Site icon Vistara News

Vulgar Behavior | ಕಿಕ್‌ ಏರಿಸಿಕೊಂಡು ಕಿರಿಕ್‌ ಮಾಡಿದವನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆಯರು

Vulgar Behavior

ಧಾರವಾಡ: ಮದ್ಯವ್ಯಸನಿಯೊಬ್ಬ ನಡುರಸ್ತೆಯಲ್ಲಿ ಕಿರಿಕ್‌ ಮಾಡಿದ್ದಕ್ಕೆ ಮಹಿಳೆಯರೆಲ್ಲ ಸೇರಿ (Vulgar Behavior) ಧರ್ಮದೇಟು ನೀಡಿದ್ದಾರೆ. ಮಹಿಳೆಯರ‌ ಜತೆ ಅಸಭ್ಯ‌ ವರ್ತನೆ ಮಾಡಿದವನಿಗೆ ಚಪ್ಪಲಿ ಏಟು ನೀಡಿರುವ ಘಟನೆ ನಗರದ ಸುಭಾಸ್‌ ರಸ್ತೆಯಲ್ಲಿ ನಡೆದಿದೆ.

ರಸ್ತೆ ಬದಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯರಿಗೆ ಹಾಗೂ ರಸ್ತೆ ಮೇಲೆ‌ ಓಡಾಡುವವರ ಬಳಿ ಕುಡುಕನೊಬ್ಬ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದ. ಮೊದಮೊದಲು ಸುಮ್ಮನಿದ್ದ ಮಹಿಳೆಯರಿಗೆ ಈತನ ವರ್ತನೆ ಅತಿರೇಕ ಅನ್ನಿಸಿದಾಗ ಸಿಟ್ಟಿಗೆದ್ದಿದ್ದಾರೆ. ಆಗ ಹಣ್ಣು ಮಾರಾಟ ಮಾಡುವ ಮಹಿಳೆಯೊಬ್ಬರು, ಆತನನ್ನು ಹಿಡಿದೆಳೆದು ನಡು‌ ರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟಿದ್ದಾರೆ.

ಕುಡಿದ ಅಮಲಿನಲ್ಲಿ ಪದೇಪದೆ ಮಹಿಳೆಯರ ಬಳಿ ಬಂದು‌ ಮೊಬೈಲ್ ನಂಬರ್ ಕೇಳುತಿದ್ದ ಕುಡುಕನಿಗೆ ಸರಿಯಾಗಿ ಬಾರಿಸಿದ್ದಾರೆ. ಮಹಿಳೆಯರಿಂದ ಏಟು ಬೀಳುತ್ತಿದ್ದಂತೆ ಸುತ್ತುವರಿದ ಸಾರ್ವಜನಿಕರು ಆತನ ಚಳಿ ಬಿಡಿಸಿದ್ದಾರೆ. ಆದರೆ, ಆತ ಯಾರು ಎಂಬುದು ತಿಳಿದುಬಂದಿಲ್ಲ.

ಇದನ್ನೂ ಓದಿ | Snake Surgery | ಆಭರಣ ಹಾವಿಗೆ ಸರ್ಜರಿ; ಮರುಜನ್ಮ ನೀಡಿದ ಧಾರವಾಡದ ಕೃಷಿ ವಿವಿ ವೈದ್ಯರು

Exit mobile version