ರಾಮನಗರ: ಇಲ್ಲಿನ ಮಾಗಡಿ ತಾಲೂಕಿನ ಜೋಡಗಟ್ಟೆ ಗ್ರಾಮದಲ್ಲಿ ಅರಣ್ಯ ಇಲಾಖೆ (forest department) ಇರಿಸಿದ್ದ ಬೋನಿಗೆ ಕರಡಿಯೊಂದು (bear) ಬಿದ್ದಿದೆ. ಹಲವು ದಿನಗಳಿಂದ ಕಾಡಂಚಿನ (Wild Animals Attack) ಗ್ರಾಮಸ್ಥರಿಗೆ ಕರಡಿಯು ಉಪಟಳ ನೀಡುತ್ತಿತ್ತು. ಹೀಗಾಗಿ ಗ್ರಾಮಸ್ಥರು ಕರಡಿ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಗ್ರಾಮಸ್ಥರ ಮನವಿ ಮೇರೆಗೆ ಕರಡಿ ಓಡಾಡುವ ಜಾಗದಲ್ಲಿ ಬೋನು ಇರಿಸಲಾಗಿತ್ತು. ಸೋಮವಾರದಂದು ಸುಮಾರು 6 ವರ್ಷ ವಯಸ್ಸಿನ ಹೆಣ್ಣು ಕರಡಿ ಸೆರೆಯಾಗಿದೆ.
ಒಂದು ವಾರದ ಹಿಂದೆಯಷ್ಟೇ ಸುಮಾರು 10 ವರ್ಷದ ಗಂಡು ಕರಡಿ ಸೆರೆಯಾಗಿತ್ತು. ಕರಡಿ ಬೋನಿಗೆ ಬಿದ್ದ ವಿಷಯ ತಿಳಿದು ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಕರಡಿಯನ್ನು ಅಲ್ಲಿಂದ ಸ್ಥಳಾಂತರ ಮಾಡಿದ್ದಾರೆ.