Site icon Vistara News

Karnataka election 2023: ಮತದಾನ ಪ್ರಜಾಪ್ರಭುತ್ವದ ಅಡಿಪಾಯ: ಕಿರಣ ಪಾಟೀಲ

Karnataka election 2023 Voting is the foundation of democracy says Thaluk Panchayath Executive Officer Kiran Patil

ಬಸವಕಲ್ಯಾಣ: ಮತದಾನ (Voting) ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಅದು ಎಲ್ಲರ ಹಕ್ಕು ಮತ್ತು ಕರ್ತವ್ಯವಾಗಿದೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ, ಪ್ರಜಾಪ್ರಭುತ್ವ (Democracy) ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಪಾಟೀಲ ಹೇಳಿದರು.

ಇಲ್ಲಿನ ಶ್ರೀ ಬಸವೇಶ್ವರ ಶಿಕ್ಷಣ ಸಂಸ್ಥೆಯ ಅಕ್ಕಮಹಾದೇವಿ ಮಹಿಳಾ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಘಟಕದಿಂದ ಶನಿವಾರ ತಾಲೂಕಿನ ಕೋಟೆಯಿಂದ ಅಂಬೇಡ್ಕರ್ ವೃತ್ತದವರೆಗೆ ಹಮ್ಮಿಕೊಂಡ ಮತದಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮತದಾನ ಅತ್ಯಂತ ಪವಿತ್ರವಾದದು. ಅದು ನಮ್ಮ ಸಾಮಾಜಿಕ ಜವಾಬ್ದಾರಿಯು ಆಗಿದೆ ಎಂದು ಹೇಳಿದರು.‌

ಇದನ್ನೂ ಓದಿ: IPL 2023: ಚೆನ್ನೈ ಬೌಲಿಂಗ್​ ದಾಳಿಗೆ ಹಳಿ ತಪ್ಪಿದ ಮುಂಬೈ ಇಂಡಿಯನ್ಸ್​

ತಾಲೂಕು ಮತದಾನ ಜಾಗೃತಿ ನೋಡಲ್ ಅಧಿಕಾರಿ ಕಿರಣ ಪಾಟೀಲ ಮತದಾನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಳಿಕ ನಗರದ ಕೋಟೆಯಿಂದ ಅಂಬೇಡ್ಕರ್ ವೃತ್ತದವರೆಗೆ ಅಕ್ಕಮಹಾದೇವಿ ಮಹಿಳಾ ಪದವಿ ಕಾಲೇಜು ಹಾಗೂ ಶ್ರೀ ಬಸವೇಶ್ವರ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಿಂದ ಮತದಾನ ಜಾಗೃತಿ ಕುರಿತು ಜಾಥಾ ನಡೆಯಿತು.

ಈ ಸಂದರ್ಭದಲ್ಲಿ ಬಸವಕಲ್ಯಾಣ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜೆ. ಹಳ್ಳದ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿರುಪಾಕ್ಷನಗೌಡ ಹಿರೆಗೌಡ, ಹುಲಸೂರು ಬಿಇಒ ಸೂರ್ಯಕಾಂತ ಪಾಟೀಲ, ನಗರ ಸಭೆ ಪೌರಾಯುಕ್ತ ಸಜ್ಜನ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ, ಬಸವೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಮಲ್ಲಿಕಾರ್ಜುನ ಲಕಶೆಟ್ಟಿ, ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯೆ ಮಾಯಾ ಮುರಾಳೆ, ಬಸವೇಶ್ವರ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ. ರುದ್ರಮಣಿ ಮಠಪತಿ, ಬಸವೇಶ್ವರ ವಿಜ್ಞಾನ ಪಿಯು ಕಾಲೇಜಿನ ಪ್ರಾಚಾರ್ಯ ನೂರ್ ಮೆಹೆಬೂಬ್ ಶೇಖ್, ಇತರರಿದ್ದರು.

ಇದನ್ನೂ ಓದಿ: IPL 2023: ಶೂನ್ಯ ಸುತ್ತಿ ಐಪಿಎಲ್​ನಲ್ಲಿ ಕೆಟ್ಟ ದಾಖಲೆ ಬರೆದ ರೋಹಿತ್​ ಶರ್ಮ

ಎನ್‌ಎಸ್‌ಎಸ್ ಅಧಿಕಾರಿ ವೆಂಕಟರಾವ್‌ ಗುನಾಳೆ ಸ್ವಾಗತಿಸಿದರು. ಡಾ. ಭೀಮಾಶಂಕರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗನ್ನಾಥರೆಡ್ಡಿ ಕಲ್ಲುರೆ ವಂದಿಸಿದರು.

Exit mobile version