Site icon Vistara News

Animal attack | ಬೈಕ್‌ನಲ್ಲಿ ಹೋಗುತ್ತಿದ್ದವರ ಮೇಲೆ ಏಕಾಏಕಿ ಕಾಡುಕೋಣ ದಾಳಿ, ಇಬ್ಬರಿಗೆ ಗಾಯ

ಬೈಕ್‌ ಮೇಲೆ ಕಾಡು ಕೋಣ ದಾಳಿ

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಡು ಪ್ರಾಣಿಗಳ ಹಾವಳಿ (Animal attack) ವಿಪರೀತವಾಗುತ್ತಿದೆ. ಆನೆ, ಚಿರತೆ, ಹುಲಿ, ಕರಡಿ ಮೊದಲಾದ ಪ್ರಾಣಿಗಳ ಬಳಿಕ ಈಗ ಕಾಡುಕೋಣಗಳು ವಾಹನ ಸವಾರರ ಮೇಲೇ ದಾಳಿಗೆ ಇಳಿದಿವೆ. ಕಾಡುಕೋಣ ಅಲ್ಲಲ್ಲಿ ಕಂಡುಬರುವುದು ಸಾಮಾನ್ಯ. ಆದರೆ, ಇಲ್ಲಿ ಕಾಡು ಕೋಣ ರಸ್ತೆಯಲ್ಲಿ ಸಾಗುವ ವಾಹನದ ಮೇಲೆ ದಾಳಿ ಮಾಡಿದೆ.

ಘಟನೆ ನಡೆದಿರುವುದು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ರಸ್ತೆಯಲ್ಲಿ.ದಿಲೀಪ್ ಮತ್ತು ಆಶಾ ಎಂಬವರು ಗುರುವಾರ ರಾತ್ರಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ಕಾಡುಕೋಣ ಏಕಾಏಕಿ ದಾಳಿ ಮಾಡಿದೆ. ದೊಡ್ಡ ಗಾತ್ರದ ಪ್ರಾಣಿಯ ದಾಳಿಯಿಂದ ಇವರಿಬ್ಬರೂ ರಸ್ತೆಗೆ ಉರುಳಿದೆ. ಅದೃಷ್ಟಕ್ಕೆ ಬೈಕ್‌ಗೆ ದಾಳಿ ಮಾಡಿದ ಕಾಡುಕೋಣ ಬಳಿಕ ಅಲ್ಲಿಂದ ಪರಾರಿಯಾಗಿದೆ! ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದಿಲೀಪ್‌ ಮತ್ತು ಆಶಾ ತಡರಾತ್ರಿ ಮತ್ತಿಗಟ್ಟೆ ಸಮೀಪದ ಕಲ್ಯಾಣಗದ್ದೆಗೆ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ರಸ್ತೆಗೆ ಇಳಿದಿದ್ದ ಕಾಡುಕೋಣ ಇವರನ್ನು ನೋಡಿ ಹೆದರಿಯೋ ಏನೋ ದಾಳಿ ಮಾಡಿದೆ. ಆದರೆ, ಈ ಭಾಗದಲ್ಲಿ ಈ ರೀತಿಯ ಘಟನೆಗಳು ಹಲವು ಬಾರಿ ನಡೆದಿರುವುದು ನಿಜ.

ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಪೊಲೀಸ್‌ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ | Operation Leopard: ಕೊನೆಗೂ ನರಭಕ್ಷಕ ಚಿರತೆ ಸೆರೆ; ಇಲ್ಲೇ ಕೊಂದು ಬಿಡಿ, ಇಲ್ಲವೇ ನಮ್ಮನ್ನು ಕೊಂದು ಒಯ್ಯಿರಿ: ಗ್ರಾಮಸ್ಥರ ಕಿಡಿ

Exit mobile version