Site icon Vistara News

Sad demise | ಬಿಜೆಪಿಯ ಹಿರಿಯ ನಾಯಕರಾಗಿದ್ದ ಬಿ.ಬಿ. ಶಿವಪ್ಪ ಅವರ ಪತ್ನಿ ಸುಶೀಲಮ್ಮ ನಿಧನ

BB Shivappa

ಸಕಲೇಶಪುರ: ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನಾಯಕರಲ್ಲಿ ಒಬ್ಬರಾದ, ಮಾಜಿ ಶಾಸಕ ದಿ. ಬಿ.ಬಿ. ಶಿವಪ್ಪ ಅವರ ಪತ್ನಿ ಸುಶೀಲಮ್ಮ ಅವರು ಸೋಮವಾರ ನಿಧನರಾದರು.

೯೪ ವರ್ಷದ ಸುಶೀಲಮ್ಮ ಅವರು ಕಳೆದ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು. ಆದರೂ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕುಂಬ್ರಹಳ್ಳಿ ಗ್ರಾಮದಲ್ಲಿನ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಶಿವಪ್ಪ ಅವರು ಪಕ್ಷ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದ ಕಾಲದಲ್ಲಿ ಅವರ ಮನೆ ಎನ್ನುವುದು ಚಟುವಟಿಕೆಗಳ ತಾಣವಾಗಿತ್ತು. ಆಗೆಲ್ಲ ಸುಶೀಲಮ್ಮ ಅವರು ಅನ್ನಪೂರ್ಣೆಯಾಗಿ ಎಲ್ಲರಿಗೂ ಊಟ ಬಡಿಸುತ್ತಿದ್ದರು. ಆ ಕಾಲದ ಹೆಚ್ಚಿನ ಬಿಜೆಪಿ ನಾಯಕರು ಸುಶೀಲಮ್ಮ ಅವರು ತಯಾರಿಸಿದ ಅಡುಗೆಯ ರುಚಿ ಉಂಡವರೇ ಆಗಿದ್ದರು.

ಬಿ.ಎಸ್‌. ಯಡಿಯೂರಪ್ಪ ಅವರು ಇತ್ತೀಚೆಗೆ ಸುಶೀಲಮ್ಮ ಅವರನ್ನು ಭೇಟಿ ಮಾಡಿದ್ದರು.

ಯಡಿಯೂರಪ್ಪ ಭೇಟಿ ನೀಡಿದ್ದರು
ಸುಶೀಲಮ್ಮ ಅವರು ಅನಾರೋಗ್ಯಕ್ಕೀಡಾದ ಸಂದರ್ಭದಲ್ಲಿ ಒಂದು ಬಾರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಅದನ್ನು ಕೇಳಿ ತಿಳಿದ ಯಡಿಯೂರಪ್ಪ ಅವರು ಕಳೆದ ಸೆಪ್ಟೆಂಬರ್‌ ೨೨ರಂದು ಮನೆಗೆ ಭೇಟಿ ನೀಡಿ ಮಾತನಾಡಿಸಿ ಬಂದಿದ್ದರು.

ಯಡಿಯೂರಪ್ಪ ಮತ್ತು ಬಿ.ಬಿ. ಶಿವಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ, ಬೆಳೆಸಿದ ಕಟ್ಟಾಳುಗಳಾಗಿದ್ದರು. ೧೯೮೫ರ ಅಸೆಂಬ್ಲಿ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಬಿಜೆಪಿ ಚಿನ್ಹೆಯಿಂದ ಗೆದ್ದ ಇಬ್ಬರೇ ಶಾಸಕರು ಇವರು. ಬಿ.ಬಿ. ಶಿವಪ್ಪ ಅವರು ೨೦೧೭ರಲ್ಲಿ ನಿಧನರಾಗಿದ್ದರು. ಈಗ ಸುಶೀಲಮ್ಮ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಕುಂಬ್ರಹಳ್ಳಿ ಗ್ರಾಮದಲ್ಲಿ ನಡೆಯಲಿದೆ.

ಇದನ್ನೂ ಓದಿ | ಯಡಿಯೂರಪ್ಪ ಅವರನ್ನೊಮ್ಮೆ ನೋಡ್ಬೇಕು ಅಂದಿದ್ರಂತೆ ಬಿ.ಬಿ ಶಿವಪ್ಪ ಪತ್ನಿ: ಆರೋಗ್ಯ ವಿಚಾರಿಸಿದ ಬಿಎಸ್‌ವೈ

Exit mobile version