Site icon Vistara News

Weather Report: ಕರಾವಳಿಯಲ್ಲಿ ನಿರಂತರ ಜೋರು ಮಳೆ; ಕೆಸರಲ್ಲಿ ಸಿಲುಕಿದ ಬಸ್‌

Bus stuck in mud

ಬೆಂಗಳೂರು/ಕಾರವಾರ: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಕರಾವಳಿಯಲ್ಲಿ ಅಬ್ಬರದ (weather report) ಮಳೆಯಾಗುತ್ತಿದೆ. ಕಳೆದ 24 ಗಂಟೆಯಿಂದ ನಿರಂತರವಾಗಿ ಮಳೆ (rain news) ಸುರಿಯುತ್ತಿದ್ದು, ಜನರು ಮನೆಯಲ್ಲೇ ಬಂಧಿಯಾಗಿದ್ದಾರೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ.

ಕಾರವಾರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ

ಕರಾವಳಿಯಲ್ಲಿ ನಿರಂತರ ಮಳೆಗೆ ಜನ-ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಹವಾಮಾನ ಇಲಾಖೆಯು ಕಡಲತೀರಗಳಲ್ಲಿ ಅಲರ್ಟ್ ಘೋಷಿಸಿದ್ದು, ಮೀನುಗಾರಿಕೆಗೆ ತೆರಳದಂತೆ ಸೂಚಿಸಿದೆ. ಮಳೆಗಾಲ ಆರಂಭವಾದರೂ ಮಾನ್ಸೂನ್ ಪ್ರವೇಶ ವಿಳಂಬವಾಗಿತ್ತು. ಬಿಸಿಲಿನಿಂದ ಕಂಗೆಟ್ಟು ಹೋಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಒಂದು ಕೈನಲ್ಲಿ ಸೈಕಲ್‌ ರೈಡಿಂಗ್‌, ಇನ್ನೊಂದು ಕೈನಲ್ಲಿ ಮಳೆಯಿಂದ ಕೊಡೆ ಹಿಡಿದು ರಕ್ಷಣೆ ಪಡೆದ ವಿದ್ಯಾರ್ಥಿಗಳು

ಕೈಗಾ ರಸ್ತೆಯಲ್ಲಿ ಕೆಸರಿಗೆ ಸಿಲುಕಿದ ಬಸ್‌

ಉತ್ತರ ಕನ್ನಡದ ಕಾರವಾರ ತಾಲೂಕಿನ ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ಭಾರಿ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಬಸ್‌ ಸಿಲುಕಿದ ಘಟನೆ ನಡೆದಿದೆ. ಕಡವಾಡದಿಂದ ವಾಪಸ್‌ ಆಗುವಾಗ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ಬಸ್ ಚಾಲಕ ರಸ್ತೆಯಂಚಿಗೆ ತೆಗೆದುಕೊಂಡಿದ್ದಾರೆ. ಆದರೆ ಭಾರಿ ಮಳೆ ಸುರಿದ ಕಾರಣಕ್ಕೆ ಕೆಸರು ಮಯವಾಗಿದ್ದರಿಂದ ಬಸ್‌ ಸಿಲುಕಿಕೊಂಡಿತ್ತು. ಬಳಿಕ ಕ್ರೇನ್ ಸಹಾಯದಿಂದ ಬಸ್ ಮೇಲಕ್ಕೆತ್ತಲಾಗಿದೆ. ಇದಕ್ಕೆ ಸ್ಥಳೀಯರು ಸಾಥ್‌ ನೀಡಿದ್ದಾರೆ. ಅದೃಷ್ಟವಶಾತ್ ಬಸ್‌ಗೆ ಯಾವುದೇ ಹಾನಿಯುಂಟಾಗಿಲ್ಲ. ಕೆಸರಲ್ಲಿ ಬಸ್ ಸಿಲುಕಿದ್ದರಿಂದ ಬೇರೆ ವಾಹನದಲ್ಲಿ ಪ್ರಯಾಣಿಕರು ತೆರಳಿದ್ದಾರೆ.

ಭಾರಿ ಮಳೆ ಎಚ್ಚರಿಕೆ

ಜೂ. 24ರಂದು ಮಲೆನಾಡಿನ ಜಿಲ್ಲೆಗಳಾದ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗಿನಲ್ಲೂ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಅಬ್ಬರ (Weather report) ಮಳೆಯಾಗಲಿದೆ.

ಇದನ್ನೂ ಓದಿ: Video Viral: ವೇದಿಕೆ ಮೇಲೆ ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಮಿಸಿದ ಅಮೆರಿಕ ಗಾಯಕಿ; ತಲೆಬಾಗಿದ ನಮೋ

ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ವರುಣ ಅಬ್ಬರಿಸಲಿದ್ದಾನೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ಧಾರವಾಡ, ಬೆಳಗಾವಿ, ರಾಯಚೂರು, ಹಾವೇರಿ ಹಾಗೂ ಗದಗ, ವಿಜಯಪುರದಲ್ಲೂ ಭರ್ಜರಿ ಮಳೆಯಾಗಲಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿಯಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 29 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version