ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ (Karnataka CM) ಕಾಂಗ್ರೆಸ್ನ ಹಿರಿಯ ನಾಯಕ ಸಿದ್ದರಾಮಯ್ಯ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆ ಬಳಿಕ ಅವರು ಸರಕಾರದ ವಾಹನದಲ್ಲಿ ಅಧಿಕೃತ ಪ್ರವಾಸಗಳನ್ನು ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಈಗಾಗಲೇ ಕಾರನ್ನು ಖರೀದಿ ಮಾಡಲಾಗಿದೆ. ಆ ಕಾರು ಯಾವುದೇ ಮತ್ತು ಅದರ ವಿಶೇಷತೆಗಳೇನು ಎಂಬುದನ್ನು ನೋಡೋಣ. ಅಂದಹಾಗೆ ಸಿಎಂ ಸಿದ್ದರಾಮಯ್ಯ ಅವರು ಹಿಂದಿನ ಸಿಎಂ ಬಳಸುತ್ತಿದ್ದ ಕಾರನ್ನು ಬಳಸುವುದಿಲ್ಲ. ಹೀಗಾಗಿ ಟೋಯೋಟಾ ಕಂಪನಿಯ ವೆಲ್ಫೈರ್ (Toyota Vellfire) ಕಾರನ್ನು ಖರೀದಿಸಲಾಗಿದೆ. ಈ ಕಾರಿಗೆ 1 ಕೋಟಿ ರೂಪಾಯಿ ಬೆಲೆಯಿದ್ದು, ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಪ್ರಯಾಣ ಬಯಸುವವರ ನೆಚ್ಚಿನ ವಾಹನ ಎನಿಸಿಕೊಂಡಿದೆ.
ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಟೊಯೊಟಾ ವೆಲ್ಫೈರ್ (Toyota vellfire) ಎಂಪಿವಿಯ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 2.5 ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 180 ಪಿಎಸ್ ಗರಿಷ್ಠ ಪವರ್ ಹಾಗೂ 235 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ ಸಿವಿಟಿ (ಆಟೋಮ್ಯಾಟಿಕ್) ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.
ಏಳು ಆಸನ ವ್ಯವಸ್ಥೆಯನ್ನು ಹೊಂದಿರುವ ಈ ಕಾರು, FWD (ಫೋರ್ವೀಲ್ ವೀಲ್ ಡ್ರೈವ್) ತಂತ್ರಜ್ಞಾನವನ್ನು ಪಡೆದಿದೆ. ಜಪಾನ್ NCAP ಪರೀಕ್ಷೆಯಲ್ಲಿ 5 ಸ್ಟಾರ್ ಸುರಕ್ಷತಾ ರೇಟಿಂಗ್ ಕೂಡ ಪಡೆದುಕೊಂಡಿದೆ. 7 ಏರ್ಬ್ಯಾಗ್ಗಳು, EBD (ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್), ABS (ಆ್ಯಂಟಿಲಾಕಿಂಗ್ ಬ್ರೇಕಿಂಗ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ಹಿಲ್ ಸ್ಟಾರ್ಟ್ ಅಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸರ್ಗಳು ಹಾಗೂ ಕ್ಯಾಮೆರಾಗಳನ್ನು ಹೊಂದಿದೆ.
ಇದನ್ನೂ ಓದಿ : Nissan India : ನಿಸ್ಸಾನ್ ಮ್ಯಾಗ್ನೈಟ್ ಗೆಜಾ ವಿಶೇಷ ಆವೃತ್ತಿಯ ಬುಕಿಂಗ್ ಆರಂಭ, ಮೇ26ಕ್ಕೆ ಅನಾವರಣ
ಟೊಯೊಟಾ ವೇಲ್ಫೈರ್ ಬೆಲೆಗೆ ತಕ್ಕಂತೆ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಕಾರು ಪ್ರಯಾಣಿಸುವವರಿಗೆ ಸುಖಕರ ಹಾಗೂ ಐಷಾರಾಮಿ ಪ್ರಯಾಣವನ್ನು ಒದಗಿಸುತ್ತದೆ. ಪ್ರಮುಖವಾಗಿ ಟ್ವಿನ್ ಸನ್‌ರೂಫ್, 3 ಜೋನ್ ಕ್ಲೈಮೇಟ್ ಕಂಟ್ರೋಲ್, 17-ಸ್ಪೀಕರ್ ಇರುವ ಜೆಬಿಎಲ್ ಸೌಂಡ್ ಸಿಸ್ಟಮ್ ಮತ್ತು ಆಂಬಿಯೆಂಟ್ ಲೈಟಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಇದು ಮರ್ಸಿಡಿಸ್ ಬೆಂಜ್ನ ವಿ ಕ್ಲಾಸ್ಗೆ ಪ್ರತಿಸ್ಪರ್ಧಿಯಾಗಿದೆ.
ವೆಲ್ಫೈರ್ ಎಂಪಿವಿ ಐಷಾರಾಮಿ 7 ಸೀಟರ್ ಕಾರು. ಎಕ್ಸಿಕ್ಯೂಟಿವ್ ಲಾಂಜ್ ರೂಪದಲ್ಲಿ ಪಡೆಯುವ ಕಾರಣ ಸಿದ್ದರಾಮಯ್ಯ ಅವರು ಈ ಕಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮುಂಭಾಗ ಮತ್ತು ಹಿಂಭಾಗದ ಆ್ಯಕ್ಷೆಲ್ನಲ್ಲಿ ಎರಡು ಎಲೆಕ್ಟ್ರಿಕ್ ಮೋಟರ್ಗಳನ್ನು ಅಳವಡಿಸಲಾಗಿದ್ದು. ಇದು ಆಲ್-ವ್ಹೀಲ್ ಡ್ರೈವ್ ಆಯ್ಕೆ ಕೊಟ್ಟಿದೆ. ಹೈ ಬ್ರೇಕ್ ಹಾಕುವಾಗ ಉತ್ಪಾದನೆಯಾಗುವ ಶಕ್ತಿಯನ್ನು ಬಳಸಿಕೊಂಡು ಬ್ರಿಡ್ ಸಿಸ್ಟಮ್ ಚಾರ್ಚ್ ಆಗುತ್ತದೆ. ಪ್ರತಿ ಲೀಟರ್ ಪೆಟ್ರೋಲ್ಗೆ 16.35 ಕಿ.ಮೀ ಮೈಲೇಜ್ ನೀಡುತ್ತದೆ ಈ ಕಾರು.
ಹೊರ ಆವರಣ ಹೇಗಿದೆ?
ವೆಲ್ಫೈರ್ ಎಂಪಿವಿಯ ಹೊರಭಾಗದಲ್ಲಿ ಎಲ್ಇಡಿ ಡಿಆರ್ಎಲ್ಗಳು, ಕ್ರೋಮ್ ಗ್ರಿಲ್, ಕ್ರೋಮ್ ಬಾರ್ ಆಟೋ ಒಆರ್ವಿಎಂಗಳು ಮತ್ತು 18 ಇಂಚಿನ ಅಲಾಯ್ ವೀಲ್ಗಳು ಲಭ್ಯವಿದೆ. ಸ್ಪ್ಲಿಟ್ ಹೆಡ್ ಲ್ಯಾಂಪ್ ನೀಡಲಾಗಿದೆ.