Site icon Vistara News

Weather Report : ಉತ್ತರ ಕರ್ನಾಟಕದಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

Girl holding umbrala

ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ವಾಯವ್ಯ ಬಂಗಾಳಕೊಲ್ಲಿಯಲ್ಲಿ ಸಮುದ್ರ ಮಟ್ಟದಿಂದ 7.6 ಕಿ.ಮೀ ವರೆಗೆ ಸುಳಿಗಾಳಿ ಎದ್ದಿದೆ. ಇದರಿಂದಾಗಿ ಟ್ರಫ್‌ವೊಂದು ನಿರ್ಮಾಣವಾಗಿದ್ದು, ಇದು ಆಂದ್ರಪ್ರದೇಶದ ಕರಾವಳಿ ಮೂಲಕ ತೆಲಂಗಾಣದವರೆಗೆ ಹಾದುಹೋಗಿದೆ. ಇದರ ಪ್ರಭಾವದಿಂದಾಗಿ ಕರ್ನಾಟಕದ ಉತ್ತರ ಒಳನಾಡಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಸೆ.4ರಿಂದ 10ರವರೆಗೆ ಕರಾವಳಿ ಜಿಲ್ಲೆಯಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದ್ದು, ಕೆಲವೊಮ್ಮೆ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಮೀನುಗಾರರಿಗೆ ಯಾವುದೇ ಮುನ್ನೆಚ್ಚರಿಕೆಯನ್ನು ನೀಡಿಲ್ಲ.

ಉತ್ತರ ಕರ್ನಾಟಕದಲ್ಲಿ ವ್ಯಾಪಕ ಮಳೆ

ಮುಂದಿನ 24 ಗಂಟೆಯಲ್ಲಿ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಯೆಲ್ಲೋ ಅಲರ್ಟ್‌ ನೀಡಲಾಗಿದೆ.

ದಕ್ಷಿಣ ಒಳನಾಡಿ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಕೊಡಗು, ಮೈಸೂರು, ಚಾಮರಾಜನಗರದಲ್ಲಿ ಭಾರಿ ಮಳೆಯಾಗಲಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಹಗುರ ಮಳೆಯಾಗಲಿದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Tiger attack : ಮೈಸೂರಲ್ಲಿ ಹುಲಿ ದಾಳಿ; ಮರದಡಿ ಕುಳಿತಿದ್ದ ಬಾಲಕ ಬಲಿ

ಉತ್ತರ ಒಳನಾಡಲ್ಲಿ ತೀವ್ರಗೊಂಡ ಮುಂಗಾರು

ನೈರುತ್ಯ ಮುಂಗಾರು ಭಾನುವಾರದಂದು ಉತ್ತರ ಒಳನಾಡಿನಲ್ಲಿ ತೀವ್ರವಾಗಿತ್ತು. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ದುರ್ಬಲವಾಗಿತ್ತು. ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ವ್ಯಾಪಕವಾಗಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಬೀದರ್ ಪಿಟಿಒ, ಬೀದರ್, ಸುಲೇಪೇಟಯಲ್ಲಿ ತಲಾ 8 ಸೆಂ.ಮೀ ಹಾಗೂ ಚಿಂಚೋಳಿಯಲ್ಲಿ 7 ಸೆಂ.ಮೀ ಮಳೆಯಾಗಿದೆ.

ಅಥಣಿ, ಗದಗ, ಕುಕನೂರ, ನಿರ್ನಾ, ಬಬಲೇಶ್ವರ ತಲಾ 6 ಸೆಂ.ಮೀ, ರೋಣ, ಇಳಕಲ್, ಹುಮನಾಬಾದ್, ಕಲಬುರ್ಗಿ, ಗುಂಡಗುರ್ತಿ ತಲಾ 5 ಸೆಂ.ಮೀ ಮಳೆಯಾಗಿದೆ. ಕುಷ್ಟಗಿ, ವಿಜಯಪುರ, ತಿಕ್ಕೋಟ, ಕಲಬುರ್ಗಿ ಎಡಬ್ಲ್ಯುಎಸ್, ಜೇವರ್ಗಿ, ಯಡ್ರಾಮಿ, ಮಾನ್ವಿ, ಸಿಂಧನೂರು ತಲಾ 4 ಸೆಂ.ಮೀ ಮಳೆಯಾಗಿದೆ.

ಸೇಡಬಾಳ, ಗಂಗಾವತಿ, ಯಲಬುರ್ಗಾ, ತಾವರೆಗೆರೆ, ತಾಳಿಕೋಟೆ, ಔರಾದ್, ಭಾಲ್ಕಿ, ಚಿತ್ತಾಪುರ, ಸೇಡಂ, ಕೆಂಭಾವಿ, ಶಹಾಪುರ, ಮಸ್ಕಿ, ಮುದಗಲ್ , ಕುರುಗೋಡು, ಸಂಡೂರು ತಲಾ 3 ಸೆಂ.ಮೀ, ಅಣ್ಣಿಗೇರಿ, ಮುನಿರಾಬಾದ್, ಕೂಡಲಸಂಗಮ, ರಬಕವಿ, ಬಿ.ಬಾಗೇವಾಡಿ, ಮಂಠಾಳ, ನೆಲೋಗಿ, ಅಡಕಿ, ನಾರಾಯಣಪುರ ಸೇರಿದಂತೆ ಕುರ್ಡಿ, ಮುರಗೋಡ, ಸಿರುಗುಪ್ಪ, ಕಂಪ್ಲಿ , ಹೊಸಪೇಟೆ, ಹಡಗಲಿ ತಲಾ 2 ಸೆಂ.ಮೀ ಮಳೆಯಾಗಿದೆ.

ಕ್ಯಾಸಲ್ ರಾಕ್, ಸಂಕೇಶ್ವರ, ಯದವಾಡ, ರಾಯಬಾಗ, ಸುತಗಟ್ಟಿ ಮಟ್ಟಿಕೊಪ್ಪ , ಧಾರವಾಡ ಪಿಟಿಒ, ಧಾರವಾಡ, ಹುಬ್ಬಳ್ಳಿ, ಕುಂದಗೋಳ , ಹಾವೇರಿ ಎಪಿಎಂಸಿ, ಸವಣೂರು ಸೇರಿದಂತೆ ಲಕ್ಷ್ಮೇಶ್ವರ, ಶಿರಹಟ್ಟಿ, ನರಗುಂದ, ಗಂಗಾವತಿ ಎಆರ್‌ಜಿ, ಬೇವೂರು, ಬಾದಾಮಿ, ಲೋಕಾಪುರ, ಮಹಾಲಿಂಗಪುರ, ಬಿಳಿಗಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಬಾಗಲಕೋಟೆ, ಆಲಮಟ್ಟಿ, ನಲ್ವತವಾಡ, ಕಮಲಾಪುರ, ಮಹಾಗಾವ, ಮುಧೋಳೆ, ಹುಣಸಗಿ, ಲಿಂಗಸೂಗೂರು, ಮುಡಬಿ, ಬಳ್ಳಾರಿ, ಕುಡಿತಿನಿ , ಎಚ್.ಬಿ.ಹಳ್ಳಿ , ದಾವಣಗೆರೆ ಪಿಟಿಒ, ವೈ.ಎನ್.ಹೊಸಕೋಟೆ ತಲಾ 1 ಸೆಂ.ಮೀನಷ್ಟು ಮಳೆಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version