Site icon Vistara News

VTU Convocation : ಆ. 1ಕ್ಕೆ ವಿಟಿಯು ಘಟಿಕೋತ್ಸವ; ನಿರ್ಮಲಾನಂದನಾಥ ಶ್ರೀ, ಎಚ್.ಎಸ್. ಶೆಟ್ಟಿ, ಎ.ವಿ.ಎಸ್ ಮೂರ್ತಿಗೆ ಗೌರವ ಡಾಕ್ಟರೇಟ್‌

VTU Vice Chancellor Dr N Vidyashankar Pressmeet

ಬೆಳಗಾವಿ: ಆಗಸ್ಟ್ 1ರಂದು ವಿಟಿಯು ಘಟಿಕೋತ್ಸವ (VTU Convocation) ಸಮಾರಂಭ ನಡೆಯಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha Swamiji), ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಡಾ. ಎ.ವಿ.ಎಸ್ ಮೂರ್ತಿ (AVS Murthy) ಹಾಗೂ ಮೈಸೂರು ಮರ್ಕಂಟೈಲ್‌ ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ಎಚ್.ಎಸ್. ಶೆಟ್ಟಿ (HS Shetty) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಟಿಯು ಕುಲಪತಿ ಡಾ. ಎನ್. ವಿದ್ಯಾಶಂಕರ, ವಿಟಿಯು ವತಿಯಿಂದ ಈ ಬಾರಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ನಿರ್ಮಲಾನಂದನಾಥ ಸ್ವಾಮೀಜಿ

ಘಟಿಕೋತ್ಸವ ಸಮಾರಂಭವನ್ನು ವಿಟಿಯು ಆವರಣದಲ್ಲಿ ಆಯೋಜನೆ ಮಾಡಲಾಗಿದೆ. ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹಾಗೂ ಮದ್ರಾಸ್ ಐಐಟಿಎಂನ ನಿರ್ದೇಶಕ ಪ್ರೊ. ವಿ ಕಾಮಕೋಟಿ ಘಟಿಕೋತ್ಸವದಲ್ಲಿ ಪ್ರಧಾನ‌ ಭಾಷಣ ಮಾಡಲಿದ್ದಾರೆ ಎಂದು ಡಾ. ಎನ್. ವಿದ್ಯಾಶಂಕರ ತಿಳಿಸಿದರು.

ಎಚ್.ಎಸ್. ಶೆಟ್ಟಿ

ಬೆಂಗಳೂರು ಸರ್ ಎಂ ವಿಐಟಿ ಸಿವಿಲ್ ವಿಭಾಗದ ಮದಕಶಿರಾ ವಿಕಾಸ್‌ಗೆ 13 ಚಿನ್ನದ ಪದಕ, ಬೆಂಗಳೂರು ಬಿಐಟಿ ಕಾಲೇಜಿನ ಮೆಕ್ಯಾನಿಕಲ್ ವಿಭಾಗದ ಜಿ. ಅಭಿಷೇಕ್‌ಗೆ 7 ಚಿನ್ನದ ಪದಕ, ಬೆಂಗಳೂರು ಎಸ್ ಎಂ ವಿಐಟಿ ಕಾಲೇಜು ಇಎನ್‌ಸಿ ವಿಭಾಗದ ಗುಡಿಕಲ್ ಸಾಯಿ ವಂಶಿಗೆ 7 ಚಿನ್ನದ ಪದಕ, ಬಳ್ಳಾರಿ ಐಟಿಎಂ ಕಾಲೇಜಿನ ಇ ಆ್ಯಂಡ್ ಇ ವಿಭಾಗದ ಕೆ.ಆರ್. ಸಂಪತ್‌ ಕುಮಾರ್‌ಗೆ 7 ಚಿನ್ನದ ಪದಕಗಳನ್ನು ವಿತರಣೆ‌ ಮಾಡಲಾಗುವುದು ಎಂದು ವಿಟಿಯು ಕುಲಪತಿ ಡಾ. ಎನ್. ವಿದ್ಯಾಶಂಕರ ಮಾಹಿತಿ ನೀಡಿದರು.

ಇದನ್ನೂ ಓದಿ: Karnataka Politics : ಸಚಿವರಿಂದ 6 ಪರ್ಸೆಂಟ್ ವರ್ಗಾವಣೆ‌, ಬಾಕಿಯದ್ದು ಸಿಎಂಗೆ: ಸತೀಶ್‌ ಜಾರಕಿಹೊಳಿ

ಇನ್ನು ವಿವಿಯ ಬಿಇ ಬಿಟೆಕ್ ವಿಭಾಗದ 42,545 ಬಿಇ ಆರ್ಕಿಟೆಕ್‌ನಲ್ಲಿ 1003 ಹಾಗೂ 556 ವಿವಿಧ ಸಂಶೋಧನಾ ವಿಷಯಗಳಿಗೆ ಪಿಎಚ್‌.ಡಿ ಪ್ರದಾನ ನಡೆಯಲಿದೆ ಎಂದು ಕುಲಪತಿ ಪ್ರೊ. ಎನ್. ವಿದ್ಯಾಶಂಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Exit mobile version