Site icon Vistara News

Elephant attack | ಮದವೇರಿದ ಕಾಡಾನೆ ದಾಳಿಯಿಂದ ಸಾಕಾನೆಗೆ ಗಾಯ: ದುಬಾರೆ ಆನೆ ಶಿಬಿರಕ್ಕೆ ಪ್ರವೇಶ ನಿರ್ಬಂಧ

ದುಬಾರೆ ಅನೆ ದಾಳಿ

ಮಡಿಕೇರಿ: ದುಬಾರೆಯ ಜನಪ್ರಿಯ ಸಾಕಾನೆ ಶಿಬಿರಕ್ಕೆ ಮದವೇರಿದ ಕಾಡಾನೆಯೊಂದು ತಡರಾತ್ರಿ ದಾಳಿ (Elephant attack) ಮಾಡಿದ ಪರಿಣಾಮ ಶಿಬಿರದ ಸಾಕಾನೆಯೊಂದಕ್ಕೆ ಗಾಯವಾಗಿದೆ. ಗಾಯಗೊಂಡಿರುವ ಗೋಪಿಗೆ ವನ್ಯಜೀವಿ ತಜ್ಞರು ಚಿಕಿತ್ಸೆ ನೀಡುತ್ತಿದ್ದಾರೆ.

ಮಾಲ್ದಾರೆ ಮೀಸಲು ಅರಣ್ಯದಿಂದ ಬಂದಿರುವ ಕಾಡಾನೆಯನ್ನು ಈ ದಾಳಿ ಮಾಡಿದೆ. ಇದನ್ನು ಮರಳಿ ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಸಾಕಾನೆ ಶಿಬಿರಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮದ ಬಂದಿರುವ ಕಾಡಾನೆ ಶಿಬಿರದ ಬಳಿಯೇ ಓಡಾಡುತ್ತಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ದುಬಾರೆ ಸಾಕಾನೆ ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕಟ್ಟಿ ಹಾಕಿದಲ್ಲಿಗೆ ಬಂದು ಅಕ್ರಮ
ಕಾಡಾನೆಗೆ ಮದವೇರಿದ್ದರಿಂದ ಸಾಕಾನೆ ಶಿಬಿರಕ್ಕೆ ಬಂದಿದೆ ಎನ್ನಲಾಗಿದೆ. ಬಂದಾಗ ಅದಕ್ಕೆ ಎದುರಾಗಿದ್ದು, ಕಟ್ಟಿ ಹಾಕಿದ್ದ ಗೋಪಿ ಎಂಬ ಆನೆ. ಏಕಾಏಕಿ ನಡೆದ ದಾಳಿ, ಕಟ್ಟಿ ಹಾಕಿದ್ದರಿಂದ ಅತ್ತಿತ್ತ ಹೋಗಲಾಗದ ಸಂಕಟದಿಂದ ಕಂಗೆಟ್ಟ ಗೋಪಿ ಆರ್ತನಾದ ಹೊರಡಿಸಿದೆ. ಕಟ್ಟಿ ಹಾಕಿದ್ದರಿಂದ ಗೋಪಿ ಆನೆಗೆ ಹೆಚ್ಚಿನ ಗಾಯಗಳಾಗಿದೆ.

ಆನೆ ಘೀಳಿಡುತ್ತಿದ್ದ ಶಬ್ದ ಕೇಳಿ ಶಿಬಿರದ ಮಾವುತರು, ಕಾವಾಡಿಗರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಡರಾತ್ರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಪಟಾಕಿ ಸಿಡಿಸುವ ಮೂಲಕ ಆನೆಯನ್ನು ಕಾಡಿಗೆ ಅಟ್ಟಲು ಪ್ರಯತ್ನಿಸಿ ಸಫಲರಾಗಿದ್ದಾರೆ.

ಶಿಬಿರದ ಒಳಭಾಗದಲ್ಲಿ ೨ ಕಾಡಾನೆಗಳ ಸುಳಿವು ಅಧಿಕಾರಿಗಳಿಗೆ ಲಭಿಸಿದ್ದು, ಕಾರ್ಯಾಚರಣೆ ಮುಂದುವರಿಸಲಾಗಿದೆ. ವನ್ಯಜೀವಿ ತಜ್ಞ ಡಾ, ಚಿಟ್ಟಿಯಪ್ಪ ಅವರ ನೇತೃತ್ವದ ತಂಡ ತೀವ್ರ ಗಾಯಗೊಂಡ ಶಿಬಿರದ ಗೋಪಿ ಸಾಕಾನೆಗೆ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Elephant attack | ರಸ್ತೆಯಲ್ಲೇ ರಾಜಾರೋಷವಾಗಿ ಸಾಗುವ ಭೀಮ: ಅವನಿಗೂ ಹೆದರಿಕೆ ಇಲ್ಲ, ಜನರಿಗೂ ಇಲ್ಲ!

Exit mobile version