ಮೈಸೂರು: ನಗರದ ವಿವೇಕ ವಿದ್ಯಾ ವಾಹಿನಿ ಟ್ರಸ್ಟ್ (Viveka Vidya Vahini Trust) ವತಿಯಿಂದ ʼವಂದೇ ಸಿಂಹ ನಿನಾದಂʼ ಅಭಿಯಾನದ ಭಾಗವಾಗಿ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಫೆಬ್ರವರಿ 10ರಿಂದ 28ರವರೆಗೆ ರಾಜ್ಯಮಟ್ಟದ ಲಿಖಿತ ಮತ್ತು ಮೌಖಿಕ ರಸಪ್ರಶ್ನೆ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಯಾತ್ರೆಯ ಕುರಿತಾದ ʻಶಿಕಾಗೋದಲ್ಲಿ ವಿಜಯಪತಾಕೆʼ ಕಿರು ಪುಸ್ತಕ ಆಧಾರಿತ ಪ್ರಶ್ನೆಗಳನ್ನು ಮಕ್ಕಳಿಗೆ ಕೇಳಲಾಗುತ್ತದೆ.
ಸ್ಪರ್ಧೆಯಲ್ಲಿ ಭಾಗವಹಿಸಿದ ಪ್ರತಿ ವಿದ್ಯಾರ್ಥಿಗೂ ಸ್ವಾಮಿ ಪುರುಷೋತ್ತಮಾನಂದರು ಬರೆದ ʻಶಿಕಾಗೋದಲ್ಲಿ ವಿಜಯಪತಾಕೆʼ ಪುಸ್ತಕ ಮತ್ತು ಸ್ವಾಮಿ ವಿವೇಕಾನಂದರ ಸುಂದರ ಭಾವಚಿತ್ರವಿರುವ ಪ್ರಮಾಣ ಪತ್ರದ ನೀಡಲಾಗುತ್ತದೆ. 1000 ವಿಜೇತರಿಗೆ ಅತ್ಯುತ್ತಮ ಗುಣಮಟ್ಟದ ಸ್ಕೂಲ್ ಬ್ಯಾಗ್ ಮತ್ತು 1000 ಪುಸ್ತಕಗಳ ಬಹುಮಾನ ನೀಡಲಾಗುತ್ತದೆ.
ಇದನ್ನೂ ಓದಿ | ರಾಜ ಮಾರ್ಗ ಅಂಕಣ : ಅಭಿನವ ರವಿವರ್ಮ ಬಿಕೆಎಸ್ ವರ್ಮಾ ; ದೇವರೇ ಮೆಚ್ಚಿದ ಅಮರ ಚಿತ್ರ ಕಲಾವಿದ!
ರಾಜ್ಯದ 31 ಜಿಲ್ಲೆಗಳು, 75ಕ್ಕೂ ಹೆಚ್ಚಿನ ಪ್ರೌಢಶಾಲೆಗಳ 10,000 ವಿದ್ಯಾರ್ಥಿಗಳನ್ನು ತಲುಪುವ ಗುರಿ ಹೊಂದಲಾಗಿದೆ. ಪ್ರೌಢಶಾಲೆಗಳಲ್ಲಿ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲು ಕೈಜೋಡಿಸುವವರು ಮತ್ತು ಹೆಚ್ಚಿನ ಮಾಹಿತಿ ಬಯಸುವವರು ಮೊಬೈಲ್ ನಂ. 9880649290 ಸಂಪರ್ಕಿಸಬಹುದು.