Site icon Vistara News

ಮಳೆಗೆ ಮನೆ ಕುಸಿದು ಮಹಿಳೆ ಸಾವು

bhagyamma

ಶಿವಮೊಗ್ಗ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಶಿವಮೊಗ್ಗದ ಭದ್ರಾವತಿ ತಾಲೂಕಿನ ಕಾಚಿಗೊಂಡನಹಳ್ಳಿಯಲ್ಲಿ ಮನೆಯ ಗೋಡೆ ಕುಸಿದು ಭಾಗ್ಯಮ್ಮ(55) ಸ್ಥಳದಲ್ಲೇ ಮೃತರಾಗಿದ್ದಾರೆ. ಅವರ ಪುತ್ರ ಕೃಷ್ಣಮೂರ್ತಿ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಗೋಡೆ ಶಿಥಿಲಗೊಂಡು ಕುಸಿದ ಪರಿಣಾಮ ಸಾವು ಸಂಭವಿಸಿದೆ. ಸ್ಥಳೀಯರು ಒಟ್ಟುಗೂಡಿ ಮಹಿಳೆಯ ಶವವನ್ನು ಹೊರತೆಗೆದಿದ್ದು, ಪುತ್ರ ಕೃಷ್ಣಮೂರ್ತಿಯನ್ನು ರಕ್ಷಿಸಿದ್ದಾರೆ. ತಹಸೀಲ್ದಾರ್‌ ಹಾಗೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಖೋಖೋ ಕ್ರೀಡಾಪಟು ವಿನಯ್‌ ಸೀಬಿಕೆರೆ ಇನ್ನಿಲ್ಲ

Exit mobile version