Site icon Vistara News

Voter data | ಬಗೆದಷ್ಟೂ ಬಯಲಾಗುತ್ತಿರುವ ಅಕ್ರಮದ ಚಿಲುಮೆ | ಬೆಂಗಳೂರು ದಕ್ಷಿಣದಲ್ಲಿ ಅಲ್ಪಸಂಖ್ಯಾತರೇ ಟಾರ್ಗೆಟ್‌?

voter list

ಬೆಂಗಳೂರು: ʼಚಿಲುಮೆʼ ಸಂಸ್ಥೆಯ ಹಗರಣದ ಕುರಿತು ಬಿಬಿಎಂಪಿ ನಡೆಸಿದ ಆಂತರಿಕ ತನಿಖೆಯಲ್ಲಿ ಹಲವಾರು ಗಂಭೀರ ಅಂಶಗಳು ಬಯಲಾಗಿವೆ. ಪೋನ್ ಮೂಲಕವೇ ಚಿಲುಮೆ ಟ್ರಸ್ಟ್ ಸುಮಾರು 1 ಲಕ್ಷದ 69 ಸಾವಿರ ಮತದಾರರ ಹೆಸರು ಡಿಲಿಟ್ ಮಾಡಿಸಿತ್ತು! ಇದರಲ್ಲಿ ಬಹುತೇಕ ಅಲ್ಪಸಂಖ್ಯಾತರ ಹೆಸರುಗಳೇ ಆಗಿದ್ದವು ಎಂಬ ಅಂಶ ಬಯಲಾಗಿದೆ.

ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಬಿಎಲ್‌ಓಗಳು ಕೊಟ್ಟ ಮಾಹಿತಿ ಕೇಳಿ ಹಿರಿಯ ಅಧಿಕಾರಿಗಳು ಶಾಕ್ ಆಗಿದ್ದಾರೆ. ಚಿಲುಮೆ ಟ್ರಸ್ಟ್ ಸಿಬ್ಬಂದಿ ಆಡಿಸಿದಂತೆ ಬಿಎಲ್‌ಓಗಳು ಆಡುತ್ತಿದ್ದರು. ಫೋನ್ ಕಾಲ್‌ನಲ್ಲೇ ಎಲ್ಲವೂ ನಡೆದು ಹೋಗುತ್ತಿತ್ತು. ಡಿಲೀಟ್ ಮಾಡಿ ಅಂದರೆ ಕ್ಷಣಮಾತ್ರದಲ್ಲಿ ಮತದಾರನ ಮಾಹಿತಿ ಡಿಲೀಟ್ ಆಗುತ್ತಿತ್ತು. ಚಿಲುಮೆ ಟ್ರಸ್ಟ್ ಸಿಬ್ಬಂದಿ ಎಸಿ ರೂಮಿನಲ್ಲೇ ಕುಳಿತುಕೊಂಡು ಕೆಲಸ ಮುಗಿಸುತ್ತಿದ್ದರು. ಒಂದು ಬಟನ್ ಪ್ರೆಸ್ ಮಾಡುವ ಮೂಲಕ ಸಾವಿರಾರು ಮತದಾರರ ಹೆಸರು ಡಿಲೀಟ್‌ ಆಗುತ್ತಿತ್ತು. ಹೀಗೆ ಪೋನ್ ಮೂಲಕವೇ ಚಿಲುಮೆ ಟ್ರಸ್ಟ್ ಡಿಲಿಟ್ ಮಾಡಿಸಿದ ಮತದಾರರ ಸಂಖ್ಯೆ ಸುಮಾರು 1 ಲಕ್ಷದ 69 ಸಾವಿರ!

ಇದನ್ನೂ ಓದಿ | Voter Data | ಅರ್ಜಿ ಸಲ್ಲಿಸದೇ ಡಿಲೀಟ್‌ ಆದ ಪಟ್ಟಿಯನ್ನು ರದ್ದುಪಡಿಸಿ: ʼಚಿಲುಮೆʼ ಅಕ್ರಮ ಕುರಿತು ಸಿದ್ದರಾಮಯ್ಯ ಸುದೀರ್ಘ ಹೇಳಿಕೆ

ಇದರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೇ ಅತಿ ಹೆಚ್ಚು ಮತದಾರರ ಸೇರ್ಪಡೆ ಹಾಗೂ ಡಿಲೀಟ್‌ ಆಗಿದೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರನ್ನೇ ಟಾರ್ಗೆಟ್ ಮಾಡಲಾಗಿದೆ. ದಕ್ಷಿಣ ಕ್ಷೇತ್ರದಲ್ಲಿ ಬರೋಬ್ಬರಿ 45,927 ಮತದಾರರ ಹೆಸರು ಡಿಲೀಟ್ ಆಗಿದ್ದು, 35,258 ಮತದಾರರ ಹೆಸರು ಸೇರಿಸಲಾಗಿದೆ. ದಕ್ಷಿಣ ವಿಧಾನಸಭಾ ಕ್ಷೇತ್ರ ಒಟ್ಟು 6,42,354 ಮತದಾರರನ್ನು ಹೊಂದಿದೆ. 2019ರಲ್ಲಿ ದಕ್ಷಿಣ ಕ್ಷೇತ್ರದಲ್ಲಿ ಮತದಾರರ ಸಂಖ್ಯೆ 3,64,708 ಇತ್ತು. ಮೂರು ವರ್ಷದ ಅಂತರದಲ್ಲಿ ಮತದಾರರ ಸಂಖ್ಯೆ ಡಬಲ್​ ಆಗಿದೆ. ಬೆಂಗಳೂರಿನಲ್ಲೆಲ್ಲಾ ಅತೀ ಹೆಚ್ಚು ಮತದಾರರ ಸೇರ್ಪಡೆ ಹಾಗೂ ಡಿಲೀಟ್ ಆಗಿರುವುದು ದಕ್ಷಿಣದಲ್ಲಿ. ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರಹಳ್ಳಿ, ವಸಂತಪುರ, ಸುಬ್ರಹ್ಮಣ್ಯಪುರ, ಯಲಚೇನಹಳ್ಳಿ, ಕೋಣನಕುಂಟೆ, ಅಂಜನಾಪುರ, ಬೇಗೂರು, ಕಾಳೇನ ಅಗ್ರಹಾರಗಳಲ್ಲಿ ಈ ಕೃತ್ಯ ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದನ್ನೂ ಓದಿ | ವಿಸ್ತಾರ TOP 10 NEWS | ʼಚಿಲುಮೆʼ ಕೇಸ್‌ನಲ್ಲಿ ಇಬ್ಬರು ಸಸ್ಪೆಂಡ್‌ನಿಂದ ಮಂಗಳೂರು ಕೇಸ್‌ NIAವರೆಗಿನ ಪ್ರಮುಖ ಸುದ್ದಿಗಳಿವು

Exit mobile version