Site icon Vistara News

Wheeling for Insta | ಪ್ರತಿ ದಿನ ಇನ್‌ಸ್ಟಾ ಅಪ್ಡೇಟ್‌ ಮಾಡಲು ರಸ್ತೆಯಲ್ಲಿ ವೀಲಿಂಗ್‌ ಮಾಡಿ ಯುವಕನ ಹುಚ್ಚಾಟ

insta reels

ಬೆಂಗಳೂರು: ಇನ್‌ಸ್ಟಾ ಗ್ರಾಂನಲ್ಲಿ ವೀವ್ಸ್ ಹಾಗೂ ಫಾಲೋವರ್ಸ್‌ ಪಡೆಯುವುದಕ್ಕಾಗಿ ಯುವಕರು ರಸ್ತೆಯಲ್ಲಿ ವೀಲಿಂಗ್‌ ಮಾಡಿ ಚಿತ್ರೀಕರಣ ಮಾಡುವುದು ಇತ್ತೀಚೆಗೆ ಹೆಚ್ಚಾಗಿತ್ತು. ಈ ರೀತಿ ಮಾಡುವ ಯುವಕರ ಮೇಲೆ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗಳೆದ್ದಿವೆ.

ಯುವಕನೊಬ್ಬ ಪ್ರತಿ ದಿನ ವೀಲಿಂಗ್‌ ಮಾಡುತ್ತಾ ಅದರ ವಿಡಿಯೊಗಳನ್ನು ಪ್ರತಿ ದಿನ ಇನ್‌ಸ್ಟಾ ಗ್ರಾಂ ರೀಲ್ಸ್‌ನಲ್ಲಿ ಹಾಕುತ್ತಾನೆ. ಇದಕ್ಕಾಗಿ ಪ್ರತಿ ದಿನ ಬೇರೆ ಬೇರೆ ಸ್ಟೈಲ್‌ನಲ್ಲಿ ವೀಲಿಂಗ್‌ ಮಾಡುತ್ತಾನೆ. ಹೀಗಿದ್ದರೂ ಇಷ್ಟೆಲ್ಲ ವಿಡಿಯೊಗಳು ಜಾಲ ತಾಣದಲ್ಲಿ ಇದ್ದರೂ ಆತನ ವಿರುದ್ಧ ಕ್ರಮ ಯಾಕಿಲ್ಲ ಎಂದು ಕೇಳಿದ್ದಾರೆ.

ಈ ಯುವಕ ವಾಹನದಟ್ಟಣೆ ಇರುವ ಪ್ರದೇಶದಲ್ಲೂ ವೀಲಿಂಗ್‌ ಮಾಡಿ ಶೋ ಆಫ್ ಮಾಡುತ್ತಾನೆ. ಈತನ ಇನ್‌ಸ್ಟಾ ಖಾತೆಯ ತುಂಬೆಲ್ಲ ವೀಲಿಂಗ್‌ ವಿಡಿಯೊಗಳೇ ತುಂಬಿವೆ. ವೀಲಿಂಗ್‌ ಕ್ರೇಜ್‌ಗಾಗಿ ಆತನ ಇನ್‌ಸ್ಟಾ ಗ್ರಾಂ ಖಾತೆಯಲ್ಲಿ ೨೨,೦೦೦ ಜನ ಫಾಲೋವರ್ಸ್‌ ಇದ್ದಾರೆ. ಅವನು ಹೆಲ್ಮೆಟ್ ಧರಿಸುವುದಿಲ್ಲ, ಬೈಕ್‌ಗೆ ನಂಬರ್ ಫ್ಲೇಟ್ ಕೂಡ ಇಲ್ಲದೆ ಚಾಲನೆ ಮಾಡುತ್ತಾನೆ. ಈತನನ್ನು ನೋಡಿ ಸಾಕಷ್ಟು ಮಂದಿ ವೀಲಿಂಗ್‌ನಲ್ಲೂ ಫಾಲೋ ಮಾಡುವ ಅಪಾಯವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.

ಸಾಮಾಜಿಕ ಜಾಲತಾಣದ ಮೇಲೆ ಕಣ್ಣಿಟ್ಟಿದ್ದೀವಿ ಎಂದು ಸಂಚಾರಿ ಪೊಲೀಸರು ಹೇಳುತ್ತಾರಾದರೂ ಈ ರೀತಿಯ ಚಟುವಟಿಕೆಗಳನ್ನು ಯಾಕೆ ನಿಯಂತ್ರಿಸುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ.

Exit mobile version