ಬೆಂಗಳೂರು: ಮುಂದಿನ 24 ಗಂಟೆಯಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿ ಇರಲಿದೆ. ಕಲಬುರಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾರಿ (Weather Report) ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Weather update) ಮುನ್ಸೂಚನೆಯನ್ನು ನೀಡಿದೆ.
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೊಡಗು, ಬಳ್ಳಾರಿ, ಚಿತ್ರದುರ್ಗ ಹಾಗೂ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಮೈಸೂರು, ತುಮಕೂರಿನಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯಲ್ಲೂ ಮಳೆಯ ಅಬ್ಬರ ಮುಂದುವರಿಯಲಿದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ವೇಳೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಬಿರುಗಾಳಿ ಸಹಿತ ಗುಡುಗು, ಮಿಂಚಿನ ಸಾಧ್ಯತೆ ಇದ್ದು, ಗಾಳಿ ವೇಗವು ಗಂಟೆಗೆ 30-40 ಕಿ.ಮೀ ಇರುವ ಸಾಧ್ಯತೆ ಇದೆ. ಹೀಗಾಗಿ ಗುಡುಗು ಮಿಂಚಿನಿಂದ ಕೂಡಿದ ಮಳೆ ಬಂದಾಗ ಆದಷ್ಟು ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳನ್ನು ಮತ್ತು ಅಪ್ಲಯನ್ಸಸ್‌ಗಳನ್ನು ಅನ್‌ಪ್ಲಗ್ ಅಥವಾ ಸ್ವಿಚ್ಡ್‌ಆಫ್ ಮಾಡುವಂತೆ ಎಚ್ಚರಿಕೆ ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಶಾರ್ಟ್ ಸರ್ಕ್ಯೂಟ್ ಆಗಿ ಹಾಳಾಗುವ ಸಾಧ್ಯತೆ ಇದೆ.
ಕಾರವಾರದಲ್ಲಿ ಗರಿಷ್ಠ ತಾಪಮಾನ ದಾಖಲು
ಶನಿವಾರ ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 37.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಹಾಸನದ ಕೊಣನೂರು ಹಾಗೂ ಯಾದಗಿರಿಯ ಕಕ್ಕೇರಿಯಲ್ಲಿ ದಾಖಲೆಯ ಮಳೆಯಾಗಿರುವ ವರದಿ ಆಗಿದೆ. ಕೊಣನೂರು 8 ಸೆಂ.ಮೀ. ಮತ್ತು ಕಕ್ಕೇರಿಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಶಿವಾನಿ 6, ಆಲಮಟ್ಟಿ ಎಚ್‌ಎಂಎಸ್, ಹೊಸದುರ್ಗ, ಗುಬ್ಬಿ, ಶ್ರೀರಂಗಪಟ್ಟಣ ತಲಾ 5 ಸೆಂ.ಮೀ ಮಳೆಯಾಗಿದೆ.
ತಾವರಗೇರಾ, ಸಿಂಧನೂರು, ಮುದಗಲ್, ಶೋರಾಪುರ, ಕುಡತಿನಿ, ಶ್ರವಣಬೆಳಗೊಳದಲ್ಲಿ ತಲಾ 4 ಸೆಂ.ಮೀ ಮಳೆಯಾಗಿದೆ. ಸುಳ್ಯ, ನಾರಾಯಣಪುರ, ಕವಡಿಮಟ್ಟಿ ಅರ್ಗ, ಹುಣಸಗಿ, ಇಳಕಲ್, ಬಾದಾಮಿ, ಜಾಲಹಳ್ಳಿ, ನಲ್ವತವಾಡ ಹಾಗೂ, ಪೊನ್ನಂಪೇಟೆ, ಭಾಗಮಂಡಲ, ಹುಣಸೂರು, ಕಮ್ಮರಡಿ, ಅರಕಲಗೂಡು, ಕೃಷ್ಣರಾಜಸಾಗರ, ಬೆಳ್ಳೂರು, ಬರಗೂರು, ಕುಣಿಗಲ್ ತಲಾ 3 ಸೆಂ.ಮೀ ಮಳೆಯಾಗಿದೆ.
ಗುತ್ತಲ್, ಬಿಳಗಿ, ಮಾಸ್ಕ್, ಮಾನ್ವಿ, ಯಲಬುರ್ಗಾ, ಗಂಗಾವತಿ, ಭಾಲ್ಕಿ, ಬೆಂಗಳೂರು ಹೆಚ್ಎಎಲ್ ವಿಮಾನ ನಿಲ್ದಾಣ, ಚನ್ನರಾಯಪಟ್ಟಣ, ಶಿವಮೊಗ್ಗ, ಬೆಂಗಳೂರು ನಗರ, ಬುಕ್ಕಪಟ್ಟಣ, ಸೋಮವಾರಪೇಟೆ, ಜಯಪುರ, ಯಗಟಿ, ಕೊಟ್ಟಿಗೆಹಾರ , ಸರಗೂರು, ಸಾಲಿಗ್ರಾಮ ತಲಾ 2 ಸೆಂ.ಮೀ ಮಳೆ ಸುರಿದಿದೆ.
ಇದನ್ನೂ ಓದಿ: Operation Kaveri : ಸುಡಾನ್‌ನಲ್ಲಿ ಸಿಲುಕಿದ್ದ ಹಕ್ಕಿಪಿಕ್ಕಿ ಜನಾಂಗದವರು ವಾಪಸ್; ಕೇಂದ್ರ ಸರ್ಕಾರಕ್ಕೆ ಧನ್ಯವಾದ
ಸಾಯಿಗಾಂವ್, ಔರಾದ್, ನಿಟ್ಟೂರು, ಹುಲಸೂರು, ಶಿರಹಟ್ಟಿ, ಮುಂಡರಗಿ, ಗಟ್ಟೂರು, ದೇವದುರ್ಗ, ಕುರ್ಡಿ, ಗದಗ, ತಾಳಿಕೋಟೆ, ಬಿ ಬಾಗೇವಾಡಿ, ಕುಷ್ಟಗಿ, ಬೇವೂರು, ಕುಕನೂರ, ಹಾವೇರಿ ಎಪಿಎಂಸಿ, ಬಾಗಲಕೋಟೆ, ಸಕಲೇಶಪುರ, ಅಜ್ಜಂಪುರ, ಕಳಸ, ವೈ.ಎನ್. ಹೊಸಕೋಟೆ, ತುಮಕೂರು, ವಿರಾಜಪೇಟೆ, ಚಿತ್ರದುರ್ಗ, ಉತ್ತರಹಳ್ಳಿ ತಲಾ 1 ಸೆಂ.ಮೀ ಮಳೆಯಾಗಿದೆ.