ರಾಯಚೂರು: ಶಾಲೆಯಲ್ಲಿ ನೀರಿಲ್ಲದ ಕಾರಣ ನಾಲೆಗೆ ಇಳಿದು ಶಾಲಾ ಮಕ್ಕಳು ತಟ್ಟೆ ತೊಳೆದ ಘಟನೆ ರಾಯಚೂರಿನ ಗಾಣಧಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಗಾಣಧಾಳ ಸರ್ಕಾರಿ ಪ್ರೈಮರಿ ಶಾಲೆಯಲ್ಲಿ ಕಳೆದ ಕೆಲ ದಿನಗಳಿಂದ ನೀರಿನ ಸಮಸ್ಯೆ ಇದ್ದರೂ, ಸಹ ಶಿಕ್ಷಕರು ನೀರಿನ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಶಾಲಾ ಮಕ್ಕಳು ಮಧ್ಯಾಹ್ನದ ಊಟ ಆದ ಬಳಿಕ ಶಾಲಾ ಪಕ್ಕದಲ್ಲಿರುವ ತಟ್ಟೆ ತೊಳೆಯಲು ದೊಡ್ಡ ನಾಲೆಗೆ ಇಳಿಯುತ್ತಿದ್ದಾರೆ. ನಾಲೆ ತುಂಬಿ ಹರಿಯುತ್ತಿದ್ದರೂ ಮಕ್ಕಳು ಜೀವವನ್ನು ಲೆಕ್ಕಿಸದೇ ತಟ್ಟೆ ತೊಳೆಯುತ್ತಿದ್ದಾರೆ.
ಇದನ್ನು ಓದಿ| ಶಾಲೆ ಮುಂಭಾಗದ ರಸ್ತೆಯಲ್ಲಿ ವಾಮಾಚಾರ: ಕೋಳಿ, ನಿಂಬೆ ಕಂಡು ಬೆಚ್ಚಿ ಬಿದ್ದ ಮಕ್ಕಳು!
ಇನ್ನು ಶಿಕ್ಷಕರ ದಿವ್ಯ ನಿರ್ಲಕ್ಷ್ಯಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆಲ್ಲಾ ನೇರ ಹೊಣೆ ಶಿಕ್ಷಕರೇ ಎಂದು ಆರೋಪಿಸಿದ್ದಾರೆ. ಸದ್ಯ ಮಕ್ಕಳು ನಾಲೆಯಲ್ಲಿ ತಟ್ಟೆ ತೊಳೆಯುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಹರಿದಾಡುತ್ತಿದೆ.