Site icon Vistara News

Voter data | ಎಲ್ಲಾ ಮಾಡ್ತಿರೋದು ಮಂತ್ರಿಗಳಿಗೆ ಸೇರಿದ ಬೇನಾಮಿ ಹೆಸರಿನ ಸಂಸ್ಥೆ ಎಂದ ಎಚ್‌.ಡಿ ಕುಮಾರಸ್ವಾಮಿ

hdk power

ರಾಮನಗರ: ಬಿಜೆಪಿಯವರು ಸರ್ಕಾರದ ದುಡ್ಡಲ್ಲಿ ಚುನಾವಣಾ ಅಕ್ರಮ ಮಾಡಲು ಮುಂದಾಗಿದ್ದಾರೆ. ಮತದಾರರ ಮಾಹಿತಿಯನ್ನು (voter data) ಖಾಸಗಿಯವರಿಗೆ ಕೊಡಲಾಗಿದೆ. ಇದನ್ನು ಮಾಡುತ್ತಿರುವುದು ಮಲ್ಲೇಶ್ವರಂನಲ್ಲಿರುವ ಬೇನಾಮಿ ಹೆಸರಿನ ಮಂತ್ರಿಗಳ ಸಂಸ್ಥೆ ಎಂದು ಮಾಜಿ ಸಿಎಂ, ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು.

ಕಾಂಗ್ರೆಸ್‌ ಗುರುವಾರ ಮುಂಜಾನೆ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಮತದಾರರ ಚೀಟಿ ಅಕ್ರಮಕ್ಕೆ ಸಂಬಂಧಿಸಿ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದರು.
ʻʻಮಂತ್ರಿಗಳಿಗೆ ಸೇರಿದ ಬೇನಾಮಿ ಸಂಸ್ಥೆ ಮೂಲಕ ಈ ಕೆಲಸ ಮಾಡಿಸಲಾಗಿದೆ. ಹಿಂದೆ ಬಿಬಿಎಂಪಿಗೆ ಬೆಂಕಿ ಇಟ್ಟಿದ್ರಲ್ಲ ಅದೇ ಕಂಪೆನಿ ಇದು. ಪಾಲಿಕೆಯಲ್ಲಿ ಅಕ್ರಮ ಮಾಡಿ ಮಧ್ಯರಾತ್ರಿ ಕಡತಗಳಿಗೆ ಬೆಂಕಿಹಾಕಿದ್ದು ಇದೇ ಕಂಪನಿʼʼ ಎಂದು ಹೇಳಿದರು.

ʻʻಈ ಹಿಂದೆ ಕಾಂಗ್ರೆಸ್‌ನವರು ಮಾಡಿದ್ದ ಕೆಲಸವನ್ನೇ ಬಿಜೆಪಿಯವರು ಮಾಡಿದ್ದಾರೆ. ಈಗ ಕಾಂಗ್ರೆಸ್‌ನವರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳೇ ಹೀಗೆʼʼ ಎಂದು ಎರಡೂ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ʻʻಇವಿಎಂ ಇರೋತನಕ ಬಿಜೆಪಿಗೆ ಯಾವುದೇ ಸಮಸ್ಯೆ ಇಲ್ಲ ಅಂತ ಮೊನ್ನೆ ತೆಲಂಗಾಣ ಸಿಎಂ ಹೇಳಿದ್ದಾರೆ. ಬಿಜೆಪಿಯವ್ರು ಯಾವುದೇ ಜನಪರ ಕೆಲಸ ಮಾಡ್ತಿಲ್ಲ. ಈ ರೀತಿ ಅಡ್ಡದಾರಿಯಲ್ಲಿ ಅಧಿಕಾರ ಹಿಡಿಯುವ ಕೆಲಸ ಮಾಡ್ತಿದ್ದಾರೆ. ಮಾಹಿತಿ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ತಿದ್ದಾರೆʼʼ ಎಂದು ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ | Congress allegation | 18,000 ನಕಲಿ ಬಿಎಲ್‌ಒಗಳ ನೇಮಕ: ಪರಿಶಿಷ್ಟ, ಮುಸ್ಲಿಂ ಮತದಾರರ ಕಿತ್ತು ಹಾಕಲು ಹುನ್ನಾರ

Exit mobile version