Site icon Vistara News

Leopard Attack | ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ; ಕೃಷಿ ಕಾರ್ಮಿಕ ಮಹಿಳೆ ಸಾವು

ದಾವಣಗೆರೆ: ಕೃಷಿ ಕಾರ್ಮಿಕ ಮಹಿಳೆಯೊಬ್ಬರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ದಾಳಿ (Leopard Attack) ನಡೆಸಿದ್ದು, ಗಂಭೀರಗಾಯಗೊಂಡ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕಮಲಾಬಾಯಿ(55) ಮೃತೆ. ಮಂಗಳವಾರ ಮೆಕ್ಕೆಜೋಳದಲ್ಲಿ ಕಳೆ ತೆಗೆಯುವಾಗ ಚಿರತೆ ದಾಳಿ ಮಾಡಿ, ಮಹಿಳೆಯನ್ನು ನೂರು ಅಡಿ ದೂರ ಎಳೆದುಕೊಂಡು ಹೋಗಿ ಕೊಂದಿದೆ. ಜಮೀನಿನಲ್ಲಿ ಹತ್ತಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕ‌ರು ಕೆಲಸ ಮಾಡುತ್ತಿದ್ದರು. ಮಹಿಳೆ ಕಳೆ ತೆಗೆಯುವಾಗ ಸ್ವಲ್ಪ ಹಿಂದೆ ಒಬ್ಬರೇ ಇದ್ದಾಗ ದಾಳಿ ಮಾಡಿದೆ. ನ್ಯಾಮತಿ ತಾಲೂಕು ಆಸ್ಪತ್ರೆಗೆ ಕಮಲಾಬಾಯಿ ಶವ ರವಾನೆ ಮಾಡಲಾಗಿದೆ.

ಆಸ್ಪತ್ರೆಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಚಿರತೆ ದಾಳಿಯಿಂದ ಪಲವನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರರಲ್ಲಿ ಆತಂಕ ಮೂಡಿದೆ.

ಇದನ್ನೂ ಓದಿ | ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಉಗ್ರರ ಮೊಬೈಲ್‌ ಮಾಹಿತಿ ಬಯಲು, ಪ್ರಚೋದನಾಕಾರಿ ವಿಡಿಯೊ, ಹಲವು ಸಾಕ್ಷ್ಯ ಲಭ್ಯ

Exit mobile version