Site icon Vistara News

Voters List: ಇಂದು- ನಾಳೆ ವಿಶೇಷ ಮತದಾರ ನೋಂದಣಿ ಅಭಿಯಾನ

voter list

ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತು ನಾಳೆ ವಿಶೇಷ ಮತದಾರರ ನೋಂದಣಿ (Voters registration) ಅಭಿಯಾನ ನಡೆಯಲಿದೆ. ನಿಮ್ಮ ಮತದಾರರ ನೋಂದಣಾಧಿಕಾರಿ ಕಚೇರಿಗೇ ತೆರಳಿ ಮತದಾರರ ಪಟ್ಟಿಯಲ್ಲಿ (Voters List) ಹೆಸರು ಸೇರಿಸಲು, ತಿದ್ದುಪಡಿಗೆ ಹಾಗೂ ಬದಲಾವಣೆಗೆ ಅವಕಾಶ ನೀಡಲಾಗಿದೆ.

ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಗೆ ಮುಂದಾಗಿದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಮತದಾರರ ನೋಂದಣಿಗೆ ಸಮಯ ನಿಗದಿಪಡಿಸಲಾಗಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ/ಬದಲಾವಣೆ ಮಾಡಬಯಸಿದ್ದಲ್ಲಿ ಮಾಡಿಕೊಳ್ಳಬಹುದು.

ಸಂಬಂಧಿಸಿದ ಮತಗಟ್ಟೆಯ ಅಧಿಕಾರಿ, ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ನೇರವಾಗಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಆಯೋಗದ ಆ್ಯಪ್, ವೆಬ್‌ಸೈಟ್ ಮೂಲಕವೂ ಅರ್ಜಿ ಸಲ್ಲಿಸಬಹುದು. Voters.eci.gov.in ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಆನ್‌ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು.

ಆ್ಯಪ್ ಮೂಲಕ ಮಾಡುವುದಾದರೆ Voter Helpline Application ಡೌನ್‌ಲೋಡ್ ಮಾಡಿಕೊಳ್ಳಿ. ಅಗತ್ಯ ಬಿದ್ದರೆ ಕೇಂದ್ರ ಚುನಾವಣಾ ಆಯೋಗದ ಮತದಾರರ ಸಹಾಯವಾಣಿ 1950 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಡಿಸೆಂಬರ್ 9ರವರೆಗೆ ನಡೆಯಲಿದೆ.

ಇದನ್ನೂ ಓದಿ: Amit Shah: ಜನನ- ಮರಣ ನೋಂದಣಿ ಜತೆಗೆ ಮತದಾರರ ಪಟ್ಟಿ ಜೋಡಣೆ: ಅಮಿತ್ ಶಾ

Exit mobile version