ಬಳ್ಳಾರಿ: ಸುಂದರ, ಸ್ವಚ್ಛ ನಗರಕ್ಕಾಗಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರಿಗೆ ಚುನಾವಣೆಯಲ್ಲಿ (Karnataka election 2023) ಮತ ನೀಡಿ ಗೆಲ್ಲಿಸಬೇಕು ಎಂದು ಕಾಂಗ್ರೆಸ್ ಮುಖಂಡ ನಾರಾ ಪ್ರತಾಪ್ ರೆಡ್ಡಿ ಮನವಿ ಮಾಡಿದರು.
ನಗರ ಕ್ಷೇತ್ರದ ಬಸವೇಶ್ವರ ನಗರದ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಾರಾ ಪ್ರತಾಪ್ ರೆಡ್ಡಿ ದಂಪತಿ, ಬಳಿಕ ಕಾಂಗ್ರೆಸ್ ನಗರ ಅಭ್ಯರ್ಥಿ ನಾರಾ ಭರತರೆಡ್ಡಿ ಪರ ಮನೆಗೆ ಮನೆಗೆ ತೆರಳಿ ಮತಯಾಚನೆ ಮಾಡಿದರು.
ಇದನ್ನೂ ಓದಿ: Anekal News: ಕ್ಷುಲ್ಲಕ ಕಾರಣಕ್ಕೆ ಯುವಕರ ಮಧ್ಯೆ ಮಾರಾಮಾರಿ; ನಡು ರಸ್ತೆಯಲ್ಲಿ ಝಳಪಿಸಿದ ಮಚ್ಚು, ಲಾಂಗು!
ಬಳ್ಳಾರಿ ನಗರ ಅಭಿವೃದ್ಧಿಗೆ ಹಲವು ಯೋಜನೆ
ನಾರಾ ಭರತ್ ರೆಡ್ಡಿ ಯುವಕರಿದ್ದಾರೆ. ಬಳ್ಳಾರಿ ನಗರವನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅವರು ಹಲವು ಯೋಜನೆಯನ್ನು ರೂಪಿಸಿದ್ದಾರೆ. ಹೀಗಾಗಿ ಅವರಿಗೆ ಮತ ನೀಡುವ ಮೂಲಕ ಬಳ್ಳಾರಿ ನಗರದ ಅಭಿವೃದ್ಧಿಗೆ ತಾವೆಲ್ಲ ಕೈ ಜೋಡಿಸಬೇಕು ಎಂದರು. ನಾರಾ ಭರತ್ ರೆಡ್ಡಿ ಅವರ ಚುನಾವಣಾ ಸಂಕಲ್ಪವೇ ಭ್ರಷ್ಟಾಚಾರ ಮುಕ್ತ ಬಳ್ಳಾರಿ ಎಂಬುದಾಗಿದೆ ಎಂದು ನಾರಾ ಪ್ರತಾಪ್ ರೆಡ್ಡಿ ಇದೇ ವೇಳೆ ತಿಳಿಸಿದರು.
ಇಲ್ಲಿನ ಬಸವೇಶ್ವರ ನಗರ, ನೆಹರೂ ಕಾಲೋನಿ, ಸುಷ್ಮಾ ಸ್ವರಾಜ್ ಕಾಲೋನಿ ಸೇರಿದಂತೆ ಇಡೀ ವಾರ್ಡ್‌ನಾದ್ಯಂತ ನಾರಾ ಭರತ್ ರೆಡ್ಡಿ ಪರ ಪ್ರಚಾರ ನಡೆಸಲಾಯಿತು.
ಇದನ್ನೂ ಓದಿ: IPL 2023 : ಆರ್ಆರ್ ಸೇಡು ತೀರಿಸಿಕೊಳ್ಳುವುದಕ್ಕೆ ಹವಣಿಸುತ್ತಿದೆ ಗುಜರಾತ್
ಈ ಸಂದರ್ಭದಲ್ಲಿ ನಾರಾ ಶೈಲಜಾ ರೆಡ್ಡಿ, ಸುಮಂಗಳಮ್ಮ, ಲತಾ ಶೇಖರ್ ಹಾಗೂ ಚಾನಾಳ್ ಶೇಖರ್, ರಾಜಣ್ಣ, ಚಂದ್ರಶೇಖರ, ಕಿರಣ್ ಸ್ವಾಮಿ, ಕೊಟ್ರಯ್ಯಸ್ವಾಮಿ, ಕೇಣಿ ಬಸಪ್ಪ, ಮಿಂಚೇರಿ ನರೇಂದ್ರ ಬಾಬು, ಪ್ರಭಾಕರ ರೆಡ್ಡಿ, ಭಾಸ್ಕರ್ ರೆಡ್ಡಿ, ಚಿದಾನಂದ್ ಯಾದವ್, ಸಂತೋಷ್, ಸೋಮಶೇಖರ್, ಓಬಳಾರೆಡ್ಡಿ, ಬ್ಯಾಳಚಿಂತ ಶಿವಶಂಕರ ಗೌಡ, ಪಂಪನಗೌಡ, ಆನಂದಗೌಡ, ವಾಸು ರೆಡ್ಡಿ, ವೆಂಕಟರಾಮಿ ರೆಡ್ಡಿ ಸೇರಿದಂತೆ ಹಲವು ಜನ ಮುಖಂಡರು ಹಾಗೂ ಬೆಂಬಲಿಗರು ಭಾಗಿಯಾಗಿ ಮತಯಾಚನೆ ನಡೆಸಿದರು.