ಮೈಸೂರು: ಮೌಲ್ಯ ಶಿಕ್ಷಣ ವಿಷಯದಲ್ಲಿ ರಾಜ್ಯದಾದ್ಯಂತ ಸದ್ದಿಲ್ಲದೇ ಮೌನಕ್ರಾಂತಿ ಮಾಡುತ್ತಿರುವ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏ.21ರಿಂದ 23ರವರೆಗೆ ರಾಮಕೃಷ್ಣ ನಗರದ ಐ ಬ್ಲಾಕ್‌ನಲ್ಲಿನ ನಂದನ ಉದ್ಯಾನವನದ ರಾಮಕೃಷ್ಣ ಸಭಾ ಮಂಟಪದಲ್ಲಿ ವಿವೇಕ ಶಿಬಿರ-2023 (Viveka Camp-2023) ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರಭಂಜನ ತಿಳಿಸಿದ್ದಾರೆ.
ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಮೂರು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ, ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರದಲ್ಲಿ ಎಂಟು, ಒಂಭತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು. ಮೊದಲು ನೋಂದಾಯಿಸಿದ 30 ಜನ ವಿದ್ಯಾರ್ಥಿಗಳಿಗೆ ಮಾತ್ರ ಈ ಬೇಸಿಗೆ ಶಿಬಿರದಲ್ಲಿ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ವಿವೇಕ ಶಿಬಿರದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿರುವುದಿಲ್ಲ. ಮೂರು ದಿನ ಮಧ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಮೊಬೈಲ್ ಸಂಖ್ಯೆ 9880649290, 7019796153, 7259369893 ಕರೆ ಮಾಡಿ ನೋಂದಾಯಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | Dancing in nature: ಅವನಿ ವಿಹಾರಂ- ಪ್ರಕೃತಿಯ ಮಡಿಲಲ್ಲಿ ಭರತನಾಟ್ಯ ವೈಭವಂ..! ಕನಕಮಜಲಿನಲ್ಲಿ ವೈಶಿಷ್ಟ್ಯಪೂರ್ಣ ಶಿಬಿರ
ಶಿಬಿರದಲ್ಲಿ ಮಕ್ಕಳಿಗೆ ಪರಿಚಯಿಸುವ ವಿಷಯಗಳು
ಶಿಬಿರದಲ್ಲಿ ಮಕ್ಕಳಿಗೆ ಯೋಗ, ಪ್ರಾಣಾಯಾಮ, ಆಯುರ್ವೇದ, ವಿಷ್ಣು ಸಹಸ್ರನಾಮ, ಭಗವದ್ಗೀತೆ, ರಾಮಾಯಣ, ಮಹಾಭಾರತ, ಸಂಸ್ಕೃತ ಶ್ಲೋಕಗಳು, ಆಹಾರ ಪದ್ಧತಿ, ಚಿತ್ರ ಕಲೆ, ಸಂಗೀತ, ನೃತ್ಯ, ಅರಣ್ಯ, ಪರಿಸರ, ವನ್ಯ ಜೀವಿಗಳು, ಸಾಮಾಜಿಕ ಜವಾಬ್ದಾರಿ, ಪುಸ್ತಕಗಳು, ಭಾಷಣ, ಬರವಣಿಗೆ, ನೀತಿ ಕಥೆ, ಜೀವನ ಚರಿತ್ರೆ, ಸೈನ್ಯ, ಸ್ವಾತಂತ್ರ್ಯ ಹೋರಾಟ, ಆಟಗಳು, ಹವ್ಯಾಸಗಳು, ನಕ್ಷೆಗಳು, ಪ್ರವಾಸ, ಗಾದೆಗಳು, ಒಗಟುಗಳು. ಇವೆಲ್ಲವುಗಳ ಬಗ್ಗೆ ಮೂಲಭೂತ ಹಾಗೂ ಸಂಕ್ಷಿಪ್ತ ಪರಿಚಯ ಮಾಡಲಾಗುತ್ತದೆ.