Site icon Vistara News

Weather Report : ಮುಕ್ಕಾಲು ಕರ್ನಾಟಕದಲ್ಲಿ ಶುಷ್ಕ ವಾತಾವರಣ; ಕಾಲು ಭಾಗದಲ್ಲಷ್ಟೆ ಮಳೆ

Dry weather and Rain alert

ಬೆಂಗಳೂರು: ಮುಂದಿನ 24 ಗಂಟೆಯೊಳಗೆ ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಗುಡುಗು ಸಹಿತ ಭಾರಿ (Rain News) ಮಳೆಯಾಗಲಿದೆ. ಕರಾವಳಿಯ ಕೆಲವು ಕಡೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಉಳಿದ ಮುಕ್ಕಾಲು ಕರ್ನಾಟಕದಲ್ಲಿ ಒಣಹವೆ ಇರಲಿದೆ. ಮಳೆಗಾಲದಲ್ಲೂ ಸುಡು ಸುಡು ಬಿಸಿಲಿನ ವಾತಾವರಣ (Weather report) ಇರಲಿದೆ.

ರಾಜ್ಯದ 14 ಜಿಲ್ಲೆಗಳಲ್ಲೆ ಮಳೆಯಾಗುವ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡಿನ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಚದುರಿದಂತೆ ಅಲ್ಲಲ್ಲಿ ತುಂಬಾ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ರಾಜಧಾನಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಬೆಳಗಿನ ಹೊತ್ತು ಸೂರ್ಯ ಪ್ರಕಾಶಿಸಿದರೆ, ಮಧ್ಯಾಹ್ನದ ನಂತರ ಮರೆಯಾಗಲಿದ್ದಾನೆ. ಕೆಲವು ಕಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 31 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಲೆನಾಡಲ್ಲಿ ತುಂತುರು ಮಳೆ

ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇನ್ನು ಉತ್ತರ ಒಳನಾಡಿನ ಬಳ್ಳಾರಿ, ವಿಜಯನಗರ, ಗದಗ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಚದುರಿದಂತೆ ಮಳೆಯಾಗಲಿದೆ. ಬೇರೆಡೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 30 ಡಿ.ಸೆ – 21 ಡಿ.ಸೆ
ಮಂಗಳೂರು: 30 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 32 ಡಿ.ಸೆ – 22 ಡಿ.ಸೆ
ಗದಗ: 32 ಡಿ.ಸೆ – 21 ಡಿ.ಸೆ
ಹೊನ್ನಾವರ: 32 ಡಿ.ಸೆ- 23 ಡಿ.ಸೆ
ಕಲಬುರಗಿ: 34 ಡಿ.ಸೆ – 23 ಡಿ.ಸೆ
ಬೆಳಗಾವಿ: 30 ಡಿ.ಸೆ – 20 ಡಿ.ಸೆ
ಕಾರವಾರ: 33 ಡಿ.ಸೆ – 25 ಡಿ.ಸೆ

ಆಗಸ್ಟ್‌ 30ರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಎಷ್ಟಿದೆ? ಜಲಾಶಯದಲ್ಲಿ ಒಳಹರಿವು, ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗರಿಷ್ಠ ಮಟ್ಟ (ಅಡಿಗಳಲ್ಲಿ)ಇಂದಿನ ಮಟ್ಟ (ಅಡಿಗಳಲ್ಲಿ)ಒಳ ಹರಿವು (ಕ್ಯೂಸೆಕ್)ಹೊರ ಹರಿವು (ಕ್ಯೂಸೆಕ್)
ಕೆಆರ್‌ಎಸ್ ಜಲಾಶಯ (KRS Dam)38.0424.2718912343
ಆಲಮಟ್ಟಿ ಜಲಾಶಯ
(Almatti Dam)
519.6121.960451
ಮಲಪ್ರಭಾ ಜಲಾಶಯ (Malaprabha Dam)633.8022.850894
ಘಟಪ್ರಭಾ ಜಲಾಶಯ
(Ghataprabha Dam)
662.9141.109932859
ತುಂಗಾಭದ್ರಾ ಜಲಾಶಯ (Tungabhadra Dam)497.7178.501067016
ಭದ್ರಾ ಜಲಾಶಯ (Bhadra Dam)657.7347.443523222
ಕಬಿನಿ ಜಲಾಶಯ (Kabini Dam)696.1313.6116304025
ಹಾರಂಗಿ
(Harangi Dam)
871.387.824041700
ಲಿಂಗನಮಕ್ಕಿ (Linganamakki Dam) 554.4471.2433766168
ಹೇಮಾವತಿ
(Hemavathi Dam)
890.5825.718225470
ಜಲಾಶಯಗಳ ನೀರಿನ ಮಟ್ಟ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version