ಬಳ್ಳಾರಿ: ಸಾರ್ವತ್ರಿಕ ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ಬಳ್ಳಾರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್‌ರೆಡ್ಡಿ ಪರ ಕಾಂಗ್ರೆಸ್ ಮುಖಂಡ ನಾರಾ ಪ್ರತಾಪ್ ರೆಡ್ಡಿ ದಂಪತಿ ನಗರದ ಅಗಡಿ ಮಾರೆಪ್ಪ ಕಾಂಪೌಂಡ್, 16ನೇ ವಾರ್ಡ್‌ನ ವಿವಿಧೆಡೆ ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.
ವಿವಿಧೆಡೆ ಪ್ರಚಾರ
ನಗರದ ಅಗಡಿ ಮಾರೆಪ್ಪ ಕಾಂಪೌಂಡ್, ಮಾರುತಿ ಕಾಲೋನಿ ಹಾಗೂ 16ನೇ ವಾರ್ಡ್‌ನ ಮನೆ ಮನೆಗೂ ತೆರಳಿದ ಕಾಂಗ್ರೆಸ್ ಮುಖಂಡ ನಾರಾ ಪ್ರತಾಪ್ ರೆಡ್ಡಿ ಅವರು ತಮ್ಮ ಪತ್ನಿ ನಾರಾ ಶೈಲಜ ಅವರೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರ ಪ್ರಚಾರ ನಡೆಸಿದರು.
ಇದನ್ನೂ ಓದಿ: Viral Video : ಮೂರು ಚಿರತೆ ಅಟ್ಯಾಕ್ ಮಾಡಿದರೂ ಹೆದರದ ಈ ಪುಟ್ಟ ಪ್ರಾಣಿ ಯಾವುದು ನೋಡಿ!
ಇದಕ್ಕೂ ಮುನ್ನ ಶ್ರೀ ಸಾಯಿ ಸೇವಾ ಟ್ರಸ್ಟ್‌ನ ಆಡಳಿತ ಮಂಡಳಿ ವತಿಯಿಂದ ನಾರಾ ಪ್ರತಾಪ್ ರೆಡ್ಡಿ ದಂಪತಿಗೆ ಗೌರವಿಸಿ, ಸನ್ಮಾನಿಸಲಾಯಿತು.
ಬಳ್ಳಾರಿಯ ಅಭಿವೃದ್ಧಿಗೆ ನಾರಾ ಭರತ್ ರೆಡ್ಡಿಗೆ ಮತ ಹಾಕಿ
ನಂತರ ಮಾತನಾಡಿದ ಅವರು, ಬಳ್ಳಾರಿಯ ಅಭಿವೃದ್ಧಿಗೆ ಯುವ ನಾಯಕ ನಾರಾ ಭರತ್ ರೆಡ್ಡಿ ಅವರಿಗೆ ಮತ ಹಾಕಿ ಅತ್ಯಧಿಕ ಬಹುಮತದಿಂದ ಆರಿಸಿ ತರಬೇಕೆಂದು ಮನವಿ ಮಾಡಿದರು.
ಇದನ್ನೂ ಓದಿ: Saachi Marwah: ಕೆಕೆಆರ್ ನಾಯಕ ನಿತೀಶ್ ರಾಣಾ ಪತ್ನಿಯ ಕಾರು ಹಿಂಬಾಲಿಸಿ ಡಿಕ್ಕಿ ಹೊಡೆದ ಅಪರಿಚಿತರು
ಈ ಸಂದರ್ಭದಲ್ಲಿ ವಾರ್ಡ್‌ನ ಮುಖಂಡರಾದ ರಾಮು ರೇಣುಗುಂಟಲ, ಕಿಶೋರ್, ಜಯಂತ್, ವೀರಾಂಜನೇಯಲು, ಸುಕುಮಾರ್, ನಾರಾಯಣ ರೆಡ್ಡಿ, ಆರ್.ವೈ, ಹನುಮಂತ ರೆಡ್ಡಿ, ಶ್ರೀಕಾಂತ ರೆಡ್ಡಿ, ಓಬಳರೆಡ್ಡಿ, ಶಿವಕುಮಾರ್, ಸೋಮಶೇಖರ್, ವೇಣುಗೋಪಾಲ, ವೀರಾರೆಡ್ಡಿ ಸೇರಿದಂತೆ ಪಕ್ಷದ ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.