲಿಯೇ ನಿರ್ಮಿಸಲಾಗುತ್ತಿದೆ. ಮೇಕ್ ಇಂಡಿಯಾ, ಆತ್ಮನಿರ್ಭರ ಭಾರತ ಅಭಿಯಾನದ ಅಡಿಯಲ್ಲಿ ದೇಶೀಯ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರ ಜತೆಗೆ ಭಾರತದ ರಕ್ಷಣಾ ರಫ್ತು (Defence Exports) ಕೂಡ ಏರಿಕೆಯಾಗಿದ್ದು, 2022-23ನೇ ಸಾಲಿನಲ್ಲಿ ಶಸ್ತ್ರಾಸ್ತ್ರಗಳ ರಫ್ತು 15,920 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದು ಸಾರ್ವಕಾಲಿಕ ದಾಖಲೆ ಎನ್ನಲಾಗುತ್ತಿದೆ. ಪೂರ್ಣ ವರದಿಗೆ ಕ್ಲಿಕ್ ಮಾ
8. Mahavir Jayanti : ಮಹಾವೀರ ಜಯಂತಿ ಸರಕಾರಿ ರಜಾ ದಿನ ಬದಲಾವಣೆ, ಏ. 3ರ ಬದಲು ಏಪ್ರಿಲ್ 4
ಶ್ರೀ ಮಹಾವೀರ ಜಯಂತಿ ಪ್ರಯುಕ್ತ ನೀಡಲಾಗುವ ಸರ್ಕಾರಿ ರಜಾದಿನವನ್ನು (Government holiday) ಬದಲಾಯಿಸಲಾಗಿದೆ. ಸರ್ಕಾರದ ಮೂಲ ರಜಾ ದಿನಗಳ ಪಟ್ಟಿಯಲ್ಲಿ ಏಪ್ರಿಲ್ 3ರಂದು ರಜೆ ಎಂದಿದೆ. ಅದನ್ನು ಬದಲಿಸಲಾಗಿದ್ದು ಈ ಬಾರಿ ಸರ್ಕಾರಿ ರಜಾ ದಿನ ಏಪ್ರಿಲ್ 4 ಎಂದು ಪ್ರಕಟಿಸಲಾಗಿದೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
9. ಪಾಕಿಸ್ತಾನದಲ್ಲಿ ಆಹಾರಕ್ಕೆ ಹಾಹಾಕಾರ; ರೇಷನ್ ವಿತರಣೆ ವೇಳೆ ಕಾಲ್ತುಳಿತವಾಗಿ 11 ಜನರ ಸಾವು
ಪಾಕಿಸ್ತಾನದಲ್ಲಿ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಡಿತರಗಳನ್ನು, ಆಹಾರ ಪದಾರ್ಥಗಳನ್ನು ಪಡೆಯಲು ಜನರ ನೂಕುನುಗ್ಗಲು ಹೆಚ್ಚುತ್ತಿದೆ. ಇದು ಕಾಲ್ತುಳಿತಕ್ಕೂ ಕಾರಣವಾಗುತ್ತಿದೆ. ಕರಾಚಿಯ ಸೀಮೆನ್ಸ್ ಚೌರಂಗಿ ಎಂಬಲ್ಲಿನ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸ್ಥಳೀಯರಿಗಾಗಿ ರೇಷನ್ (ಪಡಿತರ) ವಿತರಣೆ ಮಾಡಲಾಗುತ್ತಿತ್ತು. ಈ ವೇಳೆ ನೂಕುನುಗ್ಗಲು ಮಿತಿಮೀರಿ, ಕಾಲ್ತುಳಿತ (Pakistan Stampede) ಉಂಟಾಗಿ 11 ಮಂದಿ ಮೃತಪಟ್ಟಿದ್ದಾರೆ. ಹೀಗೆ ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಪೂರ್ಣ ವರದಿಗೆ ಕ್ಲಿಕ್ ಮಾಡಿ
10. ವಿಸ್ತಾರ ಅಂಕಣ: ಮತದಾರರು ʼದೇವರ’ ರೀತಿ ಹಕ್ಕು ಚಲಾಯಿಸುತ್ತಾರ? ʼದೇವರʼ ರೀತಿ ಸುಮ್ಮನೆ ಕೂರುತ್ತಾರ?
ಸೈದ್ಧಾಂತಿಕ ಸ್ಪಷ್ಟತೆಯಿಲ್ಲದ ಪಕ್ಷಾಂತರ ರಾಜಕಾರಣ, ಅದಕ್ಕೆ ಪೂರಕವಾಗಿರುವ ಜಾತಿ ವೋಟ್‌ಬ್ಯಾಂಕ್ ರಾಜಕೀಯಗಳನ್ನು ತಡೆಗಟ್ಟಲು ಮತದಾರರು ʻದೇವರʼ ರೀತಿ ಮತ ಹಾಕಬೇಕಾದುದು ಅಗತ್ಯವಾಗಿದೆ. ನಮ್ಮ ಮತದ ಯೋಗ್ಯತೆಗೆ ತಕ್ಕಂತೆ ನಮ್ಮ ಪ್ರತಿನಿಧಿ ಇರುತ್ತಾನೆ ಎನ್ನುತ್ತಾರೆ ವಿಸ್ತಾರ ನ್ಯೂಸ್ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ತಮ್ಮ ವಿಸ್ತಾರ ಅಂಕಣದಲ್ಲಿ. ಪೂರ್ಣ ಲೇಖನಕ್ಕೆ ಈ ಲಿಂಕ್ ಕ್ಲಿಕ್ ಮಾಡಿ
ಇತರ ಪ್ರಮುಖ ಸುದ್ದಿಗಳು
1. Karnataka Elections : ಜೆಡಿಎಸ್‌ಗೆ ಹೊಡೆತ; ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ
2. LPG Price: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 92 ರೂ. ಇಳಿಕೆ
3. Weather Report : ಬಿಸಿಲಿನಿಂದ ಬಸವಳಿದಿದ್ದೀರಾ? ಇಲ್ಲಿದೆ ಗುಡ್ ನ್ಯೂಸ್; ಇನ್ನು ಮೂರು ದಿನ ಮಳೆ ಸಾಧ್ಯತೆ
4. ಮಕ್ಕಳ ಕಥೆ: ಮಧುಕರ ಮತ್ತು ಅಜ್ಜ
5. ರಾಜ ಮಾರ್ಗ ಅಂಕಣ : ಮಾತೃತ್ವ, ಮಾರ್ಕೆಟಿಂಗ್ ಮತ್ತು ವಿಕೃತಿ; ತಾಯ್ತನ ಮಾರುಕಟ್ಟೆ ಸರಕು ಮಾಡಿದ್ಯಾರು?
6. ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಬ್ರೇಕಪ್? ಮತ್ತೊಬ್ಬ ನಟನ ಜತೆ ನಟಿ ಡೇಟಿಂಗ್!