Site icon Vistara News

Weather Alert: ರಾಜಧಾನಿಯಲ್ಲಿ ಮುಂದುವರಿದ ಜಿನುಗು ಮಳೆ, ಇನ್ನೆರಡು ದಿನ ರಾಜ್ಯಾದ್ಯಂತ ಮಳೆ

Weather Alert

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆಯಲ್ಲಿ ರಾಜಧಾನಿ ಸೇರಿದಂತೆ ಒಳನಾಡಿನಲ್ಲಿ ಕೂಡ ಮಳೆ ಇನ್ನೆರಡು ದಿನಗಳ ಕಾಲ ಮುಂದುವರಿಯಲಿದೆ (Weather Alert).

ರಾಜ್ಯದ ಹಲವು ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮೋಡ ಕವಿದ ವಾತಾವರಣ ಹಾಗೂ ಮಳೆಯಾಗುತ್ತಿದೆ. ಇನ್ನೆರಡು ದಿನ ಮಳೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿ ಒಳನಾಡಿನಲ್ಲಿ ಹವಾಮಾನ ಖಿನ್ನತೆ ಸೃಷ್ಟಿಸಿದೆ.

ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸಾಧ್ಯತೆ ಇದೆ. ಗುರುವಾರವೂ ಮುಂಜಾನಯೂ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಇಡೀ ದಿನ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಂದು ವಾರದಿಂದ ರಾಜಧಾನಿಯಲ್ಲಿ ಭಾರಿ ಮಳೆಯಾಗುತ್ತಿದೆ. ಮಂಗಳವಾರದಿಂದ ಬುಧವಾರ ಬೆಳಗಿನವರೆಗಿನ ಅವಧಿಯಲ್ಲಿ ಅಂಜನಾಪುರದಲ್ಲಿ ಅತ್ಯಧಿಕ ಮಳೆ (18 ಮಿಲಿಮೀಟರ್) ದಾಖಲಾಗಿದೆ. ಉಳಿದಂತೆ ಹೆಮ್ಮಿಗೆಪುರ 12.5 ಮಿಲಿಮೀಟರ್, ದೊರೆಸಾನಿಪಾಳ್ಯ 11.5 ಮಿಲಿಮೀಟರ್, ಹೆಚ್‌.ಗೊಲ್ಲಹಳ್ಳಿ 10.5 ಮಿಲಿಮೀಟರ್, ಬೇಗೂರು (2) ಮತ್ತು ಬಿಲೇಕಹಳ್ಳಿಯಲ್ಲಿ ತಲಾ 10 ಮಿಲಿಮೀಟರ್ ಮಳೆ ದಾಖಲಾಗಿದೆ.

ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಇಂದಿನಿಂದ ಎರಡು ದಿನ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬೆಂಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ ಸೇರಿದಂತೆ ರಾಜ್ಯದ ವಿವಿಧೆಡೆ ಮುಂದಿನ 24 ಗಂಟೆಗಳಲ್ಲಿ ಅತ್ಯಧಿಕ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ತಿಳಿಸಿದೆ.

ಇದನ್ನೂ ಓದಿ: Weather Report: ಇನ್ನೂ ಇದೆ ಭಾರಿ ಮಳೆ; ಈ ಜಿಲ್ಲೆಗಳಲ್ಲಿ ಮಳೆ ಅಬ್ಬರ, ಬೆಂಗಳೂರಲ್ಲಿ ಯಾವ ಥರ?

Exit mobile version